ಸಿಎಂ ಡಿಕೆಶಿ ನಿವಾಸಕ್ಕೆ ಹುಸಿ ಬಾಂಬ್ ಬೆದರಿಕೆ ಒಡಿದ್ದ ಯುವಕ ಬಂಧನ: ಆಟೋ ಡ್ರೈವರ್ ಮೊಬೈಲ್ ಬಳಸಿ ಕೃತ್ಯ!

ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ಮುಂಬೈ ನಿವಾಸಕ್ಕೆ ಬಾಂಬ್ ಇಟ್ಟಿರುವುದಾಗಿ ಹುಸಿ ಬೆದರಿಕೆ ಇಮೇಲ್ ಇತ್ತೀಚೆಗೆ ಬಂದಿತ್ತು. ಇದಕ್ಕು ಮುನ್ನ ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿವಾಸ, ಅವರ ಬೆಂಗಾವಲು ವಾಹನಗಳ ಪಡೆ (ಕಾನ್ವಾಯ್) ಮತ್ತು ವಿಧಾನಸೌಧ ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆ ಒಡಿದ್ದ. ಆ 20 ವರ್ಷದ ಆರೋಪಿಯಲ್ಲಿ ಇಂದು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಸಿಎಂ ಡಿಕೆ ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಬೆಂಗಳೂರಿನ 20 ವರ್ಷದ ಯುವಕನೊಬ್ಬ ಆಟೋ ಚಾಲಕರೊಬ್ಬರ ಮೊಬೈಲ್ ಬಳಸಿ ಬೆದರಿಕೆ ಒಡ್ಡಿದ್ದ. ಸಿಎಂ ಡಿಕೆ ಶಿವಕುಮಾರ್ ಅವರಿಗೆ ಬಾಂಬ್ ಬೆದರಿಕೆ (ಸುಳ್ಳು ಬೆದರಿಕೆ) ಸಂದೇಶ ಕಳುಹಿಸಿದ್ದ. ಈ ಘಟನೆ ನವೆಂಬರ್ 7ರಂದು ನಡೆದಿತ್ತು. ಪ್ರಕರಣ ತನಿಖೆ ನಡೆಸಿದ ಪೊಲೀಸರು ಯುವಕ ಜಾಡು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

Bengaluru Police Arrest 20-Year-Old Over Hoax Bomb Threat to DK Shivakumar Using Auto Phone

ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಯು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವಂತೆ ತನಿಖೆಯಲ್ಲಿ ತಿಳಿದು ಬಂದಿದೆ. ಆರೋಪಿಯು ಏನು ತಿಳಿಯದ, ಹೊಟ್ಟೆ ಹೊರೆ ತುಂಬಿಸಿಕೊಳ್ಳಲು ಆಟೋ-ರಿಕ್ಷಾ ಚಾಲಕರೊಬ್ಬರ ಮೊಬೈಲ್ ಬಳಸಿದ್ದಾನೆ. ಇದರಿಂದ ಅವರು ಒಂದಷ್ಟು ಕಾನೂನು ಸಮಸ್ಯೆ ಎದುರಿಸುವಂತಾಯಿತು.

ಕರ್ನಾಟಕದಲ್ಲಿ ಟೊಯೋಟಾ ಉತ್ಪಾದನೆ ವಿಸ್ತರಣೆಗೆ ಸಹಕಾರ: ಜಪಾನ್ ಟ್ಯಾಕ್ಸಿ ಮಾಡೆಲ್ ಪರಿಚಯಿಸಲು ಡಿಕೆಶಿ ಒಲವು
ಕರ್ನಾಟಕದಲ್ಲಿ ಟೊಯೋಟಾ ಉತ್ಪಾದನೆ ವಿಸ್ತರಣೆಗೆ ಸಹಕಾರ: ಜಪಾನ್ ಟ್ಯಾಕ್ಸಿ ಮಾಡೆಲ್ ಪರಿಚಯಿಸಲು ಡಿಕೆಶಿ ಒಲವು

ಘಟನೆ ದಿನ ಆಗಿದ್ದೇನು?

ಪ್ರಕರಣ ಸಂಬಂಧ ಆರೋಪಿ ಮೇಲೆ ಎಫ್‌ಐಆರ್ (FIR) ದಾಖಲಿಸಲಾಗಿದೆ. ನವೆಂಬರ್ 5ರಂದು ಸಂಜೆ ಘಟನೆ ನಡೆದಿದೆ. ಮಲ್ಲೇಶ್ವರಂನಲ್ಲಿ 26 ವರ್ಷದ ಆಟೋ ಚಾಲಕ ಸಂಜೆ 7.20 ರ ಸುಮಾರಿಗೆ ಪ್ಯಾಲೇಸ್ ಗ್ರೌಂಡ್ಸ್ ಬಳಿ ಪ್ರಯಾಣಿಕರಿಗಾಗಿ ಕಾಯುತ್ತಿದ್ದ. ಆಗ 'ನಮ್ಮ ಯಾತ್ರಿ' (Namma Yatri) ಆ್ಯಪ್ ಮೂಲಕ ಆಟೋ ಬುಕಿಂಗ್ ಮಾಡಿದ್ದ'ಕಾರ್ತಿಕ್' ಹೆಸರಿನ ಯುವಕ, ಅರಮನೆ ನಗರದ 18ನೇ ಕ್ರಾಸ್‌ನಿಂದ ರಾಜರಾಜೇಶ್ವರಿ ನಗರದ ಬಿಎಚ್‌ಇಎಲ್ (BHEL) ಲೇಔಟ್‌ಗೆ ಹೋಗುವುದಾಗಿ ಬುಕಿಂಗ್ ವೇಳೆ ನಮೂದಿಸಿದ್ದ ಎಂಬುದು ಚಾಲಕನನ್ನು ವಿಚಾರಣೆ ನಡೆಸಿದಾಗ ತಿಳಿದು ಬಂದಿದೆ.

18ನೇ ಕ್ರಾಸ್‌ನಲ್ಲಿರುವ ನಿಗದಿತ ಸ್ಥಳಕ್ಕೆ ತಲುಪಿದ ನಂತರ, ಗ್ರಾಹಕನಿಗೆ ಚಾಲಕ ಕರೆ ಮಾಡಿ ಲೋಕೇಷನ್ ಖಚಿತಪಡಿಸಿಕೊಂಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ ತಾನು ಮುಖ್ಯಮಂತ್ರಿಯವರ ನಿವಾಸದ ಒಳಗಿದ್ದೇನೆ ಎಂದು ಹೇಳಿದ್ದ. ನಿಖರವಾದ ವಿಳಾಸಕ್ಕಾಗಿ ಅಲ್ಲಿಯೇ ಗೇಟಿನ ಬಳಿಕ ಕೆಲಸ ಮಾಡುತ್ತಿದ್ದ ಪೊಲೀಸ್ ಅಧಿಕಾರಿಗೆ ಮೊಬೈಲ್ ನೀಡುವಂತೆ ಸೂಚಿಸಿದ್ದ.

ಆಟೋ ಪರಿಶೀಲಿಸುವುದು ಕಂಡು ಚಾಲಕ ದಿಗ್ಭ್ರಮೆ

ಈತ ವ್ಯಕ್ತಿ ನಿಜವಾದ ಪ್ರಯಾಣಿಕನೆಂದು ನಂಬಿದ ಆಟೋ ಚಾಲಕರು, ಭದ್ರತಾ ತಡೆಗೋಡೆಯ (ಬ್ಯಾರಿಕೇಡ್) ಬಳಿ ಇದ್ದ ಪೊಲೀಸ್ ಸಿಬ್ಬಂದಿಗೆ ತಮ್ಮ ಮೊಬೈಲ್ ಕೊಟ್ಟಿದ್ದ. ಇದಾಗಿ ಕೆಲ ಹೊತ್ತಿನಲ್ಲೇ ಪೊಲೀಸ್ ಸಿಬ್ಬಂದಿ ಆಟೋ-ರಿಕ್ಷಾ ಇದ್ದ ಸ್ಥಳಕ್ಕೆ ಬಂದು ದಿಢೀರ್ ಪರಿಶೀಲಿಸಲು ಪ್ರಾರಂಭಿಸಿದರು.

ಇದನ್ನು ನೋಡಿ ಅಚ್ಚರಿಗೊಂಡ ಆಟೋ ಚಾಲಕ ಏಕೆ ನನ್ನ ಮೊಬೈಲ್ ಪರಿಶೀಲಿಸುತ್ತೀರಿ ಎಂದು ಕೇಳಿದಾಗ, ನಿಮ್ಮ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿದ್ದ ವ್ಯಕ್ತಿಯು ಸಿಎಂ ನಿವಾಸ ಮತ್ತು ವಿಧಾನಸೌಧದಲ್ಲಿ ಬಾಂಬ್ ಇಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಚಾಲನಿಗೆ ತಿಳಿಸಿದರು.

SWR: ಶಬರಿಮಲೆ, ಕ್ರಿಸ್‌ಮಸ್ ಪ್ರಯಾಣಿಕರಿಗೆ ಸಿಹಿಸುದ್ದಿ! ವಿಶೇಷ ರೈಲುಗಳ ಸೇವೆ 2027ರವರೆಗೆ ವಿಸ್ತರಣೆ, ವೇಳಾಪಟ್ಟಿ
SWR: ಶಬರಿಮಲೆ, ಕ್ರಿಸ್‌ಮಸ್ ಪ್ರಯಾಣಿಕರಿಗೆ ಸಿಹಿಸುದ್ದಿ! ವಿಶೇಷ ರೈಲುಗಳ ಸೇವೆ 2027ರವರೆಗೆ ವಿಸ್ತರಣೆ, ವೇಳಾಪಟ್ಟಿ

ಸಿಎಂ ಬೆಂಗಾವಲು ವಾಹನ ಸಂಚರಿಸುವಾಗ ಸ್ಪೋಟಗೊಳ್ಳಲಿದೆ ಎಂದು ಬೆದರಿಕೆ ಹಾಕಿದ್ದ. ಇದೆಲ್ಲ ಕೇಳುತ್ತಿದ್ದಂತೆ ನಾನು ಆಟೋ ಚಾಲಕ, ಕರೆ ಮಾಡಿದ ವ್ಯಕ್ತಿಯೊಂದಿಗೆ ತನಗೆ ಸಂಬಂಧ ಇಲ್ಲ ಎಂದು ತಿಳಿಸಿದ್ದ. ತಾನು ಪ್ರಯಾಣಿಕರನ್ನು ಕರೆದೊಯ್ಯಲು ಇಲ್ಲಿಗೆ ಬಂದಿದ್ದಾಗಿ ಪೊಲೀಸರಿಗೆ ನಮ್ಮ ಯಾತ್ರಿ ಬುಕಿಂಗ್ ವಿವರ ನೀಡಿದೆ.

ನವೆಂಬರ್ 7ರಂದು ಚಾಲಕನಿಂದ ದೂರು ದಾಖಲು

ಸಂಬಂಧಿಕರೊಬ್ಬರಿಗೆ ಉಂಟಾದ ತುರ್ತು ಆರೋಗ್ಯ ಸಮಸ್ಯೆಯಿಂದಾಗಿ ಅಂದು ಪೊಲೀಸ್ ಠಾಣೆಗೆ ಹೋಗಲು ಅಗಿರಲಿಲ್ಲ. ನವೆಂಬರ್ 7 ರಂದು ಔಪಚಾರಿಕ ದೂರು ನೀಡಿ, ಬುಕಿಂಗ್ ಮಾಡಿದ ವ್ಯಕ್ತಿ ವಿರುದ್ದ ಕ್ರಮ ಕೈಗೊಳ್ಳುವಂತೆ ಕೋರಿದರು. ಪೊಲೀಸರು 'ನಾನ್-ಕಾಾಗ್ನಿಜಬಲ್ ರಿಪೋರ್ಟ್' (NCR - ಗಂಭೀರವಲ್ಲದ ಅಪರಾಧದ ವರದಿ) ದಾಖಲಿಸಿಕೊಂಡರು. FIR ದಾಖಲಿಸಲು ಕೋರ್ಟ್ ಮೊರೆ ಹೋಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+