Gen Z: ಉದ್ಯೋಗ ಕ್ಷೇತ್ರದಲ್ಲಿ ಜೆನ್ ಜಿ: ನೋಡಿ ಸ್ವಾಮಿ ನಾವಿರೋದು ಹೀಗೆ ಜೆನ್ ಜಿ ಪೀಳಿಗೆ ಮಾತು, ಕಂಪನಿಗಳು ಹೇಳುವುದೇನು
Gen Z: ಕಾಲ ಬದಲಾದಂತೆ ಹೊಸ ತಲೆಮಾರಿನ ಆಯ್ಕೆಗಳು, ಆಲೋಚನೆಗಳು ಹಾಗೂ ಚಿಂತನೆಗಳು ಸಹ ಬದಲಾಗುತ್ತಿವೆ. ಈಗ ಹೆಚ್ಚು ಚರ್ಚೆ ಆಗುತ್ತಿರುವ ಜನರೇಷನ್ ಎಂದರೆ ಅದು ಜೆನ್ ಜಿ. 1997 ಹಾಗೂ 2012ರ ನಡುವೆ ಜನಿಸಿದವರನ್ನು ಜೆನ್ ಜಿ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಜನಿಸಿದವರನ್ನು (Gen Z - Generation Z or Zoomers) ಎಂದು ಸಹ ಕರೆಯಲಾಗುತ್ತದೆ. ಇವರು ಹೆಚ್ಚು ಡಿಜಿಟಲ್ ಪ್ರಪಂಚಕ್ಕೆ ತೆರೆದುಕೊಂಡಿರುವುದರಿಂದಲೂ ಇವರನ್ನು ಡಿಜಿಟಲ್ ನೇಟಿವ್ಸ್ ಎಂದು ಕರೆಯುವುದು ಸಹ ಇದೆ. 1997 ಮತ್ತು 2012ರ ನಡುವೆ ಜನಿಸಿದವರು 2026ರ ಹೊತ್ತಿಗೆ 14 ರಿಂದ 29 ವರ್ಷ ವಯಸ್ಸಿನವರಾಗಿದ್ದಾರೆ. ಈ ಪೀಳಿಗೆಯು ಇದೀಗ ಉದ್ಯೋಗ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದು, ಉದ್ಯೋಗ ಕ್ಷೇತ್ರದಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಉದ್ಯೋಗದ ಬಗ್ಗೆ ಜೆನ್ ಜಿ ಪರಿಕಲ್ಪನೆ ಏನು ಹಾಗೂ ಜೆನ್ ಜಿ ನರೇಷನ್‌ನ ಯುವಕ / ಯುವತಿಯರನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕಂಪನಿಗಳು ಹೇಳುತ್ತಿರುವುದೇನು ಎನ್ನುವ ವಿವರವನ್ನು ಈ ಲೇಖನದಲ್ಲಿ ನೋಡೋಣ.
ಜೆನ್ ಜಿ ಜನರೇಷನ್ ತಮ್ಮ ಸ್ವಭಾವ ಹಾಗೂ ಉದ್ಯೋಗದಲ್ಲಿ ತೆಗೆದುಕೊಳ್ಳುವ ನಿರ್ಧಾರ, ಕಂಪನಿಗಳಲ್ಲಿನ ನಿಯಮಗಳಿಗೆ ಇವರು ಉತ್ತರಿಸುತ್ತಿರುವ ರೀತಿಯಿಂದ ಹೆಚ್ಚು ಚರ್ಚೆಯಲ್ಲಿದೆ. ಈ ಹಿಂದಿನ ತಲೆಮಾರು ಹೇಗೆ ಕೆಲಸ ಮಾಡುತ್ತಿತ್ತು ಹಾಗೂ ಜೆನ್‌ಜಿ ಜನರೇಷನ್ ಹೇಗೆ ಕೆಲಸ ಮಾಡುತ್ತಿದೆ ಎನ್ನುವ ಬಗ್ಗೆಯೂ ಹೆಚ್ಚು ಚರ್ಚೆಗಳು ನಡೆಯುತ್ತಿವೆ. ಇಷ್ಟಕ್ಕೂ ಕೆಲಸದ ಸ್ಥಳದ ಬಗ್ಗೆ ಜೆನ್ ಜೀ ಹೇಳುವುದೇನು, ಕಂಪನಿಗಳ ಡಿಮ್ಯಾಂಡ್ ಯಾವ ರೀತಿ ಇದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

Gen Z ಬೇಡ ಎನ್ನುತ್ತಿವೆ 6 ಕಂಪನಿಗಳಲ್ಲಿ 1 ಕಂಪನಿ
ಹೌದು ದೇಶದಲ್ಲಿ 6 ಕಂಪನಿಗಳಲ್ಲಿ 1 ಕಂಪನಿಗಳು Gen Z ಯುವಕ ಮತ್ತು ಯುವತಿಯರನ್ನು ನೇಮಿಸಿಕೊಳ್ಳುವುದಕ್ಕೆ ಹಿಂಜರಿಯುತ್ತಿವೆ. ಶೇ. 75 ಕಂಪನಿಗಳ ಮುಖ್ಯಸ್ಥರು ಜೆನ್ ಜೀ ಉದ್ಯೋಗಿಗಳು ಬೇಡ ಎನ್ನುವ ಅಭಿಪ್ರಾಯಕ್ಕೆ ಬಂದಿವೆ. ಅದರಲ್ಲೂ ಮುಖ್ಯವಾಗಿ ಕಾಲೇಜು ನೇಮಕಾತಿ (ಕ್ಯಾಂಪಸ್ ಸೆಲೆಕ್ಷನ್)ಗಳಲ್ಲಿ ಅತೃಪ್ತಿಕರ ಎಂದು ಕಂಡುಕೊಂಡಿದ್ದಾರೆ. ಇದಕ್ಕೆ ಕಂಪನಿಗಳು ನೀಡುವ ಕಾರಣ ಜೆನ್ ಜಿಗಳಲ್ಲಿ ವೃತ್ತಿಪರತೆಯ ಕೊರತೆ, ಕಳಪೆ ಸಂವಹನ ಕೌಶಲ್ಯ ಮತ್ತು ಪ್ರತಿಕ್ರಿಯೆಯನ್ನು ಸ್ವೀಕರಿಸುವಲ್ಲಿ ತೊಂದರೆ ಎನ್ನುವುದು. ಕಂಪನಿಗಳಲ್ಲಿ ಕೊಡುವ ಫೀಡ್‌ಬ್ಯಾಕ್ ಸ್ವೀಕರಿಸುವುದಕ್ಕೆ ಜೆನ್ ಜಿಗಳು ಹಿಂದೇಟು ಹಾಕುತ್ತಾರೆ. ಫೀಡ್ ಬ್ಯಾಕ್ ಸ್ವೀಕರಿಸದೆ ಪ್ರತ್ಯುತ್ತರ ನೀಡುತ್ತಾರೆ ಎನ್ನುವುದು ಕಂಪನಿಗಳ ದೂರು. ಇದರ ಜೊತೆಗೆ ಜಿನ್ ಜಿಗಳು ತಾಂತ್ರಿಕ ವಿಷಯಗಳಲ್ಲಿ ಹೆಚ್ಚು ಪರಿಣತಿ ಮತ್ತು ತಿಳುವಳಿಕೆ ಹೊಂದಿರುವವರಾಗಿದ್ದಾರೆ ಎಂಬ ಮಾತೂ ಇದೆ.
Gen Z ನೇಮಕಾತಿಯ ಬಗ್ಗೆ ಕಂಪನಿಗಳು ಹೇಳುತ್ತಿರುವುದೇನು
ಜೆನ್ ಜಿಗಳು ಸುಲಭವಾಗಿ ಖಿನ್ನತೆಗೆ ಒಳಗಾಗುತ್ತಾರೆ ಅಥವಾ ಬೇಗ ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆ. ಕಂಪನಿಗಳಲ್ಲಿ ತಂಡವಾಗಿ ಕೆಲಸ ಮಾಡುವುದಕ್ಕೆ ಜೆನ್ ಜಿಗಳು ಹಿಂದೇಟು ಹಾಕುತ್ತಾರೆ. ತಂಡದೊಂದಿಗೆ ಹೊಂದಾಣಿಯಾಗುವುದಕ್ಕೆ ಇವರಿಗೆ ಕಷ್ಟ. ಸಮಸ್ಯೆ ಪರಿಹಾರ ಮತ್ತು ವೃತ್ತಿಪರ ಶಿಷ್ಟಾಚಾರದಂತಹ ಕೆಲವೊಂದು ಕೌಶಲ್ಯಗಳ ಕೊರತೆ ಇವರಲ್ಲಿ ಇದೆ ಎನ್ನುವುದು ಕೆಲವು ಕಂಪನಿಗಳ ವಾದವಾಗಿದೆ. Gen Z ಉದ್ಯೋಗಿಗಳು ವಿಶ್ವಾಸಾರ್ಹವಲ್ಲ ಅಥವಾ ಕಾರ್ಯಕ್ಷಮತೆ ಕಡಿಮೆ ಎನ್ನುವ ಮಾತೂ ಇದೆ.
ಇನ್ನು ಜಿನ್ ಜಿ ಜನರೇಷನ್‌ನವರು ಕೆಲಸದಲ್ಲಿ ಬೇಗ ಬಡ್ತಿ ನಿರೀಕ್ಷೆ ಮಾಡುತ್ತಾರೆ. ರಿಮೋಟ್/ಹೈಬ್ರಿಡ್ ಕೆಲಸ ಅಂದರೆ ಮನೆಯಿಂದಲೇ ಕೆಲಸ ಮಾಡುವುದನ್ನು ಇಷ್ಟಪಡುತ್ತಾರೆ. ವೈಯಕ್ತಿಕ ಮೌಲ್ಯಗಳೊಂದಿಗೆ ಬಲವಾದ ಹೊಂದಾಣಿಕೆಯನ್ನು ನಿರೀಕ್ಷಿಸುತ್ತಿದ್ದಾರೆ. ಇದು ಸಾಧ್ಯವಾಗದಿದ್ದರೆ ಸುಲಭವಾಗಿ ಕೆಲಸ ಬಿಡುತ್ತಾರೆ. ಕೆಲಸ ಬಿಡುವವರ ಸಂಖ್ಯೆ ಹೆಚ್ಚು ಎನ್ನುವ ವಿಷಯವೂ ಸಹ ಈ ಜನರೇಷನ್ ಯುವಕ ಮತ್ತು ಯುವತಿಯರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವುದಕ್ಕೆ ಕಂಪನಿಗಳು ಹಿಂದೇಟು ಹಾಕುತ್ತಿರುವುದಕ್ಕೆ ಕಾರಣವಾಗಿದೆ. ತರಬೇತಿಯ ಅವಶ್ಯಕತೆಯ ಬಗ್ಗೆಯೂ ದೂರುಗಳಿವೆ. ಕೆಲವು ಕಂಪನಿಗಳು ಈ ಜನರೇಷನ್‌ಗೆ ಉದ್ಯೋಗ ಸ್ಥಳದ ಬಗ್ಗೆ ಹೆಚ್ಚು ತರಬೇತಿ ನೀಡುವ ಅವಶ್ಯಕತೆ ಇದೆ. ಈ ಸವಾಲುಗಳಿಂದಾಗಿ ಶೇ 45 ಕಂಪನಿಗಳು ಈಗ ಕಿರಿಯ ಕೆಲಸಗಾರರಿಗೆ ಕೌಶಲ್ಯಗಳಲ್ಲಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ವಿಶೇಷ ತರಬೇತಿಯನ್ನು ನೀಡುತ್ತಿವೆ.
Gen Z ಉದ್ಯೋಗ ಕ್ಷೇತ್ರದಲ್ಲಿ ಈ ಜನರೇಷನ್ ಡಿಮ್ಯಾಂಡ್ ಏನಿದೆ
ಕೆಲವು ಕಂಪನಿಗಳು ಜೆನ್ ಜಿ ಯುವಕ ಮತ್ತು ಯುವತಿಯರಿಗೆ ಉದ್ಯೋಗ ನೀಡುವುದಕ್ಕೆ ಹಿಂದೇಟು ಹಾಕುತ್ತಿದೆಯಾದರೂ, ಈ ಪೀಳಿಗೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲು ಸಾಧ್ಯವಿಲ್ಲ. ಜನರೇಷನ್ ಜಿ ಕೆಲಸವನ್ನು ಜೀವನದ ಭಾಗವಾಗಿ ನೋಡುತ್ತದೆಯಾದರೂ ಕೆಲಸ - ಜೀವನದ ನಡುವೆ ವ್ಯತ್ಯಾಸವಿಲ್ಲ ಎನ್ನುವ ವಾದವನ್ನು ಒಪ್ಪುವುದಿಲ್ಲ. ಭಾರತೀಯ ಜನರೇಷನ್ ಜಿ ಉದ್ಯೋಗಿಗಳಲ್ಲಿ ಶೇ34 ಜನರು ಕೆಲಸದಿಂದ ಹೊರಗುಳಿದಿದ್ದಾರೆ. ಈ ಜನರೇಷನ್ ಕೆಲಸದಲ್ಲಿನ ಅನವಶ್ಯಕವಾದ ಒತ್ತಡವನ್ನು ಹಿಂದಿನ ತಲೆಮಾರಿನಂತೆ ಒಪ್ಪಿಕೊಳ್ಳುವುದಿಲ್ಲ.
Gen Z ಉದ್ಯೋಗಿಗಳಲ್ಲಿ ಶೇ 81 ಜನರು ಕೇವಲ ಬಾಯಿಮಾತಿ ಹೊಗಳಿಕೆಗೆ ಮರುಳಾಗುವುದಿಲ್ಲ. ಕೆಲಸದಲ್ಲಿ ಸ್ಪಷ್ಟ ಬೆಳವಣಿಗೆ ಅವಕಾಶಗಳನ್ನು ನೀಡಬೇಕು ಎಂದು ಬಯಸುತ್ತಾರೆ. ಅಂದರೆ ಬಡ್ತಿ, ಸಂಬಳ ಹೆಚ್ಚಳ ಹಾಗೂ ಬೋನಸ್ ನೀಡುವಂತಹ ವಿಚಾರಗಳನ್ನು ಕೆಲಸದಲ್ಲಿ ಪ್ರಗತಿ ಎಂದು ಪರಿಗಣಿಸುತ್ತಾರೆ. ಕೌಶಲ್ಯ ಸಂಪಾದನೆಗೆ ಆದ್ಯತೆ ನೀಡುತ್ತಾರೆ ಮತ್ತು ನಿರಂತರ, ವೇಗದ ವೃತ್ತಿ ಪ್ರಗತಿಯನ್ನು ನಿರೀಕ್ಷೆ ಮಾಡುತ್ತಾರೆ.
ಇನ್ನು ಈ ತಲೆಮಾರು ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಪಾಡಿಕೊಳ್ಳುವುದಕ್ಕೆ ಇಚ್ಛಿಸುತ್ತದೆ. ವೀಕೆಂಡ್‌ಗಳಲ್ಲಿ ಸಭೆ ಅಥವಾ ಕೆಲಸದ ಸಮಯ ಮುಗಿದ ಮೇಲೆ ಮೆಸೇಜ್ ಮಾಡುವುದು ಹಾಗೂ ಕರೆ ಮಾಡುವುದನ್ನು ಈ ಜನರೇಷನ್ ಬಯಸುವುದಿಲ್ಲ. ಜನರೇಷನ್ ಜಿ ಡಿಜಿಟಲ್ ತಂತ್ರಜ್ಞಾನದಲ್ಲಿ ಹೆಚ್ಚು ಪರಿಣಿತರಾಗಿದ್ದಾರೆ. ಅಲ್ಲದೆ ಹೊಸ ತಂತ್ರಜ್ಞಾನಕ್ಕೆ ಹೆಚ್ಚು ಹೊಂದಿಕೊಳ್ಳುತ್ತಾರೆ. ವೈಯಕ್ತಿಕ ಬೆಳವಣಿಗೆಯನ್ನು ನಿರೀಕ್ಷೆ ಮಾಡುತ್ತಾರೆ. ಭಾರತದಲ್ಲಿ ಶೇ.42 ಜನರೇಷನ್ Z ಉದ್ಯೋಗಿಗಳು 2025 ರಲ್ಲಿ ಉದ್ಯೋಗಗಳನ್ನು ಬದಲಾಯಿಸಲು ಮುಂದಾಗಿದ್ದರು. ಈ ಜನರೇಷನ್‌ನ ಸರಾಸರಿ ಉದ್ಯೋಗ ಅವಧಿಯು ಸಾಮಾನ್ಯವಾಗಿ ಕೇವಲ 1.1 ವರ್ಷಗಳು. ಅಂದರೆ ಯಾವುದಾದರೂ ಹೊಸ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರೆ ಇವರು 1.1 ವರ್ಷದಿಂದ 1.5 ವರ್ಷದ ವರೆಗೆ ಮಾತ್ರ ಕೆಲಸ ಮಾಡುತ್ತಾರೆ.
Gen Z ಶುಗರ್ ಬ್ರೇಕ್
ಇನ್ನು ಈ ಪೀಳಿಗೆಯು ಕೆಲಸದಲ್ಲಿ ಶುಗರ್ ಬ್ರೇಕ್ ಎನ್ನುವ ಪದ್ಧತಿಯನ್ನು ಇಷ್ಟಪಡುತ್ತದೆ. ಶುಗರ್ ಬ್ರೇಕ್ ಎನ್ನುವ ಜಿನ್ ಜಿ ಪರಿಕಲ್ಪನೆ ಕಂಪನಿಗಳಿಗೆ ತಲೆನೋವು ಸಹ ಹೌದು. ಕೆಲಸದ ನಡುವೆ ಬ್ರೇಕ್ ತೆಗೆದುಕೊಳ್ಳುವುದಕ್ಕೆ ಶುಗರ್ ಬ್ರೇಕ್ ಎಂದು ಕರೆಯಲಾಗುತ್ತದೆ. ಹೆಚ್ಚು ವಿರಾಮ ತೆಗೆದುಕೊಳ್ಳುವುದರಿಂದ ಕೆಲಸ ಸರಾಗವಾಗಿ ಸಾಗುತ್ತದೆ ಎನ್ನುವುದು ಈ ತಲೆಮಾರಿನ ಮಾತು. ಆದರೆ. ಪದೇ ಪದೇ ಬ್ರೇಕ್ ತೆಗೆದುಕೊಳ್ಳುವುದರಿಂದ ಕೆಲಸ ವಿಳಂಬವಾಗುತ್ತದೆ ಎನ್ನುವುದು ಕಂಪನಿಗಳ ಮಾತು. ಕೆಲಸದಲ್ಲಿ ಆರಾಮ ಅಥವಾ ಹೆಚ್ಚು ಕ್ರಿಯೇಟಿವ್ ಆಗಿ ಕೆಲಸ ಮಾಡಬೇಕಾದರೆ ಶುಗರ್ ಬ್ರೇಕ್ ಬೇಕು ಎನ್ನುವುದು ಜೆನ್ ಜಿಗಳ ಮಾತಾಗಿದೆ.
ಉದ್ಯೋಗದಲ್ಲಿ Gen Z ಬಗ್ಗೆ ಜನ ಹೆಚ್ಚಾಗಿ ಕೇಳುವ ಪ್ರಶ್ನೆಗಳು
1. ಜೆನ್ ಜಿ ಜನರೇಷನ್ ಎಂದರೆ ಯಾರು
1997ರಿಂದ 2012ರ ನಡುವೆ ಜನಿಸಿದವರನ್ನು ಜೆನ್ Z ಅಥವಾ ಜನರೇಷನ್ Z ಎಂದು ಕರೆಯಲಾಗುತ್ತದೆ.
2. ಕಂಪನಿಗಳು ಜೆನ್ ಜಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಯಾಕೆ ಹಿಂಜರಿಯುತ್ತಿವೆ
ವೃತ್ತಿಪರತೆ ಕೊರತೆ, ಸಾಫ್ಟ್ ಸ್ಕಿಲ್ಸ್ ಅಭಾವ, ಫೀಡ್‌ಬ್ಯಾಕ್ ಸ್ವೀಕರಿಸುವಲ್ಲಿ ತೊಂದರೆ ಮತ್ತು ಹೆಚ್ಚು ಉದ್ಯೋಗ ಬದಲಾವಣೆ ಪ್ರಮಾಣ ಕಾರಣಕ್ಕಾಗಿ ಕಂಪನಿಗಳು ಜೆನ್‌ಜಿ ನೇಮಕಾತಿಗೆ ಹಿಂದೇಟು ಹಾಕುತ್ತಿವೆ.
3. ಜೆನ್ Z ಉದ್ಯೋಗಿಗಳ ಪ್ರಮುಖ ಡಿಮ್ಯಾಂಡ್‌ಗಳು ಯಾವುವು?
ವೇಗವಾದ ಬಡ್ತಿ, ಉತ್ತಮ ಸಂಬಳ, ರಿಮೋಟ್/ಹೈಬ್ರಿಡ್ ಕೆಲಸ, ಕೆಲಸ-ಜೀವನ ಸಮತೋಲನ ಮತ್ತು ವೈಯಕ್ತಿಕ ಮೌಲ್ಯಗಳಿಗೆ ಹೊಂದಾಣಿಕೆ ಬಯಸುತ್ತಾರೆ.
4. ಜೆನ್ Z ಉದ್ಯೋಗಿಗಳು ಹೆಚ್ಚು ಕೆಲಸ ಬದಲಾಯಿಸುತ್ತಾರೆಯೇ
ಹೌದು, ಈ ಪೀಳಿಗೆಯ ಸರಾಸರಿ ಉದ್ಯೋಗ ಅವಧಿ ಸುಮಾರು 1 ರಿಂದ 1.5 ವರ್ಷಗಳಷ್ಟೇ ಇದೆ.
5. ಜೆನ್ Z ಯಲ್ಲಿ ಯಾವ ಕೌಶಲ್ಯಗಳ ಕೊರತೆ ಇದೆ ಎಂದು ಕಂಪನಿಗಳು ಹೇಳುತ್ತಿವೆ
ತಂಡದಲ್ಲಿ ಕೆಲಸ ಮಾಡುವ ಕೌಶಲ್ಯ, ಸಂವಹನ ಕೌಶಲ್ಯ, ಸಮಸ್ಯೆ ಪರಿಹಾರ ಸಾಮರ್ಥ್ಯ ಮತ್ತು ವೃತ್ತಿಪರ ಶಿಷ್ಟಾಚಾರದಲ್ಲಿ ಕೊರತೆ ಇದೆ ಎಂದು ಕೆಲ ಕಂಪನಿಗಳು ಅಭಿಪ್ರಾಯಪಡುತ್ತಿವೆ.
6. ಜೆನ್ Z ಉದ್ಯೋಗಿಗಳಿಗೆ ಏಕೆ ವಿಶೇಷ ತರಬೇತಿ ನೀಡಲಾಗುತ್ತಿದೆ
ಸಾಫ್ಟ್ ಸ್ಕಿಲ್ಸ್ ಮತ್ತು ಉದ್ಯೋಗ ಸ್ಥಳದ ನಡವಳಿಕೆ ಬಗ್ಗೆ ಅರಿವು ಹೆಚ್ಚಿಸಲು ಸುಮಾರು ಶೇ45 ಕಂಪನಿಗಳು ವಿಶೇಷ ತರಬೇತಿ ನೀಡುತ್ತಿವೆ.
7. ಜೆನ್ Z ಉದ್ಯೋಗಿಗಳು ಕೆಲಸ-ಜೀವನ ಸಮತೋಲನವನ್ನು ಹೇಗೆ ನೋಡುತ್ತಾರೆ
ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸ್ಪಷ್ಟ ಗಡಿ ಇರಬೇಕು ಎಂದು ನಂಬುತ್ತಾರೆ. ಕೆಲಸದ ಸಮಯದ ಹೊರಗೆ ಕರೆ/ಮೆಸೇಜ್ ಇಷ್ಟಪಡುವುದಿಲ್ಲ.
8. ಜೆನ್ Z ಉದ್ಯೋಗಿಗಳ ಬಲವೇನು
ಡಿಜಿಟಲ್ ತಂತ್ರಜ್ಞಾನದಲ್ಲಿ ಪರಿಣಿತಿ, ಹೊಸ ತಂತ್ರಜ್ಞಾನಕ್ಕೆ ವೇಗವಾಗಿ ಹೊಂದಿಕೊಳ್ಳುವ ಸಾಮರ್ಥ್ಯ ಮತ್ತು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದು ಇವರ ಪ್ರಮುಖ ಬಲವಾಗಿದೆ.
-
SSLC Hindi Exam: ಮಾರ್ಚ್ 30ರ ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆಗೆ ಹೊಸ ಸಮಸ್ಯೆ: ಪರೀಕ್ಷಾ ಮಂಡಳಿ ಹೇಳಿದ್ದೇನು -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್









Click it and Unblock the Notifications