ತೆಲುಗು ಬಿಗ್‌ಬಾಸ್‌ನಲ್ಲಿ ಕನ್ನಡದ ಮುಕೇಶ್ ಗೌಡ ಹವಾ! ರಶ್ಮಿಕಾ ಜೊತೆ ಕನ್ನಡದಲ್ಲಿ ಮಾತಾಡಿ ತೆಲುಗರ ಮನಗೆದ್ದ ಮೈಸೂರು ಹುಡುಗ
ತೆಲುಗು ಬಿಗ್‌ಬಾಸ್ ಮನೆಯಲ್ಲಿ ಕನ್ನಡದ ಕಂಪು ಜೋರಾಗಿದೆ. ಅದರಲ್ಲೂ ಮೈಸೂರಿನ ಹುಡುಗ ಮುಕೇಶ್ ಗೌಡ ಈಗ ತೆಲುಗು ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ತೆಲುಗು ಕಿರುತೆರೆಯಲ್ಲಿ ಈಗಾಗಲೇ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಮುಕೇಶ್, ಬಿಗ್‌ಬಾಸ್ ಮನೆಯಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಇತ್ತೀಚೆಗೆ ನಟಿ ರಶ್ಮಿಕಾ ಮಂದ

Mukesh Gowda ಫುಲ್ ಮಿಂಚಿಂಗ್
ರಶ್ಮಿಕಾ ಜೊತೆಗಿನ ಕಾಲೇಜು ನಂಟು, ಬಿಗ್‌ಬಾಸ್ ವೇದಿಕೆಯಲ್ಲಿ ಕನ್ನಡದ ಮಾತು, ಫ್ಯಾಮಿಲಿ ವೀಕ್‌ನಲ್ಲಿ ತಾಯಿ ನೀಡಿದ ಭಾವುಕ ಸರ್ಪ್ರೈಸ್... ಹೀಗೆ ಒಂದರ ಹಿಂದೊಂದು ವಿಚಾರಗಳಿಂದ ಮುಕೇಶ್ ಗೌಡ ಸುದ್ದಿಯಲ್ಲಿದ್ದಾರೆ. ಹಾಗಾದರೆ ಯಾರು ಈ ಮುಕೇಶ್ ಗೌಡ? ಕನ್ನಡದ ಹುಡುಗ ತೆಲುಗು ಕಿರುತೆರೆಯಲ್ಲಿ ಇಷ್ಟೊಂದು ಜನಪ್ರಿಯತೆ ಗಳಿಸಿದ್ದು ಹೇಗೆ?
ರಶ್ಮಿಕಾಗೆ ಸೀನಿಯರ್ ಅಂತೆ ಈ ಮೈಸೂರು ಹುಡುಗ!
ಇತ್ತೀಚೆಗೆ ಬಿಗ್‌ಬಾಸ್ ತೆಲುಗು 10ರ ವೇದಿಕೆಗೆ ನಟಿ ರಶ್ಮಿಕಾ ಮಂದಣ್ಣ ತಮ್ಮ 'ಮೈಸಾ' ಸಿನಿಮಾದ ಪ್ರಚಾರಕ್ಕಾಗಿ ಆಗಮಿಸಿದ್ದರು. ಈ ವೇಳೆ ನಿರೂಪಕ ನಾಗಾರ್ಜುನ ಅವರು ರಶ್ಮಿಕಾ ಜೊತೆ ಮಾತನಾಡುವಂತೆ ಮುಕೇಶ್ ಗೌಡಗೆ ಸೂಚಿಸಿದರು. ಅಷ್ಟೇ ಅಲ್ಲ, ಮೈಸೂರು ಕನ್ನಡದಲ್ಲೋ ಅಥವಾ ಬೆಂಗಳೂರು ಕನ್ನಡದಲ್ಲೋ ಮಾತನಾಡಬಹುದು ಎಂದು ತಮಾಷೆ ಮಾಡಿದರು. ಇದರಿಂದ ಖುಷಿಯಾದ ಮುಕೇಶ್, ರಶ್ಮಿಕಾ ಅವರನ್ನು ಕನ್ನಡದಲ್ಲೇ ಮಾತನಾಡಿಸಿದರು. ಮಾತಿನ ಮಧ್ಯೆ ತಾನು ನಿಮ್ಮ ಕಾಲೇಜಿನ ಸೀನಿಯರ್ ಎಂದು ಹೇಳಿ ರಶ್ಮಿಕಾಗೆ ಅಚ್ಚರಿ ಮೂಡಿಸಿದರು. ನನ್ನ ಸ್ನೇಹಿತರು ನಿಮ್ಮ ಜೊತೆ ಓದುತ್ತಿದ್ದರು. ಆಗ ನಾನು ನಿಮ್ಮನ್ನು ಕಾಲೇಜಿನಲ್ಲಿ ನೋಡಿದ್ದೆ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.
ಕನ್ನಡಿಗರ ಮನಗೆದ್ದ ಸಂಭಾಷಣೆ
ಇದನ್ನು ಕೇಳಿ ರಶ್ಮಿಕಾ ಕೂಡ ಅಚ್ಚರಿಯಿಂದ ಪ್ರತಿಕ್ರಿಯಿಸಿದರು. ನಿಮ್ಮನ್ನು ಭೇಟಿಯಾಗಿದ್ದು ತುಂಬಾ ಖುಷಿಯಾಯಿತು ಎಂದು ಹೇಳಿ ಬಿಗ್‌ಬಾಸ್ ಪಯಣಕ್ಕೆ ಶುಭ ಹಾರೈಸಿದರು. ಅಷ್ಟೇ ಅಲ್ಲ, ಮುಕೇಶ್ ಅವರಿಗೆ ರಶ್ಮಿಕಾ ನಟನೆಯ 'ದಿ ಗರ್ಲ್‌ಫ್ರೆಂಡ್' ಸಿನಿಮಾ ಕೂಡ ಇಷ್ಟವಂತೆ. ಇದನ್ನು ಕೇಳಿ ಸಂತಸಗೊಂಡ ರಶ್ಮಿಕಾ, ಮನೆಯಿಂದ ಹೊರಬಂದ ಮೇಲೆ ತಮ್ಮ 'ಮೈಸಾ' ಸಿನಿಮಾ ನೋಡುವಂತೆ ಆಹ್ವಾನಿಸಿದರು. ಈ ಕ್ಯೂಟ್ ಕನ್ನಡದ ಸಂಭಾಷಣೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕನ್ನಡಿಗರ ಗಮನ ಸೆಳೆದಿದೆ.
ತೆಲುಗು ಬಿಗ್‌ಬಾಸ್ ವೇದಿಕೆಯಲ್ಲಿ ಕನ್ನಡದ ಕಂಪು ಹರಡಿಸಿದ ಅಮ್ಮ!
ಮುಕೇಶ್ ಗೌಡ ಅವರ ಜನಪ್ರಿಯತೆ ಹೆಚ್ಚಲು ಮತ್ತೊಂದು ಪ್ರಮುಖ ಕಾರಣ ಅವರ ತಾಯಿಯ ಎಂಟ್ರಿ. ಬಿಗ್‌ಬಾಸ್ ಮನೆಯ family ವೀಕ್‌ನಲ್ಲಿ ತಾಯಿ ಮನೆಗೆ ಬಂದಾಗ ಮುಕೇಶ್ ಭಾವುಕರಾಗಿದ್ದರು. ಹಲವು ದಿನಗಳಿಂದ ಕುಟುಂಬದವರನ್ನು ನೋಡದೆ ಮನೆಯೊಳಗಿದ್ದ ಮುಕೇಶ್‌ಗೆ ತಾಯಿಯನ್ನು ನೋಡಿದ ಕ್ಷಣವೇ ಭಾವನೆಗಳನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನೊಂದು ವಿಶೇಷವೆಂದರೆ, ತೆಲುಗು ಬಿಗ್‌ಬಾಸ್ ವೇದಿಕೆಯಲ್ಲಿದ್ದರೂ ಮುಕೇಶ್ ತಾಯಿ ಮಗನ ಜೊತೆ ಶುದ್ಧ ಕನ್ನಡದಲ್ಲೇ ಮಾತನಾಡಿದರು. ತಮ್ಮ ಮಾತುಗಳ ಮೂಲಕ ಮಗನಿಗೆ ಧೈರ್ಯ ತುಂಬಿದರು. ಈ ದೃಶ್ಯವೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪರಭಾಷೆಯ ರಿಯಾಲಿಟಿ ಶೋನಲ್ಲಿ ಕನ್ನಡದ ತಾಯಿ-ಮಗನ ಸಂಭಾಷಣೆ ಕೇಳಿ ಕನ್ನಡಿಗರು ಖುಷಿಪಟ್ಟಿದ್ದರು.
ಕನ್ನಡತಿ, ನಾಗಮಂಡಲದಿಂದ ತೆಲುಗಿನ ರಿಷಿ ಸರ್‌ವರೆಗೆ!
ಮುಕೇಶ್ ಗೌಡ ಮೂಲತಃ ಮೈಸೂರಿನವರು. ಕನ್ನಡ ಕಿರುತೆರೆಯಿಂದಲೇ ನಟನಾ ಪಯಣ ಆರಂಭಿಸಿದ ಇವರು, 'ನಾಗಕನ್ನಿಕೆ', 'ನಾಗಮಂಡಲ' ಸೇರಿದಂತೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಆದರೆ ಕಿರುತೆರೆಯಲ್ಲಿ ಇವರಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿದ್ದು 'ಗುಪ್ಪೆಡಂತ ಮನಸು' ಧಾರಾವಾಹಿ. ಇದರಲ್ಲಿ ರಿಷೇಂದ್ರ ಭೂಷಣ್ ಅಲಿಯಾಸ್ ರಿಷಿ ಸರ್ ಪಾತ್ರದಲ್ಲಿ ನಟಿಸಿ ಅಪಾರ ಜನಪ್ರಿಯತೆ ಗಳಿಸಿದರು. 2020ರಿಂದ 2024ರವರೆಗೆ ಪ್ರಸಾರವಾದ ಈ ಧಾರಾವಾಹಿ ತೆಲುಗು ಕಿರುತೆರೆಯಲ್ಲಿ ದೊಡ್ಡ ಯಶಸ್ಸು ಕಂಡಿತ್ತು. ಧಾರಾವಾಹಿಯ ಜನಪ್ರಿಯತೆಯ ಜೊತೆ ಮುಕೇಶ್ ಅವರಿಗೂ ದೊಡ್ಡ ಅಭಿಮಾನಿ ಬಳಗ ಸಿಕ್ಕಿತು. ಈ ಧಾರಾವಾಹಿ ಕನ್ನಡದಲ್ಲೂ 'ಹೊಂಗನಸು' ಹೆಸರಿನಲ್ಲಿ ಪ್ರಸಾರವಾಗಿತ್ತು.
ಕನ್ನಡದ 'ತೀರ್ಥರೂಪ ತಂದೆಯವರಿಗೆ' ಸಿನಿಮಾದಲ್ಲಿ ಮುಕೇಶ್ ನಾಯಕನಾಗಿ ನಟಿಸಿದ್ದಾರೆ.
ಬಿಗ್‌ಬಾಸ್ ಮನೆಯಲ್ಲೂ ಲವ್ ಟ್ರ್ಯಾಕ್ ಚರ್ಚೆ!
ಮುಕೇಶ್ ಗೌಡ ಅವರ ಬಿಗ್‌ಬಾಸ್ ಪಯಣದಲ್ಲಿ ಮತ್ತೊಂದು ವಿಚಾರ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ. ಮನೆಯ ಮತ್ತೊಬ್ಬ ಸ್ಪರ್ಧಿ ವರ್ಷಿಣಿ ಸೌಂದರರಾಜನ್ ಅವರ ಜೊತೆ ಮುಕೇಶ್ ಹೆಚ್ಚು ಸಮಯ ಕಳೆಯುತ್ತಿರುವುದು ಚರ್ಚೆಗೆ ಬಂದಿದೆ. ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳುವ ವಿಡಿಯೋಗಳು, ಆತ್ಮೀಯವಾಗಿ ಮಾತನಾಡುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿವೆ. ಕೆಲವರು ಇದನ್ನು ಹೊಸ ಲವ್ ಟ್ರ್ಯಾಕ್ ಎಂದು ಕರೆಯುತ್ತಿದ್ದರೆ, ಇನ್ನು ಕೆಲವರು ಇದು ಕೇವಲ ಸ್ನೇಹ ಎಂದು ಅಭಿಪ್ರಾಯಪಡುತ್ತಿದ್ದಾರೆ. ಆದರೆ ಇವರಿಬ್ಬರ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ಇಲ್ಲ.
ಬಿಗ್‌ಬಾಸ್ ಟ್ರೋಫಿ ಗೆಲ್ತಾರ!
ಒಟ್ಟಿನಲ್ಲಿ, ನಟನೆಯ ಮೂಲಕ ತೆಲುಗು ಪ್ರೇಕ್ಷಕರ ಮನ ಗೆದ್ದಿದ್ದ ಮೈಸೂರಿನ ಮುಕೇಶ್ ಗೌಡ ಈಗ ರಿಯಾಲಿಟಿ ಶೋ ಮೂಲಕವೂ ಸುದ್ದಿಯಲ್ಲಿದ್ದಾರೆ. rashmika mandanna ಜೊತೆಗಿನ ಕಾಲೇಜು ನಂಟು, ತಾಯಿಯ ಭಾವುಕ ಭೇಟಿ, ವರ್ಷಿಣಿ ಜೊತೆಗಿನ ಆತ್ಮೀಯತೆ ಹೀಗೆ ಹಲವು ಕಾರಣಗಳಿಗೆ ಮುಕೇಶ್ ಹೆಸರು ಸದ್ದು ಮಾಡುತ್ತಿದೆ. ತೆಲುಗು ಬಿಗ್‌ಬಾಸ್ ಮನೆಯಲ್ಲಿರುವ ಈ ಕನ್ನಡದ ಹುಡುಗ ಕೊನೆಯವರೆಗೂ ಉಳಿದುಕೊಂಡು ಟ್ರೋಫಿ ಗೆಲ್ಲುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.




Click it and Unblock the Notifications
