Video: ವೇಗವಾಗಿ ಬಂದ ಲಾರಿ ಡಿಕ್ಕಿ, ವಿದ್ಯಾರ್ಥಿಗಳ ಮೇಲೆ ಹರಿದ ದೃಶ್ಯ ವೈರಲ್: 3 ಎಂಜಿನಿಯರ್ ವಿದ್ಯಾರ್ಥಿಗಳ ಸಾವು!

Viral Video: ಪರೀಕ್ಷೆ ಸಂಬಂಧ ಬಸ್‌ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನಿಂತಿದ್ದರು. ಇದೇ ವೇಳೆ ಎಸ್‌ಯುವಿ ಕಾರಿಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಎಂಜಿನಿಯರ್ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಈ ಅವಘದ ವಿಡಿಯೋ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಘಟನೆ ಪುಣೆ ನಗರದಿಂದ ಸುಮಾರು 13 ಕಿ.ಮೀ ದೂರದಲ್ಲಿರುವ ಬೋಪದೇವ್ ಘಾಟ್ ಬಳಿಯ ಯೇವಲೇವಡಿಯಲ್ಲಿ ನಡೆದಿದೆ. ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ 'ಹೇಟ್ ಡೈರೆಕ್ಟರ್' ಹ್ಯಾಂಡಲ್‌ನಿಂದ ಹಂಚಿಕೊಳ್ಳಲಾಗಿದೆ.

Three Engineering Students Killed Near Pune as Speeding Truck Hits SUV and Bus Stop Video Viral

ವಿದ್ಯಾರ್ಥಿಗಳ ಮೇಲೆ ಹರಿದ ಲಾರಿ

ವೈರಲ್ ವಿಡಿಯೋದಲ್ಲಿ, ಕಳೆದ ಮಂಗಳವಾರ ಮಧ್ಯಾಹ್ನ 2.30ರ ಆಸುಪಾಸಿಗೆ ವೇಗವಾಗಿ ಬಂದ ಟ್ರಕ್ ಒಂದನ್ನು ಎಸ್‌ಯುವಿ (SUV) ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬಸ್‌ ನಿಲ್ದಾಣದ ಬಳಿಕ ಕೆಲವು ವಾಹನಗಳು, ವಿದ್ಯಾರ್ಥಿಗಳು ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಟ್ರಕ್ ಕಾರಿಗೆ ಡಿಕ್ಕಿ ಹೊಡೆದಿದ್ದಲ್ಲದೇ, ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹರಿದಿದೆ. ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಸ್ಕಾಂನ ರಾತ್ರಿ ಕಾಮಗಾರಿ ವೇಳೆ ತಪ್ಪಿದ ಸಂಭವನೀಯ ಅನಾಹುತ! ವಿಡಿಯೋ ವೈರಲ್, ನಾಗರಿಕರು ಆಕ್ರೋಶ
ಬೆಸ್ಕಾಂನ ರಾತ್ರಿ ಕಾಮಗಾರಿ ವೇಳೆ ತಪ್ಪಿದ ಸಂಭವನೀಯ ಅನಾಹುತ! ವಿಡಿಯೋ ವೈರಲ್, ನಾಗರಿಕರು ಆಕ್ರೋಶ

ಪೊಲೀಸರು ತಿಳಿಸಿರುವ ಪ್ರಕಾರ, ಎಂಜಿನಿಯರ್ ವಿದ್ಯಾರ್ಥಿಗಳಾದ ಸಿದ್ದೇಶ್ ರಾಜೇ, ವಿಶಾಲ್ ದಂಗಡೆ ಮತ್ತು ಮೋಹಿನಿ ಚೌಧರಿ ಮೃತಪಟ್ಟ ದುರ್ಧೈವಿಗಳು. ಮೃತರ ವಯಸ್ಸು 20 ರಿಂದ 22 ವರ್ಷ ಎನ್ನಲಾಗಿದೆ.

ಕೆ.ಜೆ. ಎಜುಕೇಷನಲ್ ಇನ್‌ಸ್ಟಿಟ್ಯೂಟ್ಸ್ ವಿದ್ಯಾರ್ಥಿಗಳು

ಪ್ರಕರಣ ತನಿಖೆ ನಡೆಸಿದ ಪೊಲೀಸರು, ಮೃತ ಕಾಲೇಜು ವಿದ್ಯಾರ್ಥಿಗಳು ಇಲ್ಲಿನ ಬೋಪದೇವ್ ಘಾಟ್ ಬಳಿಯ 'ಕೆ.ಜೆ. ಎಜುಕೇಷನಲ್ ಇನ್‌ಸ್ಟಿಟ್ಯೂಟ್ಸ್'ನ ಭಾಗವಾಗಿರುವ 'ಟ್ರಿನಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್'ನ ವಿದ್ಯಾರ್ಥಿಗಳು. ಪ್ರಕರಣ ಯೇವಲೇವಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಮಾರುತಿ ಪಾಟೀಲ್ ತಿಳಿಸಿದರು.

ಪುರಂದರದಿಂದ ಪುಣೆಯ ಕಡೆಗೆ ರಸ್ತೆಯಲ್ಲಿ ಇಳಿಜಾರಿತ್ತು. ಈ ವೇಳೆ ವೇಗವಾಗಿ ಬಂದ ಟ್ರಕ್‌ನ ಚಾಲಕನಿಗೆ ನಿಯಂತ್ರಣ ತಪ್ಪಿದೆ. ಮೊದಲು ಎಸ್‌ಯುವಿ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದು, ನಂತರ ಟ್ರಿನಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್ ಬಳಿಯ ಬಸ್ ನಿಲ್ದಾಣದ ಕಡೆಗೆ ನುಗ್ಗಿತು. ನೋಡ ನೋಡುತ್ತಲೇ ಲಾರಿ ನುಗ್ಗಿ ಸಾಗಿದ್ದು ವಿಡಿಯೋದಲ್ಲಿ ಕಾಣಿಸುತ್ತದೆ. ಈ ಅವಘಡದಿಂದಾಗಿ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದರು.

ಗಾಯಾಳುಗಳ ಆರೋಗ್ಯ ಸ್ಥಿತಿ ಸ್ಥಿರ

ಗಾಯಗೊಂಡ ಶ್ವೇತಾ ತಳೇಕರ್ ಮತ್ತು ಸೋಘಮ್ ಘಂಗಾಲೆ ಎಂಬ ಇಬ್ಬರು ವಿದ್ಯಾರ್ಥಿಗಳನ್ನು ಪ್ರತ್ಯೇಕ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಡಿಕ್ಕಿ ಹೊಡೆದ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಿದ್ಯಾರ್ಥಿಗಳ ಮೇಲೆ ಹರಿದಾಗ ಒಬ್ಬರನ್ನು ಆಸ್ಪತ್ರೆಯಲ್ಲಿ ದಾಖಲಿಸಿದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟರು. ಪೊಲೀಸರು ಟ್ರಕ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

Bengaluru Video Viral: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ಅನಾಹುತ: ಶಾಲಾ ಮಿನಿಬಸ್‌ಗೆ ಟ್ಯಾಂಕರ್ ಡಿಕ್ಕಿ, ನೆಟ್ಟಿಗರು ಕಿಡಿ
Bengaluru Video Viral: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ಅನಾಹುತ: ಶಾಲಾ ಮಿನಿಬಸ್‌ಗೆ ಟ್ಯಾಂಕರ್ ಡಿಕ್ಕಿ, ನೆಟ್ಟಿಗರು ಕಿಡಿ

ಶಾಲಾ ಆಡಳಿತ ಮಂಡಳಿ ಹೇಳಿದ್ದೇನು?

ಇನ್‌ಸ್ಟಿಟ್ಯೂಟ್ಸ್ ಅಧ್ಯಕ್ಷ ಕಲ್ಯಾಣ್ ಜಾಧವ್ ಅವರು, ಸಂಸ್ಥೆಯಲ್ಲಿ ಬಹುತೇಕ ಕೋರ್ಸ್‌ಗಳಿಗೆ ಆಂತರಿಕ ಪರೀಕ್ಷೆಗಳು ನಡೆಯುತ್ತಿದ್ದವು. ಹೀಗಾಗಿ ಇಲ್ಲಿನ ಬಸ್ ನಿಲ್ದಾಣದಲ್ಲಿ ಎಂದಿಗಿಂತ ಹೆಚ್ಚು ಜನಸಂದಣಿ ಇತ್ತು. ಇದರಿಂದಾಗಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಒಂದೇ ಸಮಯದಲ್ಲಿ ಕಾಲೇಜಿನಿಂದ ಹೊರ ಬಂದಿದ್ದರು. ಈ ವೇಳೆ ಘಟನೆ ನಡೆದಿದ್ದು ಹೆಚ್ಚಿನ ಹಾನಿ ಸಂಭವಿಸಿದೆ ಎಂದು ತಿಳಿಸಿದರು.

ಸಾಮಾನ್ಯವಾಗಿ ತರಗತಿಗಳು ಪಾಳಿ ಪ್ರಕಾರ ನಡೆಯುತ್ತಿರುವ ಕಾರಣ ವಿದ್ಯಾರ್ಥಿಗಳು ಬೇರೆ ಬೇರೆ ಸಮಯಗಳಲ್ಲಿ ಕಾಲೇಜಿನಿಂದ ಹೊರ ಬರುತ್ತಾರೆ. ಮಂಗಳವಾರ ಪರೀಕ್ಷೆಗಳಿದ್ದ ಹಿನ್ನೆಲೆಯಲ್ಲಿ ಪರೀಕ್ಷೆ ಮುಗಿಯುತ್ತಿದ್ದಂತೆ ವಿದ್ಯಾರ್ಥಿಗಳು ಒಟ್ಟಿಗೆ ಗೇಟಿನಿಂದ ಹೊರ ಬಂದು ನಿಲ್ದಾಣ ಬಳಿ ನಿಂತಿದ್ದರು ಎಂದರು.

ಈ ಭಾಗದಲ್ಲಿ ಸದರಿ ಬಸ್ ನಿಲ್ದಾಣವು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕ ಸಾರಿಗೆಯ ಪ್ರಮುಖ ಸಂಪರ್ಕ ತಾಣವಾಗಿದೆ. ಸಾಸ್ವಾಡದಿಂದ ಪುಣೆಯ ಕಡೆಗೆ ಬರುವ ಬಸ್‌ಗಳು ಘಾಟ್ ಪ್ರದೇಶದ ಈ ರಸ್ತೆಯ ಮೂಲಕವೇ ಸಾಗುತ್ತವೆ. ಅಲ್ಲದೇ ಇದೇ ನಿಲ್ದಾಣದಲ್ಲಿ ಬಸ್, ಆಟೋಗಳು ನಿಲ್ಲುತ್ತವೆ. ಇಳಿಜಾರು ಹಿನ್ನೆಲೆಯಲ್ಲಿ ಕೆಲವು ವಾಹನಳು ವೇಗವಾಗಿ ಸಾಗುತ್ತವೆ. ಇಂದು ಬಸ್ ನಿಲ್ದಾಣ ಬಳಿ ನಿಂತಿದ್ದ ವಿದ್ಯಾರ್ಥಿಗಳಿಗೆ ಅಪಾಯ ಉಂಟಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+