KSRTC: ಮಹಿಳಾ ಬಸ್ ಕಂಡಕ್ಟರ್-ಪ್ರಯಾಣಿಕಳ ಮಧ್ಯ ತೀವ್ರ ಗಲಾಟೆ, ಹಲ್ಲೆ: ವಿಡಿಯೋ ವೈರಲ್ ಬೆನ್ನಲ್ಲೇ ಸಂಸ್ಥೆ ರಿಯಾಕ್ಟ್

ಹಾಸನ: 'ಶಕ್ತಿ' ಯೋಜನೆ ಜಾರಿಯಾದ ಬಳಿಕ ಬಸ್‌ಗಳಲ್ಲಿ ಸೀಟಿಗಾಗಿ, ಹೊಂದಾಣಿಕೆ ಇಲ್ಲದ ಪ್ರಯಾಣ ಹಾಗೂ ಇನ್ನಿತರ ಕಾರಣಗಳಿಂದ ಮಹಿಳೆಯರು ಸುದ್ದಿಯಾಗುತ್ತಿದ್ದರು. ಇದೀಗ KSRTC ಮಹಿಳಾ ಕಂಡಕ್ಟರ್ ಮೇಲೆ ಮತ್ತೊಬ್ಬ ಮಹಿಳಾ ಪ್ರಯಾಣಿಕರೊಬ್ಬರು ಹಲ್ಲೆ ಮಾಡಿದ್ದಾರೆ. ಸಹ ಪ್ರಯಾಣಿಕರು ಆಕೆಯನ್ನು ಥಳಿಸಿದ ಘಟನೆ ನಡೆದಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಾಸನ ಹಾಗೂ ಬೇಲೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್‌ನಲ್ಲಿ ಈ ಘಟನೆ ನಡೆದಿದೆ ಎಂದು ವರದಿ ಆಗಿದೆ. ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಕರ್ನಾಟಕ ಪೋರ್ಟ್‌ ಫೋಲಿಯೋ ಹಂಚಿಕೊಳ್ಳಲಾಗಿದೆ. 'ಶನಿವಾರ ಸಂಜೆ 4 ಗಂಟೆಗೆ ನಡೆದ ಘಟನೆ ಇದಾಗಿದೆ' ಎಂದು ಪೋಸ್ಟ್ ಜೊತೆಗೆ ಮಾಹಿತಿ ನೀಡಲಾಗಿದೆ. ಘಟನೆ ಕುರಿತು KSRTC ಅಧಿಕೃತ ಎಕ್ಸ್ ಹ್ಯಾಂಡಲ್‌ನಿಂದ ಪ್ರತಿಕ್ರಿಯೆ ಬಂದಿದೆ.

KSRTC Woman Conductor

ಹಾಸನ-ಬೇಲೂರು ಮಾರ್ಗದ ( KA-13 F 2353) ಬಸ್‌ನಲ್ಲಿ ಸಂಚರಿಸುತ್ತಿದ್ದ ಮಹಿಳಾ ಪ್ರಯಾಣಿಕಳೊಬ್ಬಳು ಮದ್ಯ ಸೇವಿಸಿ ಬಂದಿದ್ದರೆಂದ ಮಾಹಿತಿ ಲಭ್ಯವಾಗಿದೆ. ಆಕೆ ಕೂರುವ ಸೀಟಿನ ಸಲುವಾಗಿ ಜಗಳ ಆಡಿದ್ದಾಳೆ. ಈ ವೇಳೆ ಕಂಡಕ್ಟರ್ ಮಧ್ಯ ಪ್ರವೇಶಿಸಿದ್ದು, ಇಬ್ಬರ ಮಧ್ಯ ಮಾತಿಗೆ ಮಾತು ಬೆಳೆದಿದೆ. ನೋಡ ನೋಡುತ್ತಿದ್ದಂತೆ ವಾಗ್ವಾದಕ್ಕೆ ಇಳಿದು ಮಹಿಳಾ ಕಂಡಕ್ಟರ್ ಮತ್ತು ಪ್ರಯಾಣಿಕಳು ಕೈ ಕೈ ಹಿಡಿದು ಹೊಡೆದಾಡಿಕೊಂಡಿದ್ದಾರೆ.

ತಮ್ಮ ಮೇಲೆ ಹಲ್ಲೆ ಮಾಡಿದ್ದಕ್ಕೆ ಸಿಟ್ಟಿಗೆದ್ದ ಮಹಿಳಾ ಕಂಡಕ್ಟರ್ ಆಕೆಗೆ ಹೊಡೆದಿದ್ದಾರೆ. ಕಾಲಿನಿಂದ ಆಕೆಯನ್ನು ಒದ್ದಿರುವುದು ಕಾಣಿಸುತ್ತದೆ. ಸಹ ಪ್ರಯಾಣಿಕರು ಆಕೆಗೆ ಗೂಸಾ ಕೊಟ್ಟಿದ್ದಾರೆ. ಆಕೆಯನ್ನು ಬಸ್‌ನಿಂದ ಕೆಳಗೆ ಇಳಿಸುವಂತೆ ಹೇಳಿದ್ದಾರೆ. ಬಸ್‌ನಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇತರ ಪ್ರಯಾಣಿಕರಿಗೆ ಈ ಗಲಾಟೆ ತುಂಬಾ ಕಿರಿ ಕಿರಿ ಉಂಟು ಮಾಡಿತು. ಬಸ್‌ನ ಒಟ್ಟಾರೆ ಗಲಾಟೆಯನ್ನು ಸಹ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸದ್ಯ ಅದು ವೈರಲ್ ಆಗಿದೆ.

KSRTC ಸಂಸ್ಥೆ ಹೇಳಿದ್ದೇನು?

ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರ ಬಗ್ಗೆ ಮಾಹಿತಿ ಇಲ್ಲ. ಈ ವಿಡಿಯೋಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಪ್ರತಿಕ್ರಿಯಿಸಿದೆ. 'ಮಾತಿನ ಚಕಮಕಿ ನಡೆದು, ಮಹಿಳಾ ಕಂಡಕ್ಟರ್ ಮೇಲೆ ದೈಹಿಕ ನಡೆಯುತ್ತಿದ್ದಂತೆ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿತು. ಲಭ್ಯ ಮಾಹಿತಿ ಪ್ರಕಾರ, ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಒಟ್ಟಾರೆ ಗಲಾಟೆ, ಪ್ರಕರಣದ ಕುರಿತು ಸತ್ಯಾಸತ್ಯಯನ್ನು ಪುನರ್ ಪರಿಶೀಲಿಸಲಾಗುತ್ತದೆ. ಈ ಬಗ್ಗೆ ಕ್ರಮ ವಹಿಸಲಾಗುವುದು' ಎಂದು ಸಂಸ್ಥೆ ತಿಳಿಸಿದೆ.

ಕಂಡಕ್ಟರ್ ವರ್ತನೆ ಬಗ್ಗೆ ನೆಟ್ಟಿಗರ ಬೇಸರ

'ಶಕ್ತಿ' ಯೋಜನೆ ಜಾರಿಯಾದ ಅನೇಕ ಬಸ್ ಕಂಡಕ್ಟರ್ ಗಳು ಮಹಿಳೆಯರು ಉಚಿತ ಪ್ರಯಾಣದ ಹಣವನ್ನು ತಮ್ಮ ವೇತನದಿಂದ ಕಡಿತಗೊಳಿಸುತ್ತಾರೆ ಎಂಬಂತೆ ಪ್ರಯಾಣಿಕರನ್ನು ನಡೆಸಿಕೊಳ್ಳುತ್ತಾರೆ. ಸುಮಾರು ಬಸ್‌ಗಳಲ್ಲಿ ಇದನ್ನು ನಾನು ನೋಡಿದ್ದೇನೆ' ಒಬ್ಬರು ಕಾಮೆಂಟ್ ಮಾಡಿದ್ದಾರೆ. ಎರಡನೇ ಬಳಕೆದಾರರು, 'ಇತ್ತೀಚೆಗೆ ಚಿಲ್ಲರೆ ನೀಡಿಲ್ಲವೆಂದು ಸಾರಿಗೆ ಸಚಿವರನ್ನೇ ಬಿಎಂಟಿಸಿ ಬಸ್ ಕಂಡಕ್ಟರ್ ಕೆಳಗೆ ಇಳಿಸಿದ್ದರು' ಎಂದು ಹೇಳುವ ಮೂಲಕ ಕಂಡಕ್ಟರ್‍ಗಳ ವರ್ತನೆಯನ್ನು ವಿವರಿಸಿದ್ದಾರೆ.

'ಪ್ರತಿ ಯೊಬ್ಬರಿಗೂ ದುಡ್ಡು ಪಡೆದು ಟಿಕೆಟ್ ಕೊಡುವ ಅಂದರೆ ಯಾರಿಗೂ ಉಚಿತವಾಗಿ ಬಸ್ ಪ್ರಯಾಣಕ್ಕೆ ಅವಕಾಶ ನೀಡದಂತೆ ಮಾಡಿದರೆ ಇಂಥಹ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ' ಎಂದು ಇನ್ನೊಬ್ಬರು ತಿಳಿಸಿದ್ದಾರೆ. 'ಗಲಾಟೆ ವೇಳೆ ಪುರುಷರ ತಡೆಯಲು ಮುಂದಾಗಿಲ್ಲ, ಈ ಮಹಿಳಾ ಕಂಡಕ್ಟರ್ ಬೆದರಿಸಿದ ರೀತಿಯಂತೆ ಕಾಣುತ್ತದೆ' ಎಂದು ಮತ್ತೊಬ್ಬರು ಕಾಮೆಂಟ್ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+