Ration Card: ರೇಷನ್‌ ಕಾರ್ಡ್‌ದಾರರಿಗೆ ಅಕ್ಕಿ ಬದಲು ಡಿಜಿಟಲ್ ಕರೆನ್ಸಿ; ಇಲ್ಲಿದೆ ವಿವರ

Ration Card: ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ (ಪಿಡಿಎಸ್) ಪಾರದರ್ಶಕತೆ ತರುವ ಹಾಗೂ ಅಕ್ಕಿಯ ಕಾಳಸಂತೆ ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ಸರ್ಕಾರ ಮಹತ್ವದ ಹೆಜ್ಜೆಯನ್ನಿಡಲು ಮುಂದಾಗಿದೆ. ಇಲ್ಲಿದೆ ನೋಡಿ ಈ ಕುರಿತ ಸಂಪೂರ್ಣ ಮಾಹಿತಿ.

ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಅಡಿಯಲ್ಲಿ ಬರುವ ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಆದ್ಯತಾ ಕುಟುಂಬ (ಪಿಎಚ್‌ಎಚ್/ಬಿಪಿಎಲ್) ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದ ಪಾಲಿನ ಅಕ್ಕಿಯ ಬದಲಾಗಿ, ಪ್ರತಿ ತಿಂಗಳು ಫಲಾನುಭವಿಗಳ ನೋಂದಾಯಿತ ಮೊಬೈಲ್‌ಗೆ 'ಡಿಜಿಟಲ್ ವ್ಯಾಲೆಟ್' ಮೂಲಕ ಹಣ (ಡಿಜಿಟಲ್ ಕರೆನ್ಸಿ) ಜಮೆ ಮಾಡುವ ವ್ಯವಸ್ಥೆ ಜಾರಿಗೆ ಬರಲಿದೆ. ಪ್ರಸ್ತುತ ಕರ್ನಾಟಕದಲ್ಲಿ ಎಎವೈ ಕಾರ್ಡ್‌ಗಳಿಗೆ ತಿಂಗಳಿಗೆ 35 ಕೆ.ಜಿ. ಹಾಗೂ ಬಿಪಿಎಲ್‌ ಕಾರ್ಡ್‌ದಾರರಿಗೆ ಪ್ರತಿ ಸದಸ್ಯರಿಗೆ ಕೇಂದ್ರದ 5 ಕೆ.ಜಿ. ಮತ್ತು ರಾಜ್ಯದ 5 ಕೆ.ಜಿ. ಸೇರಿ ಒಟ್ಟು 10 ಕೆ.ಜಿ. ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ.

Ration Card Cash Instead of Free Rice Central Government Plans Digital Wallet System know detail

ಇನ್ನೂ ಇದರಿಂದ ನ್ಯಾಯಬೆಲೆ ಅಂಗಡಿಯವರು ತೂಕದಲ್ಲಿ ಮೋಸ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಗ್ರಾಹಕ ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರು ಪಾರದರ್ಶಕತೆ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ರಾಜ್ಯದ ಒಟ್ಟು ಪಡಿತರ ಚೀಟಿಗಳ ವಿವರ

* ಅಂತ್ಯೋದಯ ಅನ್ನ ಯೋಜನೆ (ಎಎವೈ): 10,44,373 ಕಾರ್ಡ್‌ಗಳು (42,63,986 ಫಲಾನುಭವಿಗಳು)
* ಪಿಎಚ್‌ಎಚ್/ಬಿಪಿಎಲ್: 1,14,47,467 ಕಾರ್ಡ್‌ಗಳು (4,03,41,377 ಫಲಾನುಭವಿಗಳು)
* ಒಟ್ಟು 1,24,91,840 ಪಡಿತರ ಚೀಟಿಗಳಿದ್ದು, 4,46,05,363 ಫಲಾನುಭವಿಗಳಿದ್ದಾರೆ.

ಹೊಸ ವ್ಯವಸ್ಥೆ ಕೆಲಸ ಮಾಡುವುದು ಹೇಗೆ?

ಓಪನ್ ಮಾರ್ಕೆಟ್ ಸೇಲ್ಸ್ ಸ್ಕೀಮ್ (ಓಎಂಎಸ್‌ಎಸ್) ದರದ ಆಧಾರದ ಮೇಲೆ ಪ್ರತಿ ತಿಂಗಳು ಅಕ್ಕಿಯ ಬೆಲೆ ನಿಗದಿಪಡಿಸಿ, ಕೆ.ಜಿಗೆ ಅಂದಾಜು 40 ರಿಂದ 45 ರೂಪಾಯಿಗಳಂತೆ ಕೇಂದ್ರದ ಪಾಲಿನ ಮೊತ್ತವನ್ನು ಫಲಾನುಭವಿಗಳ ಮೊಬೈಲ್ ವ್ಯಾಲೆಟ್‌ಗೆ ಡಿಜಿಟಲ್ ಕರೆನ್ಸಿ ರೂಪದಲ್ಲಿ ವರ್ಗಾಯಿಸಲಾಗುತ್ತದೆ. ಈ ಹಣಕ್ಕೆ 3 ರಿಂದ 6 ತಿಂಗಳ ಕಾಲಮಿತಿ ಇರಲಿದ್ದು, ಅಷ್ಟರೊಳಗೆ ಬಳಸದಿದ್ದರೆ ಮಾನ್ಯತೆ ರದ್ದಾಗುತ್ತದೆ.

ಗ್ರಾಹಕರು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ತಮಗೆ ಬೇಕಾದಷ್ಟು ಅಕ್ಕಿಯನ್ನು ಖರೀದಿಸಬಹುದು. ಎಷ್ಟು ಕೆ.ಜಿ. ಅಕ್ಕಿ ಪಡೆಯಲಾಗುತ್ತದೆಯೋ ಅಷ್ಟೇ ಹಣ ವ್ಯಾಲೆಟ್‌ನಿಂದ ಕಡಿತಗೊಳ್ಳುತ್ತದೆ ಮತ್ತು ಉಳಿದ ಹಣ ಖಾತೆಯಲ್ಲೇ ಸುರಕ್ಷಿತವಾಗಿರುತ್ತದೆ.

ಡಿಜಿಟಲ್ ಕರೆನ್ಸಿಯ ಪ್ರಮುಖ ಪ್ರಯೋಜನಗಳು

* 'ಒನ್ ನೇಷನ್ ಒನ್ ಕಾರ್ಡ್' ಯೋಜನೆಯಡಿ ದೇಶದ ಯಾವುದೇ ಮೂಲೆಯಲ್ಲೂ ಪಡಿತರ ಪಡೆಯಬಹುದು.
* ಅಕ್ರಮಕ್ಕೆ ಬ್ರೇಕ್: ನಕಲಿ ಕಾರ್ಡ್‌ಗಳು, ಅನರ್ಹ ಫಲಾನುಭವಿಗಳು, ಮಧ್ಯವರ್ತಿಗಳ ಹಾವಳಿ ಮತ್ತು ಕಾಳಸಂತೆಯಲ್ಲಿ ಅಕ್ಕಿ ಮಾರಾಟವಾಗುವುದನ್ನು ಸಂಪೂರ್ಣವಾಗಿ ತಡೆಯಬಹುದು.
* ತೂಕದಲ್ಲಿ ಮೋಸವಿಲ್ಲ: ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಳತೆಗೆ ತಕ್ಕಂತೆ ಹಣ ಪಾವತಿಸುವುದರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ತೂಕದ ವಂಚನೆಗೆ ಅವಕಾಶವಿರುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದೆಡೆ ಈ ಬೆಳವಣಿಗೆಯ ನಡುವೆ ನ್ಯಾಯಬೆಲೆ ಅಂಗಡಿ ಮಾಲೀಕರು ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. 'ಅಕ್ಕಿ ದುರ್ಬಳಕೆಯಾಗುತ್ತಿದೆ ಎನ್ನುವುದಾದರೆ, ಕೇಂದ್ರ ಸರ್ಕಾರ 2 ಕೆ.ಜಿ. ಅಕ್ಕಿ ಹಾಗೂ 3 ಕೆ.ಜಿ. ಗೋಧಿ ವಿತರಿಸಲಿ. ಇತ್ತೀಚೆಗೆ ಮಧುಮೇಹ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಜನರು ಅಕ್ಕಿಗಿಂತ ಗೋಧಿಗೆ ಹೆಚ್ಚಿನ ಬೇಡಿಕೆ ಇಡುತ್ತಿದ್ದಾರೆ. ಇಲ್ಲವೇ ಹಳೆಯ ಪದ್ಧತಿಯನ್ನೇ ಮುಂದುವರೆಸಲಿ. ಇದರ ಜೊತೆಗೆ ನಮಗೆ ಪ್ರತಿ ಕ್ವಿಂಟಾಲ್‌ಗೆ ನೀಡುತ್ತಿರುವ 150 ರೂಪಾಯಿ ಕಮಿಷನ್ ಅನ್ನು 250 ರೂಪಾಯಿಗೆ ಏರಿಸಬೇಕು,' ಎಂದು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+