ಕರ್ಣ ಸೀರಿಯಲ್‌ನಲ್ಲಿ ರೋಚಕ ತಿರುವು: ನಾಯಕನ ತಂದೆ ರಿವೀಲ್ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ಎಪಿಸೋಡ್!

ಕರ್ಣ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ. ಕರ್ಣ ಸೀರಿಯಲ್ ಪ್ರಾರಂಭವಾದಾಗಿನಿಂದಲೂ ಕರ್ಣನ ಸಾಕು ತಂದೆ ರಮೇಶ್ ಎಂದು ಹೇಳಲಾಗಿತ್ತು. ಕರ್ಣ ಅನಾಥ ಆತನಿಗೆ ಯಾರು ಇಲ್ಲ, ಅವನ ಹಿನ್ನೆಲೆ ಏನು ಎಂದು ತಿಳಿಯದಂತೆಯೇ ತೋರಿಸಲಾಗಿತ್ತು. ಕರ್ಣನನ್ನು ಮುಗಿಸುವ ಉದ್ದೇಶದಿಂದ ಸಂಚು ರೂಪಿಸಿದ್ದ ರಮೇಶ್ ಅಪಘಾತವನ್ನೂ ಮಾಡಿಸಿದ್ದ. ಆದರೆ ಅಪಘಾತ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಕರ್ಣನೇ ತನ್ನ ಮಗ ಎನ್ನುವ ಸತ್ಯ ರಮೇಶ್‌ಗೆ ತಿಳಿದಿದೆ.

ಸತ್ಯಾಂಶ ತಿಳಿದ ಮೇಲೆ ರಮೇಶ್ ಸಂಕಟಪಟ್ಟಿರುವುದು ಒದ್ದಾಡಿದ್ದ. ತೀವ್ರ ಅಪಘಾತದಲ್ಲಿ ಕರ್ಣನ ತಲೆಗೆ ಬಲವಾದ ಪೆಟ್ಟು ಬಿದ್ದಿರುವಂತೆ ತೋರಿಸಲಾಗಿದೆ. ಕರ್ಣನ ತಲೆಗೆ ಬಲವಾದ ಪೆಟ್ಟು ಬಿದ್ದ ಮೇಲೆ ಕರ್ಣನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಕರ್ಣನಿಗೆ ರಕ್ತ ಕೊಡುವುದಕ್ಕೆ ರಮೇಶ್ ಮುಂದಾಗಿದ್ದಾನೆ. ಈ ಸಮಯದಲ್ಲಿ ಕರ್ಣನ ಅಜ್ಜಿ ರಮೇಶ್ ರಕ್ತ ಕೊಡುವುದು ಬೇಡ ಅಂತ ರಕ್ತದ ಬಾಟಲಿಯನ್ನು ಬಿಸಾಕಿದ್ದಾರೆ. ಕರ್ಣ ಸೀರಿಯಲ್‌ನ ಈ ಹೊಸ ತಿರುವುಗಳು ಪ್ರೇಕ್ಷಕರಲ್ಲಿ ಭಾರೀ ಕುತೂಹಲವನ್ನುಂಟು ಮಾಡಿದೆ.

Karna Serial

ಕರ್ಣ ಸೀರಿಯಲ್‌ನಲ್ಲಿ ಕರ್ಣ, ರಮೇಶ್ ಹಾಗೂ ಸೀತಾ ನಡುವೆ ಯುದ್ಧ ನಡೆಯುತ್ತಿತ್ತು. ಮೂವರಿಗೂ ಸಹ ಕರ್ಣ ತಮ್ಮ ಮಗ ಎನ್ನುವ ವಿಚಾರವು ಗೊತ್ತಾಗಿರಲಿಲ್ಲ. ಆದರೆ ಇದೀಗ ಈ ಸತ್ಯ ಒಂದೊಂದೆ ಬಹಿರಂಗವಾಗುವುದಕ್ಕೆ ಪ್ರಾರಂಭವಾಗಿದೆ. ಕರ್ಣನನ್ನು ನೋಡಿದರೆನೇ ರಮೇಶ್ ಕಿಡಿಕಾರುತ್ತಿದ್ದ, ಹೇಗಾದರೂ ಕರ್ಣನನ್ನು ಕೊಲೆ ಮಾಡಬೇಕು ಎಂದು ಸಂಚು ರೂಪಿಸಿ, ಇದರಲ್ಲಿ ಕರ್ಣನಿಗೆ ಅಪಘಾತವನ್ನೂ ಮಾಡಿಸಲಾಯಿತು. ಆದರೆ, ಕರ್ಣನೇ ತನ್ನ ಮಗ ಎನ್ನುವ ವಿಷಯ ತಿಳಿಯುತ್ತಿದ್ದಂತೆಯೇ ರಮೇಶ್ ವಿಲವಿಲ ಅಂತ ಪಶ್ಚಾತಾಪದಲ್ಲಿ ಒದ್ದಾಡಿದ್ದಾನೆ.

ಅಣ್ಣಯ್ಯನಿಂದ ಬಯಲಾಯ್ತು ಸತ್ಯ!

ಶಿವು (ಅಣ್ಣಯ್ಯ ಸೀರಿಯಲ್‌ನ ಶಿವು)ನಿಂದ ಕರ್ಣನ ಜನ್ಮ ರಹಸ್ಯ ರಿವೀಲ್ ಆಗಿತ್ತು. ರಮೇಶ್‌ಗೆ ಕರ್ಣನ ಹೆತ್ತ ತಾಯಿ ಬೇರೆ ಯಾರೂ ಅಲ್ಲ ಸೀತಾಳೆ ಅವರ ತಾಯಿ ಎನ್ನುವ ವಿಷಯ ತಿಳಿಯಿತು. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿದ್ದು, ಕರ್ಣನ ಅಪಘಾತವಾಗಿತ್ತು. ಕರ್ಣನ ತಾಯಿ ಸೀತಾ ಎಂದಾದರೆ, ತಾನೇ ಅವರ ಅಪ್ಪ ಎನ್ನುವ ವಿಷಯ ರಮೇಶ್‌ಗೆ ಅಘಾತವನ್ನುಂಟು ಮಾಡಿದೆ. ನನ್ನ ಮಗನನ್ನು ನಾನೇ ಕೊಲೆ ಮಾಡಿ ಬಿಟ್ಟೆನ್ನಲ್ಲ ಎಂದು ಅಪಘಾತವಾದ ಸ್ಥಳಕ್ಕೆ ರಮೇಶ್ ಬಂದಿದ್ದ. ಆದರೆ ಅಲ್ಲಿ ಕರ್ಣ ಇರಲಿಲ್ಲ.

ಕರ್ಣನನ್ನು ಒಮ್ಮೆ ನೋಡಿ ಹೋಗ್ತೀನಿ ಎಂದ ರಮೇಶ್

ಒಂದೇ ಒಂದು ಸಲ ನನಗೆ ಕರ್ಣನನ್ನು ನೋಡಲು ಬಿಡಿ ಅಂತ ಅಜ್ಜಿ ಮತ್ತು ಮಾಲತಿಯ ಬಳಿ ರಮೇಶ್ ಬೇಡಿಕೊಂಡಿದ್ದಾನೆ. ದೇವಸ್ಥಾನಕ್ಕೆ ಹೋಗಿ ಕರ್ಣನಿಗೆ ಬೇಗ ಹುಷಾರಾಗಲಿ ಅಂತ ಕುಂಕುಮ ತಂದಿದ್ದೀನಿ ಅವರ ಹಣೆಗೆ ಕುಂಕುಮವಿಟ್ಟು ನಾನು ವಾಪಸ್ ಹೋಗುತ್ತೇನೆ ಅಂತ ರಮೇಶ್ ಕೇಳುತ್ತಿದ್ದರೂ, ಇದಕ್ಕೆ ಮಾಲತಿ ಮತ್ತೆ ಅಜ್ಜಿ ಒಪ್ಪಿಕೊಂಡಿಲ್ಲ. ನಿಮಗೆ ಯಾಕ್ರಿ ಈ ನಾಟಕ ಇಷ್ಟು ದಿನ ಮಾಡಿದ್ದು ಸಾಕಾಗಲಿಲ್ವಾ ಅಂತ ರಮೇಶ್‌ನ ಮಾಲತಿ ಕೇಳಿದ್ದಾಳೆ. ಸಹಾಯಕ ಸಿಬ್ಬಂದಿ ನೆಪದಲ್ಲಿ ಕರ್ಣನ ಬಳಿ ಬಂದಿರುವ ರಮೇಶ್ ಅವನ ಹಣೆಗೆ ಕುಂಕುವಿಟ್ಟು ಪಶ್ಚಾತಾಪದ ಮಾತುಗಳನ್ನಾಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+