ಆಶಾ ಕಾರ್ಯಕರ್ತೆಯರಿಗೆ ಸಿಹಿಸುದ್ದಿ? ಆರ್ಥಿಕ ಇಲಾಖೆ ಜೊತೆ ಚರ್ಚೆ ನಡೆಸುವುದಾಗಿ ಸಿಎಂ ಭರವಸೆ

ಬೆಂಗಳೂರು: ನಿಮ್ಮ ಸಮಸ್ಯೆಗಳ ಬಗ್ಗೆ ನಮಗೆ ಅರಿವಿದೆ. ನಾವು ಅದಕ್ಕೆ ಸೂಕ್ತ ಪರಿಹಾರ ನೀಡುತ್ತೇವೆ. ಇಂದು ಸಂಜೆ ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ. ನಮ್ಮ ಮೇಲೆ ನಂಬಿಕೆಯನ್ನಿಡಿ. ನಾಡಿನ ಮುಖ್ಯಮಂತ್ರಿಯಾಗಿ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ, ತಾಯಂದಿರಿಗೆ ನಮ್ರತೆಯಿಂದ ವಿನಂತಿಸುತ್ತೇನೆ. ನಿಮ್ಮ ಪ್ರತಿಭಟನೆ ಹಿಂತೆಗೆದುಕೊಳ್ಳಿ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಪ್ರತಿಭಟನಾನಿರತ ಆಶಾ ಕಾರ್ಯಕರ್ತೆಯರಿಗೆ ಮತ್ತೊಮ್ಮೆ ಮನವಿ ಮಾಡಿದರು.

ವಿಧಾನಸೌಧದ ಬಳಿ ಮಾಧ್ಯಮಗಳಿಗೆ ಜೊತೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ನಾವು ನಿಮ್ಮ ಪರವಾಗಿದ್ದೇವೆ. ಸರ್ಕಾರವನ್ನು ಹೆದರಿಸಬೇಡಿ. ಆಶಾ ಕಾರ್ಯಕರ್ತೆಯರು ಮೊದಲು ಪ್ರತಿಷ್ಠೆಯನ್ನು ಬಿಡಬೇಕು. ಬೇರೆಯವರು ನಿಮ್ಮನ್ನು ತಮ್ಮ ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಅವರು ನಿಮಗೆ ಯಾವುದೇ ಸಹಾಯ ಮಾಡುವುದಿಲ್ಲ. ಇದರಲ್ಲಿ ಬಹಳ ಗಂಭೀರ ವಿಚಾರಗಳೂ ಇವೆ. ಆಶಾಕಾರ್ಯಕರ್ತರು ಒಬ್ಬರೆ ಅಲ್ಲ, ಈ ರೀತಿ ಪ್ರತಿಭಟನೆ ಮಾಡಲು ಹಲವು ಮಂದಿ ಸಿದ್ಧರಾಗುತ್ತಿದ್ದಾರೆ ಎಂದರು.

DK Shivakumar Appeals to Protesting ASHA Workers to Withdraw Protest Assures Solution to Their Demands

ಬಿಜೆಪಿ ನಾಯಕರು ಕೇಂದ್ರದ ಮೇಲೆ ಒತ್ತಡ ಹೇರುತ್ತಿಲ್ಲ ಯಾಕೆ?

ಕೇಂದ್ರ ಸರ್ಕಾರವನ್ನು ಏಕೆ ಈ ರೀತಿ ಒತ್ತಾಯ ಮಾಡುತ್ತಿಲ್ಲ? ಪ್ರತಿಭಟನೆ ಸ್ಥಳಕ್ಕೆ ಹೋಗಿ ಬಂದ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಮೇಲೆ ಏಕೆ ಒತ್ತಡ ಹೇರುತ್ತಿಲ್ಲ? ನಾವು ಪ್ರಣಾಳಿಕೆಯಲ್ಲಿ ಹೇಳಿದಂತೆ ಈಗಾಗಲೇ ಕೊಟ್ಟಿದ್ದೇವೆ. ಈಗಲೂ ಸಮಸ್ಯೆಗೆ ಪರಿಹಾರವನ್ನು ಕೊಡುತ್ತೇವೆ ಎಂದು ಹೇಳಿದರು.

ನಾಲ್ಕು ಗ್ಯಾರಂಟಿಗಳು ನಿಮಗೆ ನೀಡಿದ್ದೇವೆ

'ಗ್ಯಾರಂಟಿಗಳು ಜಾರಿ ಮಾಡುವಾಗ, ನಿಮ್ಮ ಒಳಿತಿಗಾಗಿ ಚರ್ಚಿಸಿ ತಮಗೂ ಉಪಯೋಗವಾಗುವಂತೆ ಜಾರಿ ಮಾಡಿದ್ದೇವೆ. ಮನೆ ಯಜನಮಾನಿ ಅನುಕೂಲವಾಗುವಂತೆ ಉಚಿತ ವಿದ್ಯುತ್, 2 ಸಾವಿರ ರೂ ನೀಡುತ್ತಿದ್ದೇವೆ. ತಮಗೂ ಈ ಬಗ್ಗೆ ಅರಿವಿದೆ. ನಿಮ್ಮನ್ನು ಹಲವು ಸಲ ಭೇಟಿಯಾಗಿದ್ದೇನೆ. ನೆಲಮಂಗಲಕ್ಕೆ ಹೋಗಿ ಭೇಟಿ ಮಾಡಿ ಬಂದಿದ್ದೇನೆ. ಹೆಣ್ಣು ಎಂದರೆ ಕುಟುಂಬದ ಕಣ್ಣು. ಹೆಣ್ಣು ಮಕ್ಕಳ ಬಗ್ಗೆ ಕಾಳಜಿ, ನಿಮ್ಮ ಸಮಸ್ಯೆಗಳ ಬಗ್ಗೆ ನಮಗೆ ಅರಿವಿದೆ" ಎಂದರು.

ಆಶಾ ಕಾರ್ಯಕರ್ತರು ಇಲ್ಲದೆ ಇದ್ದರು ನಡೆಯುತ್ತದೆ ಎಂಬ ಆರೋಗ್ಯ ಸಚಿವರ ಹೇಳಿಕೆಯ ಬಗ್ಗೆ ಕೇಳಿದಾಗ, "ಇಲ್ಲ ಅದೆಲ್ಲಾ ಸುಳ್ಳು. ನಮಗೆ ಎಲ್ಲರೂ ಬೇಕು. ನರೇಂದ್ರಸ್ವಾಮಿ ಅವರ ಹೇಳಿಕೆಯನ್ನು ತಿರುಚಿದ್ದಾರೆ" ಎಂದು ಹೇಳಿದರು.

ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಕಾಂಗ್ರೆಸ್ ಶಾಸಕ ಬೆಂಬಲ; ಕನಿಷ್ಠ ವೇತನಕ್ಕೆ ಆಗ್ರಹ, ಸಿಎಂಗೆ ಪತ್ರ!
ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಕಾಂಗ್ರೆಸ್ ಶಾಸಕ ಬೆಂಬಲ; ಕನಿಷ್ಠ ವೇತನಕ್ಕೆ ಆಗ್ರಹ, ಸಿಎಂಗೆ ಪತ್ರ!

ಆನೆಗಳ ನಿಯಂತ್ರಣ ಸುಲಭವಲ್ಲ

ಆನೆಗಳ‌ ಸಂಘರ್ಷದ ಬಗ್ಗೆ ಕೇಳಿದಾಗ, "ಆನೆಗಳನ್ನು ನಿಯಂತ್ರಣ ಮಾಡುವುದಕ್ಕೆ ಆಗುವುದಿಲ್ಲ. ಅದು ಸುಲಭದ ಕೆಲಸವೂ ಅಲ್ಲ. ನಮ್ಮ ಮನೆ ಪಕ್ಕದಲ್ಲೇ 550 ಆನೆಗಳು ಹಾದು ಹೋಗಿವೆ. ಚಿಕ್ಕಮಗಳೂರು ಶಾಸಕರು ಕೇಳುತ್ತಿರುವುದರಲ್ಲಿ ತಪ್ಪೇನಿಲ್ಲ. ಆದರೆ ಗಡಿಗಳಲ್ಲಿ ಅಷ್ಟು ದೊಡ್ಡ ಆನೆ ಹಿಂಡನ್ನು ಕಳಿಸುವುದು ಸರಿಯಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಚಿಕ್ಕಮಗಳೂರನ್ನು, ಹಾಸವನ್ನೂ ನಾವು ರಕ್ಷಣೆ ಮಾಡಬೇಕು. ಎಲ್ಲಾ ಕಡೆ ಪ್ಲಾಂಟೇಷನ್ ಗಳು ಇವೆ" ಎಂದರು.

ಮೊನ್ನೆ ಕೊಡಗಿನ ಐಎಫ್ಎಸ್ ಅಧಿಕಾರಿ ಕುಟುಂಬದವರ ಜತೆ ಮಾತನಾಡುತ್ತಿದ್ದೆ. ಅವರು ಇದ್ದಕ್ಕಿದ್ದಂತೆ ಮನೆ ತೋಟದ ಒಳಗೇ ಆನೆ ಬಂದು ಬಿಡುತ್ತದೆ. ಎಲ್ಲಾ ಕಡೆ ಹೀಗೆ ಆಗುತ್ತಿದೆ ಎಂದು ಹೇಳಿದರು. ಈ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ದಾರಿಗಳನ್ನು ಹುಡುಕುತ್ತಿದ್ದೇವೆ. ಅರಣ್ಯ ಸಚಿವ ರಾಮಲಿಂಗರೆಡ್ಡಿಯವರು ಇದರ ಬಗ್ಗೆ ಕಾಳಜಿ ವಹಿಸಿದ್ದಾರೆ. ಶಾಸಕರಾದ ನಯನಾ ಮೋಟಮ್ಮ ಮುಂತಾದ ಶಾಸಕರೊಂದಿಗೂ ಮಾತನಾಡಿ ಸಮಸ್ಯೆ ಬಗೆಹರಿಸುತ್ತಿದ್ದಾರೆ ಎಂದರು.

ಕ್ಲೀನ್ ಚಿಟ್ ಸಿಕ್ಕಿರುವ ಮಾಜಿ ಸಚಿವ ನಾಗೇಂದ್ರ ಅವರನ್ನು ಮತ್ತೊಮ್ಮೆ ಕ್ಯಾಬಿನೆಟ್ ಗೆ ಸೇರಿಸಿಕೊಳ್ಳುತ್ತೀರ ಎನ್ನುವ ಕುರಿತು ಮಾತನಾಡಿ, ಈ ಬಗ್ಗೆ ಪತ್ರಿಕೆಗಳಲ್ಲಿ ಮಾತ್ರ ಓದಿದ್ದೇನೆ. ನಾನು ಯಾವುದೇ ತನಿಖೆಗೆ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಆಶಾ ಕಾರ್ಯಕರ್ತೆಯರೇ ಪ್ರತಿಭಟನೆ ಕೈಬಿಡಿ, ನಿಮ್ಮ ಸಮಸ್ಯೆಗೆ ಖಂಡಿತ ಪರಿಹಾರ: ಜಪಾನ್‌ನಿಂದಲೇ ಡಿಕೆಶಿ ಮನವಿ
ಆಶಾ ಕಾರ್ಯಕರ್ತೆಯರೇ ಪ್ರತಿಭಟನೆ ಕೈಬಿಡಿ, ನಿಮ್ಮ ಸಮಸ್ಯೆಗೆ ಖಂಡಿತ ಪರಿಹಾರ: ಜಪಾನ್‌ನಿಂದಲೇ ಡಿಕೆಶಿ ಮನವಿ

ಸಂವಿಧಾನ ಉಳಿಸುವುದು ನಮ್ಮ ಜವಾಬ್ದಾರಿ

ಭಾರತದ ಪ್ರತಿಯೊಬ್ಬ ಪ್ರಜೆಗೆ ಬೆಳಕನ್ನು ನೀಡಿದ ಮಹಾನ್ ಚೇತನ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸಂವಿಧಾನ ದಿನದಂದು ನಾವು ಸ್ಮರಿಸಬೇಕು. ನಾನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾದಾಗ ಮಾಡಿದ ಮೊದಲ ಕೆಲಸ, ರೆಹಮಾನ್ ಖಾನ್ ಅವರ ಕೈಯಲ್ಲಿ, ಸಂವಿಧಾನದ ಪೀಠಿಕೆ ಓದಿಸಿ ಅಲ್ಲಿಂದಲೇ ಸಂವಿಧಾನ ಮಹತ್ವವನ್ನು ಸಾರುವ ಕೆಲಸ ಪ್ರಾರಂಭ ಮಾಡಿದ್ದೇನೆ. ಹಿಂದೆ ಮಹದೇವಪ್ಪನವರು ಬಹಳ ಜವಾಬ್ದಾರಿಯಿಂದ ಸಂವಿಧಾನದ ಆಶಯಗಳು ಪ್ರತಿ ಮಕ್ಕಳಿಗೂ, ಜನರಿಗೂ ತಲುಪಿಸುವ ಕೆಲಸ ಮಾಡಿದ್ದರು. ಈಗ ಮುನಿಯಪ್ಪನವರು ಆ ಕೆಲಸ ಕಾಳಜಿಯಿಂದ ಮಾಡುತ್ತಿದ್ದಾರೆ ಎಂದರು.

​ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಂವಿಧಾನದ ಪೀಠಿಕೆಯನ್ನು ಶಾಲಾ- ಕಾಲೇಜುಗಳಲ್ಲಿ ಮತ್ತು ಸರ್ಕಾರದ ಎಲ್ಲಾ ಕಾರ್ಯಕ್ರಮಗಳಲ್ಲಿ ಓದಲು ಆದೇಶ ನೀಡಲಾಯಿತು. ಸಂವಿಧಾನದ ಉಳಿಸಿಕೊಂಡರೆ ಮಾತ್ರ ಬದುಕಲು ಸಾಧ್ಯ ಎಂಬ ತಿಳುವಳಿಕೆ ನೀಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು.

ಮಹಾತ್ಮ ಗಾಂಧೀಜಿಯವರು ಕಾಂಗ್ರೆಸ್ ಪಕ್ಷದ ಜವಾಬ್ದಾರಿ ತೆಗೆದುಕೊಂಡು 100 ವರ್ಷ ಪೂರೈಸಿದ ಸಂದರ್ಭದಲ್ಲಿ 'ಜೈ ಭೀಮ್, ಜೈ ಬಾಪು, ಜೈ ಸಂವಿಧಾನ್' ಎಂಬ ಹೆಸರಿನಲ್ಲಿ ಕಾರ್ಯಕ್ರಮ ರೂಪಿಸಿದ್ದೆವು. ಪ್ರತಿಯೊಬ್ಬ ನಾಗರಿಕರ ಸಂಕಷ್ಟದ ಸಮಯದಲ್ಲಿ ಸಂವಿಧಾನ ನೆರವಿಗೆ ಬರುತ್ತದೆ. ನ್ಯಾಯಾಲಯಕ್ಕೆ ಹೋಗಿ ನ್ಯಾಯ ದೊರಕಿಸಿಕೊಳ್ಳಲು ಸಾಧ್ಯವಾಗಿರುವುದು ಸಂವಿಧಾನದಿಂದಲೇ.

ನಮ್ಮ ನಾಯಕರಾದ ರಾಹುಲ್ ಗಾಂಧಿಯವರು, ಪ್ರಿಯಾಂಕಾ ಗಾಂಧಿಯವರು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಮತ್ತು ನಾನು ಕೂಡ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಸಂವಿಧಾನ ಪುಸ್ತಕವನ್ನು ಇಟ್ಟುಕೊಂಡು ಅದಕ್ಕೆ ಗೌರವ ತೋರಿದ್ದೇವೆ; ಸಂವಿಧಾನ ನಮ್ಮೆಲ್ಲರ ಬದುಕಿನ ದೊಡ್ಡ ಪ್ರಾಣ ಗ್ರಂಥ. ​ಅದರ ಮೇಲೆ ನಂಬಿಕೆ ಇಟ್ಟು ಬದುಕುತ್ತಿದ್ದೇವೆ. ಅದನ್ನು ಉಳಿಸಿಕೊಂಡು ಹೋಗುವ ಕೆಲಸವನ್ನು ನಾವೆಲ್ಲರೂ ಸೇರಿ ಒಟ್ಟಾಗಿ ಮಾಡೋಣ" ಎಂದು ಕರೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+