SAP Layoffs: ಜಾಗತಿಕ ಕಂಪನಿ SAP ಬೃಹತ್ ಉದ್ಯೋಗ ವಜಾಗೆ ಸಜ್ಜು! 10,000 ನೌಕರರಿಗೆ ಗೇಟ್‌ಪಾಸ್, ವರದಿ
SAP Layoffs: ಇಂದಿನ ದಿನಗಳಲ್ಲಿ ಐಟಿ, ಕಾರ್ಪೋರೇಟ್ ಕಂಪನಿಗಳಲ್ಲಿ ಉದ್ಯೋಗ ವಜಾ ಸಾಮಾನ್ಯ ಎಂಬಂತಾಗಿದೆ. ಇದೀಗ ಜಾಗತಿಕ ಸಾಪ್ಟವೇರ್ ದಿಗ್ಗಜ ಕಂಪನಿ SAP ತನ್ನ ಉದ್ಯೋಗ ರಂಗದಲ್ಲಿ ದೊಡ್ಡ ಬದಲಾವಣೆ ತರಲಿದ್ದು, 10,000 ನೌಕರರಿಗೆ ಗೇಟ್‌ಪಾಸ್ ಕೊಡಲು ಸಜ್ಜಾಗಿದೆ. ಈ ಬೃಹತ್ ಉದ್ಯೋಗ ಕಡಿತವು ಜರ್ಮನ್ ಸಾಫ್ಟ್‌ವೇರ್ ದೈತ್ಯ ಕಂಪನಿಯಲ್ಲಿ ನಡೆಯಲಿದೆ ಎಂದು ವರದಿ ಆಗಿದೆ. ಮೂರು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿರುವ ನೌಕರರ ಮೇಲೆ ವಜಾ ಕ್ರಮ ಜರುಗಿಸಲಿದೆ ಎನ್ನಲಾಗಿದೆ. ಸದ್ಯ ಕಂಪನಿ ನೌಕರರಲ್ಲಿ ಆತಂಕ ಉಂಟಾಗಿದೆ.
ನೌಕರರ ಪುನರ್ ರಚನೆ ಕಾರ್ಯದ ಭಾಗವಾಗಿ ಕಂಪನಿಯು ಈ ದೊಡ್ಡ ಉದ್ಯೋಗ ವಜಾಗೆ ನಿರ್ಧರಿಸಿದೆ. ಲೇ ಆಫ್ ಜೊತೆಗೆ ಸ್ವಯಂ ಪ್ರೇರಿತ ನೌಕರರ ರಾಜೀನಾಮೆ ಪ್ರಕ್ರಿಯೆ ನಡೆಯುವ ನಿರೀಕ್ಷೆ ಇದೆ. ಒಟ್ಟಾರೆ ಕಂಪನಿಗಳ ಎಲ್ಲ ತಂಡಗಳ ಮೇಲೆ ನೌಕರಿ ಕಡಿತ ಪರಿಣಾಮ ಬೀರಲಿದೆ.

ಜಾಗತಿಕವಾಗಿ ದೊಡ್ಡ ಎಂಟರ್‌ಪ್ರೈಸ್ ಸಾಫ್ಟ್‌ವೇರ್ ತಯಾರಕರಲ್ಲಿ ಒಂದಾಗಿದೆSAP ಕಂಪನಿಯು 1,00,000 ಕ್ಕೂ ಅಧಿಕ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಆರ್ಥಿಕತೆ, ಪೂರೈಕೆ ಸರಪಳಿಗಳು, ಮಾನವ ಸಂಪನ್ಮೂಲಗಳು ಹಾಗೂ ಇತರ ನಿರ್ಣಾಯಕ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದೆ. ಇದೀಗ ಉದ್ಯೋಗ ವಜಾ ಘೋಷಿಸಿದ್ದು, ಯಾವ ವಿಭಾಗದ ನೌಕರರು ಇರಲಿದ್ದಾರೆ ಎಂಬುದು ತಿಳಿಬೇಕಿದೆ.
SAP ಉದ್ಯೋಗ ಕಡಿತಕ್ಕೆ ಕಾರಣವೇನು?
SAP ತನ್ನೆಲ್ಲ ವಹೀವಾಟನ್ನು AI (ಕೃತಕ ಬುದ್ಧಿಮತ್ತೆ) ಮೂಲಕ ಮರುರೂಪಿಸಲು ಮುಂದಾಗಿದೆ. ಕಂಪನಿಗಳಲ್ಲಿ ಹೆಚ್ಚಾಗಿ AI-ಚಾಲಿತ ಸಾಫ್ಟ್‌ವೇರ್ ಪರಿಕರಗಳಿಗೆ ಬೇಡಿಕೆ ಹೆಚ್ಚಾಗಿರುವುದು ಇದೇ ಕಾರಣಕ್ಕೆ. ಎಐ ತಂತ್ರಜ್ಞಾನದಿಂದ ಉತ್ಪಾದನೆ ಆಟೋಮ್ಯಾಟಿಕ್ ಆಗುತ್ತದೆ. ತೀರಾ ಕಡಿಮೆ ನೌಕರರು ಬೇಕಾಗುತ್ತಾರೆ. ಹೀಗಾಗಿ ಸುಧಾರಣೆ, ಖರ್ಚು ನಿಯಂತ್ರಣ ಮತ್ತು ಪ್ರತಿಭೆಗಳ ಮರುರೂಪಿಸುತ್ತಿದೆ.
SAP ಎಲ್ಲ ಸಾಫ್ಟ್‌ವೇರ್ ಪೋರ್ಟ್‌ಫೋಲಿಯೊ ವಿಭಾಗಗಳಲ್ಲಿ AI ವೈಶಿಷ್ಟ್ಯ ಪರಿಚಯಿಸಲಿದೆ. ಅದಕ್ಕಾಗಿ ಸಾಕಷ್ಟು ಹೂಡಿಕೆ ಮಾಡಿದೆ. ಈ ಮೂಲಕ ತನ್ನ ಕಾರ್ಯಾಚರಣೆ ಬಲಗೊಳಿಸಲಿದೆ, ವೇಗಗೊಳಿಸಲು ಮುಂದಾಗಿದೆ. ಅದೆಲ್ಲದರ ಪ್ರಯತ್ನದ ಭಾಗವಾಗಿಯೇ ಉದ್ಯೋಗ ವಜಾ ಮಾಡಲಾಗುತ್ತಿದೆ.
ಇದೇ ಮೊದಲ ನೌಕರರ ಪುನರ್ ರಚನೆ ಅಲ್ಲ!
SAP ಕಂಪನಿಯು ತನ್ನ ನೌಕರರ ಕಾರ್ಯಪಡೆ ಮರು ರೂಪಿಸುವುದು, ಪುನರ್ ರಚಿಸುವುದು ಇದೇ ಮೊದಲೇನಲ್ಲ. 2024ರ ಶುರುವಿನ ಹೊತ್ತಿಗೆ ಇದೇ ಕಂಪನಿ ಅಂದಾಜು 8,000 ನೌಕರರನ್ನು ಮನೆಗೆ ಕಳುಹಿಸಿತ್ತು. ಇದೀಗ ಎಐ ಕಾರ್ಯ ಚಟುವಟಿಕೆ ಮೇಲೆ ಗಮನ ಹರಿಸಲು ಮುಂದಾಗಿದ್ದು, ಮತ್ತೆ ಉದ್ಯೋಗ ವಜಾ ಘೋಷಿಸಿದೆ. ಇಷ್ಟೆಲ್ಲ ಇದ್ದರೂ ಸಹಿತ ಈ ಹಿಂದೆ ಕಂಪನಿಯ ಕೆಲವು ವಿಭಾಗದಲ್ಲಿ ಕೈಗೊಳ್ಳಲಾಗುತ್ತಿದ್ದ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಿರುವುದು ಅಚ್ಚರಿ ಮೂಡಿಸಿದೆ.
ಐಟಿ ಬಿಟಿ, ಜಾಗತಿಕ ಕಂಪನಿಗಳು ಎಐ ಮೂಲಸೌಕರ್ಯ, ಸಾಫ್ಟ್‌ವೇರ್ ಮತ್ತು ಪ್ರತಿಭೆಗಳ ಮೇಲೆ ಅಪಾರ ಹೂಡಿಕೆ ಮಾಡುತ್ತಿವೆ. ತಂತ್ರಜ್ಞಾನ ಆಕ್ರಮಿಸುವ ಜಾಗದಲ್ಲೆಲ್ಲ ನೌಕರರಿಗೆ ಕುತ್ತುಂಟಾಗುತ್ತಿದೆ. ಇದು ಹಸ್ತಚಾಲಿತ ಕಾರ್ಯ ಚಟುವಟಿಕೆ, ಕೆಲಸಗಾರರು ಮತ್ತು ಭವಿಷ್ಯದ ಬೆಳವಣಿಗೆ ಬಗ್ಗೆ ಗಂಭೀರವಾಗಿ ಚಿಂತಿಸುವಂತೆ ಮಾಡಿದೆ.




Click it and Unblock the Notifications
