ಹಿತೇಶ್‌.ವೈ

Chief Sub Editor
ಹಿತೇಶ್.ವೈ ಅವರು Oneindia Kannadaದಲ್ಲಿ Chief Sub Editor ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ಮೂಲದವರಾದ ಇವರು, ಬೆಂಗಳೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 10 ವರ್ಷಗಳಿಗಿಂತ ಹೆಚ್ಚು ಅನುಭವ ಹೊಂದಿದ್ದು, ಪ್ರಜಾವಾಣಿಯಲ್ಲಿ ಉಪ-ಸಂಪಾದಕ ಹಾಗೂ ವರದಿಗಾರರಾಗಿ, ಉದಯವಾಣಿಯಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ದೆಹಲಿಯ ಕೃಷಿ ಜಾಗರಣ ಸಂಸ್ಥೆಯಲ್ಲಿ YouTube Content Creator ಹಾಗೂ ವರದಿಗಾರರಾಗಿ ಡಿಜಿಟಲ್ ಪತ್ರಿಕೋದ್ಯಮದಲ್ಲೂ ಅನುಭವ ಗಳಿಸಿದ್ದಾರೆ. ಪ್ರಸ್ತುತ ಸುದ್ದಿಗಳ ವಿಶ್ಲೇಷಣೆ, ಡಿಜಿಟಲ್ ಸ್ಟೋರಿಟೆಲಿಂಗ್, SEO ಆಧಾರಿತ ಲೇಖನ ರಚನೆ ಮತ್ತು Google Discoverಗೆ ಹೊಂದುವ ಕಂಟೆಂಟ್ ಸೃಷ್ಟಿಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ನಾಗರಿಕ ಸಮಸ್ಯೆಗಳು, ಬೆಂಗಳೂರು, ಕರ್ನಾಟಕ ರಾಜಕೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬೆಳವಣಿಗೆಗಳು, ಕೃಷಿ, ತಂತ್ರಜ್ಞಾನ ಹಾಗೂ ಸಮಾಜಮುಖಿ ವಿಷಯಗಳ ಕುರಿತು ನಿರಂತರವಾಗಿ ಬರೆಯುತ್ತಿದ್ದಾರೆ. ಸಾಹಿತ್ಯ, ಸಿನಿಮಾ ಮತ್ತು ಪ್ರವಾಸ ಇವರ ನೆಚ್ಚಿನ ಆಸಕ್ತಿಗಳು. ಕಥೆ-ಕವನ ಬರೆಯುವುದು ಹಾಗೂ ಹೊಸ ಸ್ಥಳಗಳನ್ನು ಅನ್ವೇಷಿಸುವುದು ಇವರ ಹವ್ಯಾಸ. ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಾದ ಪೂರ್ಣಚಂದ್ರ ತೇಜಸ್ವಿ, ಗಿರೀಶ್ ಕಾರ್ನಾಡ್ ಹಾಗೂ ದ. ರಾ. ಬೇಂದ್ರೆ ಅವರ ಕೃತಿಗಳು ಇವರಿಗೆ ವಿಶೇಷವಾಗಿ ಇಷ್ಟ.

Recent Posts