ಬೆಲೆ ಕಡಿಮೆಯಾಗಿದೆ ಅಂತ ಬೇಕಾಬಿಟ್ಟಿ ಚಿನ್ನ ಕೊಳ್ಳುವ ಮುನ್ನ ಎಚ್ಚರ! ITAT ಪ್ರಕಾರ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು?

ಹೈದರಾಬಾದ್: ಭಾರತೀಯ ಕುಟುಂಬಗಳಲ್ಲಿ ಚಿನ್ನಕ್ಕೆ ಕೇವಲ ಆಭರಣದ ಸ್ಥಾನವಷ್ಟೇ ಅಲ್ಲ, ಅದು ಸಂಪ್ರದಾಯ ಹಾಗೂ ಆಪತ್ಕಾಲದ ಆಸ್ತಿಯೂ ಹೌದು. ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾದಾಗಲೆಲ್ಲಾ ಆಭರಣ ಖರೀದಿಸಲು ಜನರು ಮುಗಿಬೀಳುತ್ತಾರೆ. ಆದರೆ, ಒಂದು ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು? ಆದಾಯ ತೆರಿಗೆ (IT) ಇಲಾಖೆಯ ದಾಳಿ ನಡೆದಾಗ ಮನೆಯಲ್ಲಿರುವ ಕುಟುಂಬದ ಆಭರಣಗಳಿಗೆ ರಕ್ಷಣೆ ಇದೆಯೇ ಎಂಬ ಗೊಂದಲ ಅನೇಕರಲ್ಲಿರುತ್ತದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT) ನೀಡಿರುವ ಮಹತ್ವದ ತೀರ್ಪೊಂದು ಇದೀಗ ದೇಶದ ತೆರಿಗೆದಾರರಿಗೆ ದೊಡ್ಡ ಸ್ಪಷ್ಟನೆ ನೀಡಿದೆ.

How Much Gold Jewellery Can You Keep At Home Hyderabad ITAT Ruling Explains CBDT Limits During IT Raids

807.5 ಗ್ರಾಂ ಚಿನ್ನ ಪತ್ತೆ: ಹೈದರಾಬಾದ್ ಐಟಿಎಟಿ ತೀರ್ಪು ಹೇಳಿದ್ದೇನು?

2011-12ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. 2010ರ ನವೆಂಬರ್ 25ರಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗೋವರ್ಧನನಾಯ್ಡು ಚಿಂತಕುಂಟ ಎಂಬುವವರ ನಿವಾಸದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಒಟ್ಟು 1,054.5 ಗ್ರಾಂ ಅಂದರೆ ನಿವ್ವಳ ತೂಕ 807.5 ಗ್ರಾಂ ಅಷ್ಟು ಚಿನ್ನಾಭರಣ ಪತ್ತೆಯಾಗಿತ್ತು. ಸರ್ಕಾರಿ ಮಾನ್ಯತೆ ಪಡೆದ ಮೌಲ್ಯಮಾಪಕರು ಇದರ ಬೆಲೆಯನ್ನ ₹16,01,975 ಎಂದು ಅಂದಾಜಿಸಿದ್ದರು.

ಈ ಆಭರಣಗಳು ತಮ್ಮ ಪತ್ನಿ, ಪುತ್ರಿ, ಪುತ್ರ ಹಾಗೂ ತಮಗೆ ಸೇರಿದ್ದು, ವಿವಿಧ ಕೌಟುಂಬಿಕ ಸಮಾರಂಭಗಳಲ್ಲಿ ಉಡುಗೊರೆಯಾಗಿ ಬಂದವು ಎಂದು ತೆರಿಗೆದಾರರು ವಿವರಣೆ ನೀಡಿದ್ದರು. ಆದರೆ, ಉಡುಗೊರೆ ಪಡೆದ ನಿಖರ ದಾಖಲೆಗಳಿಲ್ಲ ಎಂದು ವಾದಿಸಿದ್ದ ಮೌಲ್ಯಮಾಪನ ಅಧಿಕಾರಿ, ಸಂಪೂರ್ಣ 16.01 ಲಕ್ಷ ರೂಪಾಯಿ ಯಾವುದೇ ಮೂಲವಿಲ್ಲದ ಹೂಡಿಕೆ ಎಂದು ಪರಿಗಣಿಸಿ ತೆರಿಗೆ ವಿಧಿಸಿದ್ದರು.

Gold Rate Today: ಆಭರಣ ಪ್ರಿಯರಿಗೆ ಮತ್ತೆ ಶಾಕ್! ದಿಢೀರ್ ಏರಿಕೆ ಕಂಡ ಚಿನ್ನದ ದರ, ಬೆಳ್ಳಿ ಸ್ವಲ್ಪ ಅಗ್ಗ
Gold Rate Today: ಆಭರಣ ಪ್ರಿಯರಿಗೆ ಮತ್ತೆ ಶಾಕ್! ದಿಢೀರ್ ಏರಿಕೆ ಕಂಡ ಚಿನ್ನದ ದರ, ಬೆಳ್ಳಿ ಸ್ವಲ್ಪ ಅಗ್ಗ

ಇದೀಗ ಪ್ರಕರಣದ ವಿಚಾರಣೆ ನಡೆಸಿದ ಹೈದರಾಬಾದ್ ಐಟಿಎಟಿ ತೀರ್ಪು ನೀಡಿ, 807.5 ಗ್ರಾಂ ಚಿನ್ನವು ಕುಟುಂಬದ ಸದಸ್ಯರ ಸಂಖ್ಯೆಗೆ ಹೋಲಿಸಿದರೆ ಸಿಬಿಡಿಟಿ ನಿಗದಿಪಡಿಸಿದ ಮಿತಿಯೊಳಗೇ ಇದೆ ಎಂದು ಪರಿಗಣಿಸಿ ₹16.01 ಲಕ್ಷದ ತೆರಿಗೆ ಸೇರ್ಪಡೆಯನ್ನ ರದ್ದುಗೊಳಿಸಿದೆ.

ಐಟಿ ದಾಳಿ ವೇಳೆ ಸಿಬಿಡಿಟಿ ಮಾರ್ಗಸೂಚಿ ಏನು ಹೇಳುತ್ತದೆ?

ಕೇಂದ್ರ ನೇರ ತೆರಿಗೆಗಳ ಮಂಡಳಿಯ (CBDT) ಮೇ 11, 1994ರ ಸುತ್ತೋಲೆ ಸಂಖ್ಯೆ 1916ರ ಪ್ರಕಾರ, ಆದಾಯ ತೆರಿಗೆ ಶೋಧನೆ ಅಥವಾ ದಾಳಿಯ ಸಮಯದಲ್ಲಿ ಅಧಿಕಾರಿಗಳು ನಿಗದಿತ ಪ್ರಮಾಣದ ಕುಟುಂಬದ ಚಿನ್ನಾಭರಣಗಳನ್ನ ಜಪ್ತಿಮಾಡುವಂತಿಲ್ಲ. ಸಿಬಿಡಿಟಿ ಮಾರ್ಗಸೂಚಿಯ ಪ್ರಕಾರ ವಿನಾಯಿತಿ ಇರುವ ಮಿತಿ ಹೀಗಿದೆ:

* ವಿವಾಹಿತ ಮಹಿಳೆ: ಗರಿಷ್ಠ 500 ಗ್ರಾಂ ಚಿನ್ನಾಭರಣ.

* ಅವಿವಾಹಿತ ಮಹಿಳೆ: ಗರಿಷ್ಠ 250 ಗ್ರಾಂ ಚಿನ್ನಾಭರಣ.

* ಪುರುಷ ಸದಸ್ಯರು: ಪ್ರತಿ ಪುರುಷ ಸದಸ್ಯರಿಗೆ ಗರಿಷ್ಠ 100 ಗ್ರಾಂ ಚಿನ್ನಾಭರಣ.

ಅಲ್ಲದೆ, ಕುಟುಂಬದ ಆರ್ಥಿಕ ಸ್ಥಿತಿಗತಿ, ಆಚಾರ-ವಿಚಾರ ಹಾಗೂ ಸಂಪ್ರದಾಯಗಳನ್ನ ಪರಿಗಣಿಸಿ ಇದಕ್ಕಿಂತ ಹೆಚ್ಚಿನ ಪ್ರಮಾಣದ ಆಭರಣಗಳನ್ನೂ ಜಪ್ತಿಯಿಂದ ಕೈಬಿಡುವ ವಿವೇಚನಾಧಿಕಾರ ಅಧಿಕಾರಿಗಳಿಗೆ ಇರುತ್ತದೆ.

ಚಿನ್ನ ಖರೀದಿ ನಿಯಮ: ಮನೆಯಲ್ಲಿ ಇಷ್ಟೇ ಚಿನ್ನ ಇರಬೇಕೆಂಬ ಕಡ್ಡಾಯ ಮಿತಿ ಇದೆಯೇ?

ಇಲ್ಲ. 2016ರಲ್ಲಿ ಸಿಬಿಡಿಟಿ ನೀಡಿದ ಸ್ಪಷ್ಟೀಕರಣದ ಪ್ರಕಾರ, ಕಾನೂನುಬದ್ಧ ಆದಾಯದ ಮೂಲದಿಂದ ಖರೀದಿಸಿದ ಅಥವಾ ಪಿತ್ರಾರ್ಜಿತವಾಗಿ ಬಂದ ಚಿನ್ನವನ್ನ ಮನೆಯಲ್ಲಿ ಇಟ್ಟುಕೊಳ್ಳಲು ಯಾವುದೇ ಗರಿಷ್ಠ ಮಿತಿಯಿಲ್ಲ. 500 ಗ್ರಾಂ, 250 ಗ್ರಾಂ ಮತ್ತು 100 ಗ್ರಾಂ ಎಂಬುದು ಕೇವಲ ಐಟಿ ದಾಳಿಯ ವೇಳೆ ದಾಖಲೆಗಳಿಲ್ಲದಿದ್ದರೂ ಜಪ್ತಿಯಿಂದ ರಕ್ಷಣೆ ಪಡೆಯಲು ಇರುವ ಮಾರ್ಗಸೂಚಿಯೇ ಹೊರತು, ಮಾಲೀಕತ್ವದ ಕಾನೂನಾತ್ಮಕ ಮಿತಿಯಲ್ಲ.

ಆದರೆ, ಚಿನ್ನ ಖರೀದಿ ನಿಯಮದಂತೆ ಭವಿಷ್ಯದಲ್ಲಿ ಯಾವುದೇ ತೆರಿಗೆ ವಿವಾದದಿಂದ ಪಾರಾಗಲು ಚಿನ್ನ ಖರೀದಿಸಿದ ರಸೀದಿಗಳು, ಉಡುಗೊರೆ ಪತ್ರ ಅಥವಾ ಪಿತ್ರಾರ್ಜಿತ ಆಸ್ತಿಯ ದಾಖಲೆಗಳನ್ನ ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಅತ್ಯಂತ ಮುಖ್ಯ.

ಚಿನ್ನದ ಬೆಲೆ ಇಳಿಕೆ ಬೆನ್ನಲ್ಲೇ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಚಿನ್ನದ ವ್ಯಾಪಾರಿಗಳು; ಕಾರಣವೇನು, ಪತ್ರದಲ್ಲಿ ಏನಿದೆ ?
ಚಿನ್ನದ ಬೆಲೆ ಇಳಿಕೆ ಬೆನ್ನಲ್ಲೇ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಚಿನ್ನದ ವ್ಯಾಪಾರಿಗಳು; ಕಾರಣವೇನು, ಪತ್ರದಲ್ಲಿ ಏನಿದೆ ?

₹3.88 ಲಕ್ಷ ನಗದು ಸೇರ್ಪಡೆಯೂ ರದ್ದು: ತೆರಿಗೆದಾರರಿಗೆ ಡಬಲ್ ರಿಲೀಫ್!

ಈ ಪ್ರಕರಣದಲ್ಲಿ ಚಿನ್ನಾಭರಣವಷ್ಟೇ ಅಲ್ಲದೆ, ದಾಳಿಯ ವೇಳೆ ಪತ್ತೆಯಾಗಿದ್ದ ₹3.88 ಲಕ್ಷ ನಗದನ್ನೂ ಇಲಾಖೆ ಮೂಲವಿಲ್ಲದ ಹಣವೆಂದು ಪರಿಗಣಿಸಿತ್ತು. ಆದರೆ, ಮಾರ್ಚ್ 31, 2011ರ ವೇಳೆಗೆ ತಮ್ಮ ಬ್ಯಾಲೆನ್ಸ್ ಶೀಟ್‌ನಲ್ಲಿ ₹4,86,504 ನಗದು ಲಭ್ಯವಿರುವುದನ್ನ ತೆರಿಗೆದಾರರು ದಾಖಲೆ ಸಮೇತ ಸಾಬೀತುಪಡಿಸಿದರು. ಇದನ್ನ ಒಪ್ಪಿಕೊಂಡ ನ್ಯಾಯಮಂಡಳಿಯು ₹3.88 ಲಕ್ಷ ನಗದಿನ ಮೇಲಿನ ತೆರಿಗೆ ಸೇರ್ಪಡೆಯನ್ನೂ ರದ್ದುಗೊಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+