ಮಂಜು ಬ್ಯಾಕ್; ಬಿಗ್‌ಬಾಸ್ ಕನ್ನಡ ಮನೆಯಲ್ಲಿ ಬದಲಾಯ್ತು ಲೆಕ್ಕಾಚಾರ: ಗಾನವಿ ಕುತ್ತಿಗೆ ಮೇಲೆ ಕಾಲಿಟ್ಟರೇ ಪ್ರಶಾಂತ್!
ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಮಾಡ್ರನ್ ಮಹಾಕವಿ ಮಂಜು ಎಂಟ್ರಿ ಕೊಟ್ಟ ಮೇಲೆ ಆಟದ ರೀತಿಯೇ ಸಂಪೂರ್ಣವಾಗಿ ಬದಲಾಗಿದೆ. ಬಿಗ್‌ಬಾಸ್ ಕನ್ನಡ ಮನೆಯಲ್ಲಿ ಕೊಟ್ಟ ಟಾಸ್ಕ್‌ನಲ್ಲಿ ಗಾನವಿ ಕುತ್ತಿಗೆಯ ಮೇಲೆ ಪ್ರಶಾಂತ್ ಅವರು ಕಾಲಿಟ್ಟಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ರೀತಿ ಆಟವಾಡುವ ಅವಶ್ಯಕತೆ ಇದೆಯಾ ಅಂತ ಮಂಜು ಪ್ರಶ್ನೆ ಮಾಡಿದ್ದು, ಮಂಜು ಮತ್ತು ಪ್ರಶಾಂತ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಇಬ್ಬರ ವಾಕ್ಸಮರ ನೋಡಿರುವ ವೀಕ್ಷಕರು ಮಂಜು ಬಂದ ಮೇಲೆ ಬಿಗ್‌ಬಾಸ್ ಕನ್ನಡ ಬದಲಾಗಿದೆ ಅಂತ ಅಭಿಪ್ರಾಯಪಟ್ಟಿದ್ದಾರೆ.
ದೀಪಾವಳಿ ಸಮಯದಲ್ಲಿ ಬಿಗ್‌ಬಾಸ್ ಕನ್ನಡ ಮನೆಗೆ ಮಂಜು ಸರ್ಪ್ರೈಸ್ ಎಂಟ್ರಿ ಕೊಟ್ಟಿದ್ದಾರೆ. ಬಿಗ್‌ಬಾಸ್ ಕನ್ನಡ ಮನೆಗೆ ಮಂಜು ಎಂಟ್ರಿ ಕೊಟ್ಟ ಬೆನ್ನಲ್ಲೇ ಬಿಗ್‌ಬಾಸ್ ಕನ್ನಡ ಮನೆಯಲ್ಲಿ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಬಿಗ್‌ಬಾಸ್ ಕೊಟ್ಟ ಟಾಸ್ಕ್ ವಾಕ್ಸಮಕ್ಕೆ ವೇದಿಕೆ ಆಗಿದೆ. ಬಿಗ್‌ಬಾಸ್ ಕನ್ನಡದಲ್ಲಿ ಗಾನವಿ - ಪ್ರಶಾಂತ್ ನಡುವೆ ಆಟದಲ್ಲಿ ಗಾನವಿ ಅವರು ಪ್ರಶಾಂತ್ ಅವರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗಾನವಿ ಅವರ ಕುತ್ತಿಗೆಯ ಮೇಲೆ ಪ್ರಶಾಂತ್ ಕಾಲಿಟ್ಟಿದ್ದಾರೆ ಎಂದು ಗಾನವಿ ಅವರು ದೂರಿದ್ದಾರೆ. ದನ 90 ಕೆ.ಜಿ ತೂಕ ಇದ್ದೀಯ, ನನ್ನ ಕತ್ತಿನ ಮೇಲೆ ಕಾಲಿಡ್ತೀಯಾ ಅಂತ ಆಕ್ರೋಶ ಹೊರ ಹಾಕಿದ್ದಾರೆ. ಇದಕ್ಕೆ ಪ್ರಶಾಂತ್ ಅವರು ನನ್ನ ಕಾಲು ಎಳೆದಿದ್ದು ನೀನೇ ಅಂತ ಹೇಳಿದ್ದಾರೆ.

ಪ್ರಶಾಂತ್ vs ಮಂಜು ನಡುವೆ ವಾಕ್ಸಮರ
ಇನ್ನು ಈ ನಡುವೆ ಪ್ರಶಾಂತ್ ಹಾಗೂ ಮಂಜು ನಡುವೆ ವಾಕ್ಸಮರ ಶುರುವಾಗಿದೆ. ಈ ರೀತಿಯ ಗಲೀಜು ಆಟ ಆಡುವುದಕ್ಕೆ ಈ ಖುಷಿ ಅಂತ ಮಂಜು ಅವರು ಹೇಳಿದ್ದಾರೆ. ಇದಕ್ಕೆ ಪ್ರಶಾಂತ್ ಒಂದು ತಿಂಗಳು ಆಚೆ ಇರೋ ಬಚ್ಚಾ ಅಂತ ಪ್ರಶಾಂತ್ ಮಂಜಾಗೆ ಹೇಳಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟಿರುವ ಮಂಜಾ ಅವರು, ಹೋಗೋಲೋ ನೀಚಾ ಅಂತ ಹೇಳಿದ್ದಾರೆ.
ಇದಕ್ಕೆ ಕೋಪಗೊಂಡಿರುವ ಪ್ರಶಾಂತ್ ಅವರು ಪದ ಬಳಕೆ ಸರಿಯಾಗಿ ಇರಲಿ ಅಂತ ಹೇಳಿದ್ದಾರೆ. ಪದ ಹಂಗೇ ನಾನು ಬಳಸೋದು... ಅಂತ ಮಂಜು ಹೇಳಿದರೆ ನಾಚಿಕೆ - ಮಾನ ಮರ್ಯಾದೆ ಇಲ್ಲ ಅಂತ ಪ್ರಶಾಂತ್ ತಿರುಗೇಟು ಕೊಟ್ಟಿದ್ದಾರೆ. ಇದಕ್ಕೆ ಮೂರು ಬಿಟ್ಟವನು ನೀನು ಅಂತ ಪ್ರಶಾಂತ್‌ಗೆ ಮಂಜು ತಿರುಗೇಟು ಕೊಟ್ಟಿದ್ದಾರೆ. ಮೂರಡಿ ಮೂಟೆ ಎನ್ನುವ ಮಾತು ಸಹ ಈ ಸಮಯದಲ್ಲಿ ಕೇಳಿ ಬಂದಿದೆ.
ಮಂಜು Vs ಯಶಸ್ ನಡುವೆ ವಾಕ್ಸಮರ
ಮಂಜು ಹಾಗೂ ಯಶಸ್ ನಡುವೆ ವಾಕ್ಸಮರ ನಡೆದಿದೆ. ಟಾಸ್ಕ್ ವಿಚಾರದಲ್ಲಿ ಇಬ್ಬರೂ ಜೋರು ದನಿಯಲ್ಲಿ ಮಾತನಾಡಿದ್ದಾರೆ. ಇಬ್ಬರು ನಾಯಕರ ಕಟೌಟ್‌ಗಳಿಗೆ ಬಣ್ಣ ಬಳಿಯುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್‌ನಲ್ಲಿ ಯಶಸ್ ಕೃಷ್ಣ ಹಾಗೂ ಮಂಜು ಅವರ ಕಟೌಟ್‌ಗಳಿಗೆ ಪ್ರತಿಸ್ಪರ್ಧಿಗಳು ಬಣ್ಣ ಬಳಿದರೆ, ಮತ್ತೊಂದು ತಂಡ ತಡೆಯಬೇಕಾಗಿತ್ತು. ಆದರೆ ಈ ಟಾಸ್ಕ್‌ನಲ್ಲಿ ಮಂಜು ಮತ್ತು ಯಶಸ್ ನಡುವೆ ವಾಕ್ಸಮರ ನಡೆದಿದೆ. ಅಲ್ಲದೆ ಇಬ್ಬರೂ ನಾಯಕರು ಒಮ್ಮದ ನಿರ್ಧಾರವನ್ನು ತೆಗೆದುಕೊಳ್ಳದೆ ಇರುವುದರಿಂದ ಟಾಸ್ಕ್ ರದ್ದು ಮಾಡಲಾಗಿದೆ ಎಂದು ಬಿಗ್‌ಬಾಸ್ ಘೋಷಿಸಿದ್ದಾರೆ.
ಯಶಸ್ ಹಾಗೂ ಮಂಜು ಉಸ್ತುವಾರಿ ಆಗಿದ್ದಾರೆ. ಇಬ್ಬರೂ ನಾಯಕರು ಒಮ್ಮತಕ್ಕೆ ಬರಬೇಕು ಎಂದು ಬಿಗ್‌ಬಾಸ್ ಹೇಳಿದ್ದರು. ಆದರೆ ಇಬ್ಬರೂ ನಾಯಕರ ನಡುವೆ ಒಮ್ಮತ ಮೂಡಿಲ್ಲ. ಫಲಿತಾಂಶ ನೀಡಲು ಕಷ್ಟವಾಗುತ್ತಿರುವ ಈ ಟಾಸ್ಕ್ ಅನ್ನು ಬಿಗ್‌ಬಾಸ್ ಸಹ ಪರಿಗಣಿಸುವುದಿಲ್ಲ. ಇದನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದು ಹೇಳಿದ್ದಾರೆ. ಯಾವಾಗಲೂ ರದ್ದು ಮತ್ತೇಕೆ ಆಟಬೇಕು ಆಟವನ್ನ ಅಂತ ಬಿಗ್‌ಬಾಸ್ ಸ್ಪರ್ಧಿ ಆಕ್ರೋಶ ಹೊರ ಹಾಕಿದ್ದಾರೆ.




Click it and Unblock the Notifications
