Karnataka Congress Candidates 2nd List: ಯಾರಿಗೆಲ್ಲಾ ಟಿಕೆಟ್, ಇಲ್ಲಿದೆ ಮಾಹಿತಿ
ಬೆಂಗಳೂರು,ಏಪ್ರಿಲ್6: ಕರ್ನಾಟಕ ವಿಧಾನಸಭೆ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಗೆಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸಿವೆ. ಯಾವುದೇ ಗೊಂದಲವಿಲ್ಲದೆ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಗೆ 100 ಕ್ಷೇತ್ರಗಳ ಅಭ್ಯರ್ಥಿಯ ಆಯ್ಕೆಯೇ ದೊಡ್ಡ ತಲೆ ನೋವಾಗಿದ್ದು, ಅಳೆದು ತೂಗಿ ಕಾಂಗ್ರೆಸ್ ಎರಡನೇ ಪಟ್ಟಿಯನ್ನ ಬಿಡುಗಡೆ ಮಾಡಿದೆ.
Congress releases second list of 42 candidates for Karnataka Assembly elections pic.twitter.com/wzpumgNTf3
— ANI (@ANI) April 6, 2023
ಈಗಾಗಲೇ ಎರಡು ದಿನ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ದೆಹಲಿ ನಾಯಕರು ಸಭೆ ನಡೆಸಿದ್ದು, 100 ಅಭ್ಯರ್ಥಿಗಳ ಪೈಕಿ 50% ಅಭ್ಯರ್ಥಿಗಳನ್ನ ಫೈನಲ್ ಮಾಡಿದ್ದು, ಕಾಂಗ್ರೆಸ್ ಹೈಕಮಾಂಡ್ 42 ಅಭ್ಯರ್ಥಿಗಳನ್ನ ಪಟ್ಟಿಯನ್ನ ಗುರುವಾರ ಬಿಡುಗಡೆ ಮಾಡಿದೆ.
ಇನ್ನೂ ಮೊದಲ ಪಟ್ಟಿಯಲ್ಲಿ ವರುಣಾ ಕ್ಷೇತ್ರದಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಟಿಕೆಟ್ ನೀಡಿದ್ದು, ಕೋಲಾರ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಹೈಕಮಾಂಡ್ ನಾಯಕರಿಗೆ ಸಿದ್ದರಾಮಯ್ಯ ಅವರು ಬೇಡಿಕೆ ಇಟ್ಟಿದ್ರು, ಇನ್ನೂ ಎರಡನೇ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರಿಗೆ ಕೋಲಾರದಿಂದ ಸ್ಪರ್ಧೆಗೆ ಟಿಕೆಟ್ ನೀಡಲಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಎರಡನೇ ಪಟ್ಟಿಯಲ್ಲಿ ಕೋಲಾರ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಇನ್ನೂ ಮೂರನೇ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಟಿಕೆಟ್ ನೀಡುತ್ತಾ ಅಂತ ಕಾದುನೋಡ್ಬೇಕಾಗಿದೆ.

ಇತ್ತ ಕೆಲ ದಿನಗಳ ಹಿಂದಿಯಷ್ಟೇ ಕಮಲ ಬಿಟ್ಟು ಕೈ ಹಿಡಿದಿದ್ದ ಎನ್ ವೈ ಗೋಪಾಲಕೃಷ್ಣ ಅವರಿಗೆ ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆಯಾಗಿದ್ದು, ಇನ್ನೂ ಸರ್ದೋದಯ ಪಾರ್ಟಿಯ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಕಾಂಗ್ರೆಸ್ ಬೆಂಬಲವನ್ನ ಸೂಚಿಸಿ, ಮೇಲುಕೋಟೆಯಿಂದ ಟಿಕೆಟ್ ನೀಡಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಇಲ್ಲಿದೆ.
| ಜಿಲ್ಲೆ | ಅಭ್ಯರ್ಥಿಗಳು |
| ನಿಪ್ಪಾಣಿ | ಕಾಕಾ ಸಾಹೇಬ್ ಪಾಟೀಲ್ |
| ಬೀಳಗಿ | ಜಿ.ಟಿ ಪಾಟೀಲ್ |
| ಕಲಘಟಗಿ | ಸಂತೋಷ ಲಾಡ್ |
| ಧಾರವಾಡ | ವಿನಯ್ ಕುಲಕರ್ಣಿ |
| ಕಡೂರ್ | ಆನಂದ್ |
| ಗುಬ್ಬಿ | ಶ್ರೀನಿವಾಸ್ |
| ಗುರುಮಠಕಲ್ | ಬಾಬುರಾವ್ ಚಿಂಚನಸೂರ್ |
| ಗೋಕಾಕ್ | ಮಹಾಂತೇಶ್ ಕಾಡಡಿ |
| ಕಿತ್ತೂರು | ಬಾಬಾ ಸಾಹೇಬ್ ಪಾಟೀಲ್ |
| ಮುಧೋಳ್ | ರಾಮಣ್ಣ |
| ಸೌದತ್ತಿ ಯಲ್ಲಮ್ಮ | ವಿಶ್ವಾಸ್ ವಸಂತ್ ವೈದ್ಯ |
| ಬಾದಾಮಿ | ಭೀಮಸೇನ್ ಬಿ. ಚಿಮ್ಮನಕಟ್ಟಿ |
| ಬಾಗಲಕೋಟೆ | ಹುಲ್ಲಪ್ಪ ವೈ. ಮೇಟಿ |
| ಸಿರ್ಸಿ | ಭೀಮಣ್ಣ ನಾಯ್ಕ್ |
| ಯಲ್ಲಾಪುರ | ವಿ.ಎಸ್.ಪಾಟೀಲ್ |
| ಕುಡ್ಲಿಗಿ ಎಸ್ಟಿ | ಡಾ.ಶ್ರೀನಿವಾಸ್ ಎಂ.ಟಿ |
| ಮೊಳಕಾಲ್ಮೂರು (ಎಸ್ಟಿ) | ಎನ್.ವೈ. ಗೋಪಾಲಕೃಷ್ಣ |
| ಚಿತ್ರದುರ್ಗ | ಕೆ.ಸಿ.ವೀರೇಂದ್ರ (ಪಪ್ಪಿ) |
| ಹೊಳಲ್ಕೆರೆ ಎಸ್ಸಿ | ಆಂಜನೇಯ ಎಚ್ |
| ಚೆನ್ನಗಿರಿ | ಬಸವರಾಜು ವಿ. ಶಿವಗಂಗ |
| ತೀರ್ಥಹಳ್ಲಿ | ಕಿಮ್ಮನೆ ರತ್ನಾಕರ್ |
| ಉಡುಪಿ | ಪ್ರಸಾದ್‌ರಾಜ್ ಕಾಂಚನ್ |
| ತುಮಕೂರು ನಗರ | ಇಕ್ಬಾಲ್ ಅಹ್ಮದ್ |
| ಯಲಹಂಕ | ಕೇಶವ ರಾಜಣ್ಣ ಬಿ. |
| ಮಹಾಲಕ್ಷ್ಮಿ ಲೇ ಔಟ್ | ಕೇಶವಮೂರ್ತಿ |
| ಪದ್ಮನಾಭ ನಗರ | ವಿ.ರಘುನಾಥ ನಾಯ್ಡು |
| ಮೇಲುಕೋಟೆ | ದರ್ಶನ್ ಪುಟ್ಟಣ್ಣಯ್ಯ |
| ಮಂಡ್ಯ | ಪಿ.ರವಿಕುಮಾರ್ |
| ಕೃಷ್ಣರಾಜಪೇಟೆ | ಬಿ.ಎಲ್.ದೇವರಾಜ್ |
| ಬೇಲೂರು | ಬಿ.ಶಿವರಾಮ್ |
| ಮಡಿಕೇರಿ | ಡಾ.ಮಂತರ್ ಗೌಡ |
| ಕೊಳ್ಳೇಗಾಲ ಎಸ್ಸಿ ಮೀಸಲು | ಎ.ಆರ್.ಕೃಷ್ಣಮೂರ್ತಿ |
| ಚಾಮುಂಡೇಶ್ವರಿ | ಸಿದ್ದೇಗೌಡ |
| ವಿಜಯಪುರ | ಅಬ್ದುಲ್ ಹಮೀದ್ ಖಾಜಾಸಾಹೇಬ್ |
| ನಾಗಠಾಣ | ವಿಠ್ಠಲ್ ಕಟಕದೊಂಡ |
| ಅಫಜಲಪುರ | ಎಂ.ವೈ ಪಾಟೀಲ್ |
| ಯಾದಗಿರಿ | ಚನ್ನಾರೆಡ್ಡಿ ಪಾಟೀಲ್ |
| ಕಲಬುರಗಿ | ಅಲ್ಲಮ್ಮ ಪ್ರಭು ಪಾಟೀಲ್ |
| ಗಂಗಾವತಿ | ಇಕ್ಬಾಲ್ ಅನ್ಸಾರಿ |
| ನರಗುಂದ | ಬಿ.ಆರ್.ಯಾವಗಲ್ |
| ಬಸವಕಲ್ಯಾಣ | ವಿಜಯ ಧರ್ಮಸಿಂಗ್ |
| ಯಶವಂತಪುರ | ಬಾಲರಾಜ್ ಗೌಡ |












Click it and Unblock the Notifications