ದೆಹಲಿಗೆ ತೆರಳುತ್ತಿದ್ದ ಸಿದ್ದರಾಮಯ್ಯ ಅವರಿದ್ದ ವಿಶೇಷ ವಿಮಾನ ಜೈಪುರದಲ್ಲಿ ತುರ್ತು ಭೂಸ್ಪರ್ಶ! ಆತಂಕ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸಿದ್ದರಾಮಯ್ಯ ಅವರು ಇಂದು ಗುರುವಾರ ಮಧ್ಯಾಹ್ನ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಆದರೆ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿದ್ದ ವಿಶೇಷ ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯುವ ಬದಲಿಗೆ ಜೈಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಈ ಘಟನೆ ಒಂದಷ್ಟು ಆತಂಕಕ್ಕೆ ಕಾರಣವಾಯಿತು.

ಈ ವೇಳೆ ಸಿದ್ದರಾಮಯ್ಯ ಅವರೊಂದಿಗೆ ವಿಮಾನದಲ್ಲಿ ಕಾಂಗ್ರೆಸ್‌ನ ಕರ್ನಾಟಕ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಸಚಿವರಾದ ಕೆ.ಜೆ. ಜಾರ್ಜ್, ಬೈರತಿ ಸುರೇಶ್, ಕಾನೂನು ಸಲಹೆಗಾರ ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ ಇದೇ ವಿಶೇಷ ವಿಮಾನದಲ್ಲಿದ್ದ ವಿಮಾನದಲ್ಲಿದ್ದರು ಎಂಬ ಮಾಹಿತಿ ಸಿಕ್ಕಿದೆ.

Siddaramaiah s Special Flight

ಮುಂಗಾರು ಆಗಮನದ ಸಂದರ್ಭ ಇದಾಗಿದ್ದು, ಅರಬ್ಬಿ ಸಮುದ್ರ, ಬಂಗಾಳಕೊಲ್ಲಿ ಹಾಗೂ ಭೂಮಿ ಮೇಲ್ಮೈನಲ್ಲಿ ಹವಾಮಾನ ಬದಲಾಗಿದೆ. ಹಲವೆಡೆ ಬಿರುಗಾಳಿ ಸಹಿತ ಮಳೆ ಆಗುತ್ತಿದ್ದು, ಸಮುದ್ರಮಟ್ಟದಲ್ಲಿ ವಾಯು ಚಂಡಮಾರುತ ಪರಿಚಲನೆ ಉಂಟಾಗಿದೆ. ಗುಜರಾತ್, ದೆಹಲಿ ಸೇರಿದಂತೆ ವಿವಿಧೆಡೆ ಗಾಳಿಯ ಪ್ರಮಾಣದಲ್ಲಿ ಏರಿಳಿತ ಉಂಟಾಗಿದೆ. ಈ ಬದಲಾವಣೆಯಿಂದ ಸಿಎಂ ಸಿದ್ದರಾಮಯ್ಯ ಅವರ ವಿಮಾನ ಗಮ್ಯಸ್ಥಾನ ದೆಹಲಿ ತಲುಪದೇ ತುರ್ತಾಗಿ ಜೈಪುರ ಮುಟ್ಟಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ವಿಮಾನ ಪ್ರಯಾಣದ ವೇಳೆ ಏನಾಯಿತು? ಎಂಬುದರ ಅಧಿಕೃತ ಮಾಹಿತಿಗಳು ಇನ್ನೇನು ಬಹಿರಂಗಗೊಳ್ಳಲಿವೆ.

ಸ್ವಾಮೀಜಿ, ಬೆಂಬಲಿಗರ ಶಕ್ತಿ ಬಳಸದೇ ಸೌಮ್ಯ ನಿರ್ಗಮನ; ಸಿದ್ದರಾಮಯ್ಯರ ಸಂಯಮದ ನಡೆಗೆ ಭಾರೀ ಮೆಚ್ಚುಗೆ
ಸ್ವಾಮೀಜಿ, ಬೆಂಬಲಿಗರ ಶಕ್ತಿ ಬಳಸದೇ ಸೌಮ್ಯ ನಿರ್ಗಮನ; ಸಿದ್ದರಾಮಯ್ಯರ ಸಂಯಮದ ನಡೆಗೆ ಭಾರೀ ಮೆಚ್ಚುಗೆ

ದೆಹಲಿ ಮಳೆಯೇ ಇದಕ್ಕೆಲ್ಲ ಕಾರಣ

ದೆಹಲಿಯಲ್ಲಿ ಸುರಿದ ಭಾರೀ ಮಳೆ ಮತ್ತು ಬಿರುಗಾಳಿ ಇದ್ದ ಕಾರಣ ಸಿದ್ದರಾಮಯ್ಯ ಅವರಿದ್ದ 'ಅಕಾಸಾ ಏರ್'‌ನ ಕ್ಯೂಪಿ 1361 ವಿಮಾನವು ದೆಹಲಿಗೆ ತೆರಳದೇ ಜೈಪುರದಲ್ಲಿ ಲ್ಯಾಂಡ್ ಆಗಿದೆ. ದೆಹಲಿಯಲ್ಲಿ ಕೆಟ್ಟ ಹವಾಮಾನದಿಂದಾಗಿ ವಿಮಾನವನ್ನು ಜೈಪುರಕ್ಕೆ ತಿರುಗಿಸಬೇಕಾಯಿತು. ವಿಮಾನವು ಮಧ್ಯಾಹ್ನ 12.45ಕ್ಕೆ ಜೈಪುರದಲ್ಲಿ ಇಳಿದು, 2 ಗಂಟೆಗೆ ದೆಹಲಿಯತ್ತ ಹೊರಟು 3 ಗಂಟೆ ಹೊತ್ತಿಗೆ ಸಿದ್ದರಾಮಯ್ಯ ಹಾಗೂ ಇತರ ನಾಯಕರು ದೆಹಲಿ ತಲುಪಿದರು. ಯಾವುದೇ ಭಯ ಬೇಡ ಎಂದು ಮುಖ್ಯಮಂತ್ರಿಗಳ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದೇ ಆತಂಕ ಬೇಡ: ಸಿಎಂ ಕಚೇರಿ

ಮುಖ್ಯಮಂತ್ರಿಗಳು ಜೂನ್ 12ರಂದು ನಡೆಯಲಿರುವ ಸಚಿವ ಸಂಪುಟದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ್ದರು. ಅವರು ಸುರಕ್ಷಿತವಾಗಿ ಅಲ್ಲಿ ತಲುಪಿದ್ದು, ನಿಗದಿತ ಸಭೆಗಳು ಯಥಾಪ್ರಕಾರ ನಡೆಯಲಿವೆ ಎಂದು ಸಿಎಂ ಕಚೇರಿ ಸ್ಪಷ್ಟಪಡಿಸಿದೆ.

ಸಿದ್ದರಾಮಯ್ಯ ರಾಜೀನಾಮೆ ಕುರಿತ ಜ್ಯೋತಿಷ್ಯ ಭವಿಷ್ಯ ಮುನ್ನೆಲೆಗೆ: ರಾಜ್ಯ, ಕಾಂಗ್ರೆಸ್ ಇಬ್ಬಾಗದ ಮುನ್ಸೂಚನೆ ನಿಜವಾಗುತ್ತಾ?
ಸಿದ್ದರಾಮಯ್ಯ ರಾಜೀನಾಮೆ ಕುರಿತ ಜ್ಯೋತಿಷ್ಯ ಭವಿಷ್ಯ ಮುನ್ನೆಲೆಗೆ: ರಾಜ್ಯ, ಕಾಂಗ್ರೆಸ್ ಇಬ್ಬಾಗದ ಮುನ್ಸೂಚನೆ ನಿಜವಾಗುತ್ತಾ?

ದೆಹಲಿಯಲ್ಲಿ ಪ್ರತಿಕೂಲ ಹವಾಮಾನವಿರುವಾಗ ಜೈಪುರದಂತಹ ಹತ್ತಿರದ ವಿಮಾನ ನಿಲ್ದಾಣಗಳಿಗೆ ವಿಮಾನಗಳ ಮಾರ್ಗ ಬದಲಿಸುವುದು ಸಾಮಾನ್ಯ. ಜೈಪುರವು ದೆಹಲಿಗೆ ಸಮೀಪವಿದ್ದು, ಇಂತಹ ಸಂದರ್ಭಗಳಲ್ಲಿ ಪರ್ಯಾಯ ಇಳಿಯುವ ತಾಣವಾಗಿ ಕಾರ್ಯನಿರ್ವಹಿಸುತ್ತದೆ. ಈ ತಿಂಗಳ ಆರಂಭದಲ್ಲಿ, ಧೂಳಿನ ಬಿರುಗಾಳಿಗೆ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಹಲವು ವಿಮಾನಗಳ ಮಾರ್ಗ ಬದಲಾಗಿತ್ತು ಅಥವಾ ವಿಳಂಬವಾಗಿವೆ ಎಂದು ವರದಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+