Industry: ಮೇಕ್ ಇನ್ ಕರ್ನಾಟಕಕ್ಕೆ ಕವಾಸಕಿ ಸಾಥ್: ವಿಪ್ರೋ ಕವಾಸಕಿ ಘಟಕ ವಿಸ್ತರಣೆಗೆ ₹800 ಕೋಟಿ ಹೂಡಿಕೆ ಒಪ್ಪಂದ: ಸಿಎಂ

ಬೆಂಗಳೂರು/ಟೋಕಿಯೋ: ಕರ್ನಾಟಕದ ಉತ್ಪಾದನೆ ಮತ್ತು ಎಂಜಿನಿಯರಿಂಗ್ ವಲಯಕ್ಕೆ ದೊಡ್ಡ ಉತ್ತೇಜನ ಸಿಗುತ್ತಿದೆ. ಏಕೆಂದರೆ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ 5ನೇ ಹಂತದಲ್ಲಿರುವ 'ವಿಪ್ರೋ ಕವಾಸಕಿ ಪ್ರಿಸಿಷನ್ ಮೆಷಿನರಿ ಪ್ರೈವೇಟ್ ಲಿಮಿಟೆಡ್' ಘಟಕದ ವಿಸ್ತರಣೆಗಾಗಿ, 'ಕವಾಸಕಿ ಹೆವಿ ಇಂಡಸ್ಟ್ರೀಸ್' ಮುಂದಿನ 10 ವರ್ಷಗಳಲ್ಲಿ ₹800 ಕೋಟಿವರೆಗೆ ಹೂಡಿಕೆ ಮಾಡಲು ಬದ್ಧತೆ ತೋರಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುಡ್‌ನ್ಯೂಸ್‌ ನೀಡಿದ್ದಾರೆ.

ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಎಂ. ಬಿ. ಪಾಟೀಲ್ ಅವರ ಸಮ್ಮುಖದಲ್ಲಿ ಟೋಕಿಯೊದಲ್ಲಿ ಈ ಒಪ್ಪಂದಕ್ಕೆ ಇಂದು ಬುಧವಾರ ಸಹಿ ಹಾಕಲಾಯಿತು. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಕವಾಸಕಿ ಹೆವಿ ಇಂಡಸ್ಟ್ರೀಸ್‌ನ ಶ್ರೀ ಕೆಂಜಿ ಮಟ್ಸುಶಿತಾ ಮತ್ತು ವಿಪ್ರೋ ಕವಾಸಕಿ ಪ್ರಿಸಿಷನ್ ಮೆಷಿನರಿಯ ಸಿಇಒ ಶ್ರೀ ಮಿನೋರು ಹಟ್ಸುಡಾ ಅವರು ಒಪ್ಪಂದವನ್ನು ವಿನಿಮಯ ಮಾಡಿಕೊಂಡರು.

Japan s Kawasaki Heavy Industries Pledges Rs 800 Crore to Expand Wipro Kawasaki Plant in Bengaluru DKS

ಏನೆಲ್ಲ ಉತ್ಪಾದನೆ ಆಗಲಿದೆ?

ಕವಾಸಕಿ ಹೆವಿ ಇಂಡಸ್ಟ್ರೀಸ್ ಪ್ರಸ್ತಾವಿತ ಘಟಕವು ನಿರ್ಮಾಣ ಸಲಕರಣೆಗಳ ಉದ್ಯಮಕ್ಕೆ ಅಗತ್ಯವಿರುವ ಹೈಡ್ರಾಲಿಕ್ ಪಂಪ್‌ಗಳು, ಸ್ವಿಂಗ್ ಮೋಟಾರ್‌ಗಳು ಮತ್ತು ಸಂಬಂಧಿತ ಬಿಡಿಭಾಗಗಳನ್ನು ತಯಾರಿಸಲಿದೆ. ಈ ಹೂಡಿಕೆಯನ್ನು ಎರಡು ಹಂತಗಳಲ್ಲಿ ಕಾರ್ಯಗತಗೊಳಿಸಲಾಗುವುದು; ಮೊದಲ ಹಂತದಲ್ಲಿ ₹200-400 ಕೋಟಿ ಮತ್ತು ಎರಡನೇ ಹಂತದಲ್ಲಿ ₹400-800 ಕೋಟಿ ಹೂಡಿಕೆ ಮಾಡಲು ಸಜ್ಜಾಗಿದೆ. ಇದರಿಂದ ಸುಮಾರು 600 ಉತ್ತಮ ಗುಣಮಟ್ಟದ ಉತ್ಪಾದನಾ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು.

ಕರ್ನಾಟಕದಲ್ಲಿ ಟೊಯೋಟಾ ಉತ್ಪಾದನೆ ವಿಸ್ತರಣೆಗೆ ಸಹಕಾರ: ಜಪಾನ್ ಟ್ಯಾಕ್ಸಿ ಮಾಡೆಲ್ ಪರಿಚಯಿಸಲು ಡಿಕೆಶಿ ಒಲವು
ಕರ್ನಾಟಕದಲ್ಲಿ ಟೊಯೋಟಾ ಉತ್ಪಾದನೆ ವಿಸ್ತರಣೆಗೆ ಸಹಕಾರ: ಜಪಾನ್ ಟ್ಯಾಕ್ಸಿ ಮಾಡೆಲ್ ಪರಿಚಯಿಸಲು ಡಿಕೆಶಿ ಒಲವು

2012 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾದ ವಿಪ್ರೋ ಕವಾಸಕಿ ಪ್ರಿಸಿಷನ್ ಮೆಷಿನರಿ, ಭಾರತದ ಎಕ್ಸ್‌ಕವೇಟರ್ ಹೈಡ್ರಾಲಿಕ್ ಪಂಪ್ ಮಾರುಕಟ್ಟೆಯಲ್ಲಿ ಪ್ರಮುಖ ಸಂಸ್ಥೆಯಾಗಿ ಹೊರಹೊಮ್ಮಿದೆ. ಈ ವಿಸ್ತರಣೆಯು ಈ ಯಶಸ್ವಿ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲಿದ್ದು, ಕರ್ನಾಟಕದ ನಿರ್ಮಾಣ ಸಲಕರಣೆಗಳು ಮತ್ತು ಬಂಡವಾಳ ಸರಕುಗಳ ಇಕೋಸಿಸ್ಟಮ್ ಇನ್ನಷ್ಟು ಸದೃಢಗೊಳಿಸಲಿದೆ.

525 ಕ್ಕೂ ಹೆಚ್ಚು ಜಪಾನೀಸ್ ಸಂಸ್ಥೆಗಳ ಜತೆ ನಂಟು

2016 ರಿಂದೀಚೆಗೆ 101 ಜಪಾನೀಸ್ ಗ್ರೀನ್‌ಫೀಲ್ಡ್ ಯೋಜನೆಗಳು ಮತ್ತು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 525 ಕ್ಕೂ ಹೆಚ್ಚು ಜಪಾನೀಸ್ ಸಂಸ್ಥೆಗಳೊಂದಿಗೆ, ಕರ್ನಾಟಕವು ಜಪಾನೀಸ್ ಹೂಡಿಕೆಗಳಿಗೆ ನೆಚ್ಚಿನ ತಾಣವಾಗಿ ಮುಂದುವರಿದಿದೆ. ಯೋಜನೆಯು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕ ಸರ್ಕಾರವು ಭೂ ಹಂಚಿಕೆ, ಅನುಮೋದನೆಗಳು, ನಿರಾಕ್ಷೇಪಣಾ ಪತ್ರಗಳು ಮತ್ತು ಅನ್ವಯವಾಗುವ ಪ್ರೋತ್ಸಾಹಕಗಳನ್ನು ಒದಗಿಸಲು ನೆರವಾಗಲಿದೆ.

ಇದೇ ಸಂದರ್ಭದಲ್ಲಿ, 2027 ರ ಏಪ್ರಿಲ್ 20 ರಿಂದ 22 ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ 'ಜಾಗತಿಕ ಹೂಡಿಕೆದಾರರ ಸಮಾವೇಶ - ಇನ್ವೆಸ್ಟ್ ಕರ್ನಾಟಕ 2027' ರಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರು ಕವಾಸಕಿ ಸಂಸ್ಥೆಯ ಲೀಡರ್ಶಿಪ್ ಅನ್ನು ಆಹ್ವಾನಿಸಿದರು.

ನಗರ ಅಭಿವೃದ್ಧಿ ಯೋಜನೆ: ಜಪಾನ್ ಮಾದರಿಯಲ್ಲಿ ಬೆಂಗಳೂರು ಅಭಿವೃದ್ಧಿ?

ಡಿ. ಕೆ. ಶಿವಕುಮಾರ್ ಅವರ ನಿಯೋಗವು ಕರ್ನಾಟಕದ ನಿಯೋಗದೊಂದಿಗೆ ಜಪಾನ್‌ನ ಪ್ರಮುಖ ವಾಸ್ತುಶಿಲ್ಪ, ಎಂಜಿನಿಯರಿಂಗ್ ಮತ್ತು ನಗರ ಯೋಜನಾ ಸಂಸ್ಥೆಯಾದ 'ನಿಕ್ಕೆನ್ ಸೆಕ್ಕೈ' ಸಹಯೋಗದಲ್ಲಿ, ಪ್ರತಿಷ್ಠಿತ ಸಮಗ್ರ ನಗರ ಅಭಿವೃದ್ಧಿ ಯೋಜನೆಯಾದ 'ಟೋಕಿಯೊ ಮಿಡ್‌ಟೌನ್ ರೊಪ್ಪೊಂಗಿ'ಗೆ ಭೇಟಿ ನೀಡಿ ಪರಿಶೀಲಿಸಿತು.

ಕರ್ನಾಟಕದಲ್ಲಿ ಜಪಾನ್ ಮಾದರಿ ರೈಲ್ವೆ ನಿಲ್ದಾಣ ನಿರ್ಮಾಣ! ಸಿಎಂ ಡಿಕೆಶಿ ಮಹತ್ವದ ಆಸೆ
ಕರ್ನಾಟಕದಲ್ಲಿ ಜಪಾನ್ ಮಾದರಿ ರೈಲ್ವೆ ನಿಲ್ದಾಣ ನಿರ್ಮಾಣ! ಸಿಎಂ ಡಿಕೆಶಿ ಮಹತ್ವದ ಆಸೆ

ಈ ಭೇಟಿಯ ಸಂದರ್ಭದಲ್ಲಿ ನಿಯೋಗವು ಯೋಜನೆಯ ಮಾಸ್ಟರ್ ಪ್ಲಾನಿಂಗ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಿಕ್ಕೆನ್ ಸೆಕ್ಕೈ ಸಂಸ್ಥೆಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಾಗತಿಕ ವ್ಯವಹಾರ ವಿಭಾಗದ ಮುಖ್ಯಸ್ಥರಾದ ವಟಾರು ತನಕಾ ಅವರೊಂದಿಗೆ ಸಂವಾದ ನಡೆಸಿತು. ಸುಮಾರು 25 ಎಕರೆಯ ಹಳೆಯ ರಕ್ಷಣಾ ಇಲಾಖೆ ಭೂಮಿಯಲ್ಲಿ ಶೇ. 50 ರಷ್ಟನ್ನು ಹಸಿರು ಮತ್ತು ತೆರೆದ ಜಾಗವಾಗಿ ಉಳಿಸಿಕೊಂಡು, ಕಚೇರಿ, ವಸತಿ, ವಾಣಿಜ್ಯ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನೊಳಗೊಂಡ ಆಧುನಿಕ ನಗರ ಪ್ರದೇಶವಾಗಿ ಹೇಗೆ ರೂಪಿಸಲಾಗಿದೆ ಎಂಬುದನ್ನು ತಂಡವು ಅಧ್ಯಯನ ಮಾಡಿತು ಎಂದು ಸಿಎಂ ತಿಳಿಸಿದರು.

ಸಮಗ್ರ ಮಾಸ್ಟರ್ ಪ್ಲಾನಿಂಗ್, ವರ್ಟಿಕಲ್ ಡೆವಲಪ್‌ಮೆಂಟ್, ಭೂಮಿಯ ಸಮರ್ಪಕ ಬಳಕೆ, ಪಾದಚಾರಿ ಸ್ನೇಹಿ ಸಾರ್ವಜನಿಕ ಸ್ಥಳಗಳು, ಸುಗಮ ಸಾರ್ವಜನಿಕ ಸಾರಿಗೆ ಸಂಪರ್ಕ ಮತ್ತು ಉನ್ನತ ದರ್ಜೆಯ ನಗರ ಮೂಲಸೌಕರ್ಯಗಳ ಅಭಿವೃದ್ಧಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಅಂದಾಜು 2.5 ರಿಂದ 3 ವರ್ಷಗಳಲ್ಲಿ ಸಾಕಾರಗೊಂಡಿರುವ ಈ ಮಾದರಿಯು, ಸಮಗ್ರ ಸಂಪರ್ಕ, ವಾಸಯೋಗ್ಯ ಪರಿಸರ ಮತ್ತು ಸುಸ್ಥಿರ ನಗರ ನಿರ್ಮಾಣಕ್ಕೆ ಸ್ಪಷ್ಟ ದಿಕ್ಸೂಚಿಯಾಗಿದೆ. ಜಪಾನ್ ಹೊಂದಿರುವ ಅನುಭವವನ್ನು ಬಳಸಿಕೊಂಡು, ಇಂತಹ ಆಧುನಿಕ ಮಾದರಿಗಳನ್ನು ಬೆಂಗಳೂರಿನ ಅಭಿವೃದ್ಧಿ ಮತ್ತು ಭವಿಷ್ಯದ ಯೋಜನೆಗಳಿಗೆ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದರ ಕುರಿತು ನಿಯೋಗವು ಸಮಾಲೋಚನೆ ನಡೆಸಿರುವುದಾಗಿ ಡಿಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+