SIR: ಮತದಾರರ ಪಟ್ಟಿ ಪರಿಷ್ಕರಣೆಗೆ ಹೊಸ ತಂತ್ರ: ಕಸದ ಆಟೋ-ಟಿಪ್ಪರ್‌ಗಳ ಬಳಕೆಗೆ ಮುಂದಾದ ಪಾಲಿಕೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಯಶಸ್ವಿಗೆ ಪ್ರತಿದಿನ 4ರಿಂದ 5 ಬಾರಿ ಪ್ರಗತಿ ಪರಿಶೀಲನೆ ಮಾಡಲಾಗುತ್ತಿದೆ. ಹಲವು ವಿಧಾನಗಳನ್ನು ಅನುಸರಿಸಿದರೆ ಮಾತ್ರವೇ ಪರಿಷ್ಕರಣೆಯನ್ನು ಯಶಸ್ವಿಯಾಗಿ ಮಾಡಲು ಸಾಧ್ಯ ಎಂದಿರುವ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ಜಗದೀಶ್ ಜಿ ಅವರು ಪ್ರಚಾರಕ್ಕಾಗಿ ಹೊಸ ವಿಧಾನ ಅನುಸರಿಸಲು ಮುಂದಾಗಿದ್ದಾರೆ.

ಭಾನುವಾರ ಅವರು, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತಂತೆ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಗಣತಿ ನಮೂನೆ (ಎನ್ಯುಮರೇಷನ್‌ ಫಾರ್ಮ್‌) ಹಂಚಿಕೆ, ಸಂಗ್ರಹ ಮತ್ತು ಡಿಜಿಟೈಸೇಶನ್ ಕಾರ್ಯಕ್ಕೆ ವೇಗ ನೀಡಬೇಕು. ಶೇ. 100ರಷ್ಟು ಕೆಲಸ ನಿರ್ವಹಣೆ ಮಾಡಲು ಬಿ. ಎಲ್. ಓ ಗಳಿಗೆ ನಿರ್ದೇಶನ ನೀಡಿದರು.

SIR Survey

ಆಟೋ, ಟಿಪ್ಪರ್ ಗಳ ಮೂಲಕ ಪ್ರಚಾರ

ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎಸ್. ಐ. ಆರ್ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಲು ಮನೆ ಮನೆ ತ್ಯಾಜ್ಯ ಸಂಗ್ರಹಣೆ ಮಾಡುವ ಆಟೋ ಟಿಪ್ಪರ್ ಗಳ ಬಳಕೆಗೆ ಮುಂದಾಗಿದೆ. ಈ ವಾಹನಗಳ ಮೂಲಕ ಧ್ವನಿವರ್ಧಕ ಬಳಸಿ ಗಣತಿ ನಮೂನೆಗಳನ್ನು ಬಿ. ಎಲ್.ಓ ರವರಿಂದ ಪಡೆದುಕೊಂಡು ಆದಷ್ಟು ಬೇಗ ಅಗತ್ಯ ಮಾಹಿತಿ ಭರ್ತಿ ಮಾಡಿ ಹಿಂದಿರುಗಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಆಯುಕ್ತರ ಕೋರಿಕೆ ಆಡಿಯೋವನ್ನು ಪ್ರಚಾರ ಮಾಡಲಾಗುತ್ತಿದೆ. ಜೊತೆಗೆ ಕಂದಾಯ ವಿಭಾಗದ ಸಿಬ್ಬಂದಿಗಳು ಸಹ ಮೈಕ್ ಮೂಲಕ ಮನೆ ಮನೆ, ಗಲ್ಲಿಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆಯುಕ್ತರು ವಿವರಿಸಿದರು.

KSRTC: ಮಹಿಳಾ ಬಸ್ ಕಂಡಕ್ಟರ್-ಪ್ರಯಾಣಿಕಳ ಮಧ್ಯ ತೀವ್ರ ಗಲಾಟೆ, ಹಲ್ಲೆ: ವಿಡಿಯೋ ವೈರಲ್ ಬೆನ್ನಲ್ಲೇ ಸಂಸ್ಥೆ ರಿಯಾಕ್ಟ್
KSRTC: ಮಹಿಳಾ ಬಸ್ ಕಂಡಕ್ಟರ್-ಪ್ರಯಾಣಿಕಳ ಮಧ್ಯ ತೀವ್ರ ಗಲಾಟೆ, ಹಲ್ಲೆ: ವಿಡಿಯೋ ವೈರಲ್ ಬೆನ್ನಲ್ಲೇ ಸಂಸ್ಥೆ ರಿಯಾಕ್ಟ್

ಪ್ರತಿದಿನ 4-5 ಬಾರಿ ಸಭೆ

ಮಾನ್ಯ ಚುನಾವಣೆ ಆಯೋಗದ ನಿರ್ದೇಶನದಂತೆ ಎಸ್.ಐ.ಆರ್. ಕಾರ್ಯದ ಯಶಸ್ವಿಗೆ ಪಣ ತೊಟ್ಟಿರುವ ಆಯುಕ್ತರು ಕಂದಾಯ ವಿಭಾಗದ ಆರ್. ಓ. ಆಂಡ್ ಎ.ಆರ್.ಓ ಹಾಗೂ ಇತರೆ ಅಧಿಕಾರಿಗಳೊಂದಿಗೆ ಪ್ರತಿದಿನ 4-5 ಬಾರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಪ್ರತಿದಿನದ ಎಸ್. ಐ.ಆರ್ ಪ್ರಗತಿ ಪರಿಶೀಲನೆ ಬಗ್ಗೆ ಮಾಹಿತಿ ಪಡೆದುಕೊಂಡು ಎಲ್ಲೆಲ್ಲಿ ಪ್ರಗತಿ ಇರುತ್ತದೆಯೋ ಅದಕ್ಕೆ ಕಾರಣಗಳು ಹಾಗೂ ಇರುವ ಸಮಸ್ಯೆ ಸರಿಪಡಿಸಿ ಪ್ರಗತಿ ಸಾಧಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

ದೈನಂದಿನ ಸಭೆ: ಅಧಿಕಾರಿಗಳಿಗೆ ಮಹತ್ವದ ಸೂಚನೆಗಳು

* ಬಿಎಲ್‌ಒಗಳ ಕೆಲಸಕ್ಕೆ ಅಡ್ಡಿಯುಂಟು ಮಾಡುವವರ ವಿರುದ್ಧ ಎಫ್‌ಐಆರ್ ದಾಖಲಿಸಿ.

* ಕೆಲಸದಲ್ಲಿ ಶ್ರದ್ಧೆ ತೋರದ ಸಿಬ್ಬಂದಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ.

* ಪೂರಕವಾಗಿ ಸ್ಪಂದಿಸದ ಇತರ ಇಲಾಖೆಗಳ ಸಿಬ್ಬಂದಿ (ಬಿಎಲ್‌ಒ) ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಿತ ಇಲಾಖೆಗೆ ತಿಳಿಸಲಾಗುವುದು.

* ಗಣತಿ ನಮೂನೆ ಸಿಗದೆ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಡಿಲಿಟ್‌ ಆದರೂ ನಮೂನೆ-6 ಸಲ್ಲಿಸುವ ಮೂಲಕ ಹೆಸರು ಸೇರ್ಪಡೆಗೊಳಿಸಬಹುದು ಎಂಬ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಿ.

* ಡಿಜಿಟೈಸ್‌ ಮಾಡುವುದಕ್ಕಾಗಿ ಗಣತಿ ನಮೂನೆಗಳ ಸಂಗ್ರಹ ಅತ್ಯಗತ್ಯ.

Bengaluru Weather: ಬಿಸಿಲಿಗೆ ಬ್ರೇಕ್, ನಗರದಲ್ಲಿಂದು 60 ವಾರ್ಡ್‌ಗಳಲ್ಲಿ ಮಳೆ, 3ದಿನ ಮಳೆ ಮುಂದುವರಿಕೆ
Bengaluru Weather: ಬಿಸಿಲಿಗೆ ಬ್ರೇಕ್, ನಗರದಲ್ಲಿಂದು 60 ವಾರ್ಡ್‌ಗಳಲ್ಲಿ ಮಳೆ, 3ದಿನ ಮಳೆ ಮುಂದುವರಿಕೆ

* ವೋಟರ್‌ ಫೆಸಿಲಿಟೇಶನ್‌ ಕೇಂದ್ರ (ವಿಎಫ್‌ಸಿ) ಗಳಲ್ಲಿ ಡಿಜಿಟೈಸೇಶನ್‌ ಮಾಡಲು ವ್ಯವಸ್ಥೆ ಮಾಡಿಕೊಳ್ಳಿ.

* ಗಣತಿ ನಮೂನೆ ಹಿಂತಿರುಗಿಸಲು ತಡ ಮಾಡಿದಲ್ಲಿ ಡಿಜಿಟೈಸೇಶನ್‌ ತಡವಾಗಿ ಕರಡು ಪಟ್ಟಿಯಲ್ಲಿ ಹೆಸರು ಅಳಿಸಲ್ಪಡಬಹುದು ಎಂಬ ಬಗ್ಗೆ ಮನವರಿಕೆ ಮಾಡಿ.

* ಗಣತಿ ನಮೂನೆ ಸಂಗ್ರಹಕ್ಕೆ ವಿದ್ಯಾರ್ಥಿಗಳು, ಮಾರ್ಷಲ್‌ಗಳನ್ನು ಬಳಸಿಕೊಳ್ಳುವ ಬಗ್ಗೆ ಚಿಂತಿಸಿ.

* ಕೆಲಸಗಳ ಪ್ರಗತಿ ಬಗ್ಗೆ ಸಹಾಯಕ ಮತದಾರರ ನೋಂದಣಾಧಿಕಾರಿಗಳು (AERO), ಮತದಾರರ ನೋಂದಣಾಧಿಕಾರಿಗಳು (ERO) ನಿಗಾ ವಹಿಸಬೇಕು.

* ಮತದಾರರು ಗಣತಿ ನಮೂನೆ ಭರ್ತಿ ಮಾಡಿ ಹಿಂತಿರುಗಿಸುವುದರ ಮಹತ್ವದ ಬಗ್ಗೆ ರಾಜಕೀಯ ಪಕ್ಷಗಳು ಹಾಗೂ ಬಿಎಲ್‌ಎಗಳಿಗೆ ಮನವರಿಕೆ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+