Manohar M

Senior Sub Editor
ಮಾಧ್ಯಮ ಲೋಕದಲ್ಲಿ ಕಳೆದ 9 ವರ್ಷಗಳಿಂದ ಸಕ್ರಿಯವಾಗಿರುವ ನನಗೆ, ಸುದ್ದಿಗಳನ್ನು ಕೇವಲ ಬರೆಯುವುದಷ್ಟೇ ಅಲ್ಲ, ಅವುಗಳಿಗೆ ಹೊಸ ರೂಪ ಕೊಡುವುದೆಂದರೆ ಇಷ್ಟ. ಬೆಂಗಳೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ & ಸಮೂಹ ಸಂವಹನದಲ್ಲಿ (MA) ಸ್ನಾತಕೋತ್ತರ ಪದವಿ ಪಡೆದ ಬಳಿಕ ನನ್ನ ಪತ್ರಿಕೋದ್ಯಮದ ಪಯಣ ಶುರುವಾಯಿತು. 'ನ್ಯೂಸ್‌ ಫಸ್ಟ್‌ ಕನ್ನಡ' ಸುದ್ದಿವಾಹಿನಿಯಲ್ಲಿ ಕಾಪಿ ಎಡಿಟರ್‌ ಆಗಿ ವೃತ್ತಿಜೀವನ ಆರಂಭಿಸಿದ ನಾನು, ನಂತರ 'ಪ್ರಜಾವಾಣಿ' ದಿನಪತ್ರಿಕೆಯಲ್ಲಿ ವರದಿಗಾರ ಮತ್ತು ಉಪಸಂಪಾದಕನಾಗಿ ಸುದೀರ್ಘ ಕಾಲದ ಅನುಭವ ಪಡೆದೆ. ಬದಲಾಗುತ್ತಿರುವ ಡಿಜಿಟಲ್ ಜಗತ್ತಿಗೆ ತಕ್ಕಂತೆ 'Way2News' ಆಪ್‌ ಹಾಗೂ ಪೊಲಿಟಿಕಲ್ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡಿ, ಸದ್ಯ 'Oneindia Kannada' ವೆಬ್‌ಸೈಟ್‌ನಲ್ಲಿ ಸೀನಿಯರ್‌ ಸಬ್‌ ಎಡಿಟರ್‌ ಕಾರ್ಯನಿರ್ವಹಿಸುತ್ತಿರುವೆ. ಟಿವಿ ಚಾನಲ್‌, ಪ್ರಿಂಟ್‌ ಮೀಡಿಯಾ ಹಾಗೂ ಡಿಜಿಟಲ್‌ ಪ್ಲಾಟ್‌ಫಾರ್ಮ್‌ ಹೀಗೆ ಮೂರೂ ವಿಭಾಗಗಳಲ್ಲಿ ಕೆಲಸ ಮಾಡಿರುವ ಅನುಭವ ನನಗಿದೆ. ಸಿನಿಮಾ, ರಾಜಕೀಯ, ವೈರಲ್‌ ಸ್ಟೋರಿಗಳು, ಲೈಫ್‌ಸ್ಟೈಲ್‌, ಆಟೋಮೊಬೈಲ್ ಮತ್ತು ಗಾಸಿಪ್‌ ಸುದ್ದಿಗಳನ್ನು ವಿಭಿನ್ನ ದೃಷ್ಟಿಕೋನದಲ್ಲಿ ಬರೆಯುವುದು ನನ್ನಿಷ್ಟದ ಕೆಲಸ. ಬಿಡುವಿನ ವೇಳೆಯಲ್ಲಿ ಹೊಸ ಸಿನಿಮಾ ನೋಡುವುದು, ಬೈಕ್ ಏರಿ ದೂರದ ಊರುಗಳಿಗೆ ಸವಾರಿ ಮಾಡುವುದು ನನ್ನ ಹವ್ಯಾಸ. ಬೆಂಗಳೂರು ಏರ್‌ಪೋರ್ಟ್‌ ಬಳಿಯ ಐತಿಹಾಸಿಕ ದೇವನಹಳ್ಳಿ ನನ್ನೂರು.

Recent Posts