Nikhil Kamath: ಉದ್ಯಮಿ ದೀಪಾ ಜೊತೆ ನಿಖಿಲ್‌ ಕಾಮತ್‌ ಹೊಸ ನಂಟು! ಫೇಸ್‌ಬುಕ್ ಪೋಸ್ಟ್‌ನಿಂದ ಶುರುವಾಯ್ತು ಗಾಸಿಪ್!

ಭಾರತದ ಯುವ ಉದ್ಯಮಿಗಳಲ್ಲಿ ಸಾಕಷ್ಟು ಜನಪ್ರಿಯರಾಗಿರುವ, ಬೆಂಗಳೂರಿಗ ನಿಖಿಲ್ ಕಾಮತ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರ ಉದ್ಯಮದ ಸಾಧನೆಗಿಂತ ವೈಯಕ್ತಿಕ ಜೀವನದ ಸುತ್ತ ನಡೆಯುತ್ತಿರುವ ಸೋಷಿಯಲ್ ಮೀಡಿಯಾ ಚರ್ಚೆಯೇ ಹೆಚ್ಚು ಕುತೂಹಲ ಮೂಡಿಸಿದೆ. ಖ್ಯಾತ ಸೌಂದರ್ಯವರ್ಧಕ ಬ್ರ್ಯಾಂಡ್ 'ಇಂಡೇ ವೈಲ್ಡ್' (indē wild) ನಲ್ಲಿ ನಿಖಿಲ್ ಕಾಮತ್ ಅವರ WTF ಹೂಡಿಕೆ ಮಾಡಿದೆ. ಈ ಹೂಡಿಕೆಯ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಬ್ರ್ಯಾಂಡ್‌ನ ಸಹಸಂಸ್ಥಾಪಕಿ ದೀಪಾ ಬ್ಯೂಲರ್-ಖೋಸ್ಲಾ ಅವರ ಜೊತೆಗಿನ ನಿಖಿಲ್ ಅವರ ಒಡನಾಟದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ಕಾಮೆಂಟ್‌ಗಳು ಕಾಣಿಸಿಕೊಂಡಿವೆ. ಮುಖ್ಯವಾಗಿ, ನಿಖಿಲ್‌ ಕಾಮತ್‌ ಅವರು ಹಾಕಿರುವ ಫೇಸ್‌ಬುಕ್‌ ಪೋಸ್ಟ್‌ನಿಂದ ಕೆಲವು ಗಾಸಿಪ್‌ಗಳು ಹುಟ್ಟಿಕೊಂಡಿವೆ.

ಇನ್ನೊಂದು ಕಡೆ, ಮದುವೆ ಮತ್ತು ಮಕ್ಕಳ ಬಗ್ಗೆ ಮಾತನಾಡುವಾಗ 'ನನಗೆ ಈಗಲೇ ಯಾವುದರ ಬಗ್ಗೆಯೂ ಖಚಿತತೆ ಇಲ್ಲ' ಎಂದು ಹೇಳುವ ನಿಖಿಲ್ ಕಾಮತ್ ಅವರ ಹಳೆಯ ಹೇಳಿಕೆಗಳೂ ಮತ್ತೆ ಮುನ್ನೆಲೆಗೆ ಬಂದಿವೆ. ಹಾಗಾದರೆ ಈ ಹೊಸ ಉದ್ಯಮದ ನಂಟಿನ ಹಿಂದಿರುವ ಕಥೆಯೇನು? ನೆಟ್ಟಿಗರು ಯಾಕೆ ಇಷ್ಟೊಂದು ಕುತೂಹಲ ತೋರಿಸುತ್ತಿದ್ದಾರೆ?

Nikhil Kamath New Partnership With Diipa Sparks Gossip What He Said About Marriage

ದೀಪಾ ಜೊತೆ Nikhil Kamath ಹೊಸ ಬಿಸಿನೆಸ್ ನಂಟು!

ನಿಖಿಲ್ ಕಾಮತ್ ಅವರ WTF, ದೀಪಾ ಬ್ಯೂಲರ್-ಖೋಸ್ಲಾ ಮತ್ತು ಅವರ ಪತಿ ಒಲೆಗ್ ಬ್ಯೂಲರ್ ಸ್ಥಾಪಿಸಿರುವ indē wild ಸೌಂದರ್ಯವರ್ಧಕ ಬ್ರ್ಯಾಂಡ್‌ನಲ್ಲಿ ಹೂಡಿಕೆ ಮಾಡಿದೆ. ಈ ಹೂಡಿಕೆ 2026ರ ಅಕ್ಟೋಬರ್‌ನಲ್ಲಿ ಅಂತಿಮಗೊಂಡಿದ್ದು, ಹೂಡಿಕೆಯ ಮೊತ್ತವನ್ನು ಬಹಿರಂಗಪಡಿಸಲಾಗಿಲ್ಲ.

ಈ ಬ್ರ್ಯಾಂಡ್ ಚರ್ಮ ಮತ್ತು ಕೂದಲಿನ ಆರೈಕೆಗೆ ಸಂಬಂಧಿಸಿದ ಉತ್ಪನ್ನಗಳನ್ನು ತಯಾರಿಸುತ್ತದೆ. ಆಯುರ್ವೇದದ ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ವಿಜ್ಞಾನದೊಂದಿಗೆ ಸಂಯೋಜಿಸುವುದು ಇದರ ವಿಶೇಷತೆ. ಭಾರತ ಮಾತ್ರವಲ್ಲದೆ ಅಮೆರಿಕ ಮತ್ತು ಬ್ರಿಟನ್‌ನಲ್ಲಿಯೂ ಬ್ರ್ಯಾಂಡ್ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿದೆ.

ವಿಶೇಷವೆಂದರೆ ನಿಖಿಲ್ ಕೇವಲ ಹೂಡಿಕೆದಾರರಾಗಿ ಉಳಿದಿಲ್ಲ. ಬ್ರ್ಯಾಂಡ್‌ನ 'ಮೂನ್‌ಲೈಟ್ ಗ್ರೋತ್' (Moonlight Growth) ಎಂಬ ಕೂದಲಿನ ಆರೈಕೆ ಉತ್ಪನ್ನಗಳ ಸರಣಿಯ ಪ್ರಚಾರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಗ್ರಾಹಕ ಉತ್ಪನ್ನವೊಂದರ ಬ್ರ್ಯಾಂಡ್ ಸರಣಿಗೆ ನಿಖಿಲ್ ತಮ್ಮ ಮುಖವನ್ನು ನೀಡುತ್ತಿರುವುದು ಇದೇ ಮೊದಲ ಬಾರಿ.

ಫೇಸ್‌ಬುಕ್ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳೇ ಬೇರೆ!

ನಿಖಿಲ್ ಕಾಮತ್ ಈ ಹೊಸ ಪಾಲುದಾರಿಕೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಬಳಿಕ ಚರ್ಚೆ ಶುರುವಾಗಿದೆ. ಕೆಲವರು ಇದನ್ನು ಅತ್ಯುತ್ತಮ ಉದ್ಯಮದ ನಿರ್ಧಾರ ಎಂದು ಹೊಗಳಿದರೆ, ಇನ್ನೂ ಕೆಲವರು ದೀಪಾ ಅವರ ಜೊತೆಗಿನ ನಿಖಿಲ್ ಅವರ ಒಡನಾಟದ ಬಗ್ಗೆ ವೈಯಕ್ತಿಕ ಊಹಾಪೋಹಗಳನ್ನು ವ್ಯಕ್ತಪಡಿಸಿದ್ದಾರೆ.

ವ್ಯವಹಾರದ ವಿಚಾರವಾಗಿ ಆರಂಭವಾದ ಚರ್ಚೆ, ಕೆಲವರ ಕಾಮೆಂಟ್‌ಗಳಲ್ಲಿ ವೈಯಕ್ತಿಕ ಸಂಬಂಧದ ಗಾಸಿಪ್‌ನತ್ತ ತಿರುಗಿದೆ. ಇಬ್ಬರ ನಡುವೆ ಏನಾದರೂ ವಿಶೇಷ ಸಂಬಂಧವಿದೆಯೇ ಎಂಬ ರೀತಿಯ ಪ್ರಶ್ನೆಗಳನ್ನೂ ನೆಟ್ಟಿಗರು ಎತ್ತಿದ್ದಾರೆ.

ಆದರೆ ಇಲ್ಲಿರೋ ಒಂದು ಮುಖ್ಯ ವಿಚಾರ ಅಂದ್ರೆ ದೀಪಾ ಅವರು ಒಲೆಗ್ ಬ್ಯೂಲರ್ ಅವರ ಪತ್ನಿ. ಇಬ್ಬರೂ ಸೇರಿಯೇ indē wild ಬ್ರ್ಯಾಂಡ್ ಸ್ಥಾಪಿಸಿದ್ದಾರೆ. ನಿಖಿಲ್ ಮತ್ತು ದೀಪಾ ನಡುವೆ ಇರೋದು ಉದ್ಯಮದ ಪಾಲುದಾರಿಕೆ. ಅದಕ್ಕಿಂತ ಮೀರಿದ್ದೇನೋ ಇದೆಯಾ ಅನ್ನೋದು ನಿಖಿಲ್‌ ಅವರ ಪೋಸ್ಟ್‌ ನೋಡಿದವರ ಕುತೂಹಲ.

7 ಸಾವಿರ ಚದರಡಿಯ ಐಷಾರಾಮಿ ಮನೆ! ನಿಖಿಲ್ ಕಾಮತ್ ಬೆಂಗಳೂರಿನ ಕನಸಿನ ಮನೆಯೊಳಗೆ ಒಂದು ಸುತ್ತು
7 ಸಾವಿರ ಚದರಡಿಯ ಐಷಾರಾಮಿ ಮನೆ! ನಿಖಿಲ್ ಕಾಮತ್ ಬೆಂಗಳೂರಿನ ಕನಸಿನ ಮನೆಯೊಳಗೆ ಒಂದು ಸುತ್ತು

ಮದುವೆ ಬಗ್ಗೆ ನಿಖಿಲ್ ಕಾಮತ್‌ಗೆ ಅಷ್ಟೊಂದು ಆಸಕ್ತಿಯಿಲ್ಲವೇ?

ಈಗಾಗಲೇ ನಿಖಿಲ್ ಕಾಮತ್ ಮದುವೆ, ಮಕ್ಕಳು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಲವು ಬಾರಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ 2026ರ ಅಕ್ಟೋಬರ್‌ನಲ್ಲಿ ನಡೆದ NDTV ವರ್ಲ್ಡ್ ಸಮಿಟ್‌ನಲ್ಲಿ ಮಾತನಾಡುವಾಗ ಅವರ ಹೇಳಿಕೆ ಮತ್ತೆ ಗಮನ ಸೆಳೆದಿತ್ತು. 'ನನಗೆ ಆರು ತಿಂಗಳ ನಂತರ ಏನು ಬೇಕಾಗಬಹುದು ಎಂಬುದೇ ಗೊತ್ತಿಲ್ಲ. ಇನ್ನು ಐದು ವರ್ಷಗಳ ನಂತರ ಏನು ಬೇಕಾಗಬಹುದು ಎಂದು ಹೇಗೆ ಹೇಳಲಿ?' ಎಂಬುದು ಅವರ ಮಾತಿನ ಸಾರಾಂಶ.

ಉದ್ಯೋಗಿಗಳಿಗೆ ಟಾರ್ಗೆಟ್ ಇಲ್ಲ, ಬಾಸ್‌ನಿಂದ ಪ್ರೆಶರ್ ಇಲ್ಲ: ಝೆರೋದಾ ಕಂಪನಿಯ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ನಿತಿನ್ ಕಾಮತ್
ಉದ್ಯೋಗಿಗಳಿಗೆ ಟಾರ್ಗೆಟ್ ಇಲ್ಲ, ಬಾಸ್‌ನಿಂದ ಪ್ರೆಶರ್ ಇಲ್ಲ: ಝೆರೋದಾ ಕಂಪನಿಯ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ನಿತಿನ್ ಕಾಮತ್

'Certainty is a problem' ಅಂದರೆ ಯಾವುದರ ಬಗ್ಗೆಯೂ ಅತಿಯಾದ ಖಚಿತತೆ ಹೊಂದಿರುವುದೇ ಸಮಸ್ಯೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದರು. ಮದುವೆಯಾಗುವುದಿಲ್ಲ, ಮಕ್ಕಳನ್ನು ಹೊಂದುವುದಿಲ್ಲ ಎಂದು ಜೀವನಪೂರ್ತಿ ನಿರ್ಧಾರ ತೆಗೆದುಕೊಳ್ಳುವ ಬದಲು, ಭವಿಷ್ಯದ ಸಾಧ್ಯತೆಗಳಿಗೆ ತೆರೆದುಕೊಂಡಿರಬೇಕು ಎಂಬುದು ಅವರ ನಿಲುವು.

ಸದ್ಯಕ್ಕೆ ತಮಗೆ ವೈಯಕ್ತಿಕ ಸ್ವಾತಂತ್ರ್ಯ, ನೆಮ್ಮದಿ ಮತ್ತು ವಿಭಿನ್ನ ಆಸಕ್ತಿಗಳನ್ನು ಬೆನ್ನಟ್ಟಲು ಸಮಯ ಸಿಗುವುದು ಮುಖ್ಯ ಎಂದು ಅವರು ಹೇಳಿದ್ದಾರೆ. ಹೀಗಾಗಿ ಮದುವೆ ಮತ್ತು ಮಕ್ಕಳ ವಿಚಾರದಲ್ಲಿ ಸದ್ಯಕ್ಕೆ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂಬುದು ಅವರ ಮಾತುಗಳಿಂದ ಸ್ಪಷ್ಟವಾಗುತ್ತದೆ.

ಮಕ್ಕಳನ್ನು ಹೊಂದುವುದರ ಬಗ್ಗೆಯೂ ಪ್ರಶ್ನೆ ಎತ್ತಿದ್ದ ಉದ್ಯಮಿ!

ನಿಖಿಲ್ ಕಾಮತ್ ಈ ಹಿಂದೆ ಮಕ್ಕಳನ್ನು ಹೊಂದುವ ಬಗ್ಗೆ ಕೂಡ ತಮ್ಮದೇ ಆದ ವಿಭಿನ್ನ ಅಭಿಪ್ರಾಯ ಹಂಚಿಕೊಂಡಿದ್ದರು. ಮಕ್ಕಳನ್ನು ಬೆಳೆಸಲು ಜೀವನದ 18ರಿಂದ 20 ವರ್ಷಗಳನ್ನು ಮೀಸಲಿಡಬೇಕಾಗುತ್ತದೆ. ಆದರೆ ಮುಂದೆ ಮಕ್ಕಳು ನಮ್ಮನ್ನು ನೋಡಿಕೊಳ್ಳುತ್ತಾರೆ ಎಂಬ ಖಾತರಿ ಏನು? ಅವರು ಬೆಳೆದು ತಮ್ಮದೇ ಜೀವನವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬ ರೀತಿಯಲ್ಲಿ ಅವರು ಪ್ರಶ್ನಿಸಿದ್ದರು.

ಮಕ್ಕಳನ್ನು ಹೊಂದುವುದು ಪ್ರತಿಯೊಬ್ಬರ ಜೀವನದಲ್ಲೂ ಕಡ್ಡಾಯವಾಗಿರಬೇಕಾದ ಸಂಗತಿಯಲ್ಲ ಎಂಬ ಅವರ ಚಿಂತನೆ ಕೆಲವರಿಂದ ಮೆಚ್ಚುಗೆ ಪಡೆದರೆ, ಇನ್ನು ಕೆಲವರಿಂದ ಟೀಕೆಗೂ ಒಳಗಾಗಿತ್ತು.

Nikhil Kamath: ಕನ್ನಡಿಗರ ಮನಸ್ಸು ಗೆದ್ದ ಉದ್ಯಮಿ ನಿಖಿಲ್ ಕಾಮತ್, ಬೆಂಗಳೂರು - ಕರ್ನಾಟಕದ ಬಗ್ಗೆ ಹೇಳಿದ್ದೇನು, ವೈರಲ್
Nikhil Kamath: ಕನ್ನಡಿಗರ ಮನಸ್ಸು ಗೆದ್ದ ಉದ್ಯಮಿ ನಿಖಿಲ್ ಕಾಮತ್, ಬೆಂಗಳೂರು - ಕರ್ನಾಟಕದ ಬಗ್ಗೆ ಹೇಳಿದ್ದೇನು, ವೈರಲ್

ನಿಖಿಲ್ ಮತ್ತು ದೀಪಾ ಪರಿಚಯವಾಗಿದ್ದು ಹೇಗೆ?

ಈ ಹೊಸ ಉದ್ಯಮದ ನಂಟಿಗೆ ಕಾರಣವಾಗಿದ್ದು ನಿಖಿಲ್ ಕಾಮತ್ ಅವರ WTF ಪಾಡ್‌ಕಾಸ್ಟ್. 2025ರ ಸೆಪ್ಟೆಂಬರ್‌ನಲ್ಲಿ ದೀಪಾ ಬ್ಯೂಲರ್-ಖೋಸ್ಲಾ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗ indē wild ಬ್ರ್ಯಾಂಡ್‌ನ ವ್ಯವಹಾರ, ಅದರ ಬೆಳವಣಿಗೆ ಮತ್ತು ಜಾಗತಿಕ ಮಾರುಕಟ್ಟೆಯ ಅವಕಾಶಗಳ ಬಗ್ಗೆ ಚರ್ಚೆಯಾಗಿತ್ತು.

ಆ ಭೇಟಿಯ ನಂತರ ಇಬ್ಬರ ನಡುವೆ ಉದ್ಯಮದ ಕುರಿತು ಹಲವು ಮಾತುಕತೆಗಳು ನಡೆದಿವೆ. ನಿಖಿಲ್ ಬ್ರ್ಯಾಂಡ್‌ನ ವ್ಯವಹಾರ ಮಾದರಿ ಮತ್ತು ಭವಿಷ್ಯದ ಯೋಜನೆಗಳನ್ನು ಅರ್ಥಮಾಡಿಕೊಂಡು ಹೂಡಿಕೆ ಮಾಡಲು ಮುಂದಾಗಿದ್ದಾರೆ.

ದೀಪಾ ಅವರ ಪ್ರಕಾರ, ನಿಖಿಲ್ ಅನ್ನು ಕೇವಲ ಒಂದು ಸೌಂದರ್ಯವರ್ಧಕ ಉತ್ಪನ್ನವಾಗಿ ನೋಡದೆ, ಒಂದು ವ್ಯವಹಾರವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ ಮೊದಲ ವ್ಯಕ್ತಿಗಳಲ್ಲಿ ಒಬ್ಬರು. ನಿಖಿಲ್ ಕೂಡ ಈ investment ಬಗ್ಗೆ ಮಾತನಾಡುತ್ತಾ, ಭಾರತದಲ್ಲಿ ಹುಟ್ಟಿದ ಗ್ರಾಹಕ ಬ್ರ್ಯಾಂಡ್‌ಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯ ಹೊಂದಿವೆ ಎಂಬ ನಂಬಿಕೆಯೇ ತಮ್ಮನ್ನು ಆಕರ್ಷಿಸಿತು ಎಂದಿದ್ದಾರೆ.

ಗಾಸಿಪ್ ಒಂದೆಡೆ, ಉದ್ಯಮದ ಲೆಕ್ಕಾಚಾರ ಇನ್ನೊಂದೆಡೆ!

ನಿಖಿಲ್ ಕಾಮತ್ ಅವರ lifestyle, ಮದುವೆ ಕುರಿತ ನಿಲುವು ಮತ್ತು ವಿಭಿನ್ನ ಉದ್ಯಮಗಳಲ್ಲಿ ಹೂಡಿಕೆ ಮಾಡುವ ಆಸಕ್ತಿ ಯಾವಾಗಲೂ ಕುತೂಹಲ ಮೂಡಿಸುತ್ತವೆ. ಈಗ ದೀಪಾ ಮತ್ತು ಒಲೆಗ್ ಅವರ ಬ್ರ್ಯಾಂಡ್‌ನೊಂದಿಗೆ ಕೈಜೋಡಿಸಿರುವುದು ಮತ್ತೊಂದು ಚರ್ಚೆಗೆ ಕಾರಣವಾಗಿದೆ. ಮದುವೆಯ ಬಗ್ಗೆ ಖಚಿತತೆ ಬೇಡ ಎನ್ನುವ ನಿಖಿಲ್, ಇದೀಗ ಹೊಸ ಉದ್ಯಮದ ಪಾಲುದಾರಿಕೆಯಲ್ಲಿ ಮಾತ್ರ ಖಚಿತ ಹೆಜ್ಜೆ ಇಟ್ಟಿದ್ದಾರೆ ಎನ್ನಬಹುದು!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+