Gold Price Today: ಚಿನ್ನ ಖರೀದಿದಾರರಿಗೆ ಮತ್ತೆ ಶಾಕ್: ಮತ್ತೆ ಏರಿಕೆ ಕಂಡ ಬಂಗಾರ; ಇಲ್ಲಿದೆ ದರ ಪಟ್ಟಿ!

ಬೆಂಗಳೂರು: ದೇಶದಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯ ಹಾದಿಗೆ ಮರಳಿದೆ. ನಿನ್ನೆ ಭಾರೀ ಇಳಿಕೆ ಕಂಡಿದ್ದ ಚಿನ್ನದ ದರ ಇಂದು ಗ್ರಾಮ್‌ಗೆ ₹120ರಷ್ಟು ಹೆಚ್ಚಳವಾಗಿದೆ. ಇದರಿಂದ ಚಿನ್ನ ಖರೀದಿಸಲು ಕಾಯುತ್ತಿದ್ದ ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಬೆಳ್ಳಿ ಬೆಲೆಯಲ್ಲಿ ಸದ್ಯ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಲವು ಕಡೆ ಚಿನ್ನದ ಬೆಲೆ ಇಳಿಕೆಯ ಪ್ರವೃತ್ತಿ ಮುಂದುವರಿದಿದೆ. ಭಾರತದಲ್ಲಿಯೂ ಸ್ಪಾಟ್ ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದ್ದರೂ, ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ (MCX) ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಭರ್ಜರಿ ಏರಿಕೆ ದಾಖಲಿಸಿದೆ. ಹೀಗಾಗಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಏರಿಳಿತ ಮುಂದುವರಿದಿದೆ.

Gold Price Today Nov 26 Gold Rates Rise by 120 Per Gram Check 22K 24K Gold and Silver Prices in India

ನವೆಂಬರ್ 26ರ ಮಾರುಕಟ್ಟೆ ದರದ ಪ್ರಕಾರ, ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,15,400ಕ್ಕೆ ತಲುಪಿದೆ. ಅದೇ ರೀತಿ 10 ಗ್ರಾಂ 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ ₹1,25,890 ಆಗಿದೆ. 18 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ ₹94,420ರಷ್ಟಿದೆ. ಇನ್ನು ಬೆಳ್ಳಿ ಬೆಲೆಯಲ್ಲಿಯೂ ಗ್ರಾಹಕರು ಗಮನಿಸಬೇಕಾದ ದರವಿದೆ. ಪ್ರಸ್ತುತ 100 ಗ್ರಾಂ ಬೆಳ್ಳಿ ಬೆಲೆ ₹16,500 ಆಗಿದ್ದು, ಒಂದು ಗ್ರಾಂ ಬೆಳ್ಳಿಗೆ ₹165 ದರ ನಿಗದಿಯಾಗಿದೆ.

ಬೆಲೆ ಕಡಿಮೆಯಾಗಿದೆ ಅಂತ ಬೇಕಾಬಿಟ್ಟಿ ಚಿನ್ನ ಕೊಳ್ಳುವ ಮುನ್ನ ಎಚ್ಚರ! ITAT ಪ್ರಕಾರ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು?
ಬೆಲೆ ಕಡಿಮೆಯಾಗಿದೆ ಅಂತ ಬೇಕಾಬಿಟ್ಟಿ ಚಿನ್ನ ಕೊಳ್ಳುವ ಮುನ್ನ ಎಚ್ಚರ! ITAT ಪ್ರಕಾರ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು?

ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟು?

ರಾಜಧಾನಿ ಬೆಂಗಳೂರಿನಲ್ಲಿ ನವೆಂಬರ್ 26ರಂದು 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,15,400 ಇದೆ. 24 ಕ್ಯಾರಟ್ ಚಿನ್ನದ 10 ಗ್ರಾಂ ದರ ₹1,25,890 ಆಗಿದೆ. 18 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ ₹9,442 ಆಗಿದೆ. ಬೆಳ್ಳಿ ಬೆಲೆ ಒಂದು ಗ್ರಾಂಗೆ ₹165ರಂತೆ ಮುಂದುವರಿದಿದೆ.

ನವೆಂಬರ್ 26ರ ಚಿನ್ನದ ದರ

- 24 ಕ್ಯಾರಟ್ ಚಿನ್ನದ 1 ಗ್ರಾಂ: ₹12,589
- 22 ಕ್ಯಾರಟ್ ಚಿನ್ನದ 1 ಗ್ರಾಂ: ₹11,540
- 18 ಕ್ಯಾರಟ್ ಚಿನ್ನದ 1 ಗ್ರಾಂ: ₹9,442
- 10 ಗ್ರಾಂ 24 ಕ್ಯಾರಟ್ ಚಿನ್ನ: ₹1,25,890
- 10 ಗ್ರಾಂ 22 ಕ್ಯಾರಟ್ ಚಿನ್ನ: ₹1,15,400

ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ! ಮೋದಿ ಮಹತ್ವದ ಸಂದೇಶ, ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ?
ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ! ಮೋದಿ ಮಹತ್ವದ ಸಂದೇಶ, ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ?

ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ

- ಬೆಂಗಳೂರು: ₹11,540
- ಚೆನ್ನೈ: ₹11,540
- ಮುಂಬೈ: ₹11,540
- ದೆಹಲಿ: ₹11,555
- ಕೋಲ್ಕತಾ: ₹11,540
- ಕೇರಳ: ₹11,540
- ಅಹಮದಾಬಾದ್: ₹11,545

ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ

ನವೆಂಬರ್ 26ರಂದು ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ ಬಹುತೇಕ ಒಂದೇ ರೀತಿಯಲ್ಲಿದೆ. ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ, ಕೋಲ್ಕತಾ, ಕೇರಳ, ಅಹಮದಾಬಾದ್, ಜೈಪುರ, ಲಕ್ನೋ, ಭುವನೇಶ್ವರ ಮತ್ತು ಪುಣೆ ನಗರಗಳಲ್ಲಿ ಒಂದು ಗ್ರಾಂ ಬೆಳ್ಳಿ ಬೆಲೆ ₹165ರಷ್ಟಿದೆ. ಅಂದರೆ, 10 ಗ್ರಾಂ ಬೆಳ್ಳಿಗೆ ₹1,650 ಹಾಗೂ 100 ಗ್ರಾಂ ಬೆಳ್ಳಿಗೆ ₹16,500 ಪಾವತಿಸಬೇಕಾಗುತ್ತದೆ.

ಚಿನ್ನ ಖರೀದಿಸುವ ಮುನ್ನ ಗಮನಿಸಿ

ಚಿನ್ನ ಮತ್ತು ಬೆಳ್ಳಿ ಬೆಲೆಗಳು ಪ್ರತಿದಿನವೂ ಅಂತರರಾಷ್ಟ್ರೀಯ ಮಾರುಕಟ್ಟೆಯ ಬೆಳವಣಿಗೆಗಳು, ಡಾಲರ್ ಮೌಲ್ಯ, ಬೇಡಿಕೆ ಹಾಗೂ ದೇಶೀಯ ಮಾರುಕಟ್ಟೆಯ ವಹಿವಾಟಿನ ಆಧಾರದ ಮೇಲೆ ಬದಲಾಗುತ್ತವೆ. ಇಲ್ಲಿ ನೀಡಿರುವ ದರಗಳು ಸೂಚಕ ಮಾರುಕಟ್ಟೆ ದರಗಳಾಗಿದ್ದು, ಆಭರಣ ಮಳಿಗೆಗಳಲ್ಲಿ ಅಂತಿಮ ಬೆಲೆ ಬದಲಾಗಬಹುದು. ಚಿನ್ನ ಖರೀದಿಸುವಾಗ ಜಿಎಸ್‌ಟಿ, ಮೇಕಿಂಗ್ ಚಾರ್ಜ್ ಮತ್ತು ಇತರ ಶುಲ್ಕಗಳನ್ನು ಸೇರಿಸಿ ಒಟ್ಟು ಮೊತ್ತವನ್ನು ಪರಿಶೀಲಿಸುವುದು ಅಗತ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+