KPSC ಪ್ರಿಲಿಮ್ಸ್ ಫಲಿತಾಂಶ ಪ್ರಕಟ: 4,697 ಮಂದಿ ಮುಖ್ಯಪರೀಕ್ಷೆಗೆ ಅರ್ಹ, ಆನಂದ ಮುತ್ತಪ್ಪ ಪೂಜೇರಿ ರಾಜ್ಯಕ್ಕೆ ಪ್ರಥಮ!

ಬೆಂಗಳೂರು: ರಾಜ್ಯದ 319 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಗಾಗಿ ನಡೆದ 2026ರ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಅಧಿಕೃತವಾಗಿ ಪ್ರಕಟಗೊಂಡಿದೆ. ಪರೀಕ್ಷೆಗೆ ಹಾಜರಾಗಿದ್ದ 88,450 ಅಭ್ಯರ್ಥಿಗಳ ಪೈಕಿ ಒಟ್ಟು 4,697 ಮಂದಿ ಮುಖ್ಯಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಈ ಹಿಂದಿನ ಕೆಪಿಎಸ್‌ಸಿ ಆಯೋಗದ ಮೇಲಿದ್ದ ವಿವಾದ ಹಾಗೂ ಅಪನಂಬಿಕೆಗಳನ್ನ ತೊಡೆದುಹಾಕಿ ಕಳಂಕಮುಕ್ತವಾಗುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಮುಖ್ಯಪರೀಕ್ಷೆಗೆ ಆಯ್ಕೆಯಾದವರು ಸೇರಿದಂತೆ ಎಲ್ಲಾ ಅಭ್ಯರ್ಥಿಗಳ ಅಂಕಗಳನ್ನ ಹಾಗೂ ಪ್ರವರ್ಗವಾರು ಕಟ್-ಆಫ್ ಅಂಕಗಳನ್ನ ಬಹಿರಂಗಪಡಿಸಿ ಪಾರದರ್ಶಕತೆ ಮೆರೆದಿದೆ.

KPSC Gazetted Probationers Prelims Result 2026 Out 4 697 Qualify For Mains Check Cut-Off amp amp Toppers List

4,697 ಮಂದಿ ಆಯ್ಕೆ, 88 ಸ್ಥಾನ ಕಡಿಮೆಯಾಗಿದ್ದೇಕೆ?

ಒಟ್ಟು 319 ಹುದ್ದೆಗಳಿಗೆ 1,47,067 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಶೇ. 60.1ರಷ್ಟು ಅಂದರೆ 88,450 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ಹಾಜರಾದವರಲ್ಲಿ ಶೇ. 5.3ರಷ್ಟು ಮಂದಿ ಗೆಜೆಟೆಡ್ ಪ್ರೊಬೇಷನರ್ ಮುಖ್ಯಪರೀಕ್ಷೆಗೆ ಆಯ್ಕೆಯಾಗಿದ್ದಾರೆ. ಉಳಿಕೆ ಮೂಲ ವೃಂದದ (RPC) 297 ಹುದ್ದೆಗಳಿಗೆ 4,367 ಮಂದಿ ಹಾಗೂ ಕಲ್ಯಾಣ ಕರ್ನಾಟಕ ವೃಂದದ (KKC) 22 ಹುದ್ದೆಗಳಿಗೆ 330 ಮಂದಿ ಅರ್ಹತೆ ಪಡೆದಿದ್ದಾರೆ.

1:15ರ ಅನುಪಾತದ ನಿಯಮದಂತೆ ಒಟ್ಟು 4,785 ಅಭ್ಯರ್ಥಿಗಳು ಆಯ್ಕೆಯಾಗಬೇಕಿತ್ತು. ಆದರೆ, ಸಾಮಾನ್ಯ ಅರ್ಹತೆಯ ತೃತೀಯ ಲಿಂಗಿ (5 ಹುದ್ದೆಗೆ 23 ಮಂದಿ), ಪರಿಶಿಷ್ಟ ಪಂಗಡದ ದೃಷ್ಟಿದೋಷ (3 ಹುದ್ದೆಗೆ 14 ಮಂದಿ) ಹಾಗೂ ಪ್ರವರ್ಗ-2ಬಿ ದೃಷ್ಟಿದೋಷ (1 ಹುದ್ದೆಗೆ 10 ಮಂದಿ) ವಿಭಾಗಗಳಲ್ಲಿ ಸಾಕಷ್ಟು ಅಭ್ಯರ್ಥಿಗಳು ಇಲ್ಲದ ಕಾರಣ 88 ಸ್ಥಾನ ಕಡಿಮೆಯಾಗಿ 4,697ಕ್ಕೆ ನಿಂತಿದೆ.

ಇಂದು ಕೆಪಿಎಸ್‌ಸಿ 319 ಹುದ್ದೆಗಳ ಪೂರ್ವಭಾವಿ ಫಲಿತಾಂಶ ಪ್ರಕಟ ಸಾಧ್ಯತೆ: ಅನ್ನಭಾಗ್ಯ ಕೀ ಉತ್ತರ ಗೊಂದಲಕ್ಕೆ ಅಭ್ಯರ್ಥಿಗಳ ಆಕ್ರೋಶ
ಇಂದು ಕೆಪಿಎಸ್‌ಸಿ 319 ಹುದ್ದೆಗಳ ಪೂರ್ವಭಾವಿ ಫಲಿತಾಂಶ ಪ್ರಕಟ ಸಾಧ್ಯತೆ: ಅನ್ನಭಾಗ್ಯ ಕೀ ಉತ್ತರ ಗೊಂದಲಕ್ಕೆ ಅಭ್ಯರ್ಥಿಗಳ ಆಕ್ರೋಶ

ಮುಂದಿನ ಹಂತದಲ್ಲಿ ಮುಖ್ಯಪರೀಕ್ಷೆಯಿಂದ 1:3 ಅನುಪಾತದಲ್ಲಿ 957 ಅಭ್ಯರ್ಥಿಗಳು ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆಯಾಗಲಿದ್ದು, ಅಂತಿಮವಾಗಿ 319 ಮಂದಿಗೆ ನೇಮಕಾತಿ ಆದೇಶ ದೊರೆಯಲಿದೆ.

ಆನಂದ ಮುತ್ತಪ್ಪ ಪೂಜೇರಿ ರಾಜ್ಯಕ್ಕೆ ಪ್ರಥಮ: ಕೆಪಿಎಸ್‌ಸಿ ಕಟ್ ಆಫ್ ಅಂಕ ಭಾರಿ ಏರಿಕೆ!

ಒಟ್ಟು 400 ಅಂಕಗಳಿಗೆ ನಡೆದ ಈ ಪರೀಕ್ಷೆಯಲ್ಲಿ ಆನಂದ ಮುತ್ತಪ್ಪ ಪೂಜೇರಿ ಅವರು 264.5 ಅಂಕಗಳನ್ನ ಅಂದರೆ ಪತ್ರಿಕೆ-1ರಲ್ಲಿ 131.5, ಪತ್ರಿಕೆ-2ರಲ್ಲಿ 133 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಅಭಿಲಾಷ್ ಜಿ.ಎಸ್. (263 ಅಂಕ) ದ್ವಿತೀಯ ಹಾಗೂ ಮಲ್ಲಿಕಾರ್ಜುನ (262.5 ಅಂಕ) ತೃತೀಯ ಸ್ಥಾನದಲ್ಲಿದ್ದಾರೆ. ಕಲ್ಯಾಣ ಕರ್ನಾಟಕ ವೃಂದದಲ್ಲಿ ಮಲ್ಲಿಕಾರ್ಜುನ ಮೊದಲ ಸ್ಥಾನದಲ್ಲಿದ್ದಾರೆ. ಒಟ್ಟು 15 ಮಂದಿ 250ಕ್ಕೂ ಹೆಚ್ಚು ಅಂಕ ಗಳಿಸಿದ್ದು, ತಪ್ಪು ಉತ್ತರಕ್ಕೆ 0.5 ಋಣಾತ್ಮಕ ಅಂಕ (Negative marking) ಇದ್ದುದರಿಂದ 31 ಮಂದಿಯ ಒಟ್ಟು ಅಂಕ ಮೈನಸ್ ಆಗಿದೆ.

2024ರ ಪರೀಕ್ಷೆಗೆ ಹೋಲಿಸಿದರೆ ಈ ಬಾರಿ ಎಲ್ಲಾ ವರ್ಗಗಳ ಕೆಪಿಎಸ್‌ಸಿ ಕಟ್ ಆಫ್ ಅಂಕ ಗಣನೀಯವಾಗಿ ಏರಿಕೆಯಾಗಿದೆ:

*ಸಾಮಾನ್ಯ ಅರ್ಹತೆ (GM): ಆರ್‌ಪಿಸಿಯಲ್ಲಿ 206.5 ಅಂದರೆ ಕಳೆದ ಬಾರಿಗಿಂತ 11.5 ಅಂಕ ಹೆಚ್ಚಳವಾಗಿದೆ ಹಾಗೂ ಕೆಕೆಸಿಯಲ್ಲಿ 210 ಅಂಕಕ್ಕೆ ನಿಂತಿದೆ.

*ಮೀಸಲು ವರ್ಗಗಳು: ಏಳು ಮೀಸಲು ವರ್ಗಗಳ ಕಟ್-ಆಫ್ ಸರಾಸರಿ 35 ಅಂಕ ಏರಿಕೆಯಾಗಿದೆ. ಅದರಲ್ಲೂ ಪರಿಶಿಷ್ಟ ಪಂಗಡದಲ್ಲಿ (ST) 131.5ರಿಂದ 184.5ಕ್ಕೆ (53 ಅಂಕ) ಅತಿ ಹೆಚ್ಚು ಏರಿಕೆಯಾಗಿದೆ.

*ಪ್ರಮುಖ ಕಟ್-ಆಫ್: ಜಿಎಂ/ಆರ್‌ಎಲ್ (215.5), 2ಎ/ಆರ್‌ಎಲ್ (201), 3ಬಿ (201), 2ಎ (198), ಎಸ್‌ಸಿ/ಆರ್‌ಎಲ್ (197), ಎಸ್‌ಸಿ (193), 3ಎ (191.5), ಪ್ರವರ್ಗ-1 (185), ಜಿಎಂ/ಡಬ್ಲ್ಯು (185.5), ಎಸ್‌ಸಿ/ಡಬ್ಲ್ಯು (168).

ಸರ್ಕಾರಿ ಅಧಿಕಾರಿಯಾಗುವ ಕನಸು ಕಂಡ ಅಭ್ಯರ್ಥಿಗಳಿಗೆ ಇಂದು ಅಗ್ನಿಪರೀಕ್ಷೆ: ಚುನಾವಣೆ ಮಾದರಿಯಲ್ಲಿ KPSC ಎಕ್ಸಾಮ್
ಸರ್ಕಾರಿ ಅಧಿಕಾರಿಯಾಗುವ ಕನಸು ಕಂಡ ಅಭ್ಯರ್ಥಿಗಳಿಗೆ ಇಂದು ಅಗ್ನಿಪರೀಕ್ಷೆ: ಚುನಾವಣೆ ಮಾದರಿಯಲ್ಲಿ KPSC ಎಕ್ಸಾಮ್

ಅಭ್ಯರ್ಥಿಗಳ ಆಕ್ಷೇಪಕ್ಕೆ ಮಣಿದ ಆಯೋಗ: ಅನ್ನಭಾಗ್ಯ ಪ್ರಶ್ನೆಗೆ ಸರಿ ಉತ್ತರ ಪರಿಗಣನೆ!

ಪ್ರಶ್ನೆ ಸಂಖ್ಯೆ 60ರಲ್ಲಿ ಕೇಳಲಾಗಿದ್ದ ಅನ್ನಭಾಗ್ಯ ಪ್ರಶ್ನೆಯ ಕೀ ಉತ್ತರದ ಕುರಿತು ಅಭ್ಯರ್ಥಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ. ಅಕ್ಕಿ ವಿತರಣೆ, 2026-27ರಲ್ಲಿ ಇಂದಿರಾ ಫುಡ್ ಕಿಟ್ ವಿತರಣೆ ಹಾಗೂ ಇದಕ್ಕೆ 6,200 ಕೋಟಿ ರೂ. ವೆಚ್ಚದ ಕುರಿತ ಮೂರೂ ಹೇಳಿಕೆಗಳು ಬಜೆಟ್ ಪುಸ್ತಕದ ಪ್ರಕಾರ ಸರಿಯಾಗಿದ್ದರೂ, ಕೆಪಿಎಸ್‌ಸಿ ಆರಂಭದಲ್ಲಿ ಮೊದಲ ಹೇಳಿಕೆಯನ್ನು ತಪ್ಪು ಎಂದು ಪರಿಗಣಿಸಿತ್ತು.

ಈ ಬಗ್ಗೆ ವ್ಯಾಪಕ ದೂರು ಹಾಗೂ ಮಾಧ್ಯಮ ವರದಿಗಳು ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಆಯೋಗ, ತನ್ನ ತಪ್ಪನ್ನು ಸರಿಪಡಿಸಿಕೊಂಡು ಮೂರೂ ಹೇಳಿಕೆಗಳನ್ನ ಸರಿ ಎಂದು ಪರಿಗಣಿಸಿ ಅಭ್ಯರ್ಥಿಗಳಿಗೆ ಅಂಕ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+