KSET 2026: ತಾತ್ಕಾಲಿಕ ಫಲಿತಾಂಶ ಪ್ರಕಟ, 37 ವಿಷಯಗಳ ಕಟ್-ಆಫ್ ಅಂಕ ಪರಿಶೀಲಿಸುವುದು ಹೇಗೆ? ಇಲ್ಲಿದೆ ವಿವರ

ಬೆಂಗಳೂರು: ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಅರ್ಹತೆಗಾಗಿ ನಡೆಸಲಾದ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (KSET-2026) ಕೆಸೆಟ್ 2026ರ ಪರಿಷ್ಕೃತ ಫಲಿತಾಂಶವನ್ನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕೃತವಾಗಿ ಪ್ರಕಟಿಸಿದೆ.

ನವೆಂಬರ್ 20ರಂದು ಪ್ರಕಟವಾಗಿದ್ದ ತಾತ್ಕಾಲಿಕ ಫಲಿತಾಂಶದಲ್ಲಿ ಕಂಡುಬಂದಿದ್ದ ತಾಂತ್ರಿಕ ದೋಷವನ್ನ ಸರಿಪಡಿಸಿ, ಇದೀಗ ಎಲ್ಲಾ 37 ವಿಷಯಗಳ ಪರಿಷ್ಕೃತ ತಾತ್ಕಾಲಿಕ ಫಲಿತಾಂಶ ಹಾಗೂ ಕಟ್-ಆಫ್ ಅಂಕಗಳನ್ನ ಬಿಡುಗಡೆ ಮಾಡಲಾಗಿದೆ.

KSET 2026 Revised Provisional Result amp amp Cut-Off Marks Announced By KEA Check Subject-Wise Details Here

1.17 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗಿ: ಕೆಇಎ ಕೆಸೆಟ್ ಕಟ್ ಆಫ್ ಅಂಕದ ವಿವರ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ (IAS) ಅವರು ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದಾರೆ. ಅಕ್ಟೋಬರ್ 11ರಂದು ರಾಜ್ಯಾದ್ಯಂತ ಒಟ್ಟು 37 ವಿವಿಧ ವಿಷಯಗಳಿಗೆ ಕೆಸೆಟ್ ಲಿಖಿತ ಪರೀಕ್ಷೆಯನ್ನ ನಡೆಸಲಾಗಿತ್ತು. ಈ ಪರೀಕ್ಷೆಗೆ ಒಟ್ಟು 1,29,214 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಆ ಪೈಕಿ 1,17,638 ಮಂದಿ ಎರಡೂ ಪತ್ರಿಕೆಗಳಿಗೆ ಹಾಜರಾಗಿದ್ದರು.

ಅಭ್ಯರ್ಥಿಗಳು ವಿವಿಧ ವಿಷಯಗಳ ಕಟ್ ಆಫ್ ಮಾರ್ಕ್ಸ್‌ ಹಾಗೂ ಪರಿಷ್ಕೃತ ಫಲಿತಾಂಶದ ಸಂಪೂರ್ಣ ವಿವರಗಳಿಗಾಗಿ ಕೆಇಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಎಂದು ಪ್ರಸನ್ನ ಅವರು ಸಲಹೆ ನೀಡಿದ್ದಾರೆ.

ಉದ್ಯೋಗಾಕಾಂಕ್ಷಿಗಳಿಗೆ KEA ಗುಡ್‌ನ್ಯೂಸ್: ವಿವಿಧ ಇಲಾಖೆಗಳ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ದಿನಾಂಕ ಮುಂದೂಡಿಕೆ!
ಉದ್ಯೋಗಾಕಾಂಕ್ಷಿಗಳಿಗೆ KEA ಗುಡ್‌ನ್ಯೂಸ್: ವಿವಿಧ ಇಲಾಖೆಗಳ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ದಿನಾಂಕ ಮುಂದೂಡಿಕೆ!

ಫಲಿತಾಂಶ ಪರಿಷ್ಕರಣೆಗೆ ಕಾರಣವೇನು? ತಾಂತ್ರಿಕ ದೋಷದ ಬಗ್ಗೆ ಪ್ರಾಧಿಕಾರದ ಸ್ಪಷ್ಟನೆ

ನವೆಂಬರ್ 20ರಂದು ಪ್ರಕಟಿಸಲಾಗಿದ್ದ ಮೂಲ ತಾತ್ಕಾಲಿಕ ಫಲಿತಾಂಶದ ಬಳಿಕ, ಎಸ್‌ಸಿಸಿ (ಎಂಬಿ) ವರ್ಗದ ಹಲವು ಅಭ್ಯರ್ಥಿಗಳು ಸೀಟು ಹಂಚಿಕೆಯ ಕುರಿತು ಆಕ್ಷೇಪಣೆ ಸಲ್ಲಿಸಿದ್ದರು. ಇದನ್ನ ಪರಿಶೀಲಿಸಿದಾಗ ಎಸ್‌ಸಿಸಿ (ಎಂಬಿ) ವರ್ಗದ ಸ್ಲಾಟ್‌ಗಳ ಹಂಚಿಕೆಯಲ್ಲಿ ತಾಂತ್ರಿಕ ದೋಷ ನಡೆದಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿದೆ.

ತಕ್ಷಣವೇ ಈ ದೋಷವನ್ನ ಸರಿಪಡಿಸಿರುವ ಕೆಇಎ, ಮೆರಿಟ್ ಆಧಾರದ ಮೇಲೆ ಅರ್ಹ ಎಸ್‌ಸಿಸಿ (ಎಂಬಿ) ಅಭ್ಯರ್ಥಿಗಳಿಗೆ ಸ್ಲಾಟ್‌ಗಳನ್ನ ಮರುಹಂಚಿಕೆ ಮಾಡಿ 37 ವಿಷಯಗಳ ಪರಿಷ್ಕೃತ ಪಟ್ಟಿ ಸಿದ್ಧಪಡಿಸಿದೆ. ಆದರೆ, ಎಸ್‌ಸಿಸಿ (ಜಿ) [SCC(G)] ಮತ್ತು ಎಸ್‌ಸಿಸಿ (ಎಂಬಿ) ವರ್ಗಗಳನ್ನ ಹೊರತುಪಡಿಸಿ ಉಳಿದ ಯಾವುದೇ ವರ್ಗದ ಅಭ್ಯರ್ಥಿಗಳ ತಾತ್ಕಾಲಿಕ ಫಲಿತಾಂಶದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಕೆಸೆಟ್ ಫಲಿತಾಂಶ ನೋಡುವುದು ಹೇಗೆ? ಮುಂದಿನ ಪ್ರಕ್ರಿಯೆ ಏನು?

ಕೆಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಸಾಮಾನ್ಯ ವರ್ಗದ ಅಭ್ಯರ್ಥಿಗಳು ಎರಡೂ ಪತ್ರಿಕೆಗಳಲ್ಲಿ ಒಟ್ಟಾರೆ ಶೇ. 40 (300ಕ್ಕೆ 120 ಅಂಕ) ಹಾಗೂ ಮೀಸಲಾತಿ ವರ್ಗದ ಅಭ್ಯರ್ಥಿಗಳು ಕನಿಷ್ಠ ಶೇ. 35 (300ಕ್ಕೆ 105 ಅಂಕ) ಗಳಿಸಿರಬೇಕು. ಅಭ್ಯರ್ಥಿಗಳು ಫಲಿತಾಂಶ ನೋಡಲು ಈ ಕೆಳಗಿನ ಸುಲಭ ಹಂತಗಳನ್ನ ಅನುಸರಿಸಬಹುದು:

1. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ cetonline.karnataka.gov.in/kea/kset2026 ಗೆ ಭೇಟಿ ನೀಡಿ.

2. ಮುಖಪುಟದಲ್ಲಿರುವ KSET-2026 Revised Provisional Result ಮತ್ತು ಕಟ್-ಆಫ್ ಅಂಕಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.

KSET 2026: ಸಹಾಯಕ ಪ್ರಾಧ್ಯಾಪಕರಾಗುವವರಿಗೆ ಗುಡ್‌ನ್ಯೂಸ್, ಅರ್ಜಿ ಸಲ್ಲಿಕೆ ಆರಂಭ: ಪರೀಕ್ಷೆ ದಿನಾಂಕ, ಪಟ್ಟಿ ಗಮನಿಸಿ
KSET 2026: ಸಹಾಯಕ ಪ್ರಾಧ್ಯಾಪಕರಾಗುವವರಿಗೆ ಗುಡ್‌ನ್ಯೂಸ್, ಅರ್ಜಿ ಸಲ್ಲಿಕೆ ಆರಂಭ: ಪರೀಕ್ಷೆ ದಿನಾಂಕ, ಪಟ್ಟಿ ಗಮನಿಸಿ

3. ನಿಮ್ಮ ಪರೀಕ್ಷಾ ವಿಷಯಕ್ಕೆ ಸಂಬಂಧಿಸಿದ ಪಿಡಿಎಫ್ ಫೈಲ್ ಅನ್ನಾ ತೆರೆದು, ನಿಮ್ಮ ಅರ್ಜಿ ಸಂಖ್ಯೆ, ಪಡೆದ ಅಂಕಗಳು ಹಾಗೂ ಅರ್ಹತಾ ಸ್ಥಿತಿಯನ್ನ ಪರಿಶೀಲಿಸಿ.

4. ಫಲಿತಾಂಶದ ಪ್ರತಿಯನ್ನ ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ.

ಇದು ಪರಿಷ್ಕೃತ ತಾತ್ಕಾಲಿಕ ಫಲಿತಾಂಶವಾಗಿದ್ದು, ಅಂತಿಮ ಅರ್ಹತಾ ಪ್ರಮಾಣಪತ್ರಗಳನ್ನ ವಿತರಿಸುವ ಮುನ್ನ ಕೆಸೆಟ್-2026 ಅಧಿಸೂಚನೆಯ ನಿಯಮಗಳ ಅನ್ವಯ ಅರ್ಹ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು ಮುಂದಿನ ಪ್ರಕಟಣೆಗಳಿಗಾಗಿ ಕೆಇಎ ವೆಬ್‌ಸೈಟ್ ಅನ್ನಾ ಗಮನಿಸುತ್ತಿರಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+