ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ವಿಮಾನದ ಮಾದರಿ ಊಟ ವ್ಯವಸ್ಥೆ! 3 ಮಾರ್ಗಗಳಲ್ಲಿ ಹೊಸ ಮೆನು ಜಾರಿ

ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಆಹಾರ ಒದಗಿಸುವ ಉದ್ದೇಶದಿಂದ ಮಹತ್ವದ ಬದಲಾವಣೆಗೆ ಮುಂದಾಗಿದೆ. ದೂರದ ಪ್ರಯಾಣದ ರೈಲುಗಳಲ್ಲಿ ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆ ಕುರಿತು ಪ್ರಯಾಣಿಕರಿಂದ ಬರುತ್ತಿರುವ ದೂರುಗಳನ್ನು ಕಡಿಮೆ ಮಾಡಲು ವಂದೇ ಭಾರತ್ ಸ್ಲೀಪರ್ ರೈಲುಗಳಲ್ಲಿ ವಿಮಾನಗಳಲ್ಲಿ ನೀಡುವ ಮಾದರಿಯ ಊಟದ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.

ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಪ್ರಾಯೋಗಿಕವಾಗಿ ಮೂರು ವಂದೇ ಭಾರತ್ ಸ್ಲೀಪರ್ ರೈಲುಗಳ ಮಾರ್ಗಗಳಲ್ಲಿ ಹೊಸ ಕಾಂಪ್ಯಾಕ್ಟ್ ಮೆನುವನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟದಲ್ಲಿ ನೀಡಲಾಗುವ ಆಹಾರ ಪದಾರ್ಥಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಕಡಿಮೆ ಆಯ್ಕೆಗಳು ಇದ್ದರೂ ಉತ್ತಮ ಗುಣಮಟ್ಟದ ಆಹಾರ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

Food Service Indian Railways Introduces Flight-Style Meal Menu on three Vande Bharat Sleeper Trains

ಯಾವ ಮೂರು ಮಾರ್ಗಗಳಲ್ಲಿ ಹೊಸ ವ್ಯವಸ್ಥೆ ಜಾರಿ?

ಸದ್ಯ ಮುಂಬೈ-ಬೆಂಗಳೂರು, ಹೌರಾ-ಕಾಮಾಖ್ಯ ಮತ್ತು ನವದೆಹಲಿ-ವಾರಾಣಸಿ ಮಾರ್ಗಗಳ ಮೂರು ವಂದೇ ಭಾರತ್ ಸ್ಲೀಪರ್ ರೈಲುಗಳಲ್ಲಿ ಈ ಹೊಸ ಆಹಾರ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಈ ಯೋಜನೆಯಡಿ ರೈಲ್ವೆಯ ಸಾಮಾನ್ಯ ಅಡುಗೆ ವ್ಯವಸ್ಥೆ ಅಥವಾ ಈಗಿರುವ ಆಹಾರ ಪೂರೈಕೆದಾರರ ಬದಲಿಗೆ ಪ್ರಮುಖ ಕ್ಲೌಡ್ ಕಿಚನ್‌ಗಳ ಮೂಲಕ ಆಹಾರ ಸಿದ್ಧಪಡಿಸಲಾಗುತ್ತಿದೆ.

ಮಂಗಳೂರು ರೈಲ್ವೆ ಅಭಿವೃದ್ಧಿಗೆ ಬರೋಬ್ಬರಿ 25 ವರ್ಷಗಳ ಮಾಸ್ಟರ್ ಪ್ಲಾನ್: ಕರಾವಳಿ ಜನತೆಗೆ ಅಶ್ವಿನಿ ವೈಷ್ಣವ್ ನೀಡಿದ ಭರವಸೆಗಳೇನು?
ಮಂಗಳೂರು ರೈಲ್ವೆ ಅಭಿವೃದ್ಧಿಗೆ ಬರೋಬ್ಬರಿ 25 ವರ್ಷಗಳ ಮಾಸ್ಟರ್ ಪ್ಲಾನ್: ಕರಾವಳಿ ಜನತೆಗೆ ಅಶ್ವಿನಿ ವೈಷ್ಣವ್ ನೀಡಿದ ಭರವಸೆಗಳೇನು?

ಕಾಮಾಖ್ಯ ಮಾರ್ಗಕ್ಕೆ ಮೇಫೇರ್ ಗ್ರೂಪ್, ಹೌರಾ ಮಾರ್ಗಕ್ಕೆ ತಾಜ್‌ಸ್ಯಾಟ್ಸ್ (TajSATS) ಹಾಗೂ ಉಳಿದ ವಂದೇ ಭಾರತ್ ರೈಲುಗಳಿಗೆ ಸರೋವರ್ ಪೋರ್ಟಿಕೊ ಗ್ರೂಪ್ ಆಹಾರ ಪೂರೈಕೆಯ ಜವಾಬ್ದಾರಿ ವಹಿಸಿಕೊಂಡಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನಯಾನ ಸಂಸ್ಥೆಗಳು ಮತ್ತು ಹೋಟೆಲ್‌ಗಳಿಗೆ ಆಹಾರ ಪೂರೈಸುವ ಅನುಭವ ಹೊಂದಿರುವ ಅಡುಗೆ ಘಟಕಗಳನ್ನು ಈ ಯೋಜನೆಗೆ ಬಳಸಿಕೊಳ್ಳಲಾಗಿದೆ. ಇದರಿಂದ ಆಹಾರದ ಗುಣಮಟ್ಟ, ಪ್ಯಾಕಿಂಗ್ ಮತ್ತು ಪೂರೈಕೆಯಲ್ಲಿ ಏಕರೂಪತೆ ಕಾಪಾಡಲು ಸಾಧ್ಯವಾಗಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.

South Bullet Train: ಆಂಧ್ರಪ್ರದೇಶಕ್ಕೆ ಸಿಂಹಪಾಲು: ದಕ್ಷಿಣ ಭಾರತದ ಐಟಿ - ಬಿಟಿ ನಗರ ಸಂಪರ್ಕಿಸಲಿರುವ ಬುಲೆಟ್ ಟ್ರೈನ್ ಯೋಜನೆ
South Bullet Train: ಆಂಧ್ರಪ್ರದೇಶಕ್ಕೆ ಸಿಂಹಪಾಲು: ದಕ್ಷಿಣ ಭಾರತದ ಐಟಿ - ಬಿಟಿ ನಗರ ಸಂಪರ್ಕಿಸಲಿರುವ ಬುಲೆಟ್ ಟ್ರೈನ್ ಯೋಜನೆ

ಬೆಳಗಿನ ಉಪಾಹಾರಕ್ಕೆ ಏನೇನು ಸಿಗಲಿದೆ?

ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಬೆಳಗಿನ ಉಪಾಹಾರಕ್ಕೆ ಇಡ್ಲಿ, ವಡೆ, ಚಟ್ನಿ ಮತ್ತು ಸಾಂಬಾರ್ ನೀಡಲಾಗುತ್ತದೆ. ಇಲ್ಲವೇ ಪೋಹಾ ಅಥವಾ ಉಪ್ಮಾ ಆಯ್ಕೆ ಲಭ್ಯವಿರಲಿದೆ.

ಮಧ್ಯಾಹ್ನ ಮತ್ತು ರಾತ್ರಿ ಊಟದಲ್ಲಿ ಚಪಾತಿ, ಅನ್ನ, ಬೇಳೆ ಸಾರು (ದಾಲ್) ಹಾಗೂ ಒಂದು ಮುಖ್ಯ ಖಾದ್ಯ ನೀಡಲಾಗುತ್ತದೆ. ಪ್ರಯಾಣಿಕರಿಗೆ ಮುಖ್ಯ ಖಾದ್ಯವಾಗಿ ಚಿಕನ್ ಅಥವಾ ಸಸ್ಯಾಹಾರವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿರುತ್ತದೆ.

ಊಟದ ಮೆನುವಿನಲ್ಲಿ ಹಲವು ಪದಾರ್ಥಗಳಿಗೆ ಕತ್ತರಿ

ಹೊಸ ವ್ಯವಸ್ಥೆಯಿಂದಾಗಿ ಈ ಹಿಂದೆ ಪ್ರಯಾಣಿಕರಿಗೆ ನೀಡಲಾಗುತ್ತಿದ್ದ ಹಲವು ಆಹಾರ ಪದಾರ್ಥಗಳನ್ನು ಮೆನುವಿನಿಂದ ತೆಗೆದುಹಾಕಲಾಗಿದೆ. ಬೆಳಗಿನ ಉಪಾಹಾರದಲ್ಲಿ ಸೂಪ್, ಮೊಟ್ಟೆ ಆಮ್ಲೆಟ್, ಸ್ಯಾಂಡ್‌ವಿಚ್, ಮಜ್ಜಿಗೆ ಮತ್ತು ಚಾಕೊಲೇಟ್‌ಗಳನ್ನು ಕೈಬಿಡಲಾಗಿದೆ. ಅದೇ ರೀತಿ ಮಧ್ಯಾಹ್ನ ಮತ್ತು ರಾತ್ರಿ ಊಟದಲ್ಲಿ ತರಕಾರಿ, ಮೊಸರು, ಸಲಾಡ್, ಉಪ್ಪಿನಕಾಯಿ ಹಾಗೂ ಸಿಹಿತಿಂಡಿಗಳನ್ನು ತೆಗೆದುಹಾಕಲಾಗಿದೆ.

ಊಟದ ಪ್ರಮಾಣದಲ್ಲೂ ಬದಲಾವಣೆ

ಹೊಸ ಮೆನುವಿನಲ್ಲಿ ಪ್ರತಿ ಊಟದ ಒಟ್ಟು ತೂಕವನ್ನು 700-750 ಗ್ರಾಂನಿಂದ 450-500 ಗ್ರಾಂಗೆ ಇಳಿಸಲಾಗಿದೆ. ಆದರೆ ಪ್ರತ್ಯೇಕ ಆಹಾರ ಪದಾರ್ಥಗಳ ಪ್ರಮಾಣದಲ್ಲಿ ಯಾವುದೇ ಕಡಿತ ಮಾಡಿಲ್ಲ ಎಂದು IRCTC ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇನ್ನು ಕ್ಲೌಡ್ ಕಿಚನ್‌ಗಳ ಮೂಲಕ ಆಹಾರ ಪೂರೈಕೆ ಆರಂಭವಾದ ನಂತರ ಪ್ರಯಾಣಿಕರಿಂದ ಬರುತ್ತಿದ್ದ ಆಹಾರದ ದೂರುಗಳಲ್ಲಿ ಶೇ.10ರಷ್ಟು ಇಳಿಕೆಯಾಗಿದೆ ಎಂದು IRCTC ಪಶ್ಚಿಮ ವಲಯದ ಗ್ರೂಪ್ ಜನರಲ್ ಮ್ಯಾನೇಜರ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+