ಒಂದು ಕಂಪನಿ ಚೇಂಜ್ ಮಾಡುವಾಗ ಹೀಗೂ ಆಗಬಹುದು; Notice Period ತರುತ್ತೆ ಕುತ್ತು, 40 ಲಕ್ಷ ಸಂಬಳದ ಕೆಲಸ ಹೋಯ್ತು!

Notice Perio: ಈಗೆಲ್ಲ ಹೊಸ ಕೆಲಸ ಸಿಗುವುದೇ ಸವಾಲಾಗಿದೆ. ಯುದ್ಧ ಹಾಗೂ ಆರ್ಥಿಕ ಸಂಕಷ್ಟ ಇದರೊಂದಿಗೆ ಎಐ ಪೈಪೋಟಿ ಸೇರಿದಂತೆ ಹಲವರು ಕಾರಣಗಳಿಗೆ ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಹೊಸ ಉದ್ಯೋಗ ಸಿಗುವುದೇ ಸವಾಲು ಎನ್ನುವ ಪರಿಸ್ಥಿತಿ ಇದೆ. ಆದರೆ ನೋಟಿಸ್ ಪಿರಿಯಡ್ ಹೆಸರಿನಲ್ಲಿ ಕೆಲವು ಕಂಪನಿಗಳು ಅನವಶ್ಯಕವಾಗಿ ಕಿರಿಕಿರಿ ಕೊಡುವುದು ಇದೆ. ಹೊಸ ಹಾಗೂ ಉತ್ತಮ ಸಂಬಳವಿರುವ ಉದ್ಯೋಗ ಸಿಕ್ಕರೂ ಸಹ ನೋಟಿಸ್ ಪಿರಿಯಡ್ ಕಾರಣಕ್ಕೆ ಹಲವರು ಉತ್ತಮ ಆಫರ್‌ಗಳನ್ನು ಕಳೆದುಕೊಂಡಿರುವುದು ಇದೆ. ಟೆಕ್ಕಿಯೊಬ್ಬರಿಗೆ ಬರೋಬ್ಬರಿ ₹40 ಲಕ್ಷ ಮೊತ್ತದ ಉದ್ಯೋಗದ ಆಫರ್ ಸಿಕ್ಕಿರೂ, ಸಂಕಷ್ಟ ಅನುಭವಿಸಿರುವ ವಿಷಯವೊಂದು ಲಿಂಕ್ಡ್‌ಇನ್‌ನಲ್ಲಿ ವೈರಲ್ ಆಗಿದೆ.

ವ್ಯಕ್ತಿಯೊಬ್ಬರು ಲಕ್ಷಾಂತರ ರೂಪಾಯಿ ಆದಾಯ ಬರುವ ಕೆಲಸವಿದ್ದರೂ, ಆ ಕೆಲಸಕ್ಕೆ ಸೇರಿಕೊಳ್ಳಲು ಪರದಾಡಿರುವುದು, ಕೊನೆಗೆ ಎರಡೂ ಕಡೆ ಕೆಲಸಗಳನ್ನು ಕಳೆದುಕೊಂಡಿರುವ ವಿಷಯ ಇದೀಗ ವೈರಲ್ ಆಗಿದೆ. ಇದರ ನಡುವೆ ಕಂಪನಿಗಳ ನೋಟಿಸ್ ಪಿರಿಯಡ್ ಅವಧಿ ಹಾಗೂ ನೋಟಿಸ್ ಪಿರಿಯಡ್ ಹೆಸರಿನಲ್ಲಿ ಉದ್ಯೋಗಿಗಳಿಗೆ ಕಿರುಕುಳ ಕೊಡುವ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ. ಇಷ್ಟಕ್ಕೂ ಆಗಿದ್ದೇನು ಎನ್ನುವ ವಿವರ ಇಲ್ಲಿದೆ. 2 ತಿಂಗಳ ನೋಟಿಸ್ ಅವಧಿಯ ಕಾರಣಕ್ಕೆ ಟೆಕ್ಕಿಯೊಬ್ಬರು ಹೊಸ ಹಾಗೂ ಭಾರೀ ಸಂಬಳ ಬರುತ್ತಿದ್ದ ಕೆಲಸವನ್ನು ಕಳೆದುಕೊಂಡಿದ್ದಾರೆ.

Notice Perio

ಭರತ್ ಪ್ರಜಾಪತಿ ಎನ್ನುವವರು ಈ ಬಗ್ಗೆ ಸೋಶಿಯಲ್ ಮೀಡಿಯಾ ಲಿಂಕ್ಡ್‌ಇನ್‌ನಲ್ಲಿ ವಿವರವಾಗಿ ಹಂಚಿಕೊಂಡಿದ್ದಾರೆ. ಅವನಿಗೆ ಕೌಶಲ್ಯದ ಕೊರತೆ ಇರಲಿಲ್ಲ, ಸಂದರ್ಶನದಲ್ಲಿ ಫೇಲ್ ಸಹ ಆಗಿರಲಿಲ್ಲ. ಕಂಪನಿಯು ತನ್ನ ಮನಸ್ಸನ್ನು ಬದಲಾಯಿಸಿರಲಿಲ್ಲ. ಆದರೆ ಹೊಸ ಉದ್ಯೋಗಕ್ಕೆ ಆ ಯುವಕ ಸಮಯಕ್ಕೆ ಸರಿಯಾಗಿ ಸೇರಲು ಸಾಧ್ಯವಾಗಲಿಲ್ಲ. ಆನ್‌ಲೈನ್‌ನಲ್ಲಿ ಹಂಚಿಕೊಂಡ ಇತ್ತೀಚಿನ ಮಾಹಿತಿಯ ಪ್ರಕಾರ ಒಬ್ಬ ವೃತ್ತಿಪರನು ಕನಸು ಕಾಣುವ ಸುಂದರ ಅವಕಾಶವನ್ನು ಗಳಿಸಿದ್ದ. ಆದರೆ, ನೋಟಿಸ್ ಪಿರಿಯಡ್ ಕಾರಣಕ್ಕೆ ಹೊಸ ಕೆಲಸಕ್ಕೆ ಸೇರಲು ಸಾಧ್ಯವಾಗಿಲ್ಲ.

ಉತ್ತಮ ಕಂಪನಿ, ಉತ್ತಮ ಹುದ್ದೆ. ಈಗ ಇರುವುದಕ್ಕಿಂತಲೂ ಸುಮಾರು ಶೇ.60% ಹೆಚ್ಚು ಸಂಬಳ. ಹೊಸ ಉದ್ಯೋಗಕ್ಕೆ 4 ವಾರಗಳಲ್ಲಿ ಸೇರಲು ಬಯಸಿದ್ದರು. ಅಂದರೆ ಒಂದು ತಿಂಗಳ ಅವಧಿ. ಆದರೆ ಈಗ ಇರುವ ಕಂಪನಿಯು 8 ವಾರಗಳ ನೋಟಿಸ್ ನಿಗದಿ ಮಾಡಿತ್ತು. ಹೀಗಾಗಿ ಆಫರ್ ಅನ್ನು ಹಿಂತೆಗೆದುಕೊಳ್ಳಲಾಯಿತು.
ಅದು ನನ್ನನ್ನು ಒಂದು ಉದ್ಯೋಗದ ಆಫರ್‌ಗಿಂತ ದೊಡ್ಡದಾದ ಯಾವುದನ್ನಾದರೂ ಯೋಚಿಸುವಂತೆ ಮಾಡಿತು. ನಾವು ಆಗಾಗ್ಗೆ ಸಂಬಳದ ಬಗ್ಗೆ ಮಾತನಾಡುತ್ತೇವೆ.
ನಾವು CTC ಗಳನ್ನು ಹೋಲಿಕೆ ಮಾಡಿ ನೋಡುತ್ತೇವೆ - ನಾವು ಸಂಬಳ ಹೆಚ್ಚಳದ ಬಗ್ಗೆ ಮಾತುಕತೆ ನಡೆಸುತ್ತೇವೆ. ಆದರೆ, ನೋಟಿಸ್ ಪಿರಿಯಡ್ ಅವಧಿಯು ಹೊಸ ಅವಕಾಶವನ್ನೇ ಕಸಿದಿದೆ.

ಈ ವಿಷಯವು ಇದೀಗ ಮತ್ತೆ ಕಂಪನಿಗಳು 60-90 ದಿನಗಳ ನೋಟಿಸ್ ಪಿರಿಯಡ್ ಇರಬೇಕೇ ಅಥವಾ ಇದನ್ನು ಪರಿಶೀಲನೆ ಮಾಡಿ ಕಡಿಮೆ ಮಾಡಬೇಕೇ ಎನ್ನುವ ಚರ್ಚೆ ನಡೆದಿದೆ. ಬಹುತೇಕ ಕಂಪನಿಗಳು ನೋಟಿಸ್ ಪಿರಿಯಡ್ ಅವಧಿಯನ್ನು 3 ತಿಂಗಳ ಅವಧಿಗೆ ವಿಸ್ತರಿಸಿರುವುದು ಸಹ ಇದೆ. ಇದಂತೂ ಸಾಧ್ಯವೇ ಇಲ್ಲದ ಮಾತು. ಇದೀಗ ಕಂಪನಿಗಳ ನೋಟಿಸ್ ಪಿರಿಯಡ್ ಅವಧಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಚರ್ಚೆ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+