ವಿಮಾನ ಮೀರಿಸುವ ಭಾರತದ 5 ಸ್ಟಾರ್ ಹೋಟೆಲ್‌ಗಳ ಅನುಭವ ನೀಡುವ 4 ಅದ್ಬುತವಾದ ಲಕ್ಸುರಿ ರೈಲು

ರೈಲಿನ ಪ್ರಯಾಣ ಎಂದರೆ ಸಾಮಾನ್ಯವಾದ ಸೀಟು ಇರುತ್ತದೆ, ಜನಸಂದಣಿ ಮತ್ತು ದೊರದ ಪ್ರಯಾಣದಿಂದ ಆಯಾಸ ಎಂದು ಹಲವರಲ್ಲಿ ಈ ಮನೋಭಾವನೆ ಇದೆ. ಆದರೆ ಇದಕ್ಕೆ ಹೊರತಾಗಿ ಭಾರತದಲ್ಲಿನ ಕೆಲವು ಐಷಾರಾಮದ ರೈಲುಗಳು ಪ್ರಯಾಣಿಕರಿಗೆ ಫೈವ್ ಸ್ಟಾರ್ ಹೋಟೆಲ್‌ನಂತಹ ಸೌಲಭಗಳನ್ನು ಒದಗಿಸುತ್ತಿವೆ. ವೈಭವಯುತ ಕೊಠಡಿಗಳು, ರುಚಿಕರವಾದ ಆಹಾರ, ಆದರದ ಆತಿಥ್ಯ ಮತ್ತು ರಾಜವೈಭೋಗದ ಅನುಭವ ನೀಡುವ ಇಂತಹ ರೈಲುಗಳಲ್ಲಿ ಒಮ್ಮೆ ಪ್ರಯಾಣಿಸಿದರೆ ನಾವು ಅದರ ಅನುಭವವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.

ಮಹಾರಾಜ ಎಕ್ಸ್‌ಪ್ರೆಸ್

ಭಾರತದ ಐಷಾರಾಮಿ ರೈಲುಗಳ ಪಟ್ಟಿಯಲ್ಲಿ ಮಹಾರಾಜ ಎಕ್ಸಪ್ರೆಸ್ ಮೊದಲನೆ ಸ್ಥಾನದಲ್ಲಿದೆ. ರಾಜಸ್ಥಾನದಿಂದ ಪ್ರಾರಂಭಗೊಂಡ ಈ ರೈಲು ಪಶ್ಚಿಮ, ಉತ್ತರ ಹಾಗೂ ಮಧ್ಯ ಭಾರತದ ಅನೇಕ ಪ್ರಮುಖ ಪ್ರವಾಸಿ ತಾಣಗಳನ್ನು ಸಂಚರಿಸುತ್ತದೆ. ಫೈವ್ ಸ್ಟಾರ್ ಫೈವ್ ಸ್ಟಾರ್ ರೇಂಜ್ ಮಟ್ಟದಲ್ಲಿ ಆಹಾರ ಮತ್ತು ವಿಶೇಷವಾದ ಸೇವೆಗಳನ್ನು ನೀಡುವುದು ಈ ರೈಲಿನ ಪ್ರಮುಖ ಆಕರ್ಷಣೆಯಾಗಿದೆ. ಈ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ರಾಜಮನೆತನದ ಆತಿಥ್ಯದ ಅನುಭವವನ್ನು ನೀಡುತ್ತದೆ.

India Top 4 Luxury Trans

ಪ್ಯಾಲೇಸ್ ಆನ್ ವೀಲ್ಸ್

1982ರಲ್ಲಿ ರಾಜಸ್ಥಾನದ ಪ್ರವಾಸೋದ್ಯಮ ಅಭಿವೃದ್ದಿ ನಿಗಮ ಮತ್ತು ಭಾರತೀಯ ರೈಲ್ವೆ ಇಲಾಖೆ ಸೆರಿ ಪ್ರಾರಂಭಿಸಿದ ಪ್ಯಾಲೇಸ್ ಆನ್ ವೀಲ್ಸ್ ಇದು ದೇಶದ ಮೊದಲ ಲಕ್ಸುರಿ ರೈಲು ಎಂದು ಹೇಳಲಾಗುತ್ತದೆ. ಇದು ನವದೆಹಲಿ, ಜೈಪುರ, ಸವಾಯಿ ಮಾಧೋಪುರ, ಆಗ್ರಾ ಇನ್ನು ಹಲವಾರು ಐತಿಹಾಸಿಕ ನಗರಗಳಿಗೆ ಈ ಐಷಾರಾಮಿ ರೈಲು ಸಂಚರಿಸುತ್ತದೆ. ಇದರ ಒಳಾಂಗಣ ವಿನ್ಯಾಸ ರಾಜಮನೆತನದ ಶೈಲಿಯ ಅನುಭವವನ್ನು ಪ್ರಯಾಣಿಕರಿಗೆ ನೀಡುತ್ತದೆ.

ಜಗನ್ನಾಥ ರಥಯಾತ್ರೆ, ಓಣಂಗೆ ರೈಲ್ವೆಯ ಬಿಗ್ ಗಿಫ್ಟ್! 400ಕ್ಕೂ ಹೆಚ್ಚು ವಿಶೇಷ ರೈಲುಗಳ ಘೋಷಣೆ
ಜಗನ್ನಾಥ ರಥಯಾತ್ರೆ, ಓಣಂಗೆ ರೈಲ್ವೆಯ ಬಿಗ್ ಗಿಫ್ಟ್! 400ಕ್ಕೂ ಹೆಚ್ಚು ವಿಶೇಷ ರೈಲುಗಳ ಘೋಷಣೆ

ಡೆಕ್ಕನ್ ಒಡಿಸ್ಸಿ

ಬಾಂಬೆಯಿಂದ ಪ್ರಾರಂಭವಾಗಿ ಇದು ನವದೆಹಲಿಗೆ ತಲುಪುವ ಡೆಕ್ಕನ್ ಒಡಿಸ್ಸಿ ಭಾರತದ ಮತ್ತೊಂದು ಪ್ರಸಿದ್ಢ ಐಷಾರಾಮಿ ರೈಲು ಇದಾಗಿದೆ. ಮಹಾರಾಷ್ಟ್ರ, ಗುಜರಾತ, ರಾಜಸ್ಥಾನ ಹಾಗೂ ಕರ್ನಾಟಕ ಸೇರಿದಂತೆ ಅನೇಕ ರಾಜ್ಯದ ಮೂಲಕ ಈ ರೈಲು ಸಾಗುತ್ತದೆ. ಮಾರ್ಗದ ಮಧ್ಯೆ ಗ್ರಾಮೀಣ ಸೊಬಗು, ಹಸಿರಿನಿಂದ ಕೊಡಿದ ಪ್ರಕೃತಿ ಮತ್ತು ಐತಿಹಾಸಿಕ ತಾಣಗಳನ್ನು ವೀಕ್ಷಿಸುವ ಅವಕಾಶ ಪ್ರಯಾಣಿಕರಿಕೆ ಸಿಗುತ್ತದೆ.

India Top 4 Luxury Trans

ಗೋಲ್ಡನ್ ಚಾರಿಯಟ್

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯನ್ನು ಉತ್ತೇಜನ ನೀಡುವ ಉದ್ದೇಶಕ್ಕಾಗಿ ಆರಂಭಿಸಲಾದ ಈ ಗೋಲ್ಡನ್ ಚಾರಿಯಟ್ ಕೂಡ ಭಾರತದ ಪ್ರಮುಖ ಲಕ್ಸುರಿ ರೈಲುಗಳಲ್ಲಿ ಒಂದಾಗಿದೆ. ಇದು ಒಟ್ಟು 11 ಬೋಗಿಗಳನ್ನು ಹೊಂದಿದೆ ಈ ರೈಲಿನ ಪ್ರತಿಯೊಂದು ಬೋಗಿಗೂ ರಾಜಮನೆತನದ ಹೆಸರನ್ನು ಇಡಲಾಗಿದೆ. ರುಚಿಕರವಾದ ಆಹಾರ, ಸುಸಜ್ಜಿತವಾದ ಕೊಠಡಿಗಳು ಮತ್ತು ಸುಖಕರವಾದ ಪ್ರಯಾಣದ ಜೊತೆಗೆ ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಿಸುವ ಅವಕಾಶವೂ ಇಲ್ಲಿ ಸಿಗುತ್ತದೆ.

Good News: ರೈಲು ತಡವಾದರೂ ಟೆನ್ಷನ್ ಬೇಡ! ನಿಲ್ದಾಣದಲ್ಲೇ ಹೈಫೈ ಮಲಗುವ ವ್ಯವಸ್ಥೆ ಪರಿಚಯ
Good News: ರೈಲು ತಡವಾದರೂ ಟೆನ್ಷನ್ ಬೇಡ! ನಿಲ್ದಾಣದಲ್ಲೇ ಹೈಫೈ ಮಲಗುವ ವ್ಯವಸ್ಥೆ ಪರಿಚಯ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+