Bengaluru Rains: ವಾರಗಳ ಬಳಿಕ ನಗರದಲ್ಲಿ ವರುಭಾರ್ಭಟ: 134 ವಾರ್ಡ್‌ಗಳಲ್ಲಿ ಭರ್ಜರಿ ಮಳೆ, ರಸ್ತೆಗಳಲ್ಲಿ ಟ್ರಾಫಿಕ್!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಾರಗಳ ಬಳಿಕ ಭರ್ಜರಿ ಮಳೆ ಆರ್ಭಟ ಕಂಡು ಬಂದಿದೆ. ಇಂದು ಬೆಳಗ್ಗೆಯಿಂದಲೇ ಮಬ್ಬು ಕವಿದಿತ್ತು. ಮಧ್ಯಾಹ್ನ 3 ಗಂಟೆ ಹೊತ್ತಿಗೆ ವಿವಿಧೆಡೆ ಗುಡುಗು, ಮಿಂಚು ಸಹಿತ ಜಿಟಿ ಜಿಟಿ ಮಳೆ ಆರಂಭವಾಯಿತು. ಸಂಜೆ 6.30ರ ಹೊತ್ತಿಗೆ 134 ವಾರ್ಡ್‌ಗಳಲ್ಲಿ ಜೋರು ಮಳೆ ದಾಖಲಾಗಿದ್ದು, ಮಹಾದೇವಪುರ ವಲಯ ವ್ಯಾಪ್ತಿಯಲ್ಲಿ ಹೆಚ್ಚು ಮಳೆ ಸುರಿದಿದೆ. ಎಚ್‌ಎಎಲ್‌ ವ್ಯಾಪ್ತಿಯಲ್ಲೇ 19 ಮಿಲಿ ಮೀಟರ್ ಮಳೆ ಆಯಿತು. ಪ್ರಮುಖ ರಸ್ತೆಗಳು, ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತು ಸಂಚಾರ ಸಮಸ್ಯೆ ಸೃಷ್ಟಿಸಿತು.

ಅಧಿಕ ಮಳೆ ಬಿದ್ದ ವಾರ್ಡ್‌ಗಳಿವು..

ಬಿಸಿಲಿನಿಂದ ಹೈರಾಣಾಗಿದ್ದ ಬೆಂಗಳೂರು ಧರೆಯು ಮಳೆ ಸಿಂಚನಕ್ಕೆ ತಂಪಾಯಿತು. ಇಡೀ ವಾತಾವರಣ ಚಳಿ ಮತ್ತು ತಂಪಿನಿಂದ ಕೂಡಿತ್ತು. ಬೆಳ್ಳಂದೂರು, ವರ್ತೂರು, ಜಕ್ಕೂರು, ಉತ್ತರಹಳ್ಳಿ, ಯಲೇಚನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಹೆಗ್ಗನಹಳ್ಳಿ, ಪೀಣ್ಯ ಕೈಗಾರಿಕಾ ಪ್ರದೇಶ, ಹೆರೋಹಳ್ಳಿ, ಉಳ್ಳಲ್ಲಾ, ನಾಗಪುರ, ಕುಮಾರಸ್ವಾಮಿ ಬಡಾವಣೆ, ಚೊಕ್ಕಸಂದ್ರ, ಕೆಂಗೇರಿ, ರಾಜರಾಜೇಶ್ವರಿ, ಅಂಜನಾಪುರ, ಹೆಮ್ಮಿಗೆಪುರ, ಸಂಪಂಗಿ ರಾಮನಗರ ವ್ಯಾಪ್ತಿಯಲ್ಲಿ ಚುರುಕು ಮಳೆ ಆಗಿದ್ದು, ಜನಸಂಚಾರಕ್ಕೆ ತೊಂದರೆ ಆಯಿತು.

Bengaluru Rains

ಅಲ್ಲಲ್ಲಿ ಜನದಟ್ಟಣೆ, ಮಳೆ ಕಿರಿಕಿರಿ

ತುಮಕೂರು ರಸ್ತೆ, ಪೀಣ್ಯ ಮೇಲ್ಸೇತುವೆ, ರಾಜರಾಜಿನಗರ, ಕೆಂಗೇರಿ, ಮೈಸೂರು ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳು, ಜಂಕ್ಷನ್‌ಗಳಲ್ಲಿ ಮಳೆ ನೀರು ನಿಂತಿದ್ದರಿಂದ ವಾಹನ ಸಂಚಾರ ನಿಧಾನವಾಗಿದ್ದು ಕಂಡು ಬಂತು. ಸಂಜೆ ಬೀದಿ ಬದಿ ವ್ಯಾಪಾರಿಗಳಿಗೆ ಮಳೆ ಕಿರಿ ಉಂಟು ಮಾಡಿತು.

Karnataka Dry Weather: ಉತ್ತರ ಕರ್ನಾಟಕದಾದ್ಯಂತ ತೀವ್ರ ಥಂಡಿ! ಒಣಹವೆ ಎಚ್ಚರಿಕೆ: ಭೂಮಿಯತ್ತ 'ಅಕ್ವಾನ್' ಚಂಡಮಾರುತ
Karnataka Dry Weather: ಉತ್ತರ ಕರ್ನಾಟಕದಾದ್ಯಂತ ತೀವ್ರ ಥಂಡಿ! ಒಣಹವೆ ಎಚ್ಚರಿಕೆ: ಭೂಮಿಯತ್ತ 'ಅಕ್ವಾನ್' ಚಂಡಮಾರುತ

ಇನ್ನೂ ಶಾಂತಿನಗರ, ಡೈರಿ ವೃತ್ತ, ಮೆಜೆಸ್ಟಿಕ್, ವಿಜಯನಗರ, ಪುಲಕೇರಿ ನಗರ, ಶಿವಾಜಿನಗರ, ಚಾಮರಾಜಪೇಟೆ, ಕೋರಮಂಗಲ, ನಂದಿನಿ ಬಡಾವಣೆ ಸೇರಿದಂತೆ ಇತರ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆ ಬಿದ್ದಿದೆ. ಕಚೇರಿ ಮುಗಿಸಿ ಸಂಜೆ ಮನೆ ಕಡೆಗೆ ಹೊರಟವರು ಮಳೆಯಲ್ಲಿ ಸಿಲುಕುವಂತಾಯಿತು.

ಬೆಂಗಳೂರು ನಗರದ ಹವಾಮಾನ ಮುನ್ಸೂಚನೆ

ಹವಾಮಾನ ಇಲಾಖೆ ಮುಂದಿನ 48 ಗಂಟೆಗಳ ಕಾಲ ಇದೇ ರೀತಿ ಮಳೆ ಆಗಲಿದ್ದು, ಚಳಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ಕೊಟ್ಟಿದ್ದಾರೆ. ಮುಂದಿನ ಎರಡು ದಿನ ನಗರದಲ್ಲಿ ಕನಿಷ್ಠ ತಾಪಮಾನ 2 ಡಿ.ಸೆ. ಇಳಿಕೆ ಆಗಲಿದ್ದು, 18 ರಿಂದ 16 ರಷ್ಟು ಡಿ.ಸೆ ದಾಖಲಾಗಲಿದೆ. ಗರಿಷ್ಠ 28 ಡಿ.ಸೆ. ಕಂಡು ಬರಲಿದೆ. ನಗರಾದ್ಯಂತ ಮೋಡ ಕವಿದ ವಾತಾವರಣ ಕಂಡು ಬರಲಿದ್ದು, ಎರಡು ದಿನ ಮಳೆ ಆಗಲಿದೆ.

Cyclone Akvan: ಗೋಪಾಲಪುರ ಭೂಸ್ಪರ್ಶಿಸಿದ 'ಅಕ್ವಾನ್' ಚಂಡಮಾರುತ: ಪೂರ್ವಕ್ಕೆ ಭಾರೀ ಮಳೆ, ಉತ್ತರಕ್ಕೆ ಒಣಹವೆ
Cyclone Akvan: ಗೋಪಾಲಪುರ ಭೂಸ್ಪರ್ಶಿಸಿದ 'ಅಕ್ವಾನ್' ಚಂಡಮಾರುತ: ಪೂರ್ವಕ್ಕೆ ಭಾರೀ ಮಳೆ, ಉತ್ತರಕ್ಕೆ ಒಣಹವೆ

ರಾಜ್ಯದ ಹವಾಮಾನ ಹೇಗಿದೆ?

ಕರ್ನಾಟಕದಲ್ಲಿ ಕರಾವಳಿ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ಮೂರರಿಂದ ಐದು ದಿನ ಮಳೆ ಆಗಲಿದೆ. ಕೆಲವೆಡೆ ಒಣಹವೆ ಮುಂದುವರಿಯಲಿದೆ. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರೀ ಚಳಿ ದಾಖಲಾಗಿದ್ದು, ಬೆಳಗ್ಗೆ ತೀವ್ರ ಮಂಜಿನ ವಾತಾವರಣ ನಿರ್ಮಾಣವಾಗಿದೆ. ಇನ್ನೂ ಕೆಲವು ದಿನ ಮಳೆ, ಚಳಿ, ಒಣಹವೆ ಮುಂದುವರಿಯಲಿದೆ ಎಂದು ಐಎಂಡಿ ಎಚ್ಚರಿಕೆ ಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+