ಬೆಸ್ಕಾಂನ ರಾತ್ರಿ ಕಾಮಗಾರಿ ವೇಳೆ ತಪ್ಪಿದ ಸಂಭವನೀಯ ಅನಾಹುತ! ವಿಡಿಯೋ ವೈರಲ್, ನಾಗರಿಕರು ಆಕ್ರೋಶ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ರಸ್ತೆ ಅಗೆಯುವುದು, ತುರ್ತು ಕಾಮಗಾರಿಗಳು ಹೆಚ್ಚಾಗಿವೆ. ಇತ್ತೀಚೆಗೆ ವಿದ್ಯುತ್ ಕಂಬ ಕಾರಿನ ಮೇಲೆ ಬಿದ್ದು ಉದ್ಯಮಿ ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದ್ದು. ಅದರ ಬೆನ್ನಲ್ಲೇ ಯಾವುದೇ ಮುಂಜಾಗ್ರತೆ ಇಲ್ಲದೇ ರಾತ್ರಿ ರಸ್ತೆ ಮಧ್ಯೆ ಬೆಸ್ಕಾಂ ಸಿಬ್ಬಂದಿ ಕಾರ್ಯದಿಂದ ವಾಹನ ಸವಾರರು ಅದೃಷ್ಠವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಕುರಿತ ವಿಡಿಯೋ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ನನ್ನ ಸಹೋದರನ ಕಾರಿನಲ್ಲಿದ್ದ ಡ್ಯಾಶ್-ಕ್ಯಾಮ್‌ನಲ್ಲಿ ಆಘಾತಕಾರಿ ವಿಡಿಯೋ ಸೆರೆಯಾಗಿದೆ. ಆತ ನಂಬಲಸಾಧ್ಯವಾದ ಘಟನೆಯಿಂದ ಸಹೋದರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆ ದಿನ ಕೃತ್ಯ ಎಸಗಿದವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಎಕ್ಸ್ ಖಾತೆಯಲ್ಲಿ (@tejaskhoday) ತೇಜಸ್ ಅವರು ವಿಡಿಯೋ ಹಂಚಿಕೊಂಡಿದ್ದಾರೆ.

ವಿಡಿಯೋ ಪೋಸ್ಟ್‌ನಲ್ಲಿ ಬೆಸ್ಕಾಂ ವಿರುದ್ಧ ಆರೋಪಿಸಲಾಗಿದೆ. ಜೊತೆಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಶಾಸಕ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರನ್ನು ಟ್ಯಾಗ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಕ್ರಮ ಕೈಗೊಳ್ಳೂವಂತೆ ಬೆಂಗಳೂರು ನಗರ ಸಂಚಾರಿ ಪೊಲೀಸರನ್ನು ಟ್ಯಾಗ್ ಮಾಡಲಾಗಿದೆ. ಅಲ್ಲದೇ ಇತ್ತೀಚೆಗೆ ತಮ್ಮ ಸಹೋದರನ ಮೇಲೆ ವಿದ್ಯುತ್ ಕಂಬ ಬಿದ್ದು ಗಂಭೀರ ಗಾಯಗಳಾದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ನೆಟ್ಟಿಗರು ಸಹ ಸನಾಗರಿಕ ಮೂಲ ಸಮಸ್ಯೆಗಳಿಂದ ಕಂಗೆಟ್ಟಿದ್ದು ರ್ಕಾರ ಆಡಳಿತ, ಅಧಿಕಾರಿಗಳ ನಿಲಕ್ಷ್ಯಕ್ಕೆ ಹಿಡಿಶಾಪ ಹಾಕಿದ್ದಾರೆ.
ವಾಹನ ಚಾಲಕರು ಗೊಂದಲ, ತಪ್ಪಿದ ಅಪಘಾತ
ನಮ್ಮ ಬೆಸ್ಕಾಂ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಜನರ ಪ್ರಾಣ ತೆಗೆಯುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ರಾತ್ರಿ ವೇಳೆ ನಡು ರಸ್ತೆಯಲ್ಲಿ ಯಾವುದೇ ಮುನ್ನೆಚ್ಚರಿಕೆ ಕೈಗೊಳ್ಳದೇ ಎರಡು ಡಿವೈಡರ್ ಇಟ್ಟು ನಿರ್ವಹಣಾ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಈ ವೇಳೆ ಎರಡು ಕಾರುಗಳು ಚಾಲಕರಿಗೆ ರಸ್ತೆಯಲ್ಲಿ ಎಲ್ಲಿ ಚಲಿಸಬೇಕೆಂದು ತೋಚದೇ ಗೊಂದಲಕ್ಕೀಡಾದ ಘಟನೆ ನಡೆದಿದೆ.
ಕಾರುಗಳು ಸ್ವಲ್ಪ ಜೋರಾಗಿ ಬಂದಿದ್ದರು, ಅಥವಾ ಚಾಲಕರು ಮೈ ಮರೆತಿದ್ದರು, ಎರಡು ರಸ್ತೆ ಮಧ್ಯ ಹಾಕಿರುವ ಸಿಮೆಂಟ್ ಡಿವೈಡರ್ ಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಇತ್ತು. ಇತರ ವಾಹನಗಳಿಗೆ ಡಿಕ್ಕಿ ಆಗಿ ದೊಡ್ಡ ಅಪಘಾತವಾಗುವುದರಲ್ಲಿತ್ತು, ಅದೃಷ್ಟವಶಾತ್ ಸಂಭವನೀಯ ಅವಘಡ ತಪ್ಪಿದೆ. ಸರ್ಕಾರಿ ಸಿಬ್ಬಂದಿಯ ಇಂಥಹ ವಿವೇಕಹೀನ ಕೃತ್ಯ ಖಂಡನೀಯ ಎಂದು ಕಿಡಿ ಕಾರಿದ್ದಾರೆ. ಈ ಘಟನೆ ಮಲ್ಲೇಶ್ವರಂ ಮುಖ್ಯಸ್ಥರಲ್ಲಿ ನಡೆದಿದೆ ಎನ್ನಲಾಗಿದೆ.
ಮಲ್ಲೇಶ್ವರಂ ಶಾಸಕರೇ ಇದಕ್ಕೆಲ್ಲ ಹೊಣೆ
ಈ ಘಟನೆಗೆ ಶಾಸಕ ಅಶ್ವಥ್ ನಾರಾಯಣ್ ಅವರು ಜವಾಬ್ದಾರಿ, ಅವರೇ ಇದರ ಹೊಣೆ ಹೊರಬೇಕು. ನಿಮ್ಮ ಕ್ಷೇತ್ರದಲ್ಲಿ ಈ ರೀತಿಯ ಘಟನೆಗಳು ಸಂಭವಿಸಿದ್ದು, ಮಕ್ಕಳು, ಹಿರಿಯ ನಾಗರಿಕರು ಅಥವಾ ಕುಟುಂಬದ ಸದಸ್ಯರು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇದೆ. ನಗರದ ಒಂದು "ಪ್ರತಿಷ್ಠಿತ ಬಡಾವಣೆ"ಯಲ್ಲಿ ವಾಸಿಸುತ್ತಿದ್ದರೂ, ಅಲ್ಲಿನ ನಿವಾಸಿಗಳಿಗೆ ಇಂತಹ ದುಸ್ಥಿತಿ ಎದುರಿಸಬೇಕಾಗಿದೆ. ಸಂಬಂಧಿತ ಇಲಾಖೆ, ಸಂಸ್ಥೆಗಳ ಕೆಲಸಗಾರರು ಕಂಬಗಳನ್ನು ಬೀಳಿಸಿ, ಸಂತ್ರಸ್ತರಿಗೆ ಸಹಾಯ ಮಾಡುವ ಬದಲು ಅಲ್ಲಿಂದ ಪರಾರಿಯಾಗಿದ್ದಾರೆ! ಇಂತಹ ಜೀವ ಹಾನಿ ಸಂಭವನೀಯ ದುರಂತಗಳನ್ನು ಮತದಾರರು ಇನ್ನೆಷ್ಟು ಕಾಲ ಸಹಿಸಿಕೊಳ್ಳಬೇಕು? ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರೇ, ದಯವಿಟ್ಟು ಇಂತಹ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ನಿರಂತರವಾಗಿ ನಡೆಯುತ್ತಿರುವ ಈ 'ಅಭಿವೃದ್ಧಿ ಕಾಮಗಾರಿ'ಗಳ ನಡುವೆ ಸಾಮಾನ್ಯ ನಾಗರಿಕರು ಎದುರಿಸುತ್ತಿರುವ ಜೀವಕ್ಕೆ ಅಪಾಯಕಾರಿ ಸನ್ನಿವೇಶಗಳು ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿವೆ. ಮೊದಲೇ ನಗರದಲ್ಲಿ ಮೂಲಭೂತ ನಾಗರಿಕ ಸೌಕರ್ಯಗಳು ಮತ್ತು ಸುರಕ್ಷತಾ ಮಾನದಂಡಗಳ ಕೊರತೆಯಿದೆ, ಇದೆಲ್ಲದಕ್ಕೂ ಪರಿಹಾರಗಳು ಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇಂಥಹ ಘಟನೆಗಳು ಮರುಕಳಿಸದಂತೆ ಬೆಂಗಳೂರು ನಗರ ಪೊಲೀಸರು ತಪ್ಪಿತಸ್ಥರ ವಿರುದ್ಧದ ಕ್ರಮ ಕೈಗೊಳ್ಳಬೇಕು. ಆಗ ಮಾತ್ರವೇ ಅಮಾಯಕ ವಾಹನ ಸವಾರರ ಜೀವಕ್ಕೆ ಕುತ್ತು ಉಂಟಾಗದಂತೆ ತಡೆಯಬಹುದು ಎಂದು ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರವು ತ್ವರಿತವಾಗಿ ಕ್ರಮ ಕೈಗೊಂಡು, ಕುಸಿಯುತ್ತಿರುವ ಸಾರ್ವಜನಿಕ ಮೂಲಸೌಕರ್ಯಗಳ ಬಿಕ್ಕಟ್ಟಿನಿಂದ ಈ ನಗರವನ್ನು ರಕ್ಷಿಸಬೇಕೆಂದು ಆಗ್ರಹಿಸಿದ್ದಾರೆ.
Watch this SHOCKING dash-cam video recorded from my brother's car in Bengaluru! He miraculously survived this unbelievable incident recently. Those who committed this act that night ABSCONDED!The sheer negligence of authorities including @NammaBESCOM is appalling and totally unacceptable. How can you not take basic precautions in the interest of human lives? Such a complete lack of common sense in carrying out such dangerous activities by your department cannot be overlooked.MLA @drashwathcn must take accountability for this! This could've happened to anyone else in your constituency, possibly killing children, senior citizens or family members. Looks like living in a so-called "premium locality" of the city doesn't protect its residents from poles being dropped on them by high-handed government-affiliated workers who fled instead of helping the victim. How long must voters tolerate such disasters?@krishnabgowda, please take note of this. The kind of life-threatening risks that ordinary citizens have to undergo during this never-ending 'development work' is testing everyone's patience. We lack basic civic amenities and safety standards in the city. It's high time!@BlrCityPolice kindly expedite the chargesheet against the culprits so that the lives of innocent residents aren't further endangered. They should be punished under the law!@CMofKarnataka I request your government to act fast and save this city from its crumbling public infrastructure crisis! As a long-time resident of the same neighborhood, I'm hoping that we will see better days ahead in Bengaluru. 🙏
— Tejas Khoday (@tejaskhoday) November 25, 2026
ಕಂಬ ಬಿದ್ದು ಉದ್ಯಮಿಗೆ ಗಂಭೀರ ಗಾಯ
ನಗರದಲ್ಲಿ ನವೆಂಬರ್ 18ರಂದು ನ್ಯೂಬಿಇಎಲ್ ರಸ್ತೆಯಲ್ಲಿ ಸಾಗಿಸುತ್ತಿದ್ದ ವಿದ್ಯುತ್ ಕಂಬವೊಂದು ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿನ ಮೇಲೆ ಕುಸಿದು ಬಿದ್ದ ಪರಿಣಾಮ ಇದೇ ತೇಜಸ್ ಖೋಡೆಯವರ ಸಹೋದರ ಉದ್ಯಮಿ 'ಶ್ರೇಯಸ್ ಖೋಡೆ' ಅವರಿಗೆ ತೀವ್ರ ಗಾಯವಾಗಿದೆ. ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಅಪಘಾತಕ್ಕೆ ಕಾರಣವಾದ ಸಂದರ್ಭಗಳ ಕುರಿತು ನಿಷ್ಪಕ್ಷಪಾತ, ಪಾರದರ್ಶಕ ಹಾಗೂ ಕಾಲಮಿತಿಯೊಳಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.




Click it and Unblock the Notifications
