ಉದ್ಯೋಗಾಕಾಂಕ್ಷಿಗಳಿಗೆ KEA ಗುಡ್‌ನ್ಯೂಸ್: ವಿವಿಧ ಇಲಾಖೆಗಳ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ದಿನಾಂಕ ಮುಂದೂಡಿಕೆ!
KEA Recruitment: ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಡಿಪ್ಲೊಮಾ ಮಟ್ಟದ ವಿದ್ಯಾರ್ಹತೆಯ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇದ್ದ ಕೊನೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕರಾದ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.
ಡಿಪ್ಲೊಮಾ ಮಟ್ಟದ ವಿದ್ಯಾರ್ಹತೆಯ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ದಿನಾಂಕವನ್ನು ನವೆಂಬರ್30ರವರೆಗೆ ವಿಸ್ತರಣೆ ಮಾಡಲಾಗಿದೆ. ಉಳಿಕೆ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಅನ್ವಯಿಸುತ್ತದೆ ಎಂದು ಅವರು ಹೇಳಿದರು.

ನೇಮಕಾತಿ ಆಹ್ವಾನ ಪ್ರಕ್ರಿಯೆ
ಕೆಇಎ ಅಕ್ಟೋಬರ್ 31, 2026 ರಲ್ಲಿ ಕರ್ನಾಟಕ ರಾಜ್ಯದ ವಿವಿಧ ಇಲಾಖೆ/ಸಂಸ್ಥೆ/ನಿಗಮ/ಮಂಡಳಿಗಳಲ್ಲಿನ ಕಲ್ಯಾಣ ಕರ್ನಾಟಕ ಸ್ಥಳಿಯ ವೃಂದದಲ್ಲಿ ಖಾಲಿಯಿರುವ ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2021 ಹಾಗೂ ತಿದ್ದುಪಡಿ ನಿಯಮಗಳನ್ವಯ ವಿವಿಧ ಗ್ರೂಪ್ -ಸಿ ವೃಂದದ ನೇರ ನೇಮಕಾತಿಗೆ ಆಹ್ವಾನಿಸಿತ್ತು.
ಡಿಪ್ಲೋಮಾ ಮಟ್ಟದ ವಿದ್ಯಾರ್ಹತೆ / ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಹಾಗೂ ಒಂದೇ ಪಠ್ಯಕ್ರಮ ಇರುವ ತಾಂತ್ರಿಕ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುಲು ಸೂಚಿಸಲಾಗಿತ್ತು. ನವೆಂಬರ್ 26 ವರೆಗೆ ಹಾಗೂ ಶುಲ್ಕ ಪಾವತಿಸಲು, ನವೆಂಬರ್ 27,2026ರ ವರೆಗೆ ಕಾಲಾವಕಾಶ ನೀಡಲಾಗಿತ್ತು.
ಸದರಿ ಅಭ್ಯರ್ಥಿಗಳ ಒತ್ತಾಯದ ಮೇರೆಗೆ ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹಾಗೂ ಶುಲ್ಕವನ್ನು ಪಾವತಿಸಲು ನವೆಂಬರ್ 30ರ ವರೆಗೆ ವಿಸ್ತರಣೆ ಮಾಡಲಾಗಿದೆ. ಉಳಿದಂತೆ ಅಕ್ಟೋಬರ್ 31, 2026 ರ ಅಧಿಸೂಚನೆಯಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.
ನವಂಬರ್ 27ರಿಂದ ಕ್ಯೂಆರ್ ಕೋಡ್ ಹಾಜರಾತಿ!
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಮುಂದಿನ ಎಲ್ಲ ಪರೀಕ್ಷೆಗಳಲ್ಲಿ ಪಾರದರ್ಶಕತೆ ತರಲು ಕೆಇಎ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಂದಿನ ಎಲ್ಲ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳ ಹಾಜರಾತಿಯನ್ನು ಇಂದು ಬಿಡುಗಡೆ ಮಾಡಿದ KEAEV ಆಪ್ ಆಧಾರದಲ್ಲಿ ಕ್ಯೂ ಆರ್ ಕೋಡ್ ಮೂಲಕವೇ ಪಡೆಯಲು ಕೆಇಎ ಮುಂದಾಗಿದೆ.
ಇದುವರೆಗೂ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳ ನೆರವಿನಿಂದ ಮೊಬೈಲ್ ಆ್ಯಪ್ ಮೂಲಕ ಅಭ್ಯರ್ಥಿಗಳ ನೈಜತೆ ಪರಿಶೀಲಿಸಲಾಗುತ್ತಿತ್ತು. ಇದೀಗ ಮತ್ತಷ್ಟು ಮುಂದುವರಿದು ಪರೀಕ್ಷಾ ಮೇಲ್ವಿಚಾರಕರ ನೆರವಿಂದ ಕ್ಯೂಆರ್ ಕೋಡ್ ಮೂಲಕ ಅಭ್ಯರ್ಥಿಗಳನ್ನು ಖುದ್ದು ಪರಿಶೀಲಿಸಲಾಗುತ್ತದೆ ಎಂದು ಕೆಇಎ ತಿಳಿಸಿದೆ.




Click it and Unblock the Notifications
