Author Profiles

ಸುದ್ದಿ ಸಂಪಾದಕ
ODMPL ಕನ್ನಡ ವಿಭಾಗದಲ್ಲಿ ಸುದ್ದಿ ಸಂಪಾದಕ. ಕನ್ನಡ ವೆಬ್ ಪ್ರಪಂಚದಲ್ಲಿ ವರದಿ, ಸುದ್ದಿ ಸಂಕಲನದಲ್ಲಿ 13 ವರ್ಷಗಳ ಅನುಭವ. ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ, ಬೆಳೆದಿದ್ದು ಬೆಂಗಳೂರಿನಲ್ಲಿ, ಕನ್ನಡ ಮತ್ತು ತಂತ್ರಜ್ಞಾನದ ಅಳಿವು, ಉಳಿವು ಬೆಳವಣಿಗೆಯಲ್ಲಿ ಬಗ್ಗೆ ಆಸಕ್ತಿಯನ್ನು ಹೊಂದಿದ್ದೇನೆ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಜೊತೆಗಿನ ಒಡನಾಡಿ. ಕನ್ನಡ ಸಾಹಿತ್ಯ, ಫೋಟೋಗ್ರಫಿ ಮತ್ತು ಚಾರಣ. ನನ್ನ ಆಸಕ್ತಿ ವಿಷಯಗಳು. ಸಾಹಿತ್ಯಾಸಕ್ತಿಯಿಂದ ಕನ್ನಡ ಕವಿಗಳು, ತೇಜಸ್ವಿ ಕುರಿತ ವೆಬ್ ತಾಣ ವಿನ್ಯಾಸಗೊಳಿಸಿದ್ದೇನೆ. ಕನ್ನಡದಲ್ಲಿ ಹಕ್ಕಿಗಳ ಬಗ್ಗೆ ಹಕ್ಕಿಪುಕ್ಕ ಎಂಬ ತಾಣ ನಿರ್ಮಿಸಿದ ಖುಷಿಯಿದೆ.ದೈನಂದಿನ ಸುದ್ದಿ ಜೊತೆಗೆ ಕ್ರೀಡೆ, ಸಿನಿಮಾ, ಉದ್ಯಮ, ತಂತ್ರಜ್ಞಾನ ಕುರಿತ ವಿಶೇಷ ಸುದ್ದಿಗಳ ಹುಡುಕಾಟ, ಪ್ರಸ್ತುತಿ ಈ ಕ್ಷೇತ್ರದಲ್ಲಿ ಉಳಿಸಿದೆ.
chief sub editor
Gururaj KS currently working as Chief Sub Editor at OneIndia Kannada. He has 14 years of experience in Kannada news media and 10 years of experience in digital media. He worked in various media's like Ciniganda film mezzanine, Samyukta Karnataka daily newspaper and News18 Kannada website. His strong interest in covering Karnataka government schemes, government employees news, political analysis, gram panchayat news, train, bus and travel story's, agriculture sector and job story's. Book reading, watching movies, traveling and farming hobbies.
ODMPL ಕನ್ನಡ ವಿಭಾಗದಲ್ಲಿ ವರದಿಗಾರ್ತಿ ಹಾಗೂ ಉಪ ಸಂಪಾದಕಿಯಾಗಿ 2017 ರಿಂದ ಕೆಲಸ ನಿರ್ವಹಣೆ. 2014ರಿಂದ ಪತ್ರಿಕೋದ್ಯಮದಲ್ಲಿದ್ದೇನೆ. ಮೊದಲು ವರದಿಗಾರ್ತಿಯಾಗಿ ಕನ್ನಡಪ್ರಭ ದಿನಪತ್ರಿಕೆಯಲ್ಲಿ 2014-17ರವರೆಗೆ ಕೆಲಸ ಮಾಡಿದ ಅನುಭವ. ಪತ್ರಿಕೋದ್ಯಮದಲ್ಲಿ ಡಿಗ್ರಿ, ಹಿಂದಿಯಲ್ಲಿ ಎಂ.ಎ ವ್ಯಾಸಂಗ ಮಾಡಿದ್ದೇನೆ. ಹಿಂದಿ ಸಾಹಿತ್ಯ,ನೃತ್ಯ, ಹಾಡುಗಾರಿಕೆ ಮತ್ತು ಚಾರಣ ನನ್ನ ಆಸಕ್ತಿ ವಿಷಯಗಳು.
Copy Editor
ಒನ್ಇಂಡಿಯಾ ಕನ್ನಡದಲ್ಲಿ ಕಾಪಿ ಎಡಿಟರ್. ಕಳೆದ 6 ವರ್ಷಗಳಿಂದ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದೇನೆ. ಹುಟ್ಟಿ ಬೆಳದದ್ದು ರಾಯಚೂರಿನಲ್ಲಿ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಎಲೆಕ್ಟ್ರಾನಿಕ್ ಮೀಡಿಯಾ ಮುಗಿಸಿದ್ದೇನೆ. ಬಿಟಿವಿ, ಉದಯ ನ್ಯೂಸ್ ನಲ್ಲಿ ವರದಿಗಾರಳಾಗಿ ಕೆಲಸ ಮಾಡಿದ್ದೇನೆ. ನ್ಯೂಸ್ ಬಳಿಕ ಉದಯ ಟಿವಿಯಲ್ಲಿ (ಔಟ್ ಸೋರ್ಸ್) ಪ್ರೋಗ್ರಾಂ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ್ದೇನೆ. ಏನ್ ಸುದ್ದಿ ವೆಬ್ ಸೈಟ್ ಮೂಲಕ ಆನ್‌ಲೈನ್‌ ಮಾಧ್ಯಮಕ್ಕೆ ಕಾಲಿಟ್ಟು ಎರಡು ವರ್ಷ ಕಳೆದಿದೆ. ಮಹಿಳಾ ಷೋಷಣೆ, ಸಾಮಾಜಿಕ ಕಳಕಳಿ, ರಾಜಕೀಯ, ಅನ್ನದಾತರಿಗೆ ಸಂಬಂಧಿಸಿದ ಸುದ್ದಿಗಳನ್ನು ಮಾಡಲು ಹೆಚ್ಚಿನ ಆಸಕ್ತಿ ಹೊಂದಿದ್ದೇನೆ. ಸುದ್ದಿ ಮಾಧ್ಯಮಗಳನ್ನು ನೋಡುವುದು, ನಿರೂಪಣೆ, ವಾಯ್ಸ್ ಓವರ್, ಓದು, ಪ್ರವಾಸ, ಸಂಗೀತ ಕೇಳುವುದು ಮಾತ್ರವಲ್ಲದೇ ಕ್ರೀಡೆಯಲ್ಲಿ ಭಾಗವಹಿಸುವಿಕೆ, ಯೋಗ ಹೆಚ್ಚಿನ ಹವ್ಯಾಸಗಳು. ಎಸ್.ಎಲ್ ಭೈರಪ್ಪ ನೆಚ್ಚಿನ ಲೇಖಕರು.
ಉಪಸಂಪಾದಕ
Punith BU is working as Sub Editor at One India digital portal. He studied MA in Mass Communication and Journalism and has been working as a journalist for the past 8 years. He has worked in state level newspapers like Udayavani, Kannada prabha. His interests include politics, commerce, current affairs, agriculture, cinema.
He has been in the media for the last 7 years and is currently working as a Sub Editor in 'One India Kannada'. He originally hails from Hosritti/Channur village of 'Haveri' district. Post Graduated from Dharwad University, Haveri Campus with M.A. So far, He has worked as a reporter in 'Sanjevani' (Hubli), 'Vishwavani' in Bangalore and then 'Kannadaprabha'. He is currently joined our One India Kannada team. His interests include reading books, travelling, cooking, Agriculture and music. Ravi Belagere and Purnachandra Tejaswi are his favorite authors.
ಹಿರಿಯ ವರದಿಗಾರ್ತಿ
ಒನ್ ಇಂಡಿಯಾ ಕನ್ನಡದಲ್ಲಿ ಹಿರಿಯ ವರದಿಗಾರ್ತಿ. ಕಳೆದ 6 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು ಬೆಣ್ಣೆ ನಗರಿ ದಾವಣಗೆರೆ ಜಿಲ್ಲೆಯ ನ್ಯಾಮತಿಯಲ್ಲಿ.ಕುವೆಂಪು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ಟಿವಿ5 ಕನ್ನಡ,ಕಸ್ತೂರಿ ನ್ಯೂಸ್,ರಾಜ್ ನ್ಯೂಸ್ ನಲ್ಲಿ ವರದಿಗಾರ್ತಿಯಾಗಿ ಕೆಲಸ ಮಾಡಿದ್ದೇನೆ. ದೃಶ್ಯ ಮಾಧ್ಯಮದಿಂದ ಆನ್‌ಲೈನ್‌ ಮಾಧ್ಯಮಕ್ಕೆ ಬಂದೆ. ಮಾನವೀಯ,ರಾಜಕೀಯ, ರೈತ ಪರವಾದ ಸುದ್ದಿಗಳ ಬಗ್ಗೆ ವಿಪರೀತ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳು.
ಉಪ ಸಂಪಾದಕ
ಒನ್ ಇಂಡಿಯಾ ಕನ್ನಡದಲ್ಲಿ ಉಪ ಸಂಪಾದಕ. 7 ವರ್ಷಗಳಿಂದ ಮಾಧ್ಯಮ ರಂಗದಲ್ಲಿ ಕೆಲಸ. ತುಮಕೂರಿನ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಸಿನಿಮಾ, ಮಾನವೀಯ, ಅಪರಾಧ, ಕೃಷಿ ಪರವಾದ ಸುದ್ದಿಗಳಲ್ಲಿ ಆಸಕ್ತಿ. ಪುಸ್ತಕ ಓದುವುದು, ಸಿನಿಮಾ ನೋಡುವುದು ಇಷ್ಟದ ಹವ್ಯಾಸ.
Sub editor
Mamatha M is currently working as Special Correspondent at Filmibeat Kannada and OneIndia Kannada. she has 7 years of experience in Kannada news media. She worked in various kannada channels like Prajaa TV, Public tv. she worked in online portal 'Naanu Gauri' part ofGauri Lankesh News for 2 years. her prime area of focus is entertainment sector. She has a strong interest in covering other topics such as local and political news. She loves watching movies, traveling and farming.
Sub Editor/ Reporter
Puttappa Koli is currently working as Sub-Editor at Oneindia Kannada News And Mykhel Kannada. He started his career in Bengaluru as Sub-Editor in oneindia. There he covered All type of Sports, Politics, current affairs, state, National, International news and analysis. He tried his hand at features, entertainment, society, art, cinema and culture stories. He is Coming from Maidur Village, Ranebennur Talluk, Haveri District. He Has good knowledge in Sports, current affairs, politics, elections. his favorite hobby is reading newspaper and books. Eager to learn new things. he did his Journalism Degree In Harihar and Master Science in Electronic Media from Bangalore University.
Senior Sub Editor
Malathesha M, Working as a Journalist from Last 12 years. He started his Profession from Kannada Prabha and also Worked for Tv9 Kannada, ZEE Kannada News organizations. He joined Oneindia Kannada as Senior Sub Editor. He Experienced in all the Division of Journalism. He is expert in International and National News, Science, Film, Sports And Political Analysis.
Associate Editor
Ravindra Gangal is currently working as Associate Editor at Oneindia Kannada News. He is Leading Oneindia Kannada, Filmibeat, Goodreturns and MyKhel Kannada Digital Portals. He started his career as Sub-Editor in Kannada Prabha. Later he moved to The State News As Senior Sub-Editor. There he worked as content writer and producer. Then He joined Prajavani digital news outlet. There he covered politics, current affairs, state, national and international news. He tried his hand at features, entertainment, society, art, cinema and culture stories. He also involved in video content productions.
ಉಪಸಂಪಾದಕ
ಮೂಲತಃ ದಾವಣಗೆರೆ ಜಿಲ್ಲೆಯ ತೋರಣಗಟ್ಟೆ ಗ್ರಾಮದವನಾದ ನಾನು ಪ್ರಸ್ತುತ ಒನ್‌ ಇಂಡಿಯಾದಲ್ಲಿ ಉಪಸಂಪಾದಕನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಕಳೆದ 3 ವರ್ಷಗಳಿಂದ ಪತ್ರಿಕೋದ್ಯಮ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪದವಿಯನ್ನು ಕುವೆಂಪು ವಿಶ್ವವಿದ್ಯಾಲಯದಿಂದ ಪಡೆದಿರುತ್ತೇನೆ. ಫೋಕಸ್‌ ಕರ್ನಾಟಕ, ಟಿವಿ5 ಕನ್ನಡ, ನ್ಯೂಸ್‌ ಫಸ್ಟ್‌ ಕನ್ನಡ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದೇನೆ. ಪ್ರವಾಸಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಬರೆಯುವುದು, ಪತ್ರಿಕೆ ಓದುವುದು, ಸಂಗೀತ ಕೇಳುವುದು, ಕ್ರೈಂ ಸ್ಟೋರಿ ಓದುವುದು, ಫೋಟೋಗ್ರಫಿ ನನ್ನ ಇಷ್ಟದ ಹವ್ಯಾಸಗಳು.
ಒನ್‌ ಇಂಡಿಯಾ ಕನ್ನಡದಲ್ಲಿ ಉಪಸಂಪಾದಕಿ. ಕಳೆದ ನಾಲ್ಕು ವರ್ಷಗಳಿಂದ ಮಾಧ್ಯಮ ಲೋಕದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಕೃಷ್ಣನೂರು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ. ಪದವಿ ಶಿಕ್ಷಣವನ್ನು ಎಸ್‌ಡಿಎಂ ಕಾಲೇಜು ಉಜಿರೆಯಲ್ಲಿ ಮುಗಿಸಿದ್ದು, ಬಳಿಕ ಮಾಧ್ಯಮದಲ್ಲಿಯೇ ವೃತ್ತಿ ಜೀವನ ಆರಂಭಿಸಿದ್ದೆ. ನ್ಯೂಸ್‌ಫಸ್ಟ್ ಹಾಗೂ ಟಿ.ವಿ ೫ ಕನ್ನಡ ಸಂಸ್ಥೆಗಳಲ್ಲಿ ಡಿಜಿಟಲ್‌ ವಿಭಾಗದಲ್ಲಿ ಕೆಲಸ ಮಾಡಿರುವ ಅನುಭವವಿದೆ. ಸಿನಿಮಾ, ರಾಜಕೀಯ, ಅಪರಾಧ, ಕುತೂಹಲಕಾರಿ ಸುದ್ದಿಗಳನ್ನು ಬರೆಯುವ ಚಾಕಚಕ್ಯತೆ ಹೊಂದಿದ್ದೇನೆ.
ODMPL ನಲ್ಲಿ ಹಿರಿಯ ವರದಿಗಾರ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 12 ವರ್ಷಗಳ ಅನುಭವ. ಹುಟ್ಟಿ ಬೆಳೆದಿದ್ದು ರಾಯಚೂರು ಜಿಲ್ಲೆಯ ಹೊಕ್ರಾಣಿಯಲ್ಲಿ. ಶಾಲಾ-ಕಾಲೇಜು ರಾಯಚೂರು ಜಿಲ್ಲೆಯಲ್ಲಿಯೇ. ಸುದ್ದಿಮೂಲ ದಿನಪತ್ರಿಕೆ ನಾನು ಪತ್ರಕರ್ತನಾಗಲು ಕಾರಣವಾದ ವಿಶ್ವವಿದ್ಯಾಲಯ. ನಂತರ ಟೈಮ್ಸ್‌ ಆಫ್ ಇಂಡಿಯಾ ಕನ್ನಡ, ವಿಜಯ ಕರ್ನಾಟಕ ಹಾಗೂ ಪ್ರಜಾವಾಣಿ ದಿನಪತ್ರಿಗಳಲ್ಲಿ ಉಪಸಂಪಾದಕ, ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸಿದ್ದೇನೆ. ಗ್ರಾಮೀಣ, ರೈತ, ರಾಜಕೀಯ, ನಗರ ಸಂಬಂಧಿತ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಮತ್ತು ಈ ವಿಷಯಗಳಲ್ಲಿಯೇ ಹೆಚ್ಚಿನ ವರದಿಗಾರಿಕೆ ಮಾಡಿದ್ದೇನೆ. ಸದಾ ಹೊಸತನಗಳಿಗೆ ಹೊಂದಿಕೊಳ್ಳುವುದು, ಪ್ರವಾಸ, ಸಂಗೀತ ಕೇಳುವುದು ಆಸಕ್ತಿಯ ವಿಷಯ.
ಹಾಸನದ ಶ್ರವಣಬೆಳಗೊಳದ ಒಂದು ಪುಟ್ಟ ಗ್ರಾಮದಲ್ಲಿ ಹುಟ್ಟಿದ್ದಾದರೂ ಬೆಳೆದದ್ದು ರಾಜಧಾನಿ ನಗರಿ ಬೆಂಗಳೂರಿನಲ್ಲಿ. ಮಾಧ್ಯಮರಂಗದಲ್ಲಿ ಕೆಲವಾರು ವರ್ಷಗಳಿಂದ ಕೆಲಸ ಮಾಡಿರುವ ನನಗೆ ಆರ್ಥಿಕತೆ, ಕ್ರೀಡೆ, ತತ್ವಶಾಸ್ತ್ರ, ವಿಜ್ಞಾನ ಸಂಬಂಧಿತ ಬರಹಗಳಲ್ಲಿ ಹೆಚ್ಚು ಆಸಕ್ತಿ. ಯಾವುದೇ ವಿಚಾರಧಾರೆಗೆ ಬದ್ಧವಾಗದೇ ಹೊಸ ಸಂಗತಿ, ಹೊಸ ವಿಚಾರವನ್ನು ನೋಡುವ ಕುತೂಹಲದ ವ್ಯಕ್ತಿತ್ವ ನನ್ನದು.
ನಾಗೇಶ್ ಕೆ.ಎನ್. ಎರಡು ದಶಕದ ಹಿಂದೆ ಕನ್ನಡ ಭಾಷೆಯ ಮೊದಲ ನ್ಯೂಸ್ ಏಜೆನ್ಸಿ ಕರ್ನಾಟಕ ನ್ಯೂಸ್ ನೆಟ್ (KNN) ಸಂಸ್ಥೆಯಲ್ಲಿ ತಮ್ಮ ಬರವಣಿಗೆಯ ವೃತ್ತಿ ಆರಂಭಿಸಿದವರು. ರಾಜ್ಯಮಟ್ಟದ ಪತ್ರಿಕೆಗಳಿಗೆ ನಿರಂತರವಾಗಿ ಬರೆಯುವುದರ ಮೂಲಕ ಲೇಖನಿಯ ಮೊನಚು ಹೆಚ್ಚಿಸಿಕೊಂಡರು. ತಮ್ಮ ಒಲವಿನ ಕೃಷಿ ಕ್ಷೇತ್ರದಲ್ಲಿ ನೆಲೆ ನಿಂತರು. ದೂರದರ್ಶನದ ಕೃಷಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರು. ಸಮಯ ಟಿ.ವಿ-“ಕೃಷಿ ಸಮಯ” ಕಾರ್ಯಕ್ರಮ ಮುಖ್ಯಸ್ಥರಾಗಿ 900 ಕ್ಕೂ ಹೆಚ್ಚು ವಿಶೇಷ ವರದಿಗಳನ್ನು ನೀಡಿದರು. ಕೃಷಿ ಸಮಯ ಪತ್ರಿಕೆ ಜವಾಬ್ಧಾರಿಯ ಜೊತೆಗೆ ಗ್ರಾಮ ಮಟ್ಟದಿಂದ ಅಂತಾರಾಷ್ಟ್ರೀಯ ಕೃಷಿ ಸಂಸ್ಥೆಗಳಿಗೆ ಹಾಗೂ ರೈತ ಚಳವಳಿಗಳಿಗೆ ಮಾಹಿತಿ ಶಿಕ್ಷಣ ಸಂವಹನ (IEC) ತಜ್ಞರಾಗಿ ಸೇವೆ ಒದಗಿಸುತ್ತಿದ್ದಾರೆ. ಇವರು ಕೃಷಿ ಕ್ಷೇತ್ರದ ಭಿನ್ನ ಆಯಾಮವನ್ನು “ಒನ್ ಇಂಡಿಯಾ ಕನ್ನಡ” ಓದುಗರಿಗಾಗಿ ಕಟ್ಟಿಕೊಡುತ್ತಿದ್ದಾರೆ.
Sub Editor
ನಾನು ಶ್ರೀನಿವಾಸ ಎ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನನ್ನೂರು. ಕ್ರೀಡೆ ಹಾಗೂ ಸಿನಿಮಾ ನನ್ನ ಆಸಕ್ತಿ ಕ್ಷೇತ್ರಗಳು. ಪ್ರವಾಸ ಮತ್ತು ಫೋಟೋಗ್ರಫಿ ನನ್ನ ನೆಚ್ಚಿನ ಹವ್ಯಾಸಗಳು.
Sub editor
2022 ಫೆಬ್ರವರಿಯಲ್ಲಿ ಡ್ರೈವ್‌ಸ್ಪಾರ್ಕ್ ಕನ್ನಡ ಟೀಂನಲ್ಲಿ ಉಪ-ಸಂಪಾದಕನಾಗಿ ಕಾರ್ಯಾಂಭಿಸಿದ್ದೇನೆ. ಹುಟ್ಟಿದ್ದು ಆಂಧ್ರಪ್ರದೇಶ ಬೆಳೆದಿದ್ದು ಕರ್ನಾಟಕದ ಬೆಂಗಳೂರು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ M.A ಜರ್ನಲಿಸಂ ಮುಗಿಸಿದ್ದೇನೆ. ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗಕ್ಕೆ ಸೇರಿದ ಬಳಿಕ ಆಟೋ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚಾಗಿದೆ. ಟ್ರೆಂಡಿಯಾಗಿರುವ ಆಟೋ ಲೇಖನಗಳನ್ನು ಬರೆಯಲು ತುಂಬಾ ಆಸಕ್ತಿಯಿದೆ. ನಿತ್ಯ ಹೊಸ ಕಾರು, ಬೈಕ್, ಟೆಕ್ನಾಲಜಿ ಕುರಿತ ಆರ್ಟಿಕಲ್‌ಗಳನ್ನು ಬರೆಯುವುದು ತೃಪ್ತಿ ನೀಡುತ್ತಿದೆ. ಆಟೋ ವಿಭಾಗದಲ್ಲಿ ಆಳವಾದ ಮಾಹಿತಿ ಕಲೆಹಾಕುವುದರ ಜೊತೆಗೆ ಮತ್ತಷ್ಟು ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಬಯಕೆಯಿದೆ.
ಉಪಸಂಪಾದಕ
ಡ್ರೈವ್‌ಸ್ಪಾರ್ಕ್ ಕನ್ನಡ ತಂಡದಲ್ಲಿ ಉಪಸಂಪಾದಕ. ಹುಟ್ಟಿ, ಬೆಳೆದಿದ್ದು ಹಾಗೂ ವಿದ್ಯಾಭ್ಯಾಸ ಮಾಡಿದ್ದು ತುಮಕೂರಿನಲ್ಲಿ. ತುಮಕೂರು ವಾರ್ತೆ ದಿನಪತ್ರಿಕೆಯಿಂದ ಆರಂಭವಾದ ವೃತ್ತಿಜೀವನ ಬೆಂಗಳೂರಿನ ಪ್ರಜಾವಾಣಿ ಪತ್ರಿಕೆ ದಾಟಿ ಆ ಬಳಿಕ ತಲುಪಿದ್ದು ಹೈದರಾಬಾದಿನ ವೇ2ನ್ಯೂಸ್ ಕಡೆಗೆ. ಆಟೋಮೊಬೈಲ್ ಬಗ್ಗೆ ಏನು ಗೊತ್ತಿಲ್ಲದ ನನಗೆ ಅದರ ಬಗ್ಗೆ ಕಲಿಯಲು ಸಹಾಯ ಮಾಡಿದ್ದು ಡ್ರೈವ್‌ಸ್ಪಾರ್ಕ್.
Vinayak Limaye is currently working as senior sub editor at OneIndia. He started his career in Bengaluru as sub editor in samaya news channel. Later he moved to Samyukta karnataka News paper as Reporter. He published Several articles on daily bases. He covered IPL, World cup, Pro kabaddi tournaments. He Published many articles related to sports and has written special news about the Olympics. He is interested in current affairs, National and Intenational news.
Special Correspondent
Muraidhar S is currently working as Special Correspondent at Filmibeat Kannada and One India Kannada. He is a seasoned media professional, possesses over 16 years of extensive experience in Kannada news media. He has been an integral part of TV9 Karnataka for over 7.5 years, contributing significantly as a reporter, content writer, program producer, scriptwriter, and specializing in special segments. With a background encompassing Janasri News, Kasturi News, and News18 Kannada, he brings a wealth of expertise to his current roles at Filmibeat Kannada. His forte lies in writing, and he excels as a team player. Though his prime area of focus in entertainment sector, with adeptness in political, city news, trending news coverage.