• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೆಪ್ಟೆಂಬರ್ 2019 | ನಿಮ್ಮ ಅನುಮಾನಾಸ್ಪದ ಮನಸ್ಥಿತಿಗೆ ಪರಿಹಾರ ಇಲ್ಲಿದೆ!

By ಬೃಹನ್ಮತಿ
|
   ದಿನ ಭವಿಷ್ಯ - Astrology 20-09-2019 - Your Day Today

   ಮನುಷ್ಯರು ತಂತಮ್ಮ ನಡುವೆ ನಾನಾ ತರಹದ ಗೋಡೆಗಳನ್ನು ಕಟ್ಟಿಕೊಂಡಿದ್ದಾರೆ. ಆದರೆ ಅವರನ್ನೆಲ್ಲಾ 12 ರಾಶಿಗಳು ಒಂದು ಗುಂಪಾಗಿಸುವುದು ಅದ್ಭುತ ನಾಗರಿಕ ಪ್ರಕ್ರಿಯೆ. ಅದು ಪಾಶ್ಚಾತ್ಯ ಸಂಸ್ಕೃತಿ ಇರಲಿ, ಭಾರತೀಯ ಮನಸ್ಥಿತಿ ಇರಲಿ, ರಾಶಿ ಫಲಗಳ ಆಧಾರದಲ್ಲಿ ಭವಿಷ್ಯವನ್ನು ಎದುರುಗೊಳ್ಳುವುದು ಅಭ್ಯಾಸವಾಗಿ ಹೋಗಿದೆ.

   ಮನಸ್ಸು ಗೊಂದಲಕ್ಕೆ ಬಿದ್ದಾಗ ಹೊರಗಿನಿಂದ ಪರಿಹಾರವೊಂದು ಬೇಕಾಗುತ್ತದೆ. ತೆಗೆದುಕೊಳ್ಳುವ ತೀರ್ಮಾನಗಳ ಬಗೆಗೆ ಭರವಸೆ ಮೂಡಿಸುವ ಮಾತುಗಳು ಅಗತ್ಯ ಬೀಳುತ್ತವೆ. ಏನೂ ಇಲ್ಲ ಎಂದರೂ, ಇವತ್ತಿನ ದಿನ ಹೇಗಿರಬಹುದು ಎಂಬ ಮನಸ್ಸಿನ ಕುತೂಹಲವನ್ನಾದರೂ ತಣಿಸಬೇಕಾಗುತ್ತದೆ. ಇವೆಲ್ಲವುಗಳ ಒಟ್ಟು ಹೂರಣವೇ ದಿನ ಭವಿಷ್ಯ ಅನ್ನಿಸಿದರೂ, ಜ್ಯೋತಿಷ್ಯ ಶಾಸ್ತ್ರದಲ್ಲಿ ಮಾತ್ರವಲ್ಲ ಮನೋ ವಿಜ್ಞಾನದಲ್ಲಿ ಇದೊಂದು ಪ್ರತ್ಯೇಕ ವಿಭಾಗವಾಗಿಯೇ ಬೆಳೆಯುತ್ತಿದೆ.

   ಆಸ್ಟ್ರೋಸೈಕಾಲಜಿ ಅಥವಾ ಟ್ರಾನ್ಸ್‌ಪರ್ಸನಲ್‌ ಸೈಕಾಲಜಿ ಎಂದು ಕರೆಯುವ ಇದನ್ನು 'ಒನ್‌ ಇಂಡಿಯಾ ಕನ್ನಡ' ಕಳೆದ ವಾರದಿಂದ ಪ್ರಯೋಗಕ್ಕೆ ತಂದಿದೆ. ಬೆಂಗಳೂರು ಮೂಲದ ಖ್ಯಾತ ಟ್ರಾನ್ಸ್‌ಪರ್ಸನಲ್‌ ಸೈಕಾಲಜಿಸ್ಟ್ ಬೃಹನ್ಮತಿ ಬರೆತ್ತಿರುವ ಈ ದಿನ ಭವಿಷ್ಯ ಕೇವಲ ನಿಮ್ಮ ದಿನದ ಬಗೆಗೆ ಊಹೆಗಳನ್ನು ಮಾತ್ರವೇ ಮುಂದಿಡುತ್ತಿಲ್ಲ, ಜತೆಗೆ ರಾಶಿಗಳ ಆಧಾರದ ಮೇಲೆ ವ್ಯಕ್ತಿತ್ವಗಳನ್ನು ಬೆಳೆಸುವ, ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸವನ್ನೂ ಸದ್ದಿಲ್ಲದೆ ಮಾಡುತ್ತಿದೆ.

   ಅಂದಹಾಗೆ, ಇವತ್ತಿನ ರಾಶಿ ಫಲಗಳು ಇಲ್ಲಿವೆ. ಈ ಕುರಿತು ಯಾವುದೇ ಗೊಂದಲ, ಪ್ರಶ್ನೆಗಳಿದ್ದರೆ ಟ್ರಾನ್ಸ್‌ಪರ್ಸನಲ್‌ ಸೈಕಾಲಜಿಸ್ಟ್ ಬೃಹನ್ಮತಿ (74837 92212)ರನ್ನು ಸಂಪರ್ಕಿಸಿ.

   2019ರ ವರ್ಷ ಭವಿಷ್ಯ; ಮೇಷ ರಾಶಿಯಿಂದ ಕನ್ಯಾ ರಾಶಿವರೆಗೆ

   ಉಳಿದಂಗೆ, ನೀವುಂಟು ನಿಮ್ಮ ರಾಶಿ ಫಲಗಳುಂಟು...

   ಮೇಷ

   ಮೇಷ

   ಯುವ: ಒಂದು ವಿಷಯದಲ್ಲಿ ತೇರ್ಗಡೆಯಾಗಲಿಲ್ಲವೆನ್ನುವುದನ್ನೇ ದೊಡ್ಡ ಸಮಸ್ಯೆಯೆನ್ನುವಂತೆ ನೋಡುವುದು ಬೇಡ. ಇದಕ್ಕೂ ನಿಮ್ಮ ನಿಜ ಮನೋಬಲಗಳಿಗೂ ಇರುವ ಅಂತರ ತುಂಬ ದೊಡ್ಡದು ಎನ್ನುವುದನ್ನು ತಿಳಿಯಿರಿ.

   ವಯಸ್ಕ: ಪೋಷಕರಿಗೆ ಮಕ್ಕಳ ಬಗ್ಗೆ ಕೋಪತಾಪಗಳಿರುವುದು ಸಹಜ. ಆದರೇ ಒಂದು ತಪ್ಪಿಗೆ ಹತ್ತಾರು ಶಿಕ್ಷೆಗಳನ್ನು ವಿಧಿಸುವುದು ಸರಿಯಲ್ಲ. ಈ ಕಾರಣದಿಂದಲೇ ನಿಮ್ಮ ಕುಟುಂಬದಲ್ಲಿ ಸಮಸ್ಯೆಗಳು ಹೆಚ್ಚಾಗಿರುವುದು.

   ಹಿರಿಯ: ವಯಸ್ಸಾದರೇನಂತೆ? ಕಲಿಯುವುದಕ್ಕೆ ಬೇಕಿರುವುದು ಸಮಯ, ಮನಸ್ಸು ಮತ್ತು ಕೊಂಚ ಪ್ರಯತ್ನ. ಇಷ್ಟನ್ನು ಅರ್ಥಮಾಡಿಕೊಂಡರೆ ನಿಮಗೆ ಇಷ್ಟವಾದ ವಿಷಯದಲ್ಲಿ ಜ್ಞಾನ ಸಂಪಾದಿಸುವಿರಿ.

   ವೃಷಭ

   ವೃಷಭ

   ಯುವ: ಆಸೆ ಆಕಾಂಕ್ಷೆಗಳು ಎಲ್ಲರಲ್ಲಿಯೂ ಇರುವಂತಹದ್ದೇ. ಆದರೆ ಅವುಗಳನ್ನು ಈಡೇರಿಸುವುದಕ್ಕೆ ಬೇಕಾದದ್ದು ಸತತ ಶ್ರಮ, ಸೂಕ್ತ ಗುರಿ ಮತ್ತು ಅಗತ್ಯ ಸಾಮರ್ಥ್ಯ. ಇವೆಲ್ಲವು ನಿಮ್ಮಲ್ಲಿರುವುದರಿಂದ ಗುರಿಯತ್ತ ಗಮನಹರಿಸಿ.

   ವಯಸ್ಕ: ವ್ಯಾಪಾರ ಎಂದಾಗ ಲಾಭ, ನಷ್ಟ ಮತ್ತು ಲೋಭತನಗಳು ಇರುವುದು ಸಹಜ. ಒಮ್ಮೊಮ್ಮೆ ಅನಿವಾರ್ಯವೂ ಹೌದು. ಧೃತಿಗೆಡದೆ ನಿಮ್ಮ ಯೋಚನೆಗಳನ್ನು ಮುಂದುವರೆಸುವುದು ಸೂಕ್ತ.

   ಹಿರಿಯ: ಕೆಟ್ಟ ಬುದ್ಧಿಗೆ ವಯಸ್ಸು, ಅಂತಸ್ತು ಎನ್ನುವಂತಹದ್ದು ಇರದು. ಸೊಸೆಯ ಬಗ್ಗೆ ಸದಾ ವಕ್ರ ನೋಟ ಇದ್ದಾಗ ಮನಸ್ಸು ಕೆಡುತ್ತದೆ, ಇದು ಕುಟುಂಬದಲ್ಲಿಯೂ ಅಶಾಂತಿ ಮೂಡಿಸುತ್ತಿದೆ.

   ಮಿಥುನ

   ಮಿಥುನ

   ಯುವ: ವಿದ್ಯಾರ್ಹತೆ ಪಡೆದ ನಂತರ ಉದ್ಯೋಗದ ಆವರಣ ಪ್ರವೇಶಿಸುವುದು ಸಹಜ. ವೃತ್ತಿ ಯಶಸ್ಸಿಗೂ ಮನಸಿನ ಶಕ್ತಿ ಹತ್ತಿರದ ನೆಂಟು. ಒಳಸಾಮರ್ಥ್ಯಗಳ ಬಗ್ಗೆ ತಪ್ಪು ಕಲ್ಪನೆಗಳು ಇರುವುದು ಸಾಮಾನ್ಯ. ಇದೀಗ ನಿಮಗೇ ತಿಳಿಯುವಂತಹ ಒಂದು ಸಂದರ್ಭ ಎದುರಾಗಲಿದೆ.

   ವಯಸ್ಕ: ಯೌವನದಲ್ಲಿ ತಿಳಿದೋ ತಿಳಿಯದೆಯೋ ದುರಭ್ಯಾಸಗಳಿಗೆ ಶರಣಾಗಿದ್ದೀರಿ. ಈಗದನ್ನು ಬದಲಾಯಿಸುವುದಕ್ಕೆ ಕೇವಲ ಮನಸ್ಸಿದ್ದರೆ ಸಾಲದು ತಜ್ಞರ ಮಾರ್ಗದರ್ಶನವೂ ಬೇಕಾಗುತ್ತದೆ.

   ಹಿರಿಯ: ನಿವೃತ್ತಿಯ ಬಗ್ಗೆ ನಿಮಗಿದ್ದ ಅರಿವು ಇಂದು ನಿಮ್ಮ ಸಂಗಡಿಗರನೇಕರು ಎದುರಿಸುತ್ತಿರುವ ಸಮಸ್ಯೆಗಳಿಂದ ಪಾರುಮಾಡಿದೆ. ಮುಂಬರುವ ದಿನಗಳಲ್ಲಿಯೂ ಸಹ ಇಂತಹದ್ದೇ ಉಪಾಯಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನದಲಿ ಯಶಸ್ವಿಯಾಗುವಿರಿ.

   ಕರ್ಕಾಟಕ

   ಕರ್ಕಾಟಕ

   ಯುವ: ಯುವ ಜನರೆದುರಿಗೆ ಇಂದು ಗೋಚರವಾಗುತ್ತಿರುವ ತಂತ್ರಜ್ಞಾನದ ಬೆಳವಣಿಗೆ ವ್ಯಕ್ತಿತ್ವ ವಿಕಾಸದ ಮೇಲೂ ಪರಿಣಾಮ ಬೀರುವಂತಹದ್ದಾಗಿರುತ್ತದೆ. ಸದಾ ಮೊಬೈಲು ಬಳಕೆ ಅಪಾಯಕಾರಿಯಾಗಬಲ್ಲದು.

   ವಯಸ್ಕ: ಅನಾರೋಗ್ಯವಿದೆ ಎನ್ನುವ ಕಾರಣದಿಂದ ಆಸಕ್ತಿಗಳ ಬದಲಿಗೆ ಜಿಗುಪ್ಸೆಯನ್ನು ಹೆಚ್ಚಿಸಿಕೊಳ್ಳುವುದರಿಂದ ಏನು ತಾನೇ ಪ್ರಯೋಜನ. ನಿಮ್ಮಲ್ಲಿರುವ ತಾಳ್ಮೆಯ ಗುಣವನ್ನು ಬಲಪಡಿಸಿಕೊಂಡರೇ ಅನಾರೋಗ್ಯದ ತೀವ್ರತೆಗೆ ಕಡಿವಾಣ ಹಾಕಿದಂತೆ.

   ಹಿರಿಯ: ಮೊಮ್ಮಕ್ಕಳನ್ನು ಪ್ರೀತಿ, ವಿಶ್ವಾಸಗಳಿಂದ ನೋಡುವುದು ಒಂದು ಒಳ್ಳೆಯ ಗುಣ.ಅವರೊಂದಿಗೆ ಸಲ್ಲದ ವಿಷಯಗಳನ್ನು ಮಾತಾಡುವುದರಿಂದ ನಿಮ್ಮ ಮನಸ್ಸು ಹಗುರವಾಗುವುದಿಲ್ಲ ಎನ್ನುವುದನ್ನು ಮಕ್ಕಳೇ ತಿಳಿಸಿಕೊಡುವಂತಹ ಸಮಯ ಎದುರಾಗಲಿದೆ.

   ಸಿಂಹ

   ಸಿಂಹ

   ಯುವ: ಅನುಕರಣೆ ಮನುಷ್ಯರಲ್ಲಿ ಕಾಣಿಸಿಕೊಳ್ಳುವ ಸಹಜ ಗುಣ. ಉತ್ತಮವಾದ ಲಕ್ಷಣಗಳನ್ನು ಅನುಕರಣೆ ಮಾಡಿ ಪ್ರಯೋಜನ ಪಡೆಯುವಿರಿ.

   ವಯಸ್ಕ: ದಾಂಪತ್ಯದಲ್ಲಿ ಸರಸ-ವಿರಸಗಳು ಇದ್ದೇ ಇರುವುದು. ವಿರಸವನ್ನು ದೊಡ್ಡದು ಮಾಡಿಕೊಂಡಾಗ ಸರಸ ಸೊರಗುವುದು. ಅಂತಹದೊಂದು ಸ್ಥಿತಿಯ ಬಗ್ಗೆ ತಿಳಿವಳಿಕೆ ಮೂಡಿರುವುದರಿಂದ ಸಂಬಂಧ ಉತ್ತಮಗೊಳ್ಳಲಿದೆ.

   ಹಿರಿಯ: ಉತ್ತಮ ಬದುಕು ಸಿಗಲಿ ಎನ್ನುವ ಮನಸ್ಸಿನಿಂದ ಮಕ್ಕಳನ್ನು ವಿದೇಶಕ್ಕೆ ಕಳುಹಿಸಿದಿರಿ. ಈಗ ಒಂಟಿತನ ಎನ್ನುವುದೇ ಮನಸ್ಸಿಗೆ ಹಚ್ಚಿಕೊಳ್ಳುವುದರಿಂದ ಏನು ಪ್ರಯೋಜನ.

   ಕನ್ಯಾ

   ಕನ್ಯಾ

   ಯುವ: ಅಸೂಯೆ ಗೊತ್ತಿಲ್ಲದಂತೆಯೇ ಮನಸಿನೊಳಗೆ ಸುಳಿದು ಬಿಡುವುದು. ಇಂತಹದೊಂದು ಪರಿಸ್ಥಿತಿಯಿಂದ ಅನಗತ್ಯ ಸಮಸ್ಯೆಗಳನ್ನು ಎದುರಿಸಲಿದ್ದೀರಿ.

   ವಯಸ್ಕ: ಅತ್ತೆ ಮಾವನವರ ವರ್ತನೆಗಳು ಸರಿಯಲ್ಲವೆನ್ನುವ ಕಾರಣದಿಂದ ಅವರೊಂದಿಗೆ ವೈಷಮ್ಯ ಸಾಧಿಸುವ ಪ್ರಯತ್ನ ಬಿಟ್ಟು ನಿಮ್ಮ ಮನಸ್ಸಿಗೆ ಹಿತ ತರುವಂತಹ ಉಪಾಯಗಳ ಬಗ್ಗೆ ಆಲೋಚಿಸಿ.

   ಹಿರಿಯ: ವಿಶ್ರಾಂತಿ ಜೀವನ ಬಯಸುವ ವ್ಯಕ್ತಿತ್ವ ನಿಮ್ಮದು. ಲವಲವಿಕೆಯಿಂದ ಇರುವುದಕ್ಕೆ ಎಲ್ಲ ಸೌಲಭ್ಯವೂ ಇದೆ. ಹೀಗಿದ್ದಾಗ ಅವರಿವರಿಗೆ ಹೆದರಿ ನಿಮ್ಮ ಆಸಕ್ತಿ, ಆಸೆಗಳನ್ನು ದೂರ ಸರಿಸದಿರಿ.

   ತುಲಾ

   ತುಲಾ

   ಯುವ: ಮಾನಸಿಕ ಬಲಗಳನ್ನು ಸರಿಯಾಗಿ ಗುರುತಿಸಿಕೊಳ್ಳುವುದರಿಂದ ನಿಮ್ಮ ಸಾಧನೆ, ಸಂಪಾದನೆಗಳು ಉತ್ತಮವಾಗುವುದು ಎನ್ನುವುದನ್ನು ತಿಳಿಯುವ ಸಮಯ ಬಂದಿದೆ.

   ವಯಸ್ಕರಿಗೆ: ಸಾಲದ ಮೂಲಕ ಶ್ರೀಮಂತರಾಗುವುದು ಇಂದು ಪ್ರಬಲವಾಗಿರುವ ವಿದ್ಯಮಾನ. ದುರಂತದ ಸಂಗತಿ ಎಂದರೆ ಇದರಲಿ ಸಿಕ್ಕುಗಳು ತುಂಬಾ ಇರುತ್ತವೆ ಎನ್ನುವುದು ಕಾಣಿಸದಿರುವುದು. ಇಂತಹ ಪರಿಸ್ಥಿತಿಯಲ್ಲಿ ನೀವಿದ್ದೀರಿ. ಪರಿಹಾರವಂತೂ ಸಾಧ್ಯ.

   ಹಿರಿಯ: ನೀವು ರೂಢಿಸಿಕೊಂಡಿರುವ ನಂಬಿಕೆಗಳು ತೀರಾ ವಿಶಿಷ್ಟವಾದದ್ದು. ಕುಟುಂಬದವರು ಸದಾ ಇದನ್ನು ವಿರೋಧಿಸಲೇ ಬಂದಿದ್ದಾರೆ ಎನ್ನುವುದು ಅಂತ್ಯಗೊಳ್ಳುವಂತಹ ಸಮಯ ಬಂದಿದೆ.

   ವೃಶ್ಚಿಕ

   ವೃಶ್ಚಿಕ

   ಯುವ: ಕಿರುಕುಳ, ದಬ್ಬಾಳಿಕೆ, ದೌರ್ಜನ್ಯದ ಸ್ವಭಾವದವರು ನಿಮ್ಮ ಸಹೋದ್ಯೋಗಿಯಾಗಿದ್ದಾರೆ. ಇದರಿಂದ ದಿನವೂ ನಿಮ್ಮ ಮನಸ್ಸಿಗೆ ಮಜುಗರ ಹಿಂಸೆ. ಇಂತಹ ಸನ್ನಿವೇಶದಲ್ಲಿ ಮೊದಲ ಹೆಜ್ಜೆ ಉದಾಸೀನ ಮಾಡುವುದು. ಅದನ್ನೇ ನೀವು ಮಾಡಲಿದ್ದೀರಿ.

   ವಯಸ್ಕ: ಕಾಮ, ಮೋಹ ಮನುಷ್ಯರಲಿ ಇರುವಂತಹ ಗುಣ ಮತ್ತು ವ್ಯಕ್ತಿತ್ವದ ಪ್ರಬಲ ಲಕ್ಷಣವೂ ಆಗಿರಬಲ್ಲದು. ನಿಮ್ಮಲ್ಲಿದು ಪ್ರಬಲವಾಗಿರುವುದರಿಂದ ಸಂಬಂಧದ ಸಮಸ್ಯೆಗಳಲ್ಲಿ ಸಿಕ್ಕಿಕೊಳ್ಳಲ್ಲಿದ್ದೀರಿ.

   ಹಿರಿಯ: ನೀವು ಕೈಗೊಂಡಿರುವ ಅಪಾಯಕಾರಿ, ಅರ್ಥಹೀನ ಆಚರಣೆಗಳಿಂದ ಮನಸ್ಸು ಕೆಡುವುದು, ಹಣವೂ ಪೋಲಾಗುವುದು.

   ಧನುಸ್ಸು

   ಧನುಸ್ಸು

   ಯುವ: ನಿಮ್ಮ ಸಾಮರ್ಥ್ಯಗಳ ವ್ಯಕ್ತಗೊಳ್ಳುವ ಪರಿಯೇ ಬೇರೆ. ಮಾಡುವ ಕೆಲಸದ ಬಗ್ಗೆ ಕ್ಷಣದಲ್ಲಿ ನಿಮ್ಮ ಮನಸ್ಸು ನಕ್ಷೆ ರೂಪಿಸುತ್ತದೆ. ಇದನ್ನು ಕಾರ್ಯರೂಪಕ್ಕೆ ತರುವಂತಹ ಇನ್ನೊಂದು ಗುಣ ತಾಳ್ಮೆ, ಇದಿರದಿರುವುದರಿಂದ ಸೋಲೊಂದು ಎದುರಾಗಲಿದೆ.

   ವಯಸ್ಕ: ನಿಮ್ಮ ಮಕ್ಕಳ ಬಗ್ಗೆ ಸದಾ ಆಲೋಚಿಸುವದಲ್ಲದೆ ಅವರ ಬೆಂಗಾವಲುಗಾರರಂತೆ ಇರುವುದರಿಂದ ನಿಮ್ಮ ಬಗ್ಗೆ ಅಸಡ್ಡೆ ಇದೆ ಎನ್ನುವುದನ್ನು ಅವರಿಂದಲೇ ತಿಳಿಯಲಿದ್ದೀರಿ.

   ಹಿರಿಯ: ವಯಸ್ಸಿನೊಂದಿಗೆ ನೆನಪಿನ ಶಕ್ತಿಯಲ್ಲಿ ಬದಲಾವಣೆಗಳಾಗುವುದು ಸಹಜ. ದಿನನಿತ್ಯದ ಚಟುವಟಿಕೆಗಳು ಸುಗಮವಾಗುವಂತಹ ನೆನಪಿನ ಗುಣ ನಿಮ್ಮಲಿದೆ ಎನ್ನುವುದು ತಜ್ಞರಿಂದ ತಿಳಿಯಲ್ಲಿದ್ದೀರಿ.

   ಮಕರ

   ಮಕರ

   ಯುವ: ಇಂದು ಗೆಳೆಯ-ಗೆಳತಿ ಎನ್ನುವುದು ಅತ್ಯಂತ ಸಾಮಾನ್ಯದ ವಿಷಯ. ಆದರೆ ಅವುಗಳಲ್ಲಿ ಎಲ್ಲೇ ಮೀರುತ್ತಿರುವುದೂ ಸಾಮಾನ್ಯವಾಗಿದೆ. ಅವುಗಳಿಂದಾದ ಮಾನಸಿಕ ಕ್ಷೋಭೆಯನ್ನೀಗ ಅನುಭವಿಸುತ್ತಿದ್ದೀರಿ.

   ವಯಸ್ಕ: ನಿಮ್ಮದು ಸಿಟ್ಟಿನ ಸ್ವಭಾವವಷ್ಟೇ ಅಲ್ಲ ಸಂಶಯದ ಗುಣಗಳೂ ಇವೆ. ಇದರಿಂದಾಗುವ ಕೆಟ್ಟ ಬೆಳವಣಿಗೆಯೊಂದು ನಿಮ್ಮ ಮನೋಬಲವನ್ನು ಕುಗ್ಗಿಸಲಿದೆ.

   ಹಿರಿಯ: ವಿಶ್ರಾಂತಿ, ವ್ಯಾಯಮ ಮತ್ತು ಕ್ಲಿಪ್ತ ಆಹಾರ ಸೇವನೆ ಮನಸ್ಸು ಮತ್ತು ದೇಹಕ್ಕೆ ಹಿತ ತರಲಿದೆ.

   ಕುಂಭ

   ಕುಂಭ

   ಯುವ: ಮನಸ್ಸು ಗಟ್ಟಿಯಾಗಿ ಇರುವಂತೆ ಮಾಡಿಕೊಳ್ಳುವುದಕ್ಕೆ ಅವಕಾಶಗಳ ಬೇಕಾದಷ್ಟು ಇರುತ್ತವೆ. ಸಮಸ್ಯೆಗಳು ಎಷ್ಟೇ ಗಂಭೀರವಾಗಿದ್ದರೂ ಅವುಗಳನ್ನು ಎದುರಿಸುವುಕ್ಕೆ ನಿಮ್ಮಲ್ಲಿ ಅಗತ್ಯ ಸಾಮರ್ಥ್ಯವಿದೆ. ಅದನ್ನು ಕಾರ್ಯರೂಪಕ್ಕೆ ತರುವ ಸಂದರ್ಭ ಬಂದಿದೆ.

   ವಯಸ್ಕ: ಮಧ್ಯವಯೋಮಾನದಲ್ಲಿ ದಿನನಿತ್ಯ ಮನೋಗೊಂದಲಗಳು ಎದುರಾಗುತ್ತಲೇ ಇರುವುದು. ನಿಮ್ಮ ಶಕ್ತಿ ಕುಗ್ಗಿದೆ ಎನ್ನುವ ಭಾವನೆಯೇ ಅದೆಷ್ಟೋ ಸಲ ಪರಿಹಾರದ ಸಾಮರ್ಥ್ಯ ಬಳಸಿಕೊಳ್ಳದಂತೆ ಮಾಡುವುದು ಎನ್ನುವುದರ ಅರಿವು ನೀವೀಗ ಮೂಡಿಸಿಕೊಳ್ಳಲಿರುವಿರಿ.

   ಹಿರಿಯ: ವೃದ್ಧಾಪ್ಯ ಎಂದಾಕ್ಷಣ ನಿಶ್ಯಕ್ತಿಯೇ ಪ್ರಬಲ ಎನ್ನುವುದು ತಪ್ಪು ಕಲ್ಪನೆ. ಅದನ್ನು ತಿದ್ದಿಕೊಳ್ಳುವುದರಿಂದ ಹಿತಮಯ ಬದುಕು ಸಾಧ್ಯ.

   ಮೀನ

   ಮೀನ

   ಯುವ: ವಿದ್ಯಾಭ್ಯಾಸಕ್ಕೆ ಬೇಕಿರುವುದು ಪರಿಶ್ರಮ ಮತ್ತು ಆತ್ಮವಿಶ್ವಾಸ. ಅದನ್ನೀಗ ರೂಢಿಸಿಕೊಳ್ಳಲೇ ಬೇಕಾದಂತಹ ಸಮಯ ಎದುರಾಗಿದೆ.

   ವಯಸ್ಕ: ವಯಸ್ಸಿಗೆ ಬಂದು ಮಕ್ಕಳು ನಿಮ್ಮದೇ ರೀತಿಯಲ್ಲಿ ಎಲ್ಲವನ್ನು ಆಲೋಚಿಸುತ್ತಾರೆ ಎಂದುಕೊಂಡಿರುವುದೇ ನಿಮ್ಮ ಅಸಹಾಯಕ ಸ್ಥಿತಿಗೆ ಕಾರಣ.

   ಹಿರಿಯ: ಅಂಜಿಕೆ, ಆತಂಕಗಳೆನ್ನುವುದು ಮನಸ್ಸಿನಲ್ಲಿಯೇ ಮೊದಲು ಮೊಳಕೆ ಒಡೆಯುವುದು. ಇದನ್ನೀಗ ತಿಳಿಯುವುದಕ್ಕೆ ಸಮಯ ಬಂದಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Rashi Bhavishya For Today in Kannada (13th September 2019): Get your daily horoscope in Kannada based on your zodiac signs.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more