ಕರ್ನಾಟಕದಲ್ಲಿ ಕಸದಿಂದ ವಿದ್ಯುತ್ ಉತ್ಪಾದನೆಗೆ ಚಿಂತನೆ: ಓಕೆ ಆದ್ರೆ ಜಪಾನ್ ಮಾದರಿಯಲ್ಲಿ ಯೋಜನೆ ಘೋಷಣೆ ನಿರೀಕ್ಷೆ: ಡಿಕೆಶಿ

ಬೆಂಗಳೂರು/ಟೋಕಿಯೋ: ಕರ್ನಾಟಕದಲ್ಲಿ 525ಕ್ಕೂ ಹೆಚ್ಚು ಜಪಾನೀಸ್ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಅವುಗಳಿಗೆ ಅಗತ್ಯ ಸಹಕಾರ ನೀಡುತ್ತಿರುವ ಕರ್ನಾಟಕ ಸರ್ಕಾರ ಇದೀಗ ಜಪಾನಿಸ್ ಮಾದರಿಯ ಕೆಲವು ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸಲು ಚಿಂತನೆ ನಡೆಸಿದೆ. ಈ ಪೈಕಿ ತ್ಯಾಜ್ಯದಿಂದ ಇಂಧನ ಉತ್ಪಾದನೆ ಸಾಧ್ಯತೆ ಕುರಿತು ಕರ್ನಾಟಕ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಿಳಿಸಿದರು.

ಬುಧವಾರ ಸಿಎಂ ಡಿ. ಕೆ. ಶಿವಕುಮಾರ್ ಮತ್ತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ್ ನೇತೃತ್ವದ ನಿಯೋಗವು ಜಪಾನ್‌ನಲ್ಲಿ ಜೆಎಫ್‌ಇ ಇಂಜಿನಿಯರಿಂಗ್ ಕಾರ್ಪೊರೇಷನ್ ವ್ಯವಸ್ಥಾಪಕ ನಿರ್ದೇಶಕರಾದ ಕೀಚಿ ನಾಗಯಾ ಮತ್ತು ಕಂಪನಿಯ ಹಿರಿಯ ಪ್ರತಿನಿಧಿಗಳನ್ನು ಭೇಟಿ ಮಾಡಿದರು.

Karnataka Explores Waste-to-Energy Projects with Japan s JFE Engineering to Boost Solid Waste Management

ತ್ಯಾಜ್ಯದಿಂದ ಇಂಧನ ತಯಾರಿಕೆ, ಜಪಾನ್ ಪರಿಣಿತಿ ಅರಿತ ಸಿಎಂ

ತ್ಯಾಜ್ಯದಿಂದ ಇಂಧನ ಉತ್ಪಾದನೆ, ನಗರ ಘನತ್ಯಾಜ್ಯ ನಿರ್ವಹಣೆ ಮತ್ತು ನಗರ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಹಯೋಗದ ಅವಕಾಶಗಳನ್ನು ಅನ್ವೇಷಿಸುವ ಕುರಿತು ಈ ಭೇಟಿಯಲ್ಲಿ ಚರ್ಚಿಸಲಾಯಿತು. ಜಪಾನ್ ಮತ್ತು ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ನಗರ ಘನತ್ಯಾಜ್ಯವನ್ನು ಇಂಧನವನ್ನಾಗಿ ಪರಿವರ್ತಿಸುವಲ್ಲಿ ಜೆಎಫ್‌ಇ ಇಂಜಿನಿಯರಿಂಗ್ ಹೊಂದಿರುವ ಅನುಭವದ ಕುರಿತು ಚರ್ಚೆ ನಡೆಯಿತು. ಲ್ಯಾಂಡ್ ಫಿಲ್ ಪ್ರದೇಶಗಳಿಗೆ ಸೇರುವ ತ್ಯಾಜ್ಯದ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವುದರ ಜೊತೆಗೆ, ಸುಮಾರು 15 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವಿರುವ ತ್ಯಾಜ್ಯದಿಂದ ಇಂಧನ ತಯಾರಿಸುವ ಘಟಕಗಳನ್ನು ಅಭಿವೃದ್ಧಿಪಡಿಸುವ ತನ್ನ ಪರಿಣತಿಯ ಕುರಿತು ರಾಜ್ಯದ ನಿಯೋಗದ ಸದಸ್ಯರಿಗೆ ಕಂಪನಿಯು ಮಾಹಿತಿ ನೀಡಿತು.

Industry: ಮೇಕ್ ಇನ್ ಕರ್ನಾಟಕಕ್ಕೆ ಕವಾಸಕಿ ಸಾಥ್: ವಿಪ್ರೋ ಕವಾಸಕಿ ಘಟಕ ವಿಸ್ತರಣೆಗೆ ₹800 ಕೋಟಿ ಹೂಡಿಕೆ ಒಪ್ಪಂದ: ಸಿಎಂ
Industry: ಮೇಕ್ ಇನ್ ಕರ್ನಾಟಕಕ್ಕೆ ಕವಾಸಕಿ ಸಾಥ್: ವಿಪ್ರೋ ಕವಾಸಕಿ ಘಟಕ ವಿಸ್ತರಣೆಗೆ ₹800 ಕೋಟಿ ಹೂಡಿಕೆ ಒಪ್ಪಂದ: ಸಿಎಂ

ತ್ಯಾಜ್ಯ ಸಂಸ್ಕರಣೆ, ಇಂಧನ ಉತ್ಪಾದನೆ ಮತ್ತು ದೀರ್ಘಕಾಲೀನ ಕಾರ್ಯಾಚರಣೆಗಳನ್ನು ಸಂಯೋಜಿಸುವ ಮೂಲಕ, ಕರ್ನಾಟಕದ ನಗರ ತ್ಯಾಜ್ಯ ನಿರ್ವಹಣಾ ಅಗತ್ಯಗಳಿಗೆ ತಕ್ಕಂತೆ ಜೆಎಫ್‌ಇ ಸಂಸ್ಥೆಯ ತಂತ್ರಜ್ಞಾನ ಮತ್ತು ಕಾರ್ಯನಿರ್ವಹಣಾ ಮಾದರಿಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆಗಳ ಕುರಿತು ನಿಯೋಗವು ಪರಿಶೀಲಿಸಿತು.

ಆಯಾ ನಗರಗಳ ತ್ಯಾಜ್ಯದ ಸ್ವರೂಪ, ಸಂಗ್ರಹಣಾ ವ್ಯವಸ್ಥೆ, ಪ್ರಮಾಣ ಮತ್ತು ಮೂಲಸೌಕರ್ಯ ಅಗತ್ಯಗಳಿಗೆ ಅನುಗುಣವಾಗಿ ವಿಶೇಷ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಕುರಿತೂ ಕರ್ನಾಟಕ ಅಗತ್ಯ ಮಾಹಿತಿ ಪಡೆದುಕೊಂಡಿದೆ.

ಬೆಂಗಳೂರಿನಾಚೆಗೂ ಕಸದಿಂದ ಇಂಧನ

"ಬೆಂಗಳೂರಿನ ಹೊರತಾಗಿ ಕರ್ನಾಟಕದ ಇತರ ಪ್ರಮುಖ ನಗರಗಳಿಗೂ ಸುಧಾರಿತ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಪರಿಹಾರಗಳನ್ನು ವಿಸ್ತರಿಸಲು ನಮ್ಮ ಸರ್ಕಾರ ಆಸಕ್ತಿ ವ್ಯಕ್ತಪಡಿಸಿದೆ. ಯೋಜನೆಯ ಅಭಿವೃದ್ಧಿ, ಅನುಷ್ಠಾನ ಮತ್ತು ದೀರ್ಘಕಾಲೀನ ಕಾರ್ಯಾಚರಣೆಗಳಿಗಾಗಿ ಜಪಾನಿನ ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್ ಪರಿಣತಿಯನ್ನು ಸ್ಥಳೀಯ ಸಾಮರ್ಥ್ಯಗಳೊಂದಿಗೆ ಸಂಯೋಜಿಸಲು ಸೂಕ್ತ ಸ್ಥಳೀಯ ಪಾಲುದಾರರನ್ನು ಗುರುತಿಸುವ ಕುರಿತು ಉಭಯ ಕಡೆಯವರು ಚರ್ಚಿಸಲಾಯಿತು. ರಾಜ್ಯಾದ್ಯಂತ ಕಾರ್ಯಸಾಧುವಾದ ತ್ಯಾಜ್ಯದಿಂದ ಇಂಧನ ಉತ್ಪಾದನೆ ಮತ್ತು ನಗರ ಮೂಲಸೌಕರ್ಯ ಯೋಜನೆಗಳನ್ನು ಅನ್ವೇಷಿಸಲು ಜೆಎಫ್‌ಇ ಇಂಜಿನಿಯರಿಂಗ್‌ನೊಂದಿಗೆ ಮುಂದಿನ ಹಂತದ ಮಾತುಕತೆಗಳಿಗೆ ನಾವು ಅನುವು ಮಾಡಿಕೊಡಲಿದ್ದೇವೆ" ಎಂದು ಸಿಎಂ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಟೊಯೋಟಾ ಉತ್ಪಾದನೆ ವಿಸ್ತರಣೆಗೆ ಸಹಕಾರ: ಜಪಾನ್ ಟ್ಯಾಕ್ಸಿ ಮಾಡೆಲ್ ಪರಿಚಯಿಸಲು ಡಿಕೆಶಿ ಒಲವು
ಕರ್ನಾಟಕದಲ್ಲಿ ಟೊಯೋಟಾ ಉತ್ಪಾದನೆ ವಿಸ್ತರಣೆಗೆ ಸಹಕಾರ: ಜಪಾನ್ ಟ್ಯಾಕ್ಸಿ ಮಾಡೆಲ್ ಪರಿಚಯಿಸಲು ಡಿಕೆಶಿ ಒಲವು

ರಾಜ್ಯದ ನಗರಗಳ ಅಭಿವೃದ್ಧಿ ಹೊಸ ಮಾದರಿ?

ವಿಶ್ವದರ್ಜೆಯ ನಗರ ಮೂಲಸೌಕರ್ಯ ಮತ್ತು ಮಿಶ್ರ-ಬಳಕೆಯ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಜಪಾನ್ ಹೊಂದಿರುವ ಅನುಭವವನ್ನು ಬಳಸಿಕೊಂಡು, ಬೆಂಗಳೂರಿನ ಕಾರ್ಯತಂತ್ರದ ಪುನರಾಭಿವೃದ್ಧಿ ಮತ್ತು ಭವಿಷ್ಯದ ನಗರಾಭಿವೃದ್ಧಿ ಯೋಜನೆಗಳಿಗೆ ಈ ತತ್ವಗಳನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದರ ಕುರಿತು ನಿಯೋಗವು ಪರಿಶೀಲಿಸುತ್ತಿದೆ. ಅಲ್ಲಿನ ತಂತ್ರಜ್ಞಾನ, ಮಾದರಿ, ಕಾರ್ಯವೈಖರಿಗಳು ಇಲ್ಲಿಗೆ ಸಾಮ್ಯತೆ ಆದಲ್ಲಿ, ಇಲ್ಲಿನ ಸಂಪನ್ಮೂಲ ಬಳಸಿ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಾದಲ್ಲಿ ಕೆಲವು ನೂತನ ಯೋಜನೆಗಳು ಮುಂದಿನ ದಿನಗಳಲ್ಲಿ ಸರ್ಕಾರದಿಂದ ಘೋಷಣೆ ಆಗುವುದರಲ್ಲಿ ಅನುಮಾನ ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+