ಮಂಗಳೂರಿಗೆ ಭರ್ಜರಿ ಗುಡ್‌ನ್ಯೂಸ್: ಭರ್ಜರಿ ಉದ್ಯೋಗ ಸೃಷ್ಟಿ, ಸಂಸದ ತೇಜಸ್ವಿ ಸೂರ್ಯ, ಕ್ಯಾಪ್ಟನ್ ಬ್ರಿಜೇಶ್ ಹೇಳಿದ್ದೇನು ?

ಮಂಗಳೂರು: ವಿಕಸಿತ ಭಾರತದ ವಿಚಾರಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

ವಿಕಸಿತ ಭಾರತ ಪರಿಕಲ್ಪನೆಯ ಬಗ್ಗೆ ಮಾತನಾಡಿರುವ ಸಂಸದ ತೇಜಸ್ವಿ ಸೂರ್ಯ ಅವರು, ವಿಕಸಿತ ಭಾರತದ ಕನಸು ಎರಡನೇ ಹಂತದ ನಗರಗಳಲ್ಲಿಯೂ ನಿಧಾನವಾಗಿ ನನಸಾಗುತ್ತಿದೆ. ಕರ್ನಾಟಕದ ಅಭಿವೃದ್ಧಿ ಕೇವಲ ಬೆಂಗಳೂರಿಗೆ ಸೀಮಿತವಾಗಬಾರದು ಎಂಬುದು ನನ್ನ ನಂಬಿಕೆ. ನಮ್ಮ ರಾಜ್ಯದ ಇತರ ನಗರಗಳಲ್ಲಿಯೂ ಜಾಗತಿಕ ಕಂಪನಿಗಳನ್ನು ಆಕರ್ಷಿಸುವ ಸಾಮರ್ಥ್ಯವಿದೆ ಎಂದಿದ್ದಾರೆ.

Mangaluru Gets Major Job Boost What MPs Tejasvi Surya and Captain Brijesh Chowta Announced

ಮಂಗಳೂರಿಗೆ ಡೆಲಾಯ್ಟ್‌ (Deloitte) ಕಂಪನಿಯನ್ನು ತರುವಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಅವರ ಪ್ರಯತ್ನವನ್ನು ನಾನು ಮೆಚ್ಚುತ್ತೇನೆ. ಅವರ #BackToOoru ಅಭಿಯಾನದ ಮೂಲಕ ಮಂಗಳೂರಿಗೆ ಈ ಕಂಪನಿ ಬರುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ಈ ಕೇಂದ್ರದಲ್ಲಿ 1,000ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುವ ನಿರೀಕ್ಷೆಯಿದೆ. ಇದರಿಂದ ನಮ್ಮ ಕುಡ್ಲದ ಸ್ಥಳೀಯ ಯುವಜನರಿಗೆ ಹೊಸ ಉದ್ಯೋಗಾವಕಾಶಗಳು ಸಿಗಲಿವೆ.

ಕರ್ನಾಟಕದ ಅಭಿವೃದ್ಧಿಗೆ ಇಂತಹ ಬೆಳವಣಿಗೆಗಳ ಅಗತ್ಯವಿದೆ. ರಾಜ್ಯದ ವಿವಿಧ ನಗರಗಳಲ್ಲಿ ಹೆಚ್ಚಿನ ಕಂಪನಿಗಳು ತಮ್ಮ ಕಚೇರಿಗಳನ್ನು ಆರಂಭಿಸಿ, ಸ್ಥಳೀಯರಿಗೆ ಉದ್ಯೋಗ ನೀಡಬೇಕು. ಮಂಗಳೂರು ತನ್ನ ಉದ್ಯಮಶೀಲತೆಯ ಪರಂಪರೆಯನ್ನು ಮುಂದುವರಿಸುತ್ತಾ, ಅಭಿವೃದ್ಧಿಯ ಪಯಣದಲ್ಲಿ ಮತ್ತೊಂದು ಹೊಸ ಅಧ್ಯಾಯವನ್ನು ಆರಂಭಿಸುತ್ತಿದೆ ಎಂದಿದ್ದಾರೆ.

ಕ್ಯಾಪ್ಟನ್ ಬ್ರಿಜೇಶ್ ಟ್ವೀಟ್

1. ಮಂಗಳೂರಿನಲ್ಲಿ ಡೆಲಾಯ್ಟ್‌ ಕಚೇರಿ ಆರಂಭವಾಗುತ್ತಿರುವುದಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಜನವರಿಯಲ್ಲಿ ನಡೆದ ಟೈಕಾನ್ ಐಎಕ್ಸ್‌ಇ (TiECon IXE) ಕಾರ್ಯಕ್ರಮದಲ್ಲಿ ನಮ್ಮ ಮೊದಲ ಮಾತುಕತೆ ನಡೆದಿತ್ತು. ಆಗ ಮೂಡಿದ ಆಲೋಚನೆ ಈಗ ನಿಜವಾಗಿ, ಡೆಲಾಯ್ಟ್‌ ಮಂಗಳೂರಿನಲ್ಲಿ ತನ್ನ ಕಚೇರಿ ಆರಂಭಿಸುತ್ತಿರುವುದನ್ನು ನೋಡುವುದು ಸಂತಸದ ವಿಚಾರವಾಗಿದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಅವರು ಹೇಳಿದ್ದಾರೆ.

Bengaluru E-Khata: ಬೆಂಗಳೂರು ಆಸ್ತಿದಾರರಿಗೆ ಗುಡ್‌ನ್ಯೂಸ್: 24 ಲಕ್ಷ ಮಂದಿಗೆ ವಾಟ್ಸಾಪ್ ಮೂಲಕ ಉಚಿತ ಇ-ಖಾತಾ ವಿತರಣೆ!
Bengaluru E-Khata: ಬೆಂಗಳೂರು ಆಸ್ತಿದಾರರಿಗೆ ಗುಡ್‌ನ್ಯೂಸ್: 24 ಲಕ್ಷ ಮಂದಿಗೆ ವಾಟ್ಸಾಪ್ ಮೂಲಕ ಉಚಿತ ಇ-ಖಾತಾ ವಿತರಣೆ!

2. ನನ್ನ ದೃಷ್ಟಿಯಲ್ಲಿ ಮಂಗಳೂರು ಎಂದರೆ ಅಪಾರ ಅವಕಾಶಗಳ ತಾಣ. ದೇಶದ ಮತ್ತು ಜಗತ್ತಿನ ಪ್ರಮುಖ ಸಂಸ್ಥೆಗಳು ಇಲ್ಲಿ ನೆಲೆಸಲು ಬೇಕಾದ ಪ್ರತಿಭೆ, ಉದ್ಯಮಶೀಲತೆ ಮತ್ತು ಉತ್ಸಾಹ ನಮ್ಮಲ್ಲಿದೆ. ಇಂತಹ ಅವಕಾಶಗಳು ನಮ್ಮ ಊರಿನಲ್ಲೇ ಸಿಗುವಂತೆ ಮಾಡುವ ಇನ್ನಷ್ಟು ಹೊಸ ಪ್ರಯತ್ನಗಳು ನಡೆಯಬೇಕಿದೆ.

3. ಮಂಗಳೂರಿಗೆ ಡೆಲಾಯ್ಟ್‌ ಆಗಮನ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ನಮ್ಮ ಯುವಜನರಿಗೆ ಜಾಗತಿಕ ಮಟ್ಟದ ಸಂಸ್ಥೆಯಲ್ಲಿ ಕೆಲಸ ಮಾಡುವ, ದೊಡ್ಡ ಕನಸುಗಳನ್ನು ನನಸಾಗಿಸುವ ಮತ್ತು ತಾವು ಬೆಳೆದ ಊರಿನಲ್ಲೇ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಅವಕಾಶ ಸಿಗಲಿದೆ. ಇತರ ಕ್ಷೇತ್ರಗಳ ಇನ್ನಷ್ಟು ಸಂಸ್ಥೆಗಳೂ ನಮ್ಮ ಕರಾವಳಿಯತ್ತ ಗಮನಹರಿಸಿ, ಮಂಗಳೂರಿನಲ್ಲಿರುವ ಅವಕಾಶಗಳನ್ನು ಗುರುತಿಸಲಿ ಎಂಬುದು ನನ್ನ ಆಶಯ ಎಂದಿದ್ದಾರೆ.

Gold: ಚಿನ್ನದ ಬೆಲೆ ಇಳಿಕೆಗೆ ಮೋದಿ ಮನವಿಯೇ ಕಾರಣವೇ? ಬಂಗಾರ ಬೆಲೆ ಕುಸಿತದ ಹಿಂದಿನ ಅಸಲಿ ಕಾರಣಗಳೇನು?
Gold: ಚಿನ್ನದ ಬೆಲೆ ಇಳಿಕೆಗೆ ಮೋದಿ ಮನವಿಯೇ ಕಾರಣವೇ? ಬಂಗಾರ ಬೆಲೆ ಕುಸಿತದ ಹಿಂದಿನ ಅಸಲಿ ಕಾರಣಗಳೇನು?

4. ಇದೇ #BackToOoru ಅಭಿಯಾನದ ಉದ್ದೇಶ. ಉದ್ಯೋಗ ಮತ್ತು ಅಭಿವೃದ್ಧಿಯ ಅವಕಾಶಗಳನ್ನು ನಮ್ಮ ಊರಿಗೆ ತರುವುದು ಹಾಗೂ ಮುಂದಿನ ಪೀಳಿಗೆಯ ಯುವಜನರು ತಮ್ಮ ಭವಿಷ್ಯವನ್ನು ಇಲ್ಲಿಯೇ ರೂಪಿಸಿಕೊಳ್ಳುವಂತಹ ಮಂಗಳೂರನ್ನು ನಿರ್ಮಿಸುವುದು ಈ ಅಭಿಯಾನದ ಆಶಯವಾಗಿದೆ.

5. ನಾಳೆಯ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ನನಗೆ ತುಂಬಾ ಆಸೆಯಿತ್ತು. ಆದರೆ ಸದ್ಯ ದೆಹಲಿಯಲ್ಲಿರುವ ಕಾರಣ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಡೆಲಾಯ್ಟ್‌ ಸಂಸ್ಥೆಯ ನಿಮಗೆ ಮತ್ತು ಇಡೀ ತಂಡಕ್ಕೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ ಎಂದೂ ಕ್ಯಾಪ್ಟನ್ ಬ್ರಿಜೇಶ್ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

ಶಿಕ್ಷಕರ ನೇಮಕಾತಿ ವಿಚಾರದಲ್ಲಿ ಭರ್ಜರಿ ಗುಡ್‌ನ್ಯೂಸ್ ಕೊಟ್ಟ ಸಚಿವ ಮಧು ಬಂಗಾರಪ್ಪ
ಶಿಕ್ಷಕರ ನೇಮಕಾತಿ ವಿಚಾರದಲ್ಲಿ ಭರ್ಜರಿ ಗುಡ್‌ನ್ಯೂಸ್ ಕೊಟ್ಟ ಸಚಿವ ಮಧು ಬಂಗಾರಪ್ಪ

6. ಮಂಗಳೂರಿನಲ್ಲಿ ನಿಮ್ಮ ಹೊಸ ಅಧ್ಯಾಯ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. ಈ ನಗರದಲ್ಲಿ ನಿಮ್ಮ ಸಂಸ್ಥೆ ಮತ್ತಷ್ಟು ಬೆಳೆಯಲಿ. ಶೀಘ್ರದಲ್ಲೇ ಕಚೇರಿಗೆ ಭೇಟಿ ನೀಡುವ ನಿರೀಕ್ಷೆಯಲ್ಲಿದ್ದೇನೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+