ಬೈಕ್ ಟ್ಯಾಕ್ಸಿಗಳ ಕಳ್ಳಾಟಕ್ಕೆ ಸರ್ಕಾರದಿಂದ ಬ್ರೇಕ್: ಹಳದಿ ಬೋರ್ಡ್, GPS ಕಡ್ಡಾಯ, 6 ಲಕ್ಷದಿಂದ ಸಾವಿರಗಳಿಗೆ ಇಳಿಯಲಿದೆಯೇ ವಾಹನ?

ಬೆಂಗಳೂರು: ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ಗಳ ಆದೇಶದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಕಾನೂನಾತ್ಮಕವಾಗಿ ಹಸಿರು ನಿಶಾನೆ ಸಿಕ್ಕಿದೆ. ನವೆಂಬರ್ 20ರಂದು ರಾಜ್ಯ ಸರ್ಕಾರದ ಮೇಲ್ಮನವಿಯನ್ನ ಸುಪ್ರೀಂ ಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ, ಬೈಕ್ ಟ್ಯಾಕ್ಸಿಗಳನ್ನ ಸಂಪೂರ್ಣ ನಿಷೇಧಿಸುವ ಬದಲು ಕಟ್ಟುನಿಟ್ಟಿನ ನಿಯಂತ್ರಣಕ್ಕೆ ಒಳಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಇನ್ಮುಂದೆ ಯಾರು ಬೇಕಾದರೂ, ಹೇಗೆಂದರೆ ಹಾಗೆ ಅನಧಿಕೃತವಾಗಿ ಬೈಕ್ ಟ್ಯಾಕ್ಸಿ ಓಡಿಸುವುದಕ್ಕೆ ಕಡಿವಾಣ ಬೀಳಲಿದ್ದು, ಶೀಘ್ರದಲ್ಲೇ ಹೊಸ ಕರ್ನಾಟಕ ಬೈಕ್ ಟ್ಯಾಕ್ಸಿ ನಿಯಮ ಜಾರಿಗೆ ಬರಲಿದೆ.

Karnataka Bike Taxi New Rules Yellow Board GPS amp amp Insurance Mandatory Fleet May Drop From 6 Lakh To Thousands

6 ಲಕ್ಷ ಅನಧಿಕೃತ ವಾಹನಗಳು: ಪ್ರಯಾಣಿಕರ ಸುರಕ್ಷತೆಯೇ ಸರ್ಕಾರದ ಆದ್ಯತೆ

ಸದ್ಯದ ಅಂದಾಜಿನ ಪ್ರಕಾರ ರಾಜ್ಯದಲ್ಲಿ ಸುಮಾರು 6 ಲಕ್ಷ ಬೈಕ್ ಟ್ಯಾಕ್ಸಿಗಳು ಸಂಚರಿಸುತ್ತಿವೆ. ರ‍್ಯಾಪಿಡೋ, ಓಲಾ ಹಾಗೂ ಉಬರ್ ಸೇರಿದಂತೆ ವಿವಿಧ ಅಗ್ರಿಗೇಟರ್ ಸಂಸ್ಥೆಗಳ ಬೈಕ್ ಟ್ಯಾಕ್ಸಿಗಳಲ್ಲಿ ಪ್ರತಿದಿನ ಅಂದಾಜು 4.5 ಲಕ್ಷ ಜನರು ಪ್ರಯಾಣಿಸುತ್ತಿದ್ದು, ರ‍್ಯಾಪಿಡೋ ಒಂದರಲ್ಲೇ ತಿಂಗಳಿಗೆ 50 ಲಕ್ಷಕ್ಕೂ ಅಧಿಕ ಮಂದಿ ಸಂಚರಿಸುತ್ತಿದ್ದಾರೆ. ಆದರೆ, ಮೋಟಾರು ವಾಹನ ಕಾಯ್ದೆಯ ಪ್ರಕಾರ ಸ್ವಂತ ಬಳಕೆಗೆ ನೋಂದಣಿಯಾದ ಬಿಳಿ ಬೋರ್ಡ್ ವಾಹನಗಳನ್ನ ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ.

ಆದರೂ, ಅನೇಕರು ವೈಯಕ್ತಿಕ ಬೈಕ್‌ಗಳನ್ನೇ ಟ್ಯಾಕ್ಸಿಗಳಾಗಿ ಬಳಸುತ್ತಿದ್ದಾರೆ. ಅಷ್ಟೇ ಅಲ್ಲ, ಯಾರದ್ದೋ ಹೆಸರಿನಲ್ಲಿರುವ ಬೈಕ್ ಅನ್ನಾ ಇನ್ಯಾರೋ ಚಲಾಯಿಸುತ್ತಿರುವುದು, ಸವಾರರ ಅಧಿಕೃತ ದಾಖಲೆಗಳು ಸರ್ಕಾರ ಅಥವಾ ಅಗ್ರಿಗೇಟರ್‌ಗಳ ಬಳಿ ಇಲ್ಲದಿರುವುದು ಹಾಗೂ ಜಿಪಿಎಸ್ ಅಥವಾ ಪ್ಯಾನಿಕ್ ಬಟನ್ ಇಲ್ಲದಿರುವುದು ಪ್ರಯಾಣಿಕರ ಸುರಕ್ಷತೆಗೆ ದೊಡ್ಡ ಸವಾಲಾಗಿದೆ.

ಕರ್ನಾಟಕ: ಬೈಕ್ ಟ್ಯಾಕ್ಸಿ ಸೇವೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್, ರಾಜ್ಯ ಸರ್ಕಾರಕ್ಕೆ ಹಿನ್ನಡೆ
ಕರ್ನಾಟಕ: ಬೈಕ್ ಟ್ಯಾಕ್ಸಿ ಸೇವೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್, ರಾಜ್ಯ ಸರ್ಕಾರಕ್ಕೆ ಹಿನ್ನಡೆ

ಒಂದು ವೇಳೆ ಅಪರಾಧ ನಡೆದರೆ ಸವಾರರನ್ನ ಪತ್ತೆಹಚ್ಚುವುದೇ ಕಷ್ಟಕರವಾಗಿದೆ. ಇದನ್ನ ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಕಠಿಣ ನಿಯಮಾವಳಿ ರೂಪಿಸುತ್ತಿದ್ದು, ಇವು ಅನುಷ್ಠಾನಗೊಂಡರೆ ಲಕ್ಷಾಂತರ ಸಂಖ್ಯೆಯಲ್ಲಿರುವ ಬೈಕ್ ಟ್ಯಾಕ್ಸಿಗಳ ಸಂಖ್ಯೆ ಸಾವಿರಗಳಿಗೆ ಇಳಿಕೆಯಾಗಬಹುದು ಎಂದು ಸಾರಿಗೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ಹಳದಿ ಬೋರ್ಡ್ ಮತ್ತು ಜಿಪಿಎಸ್ ಕಡ್ಡಾಯ: ಹೊಸ ನಿಯಮಾವಳಿಯಲ್ಲಿ ಏನೆಲ್ಲಾ ಇರಲಿದೆ?

ದೇಶದ 19ಕ್ಕೂ ಹೆಚ್ಚು ರಾಜ್ಯಗಳಲ್ಲಿ ಆಯಾ ರಾಜ್ಯಗಳ ನಿಯಮಗಳಡಿ ಬೈಕ್ ಟ್ಯಾಕ್ಸಿ ಸೇವೆ ಚಾಲ್ತಿಯಲ್ಲಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಆಟೋ ಹಾಗೂ ಕ್ಯಾಬ್‌ಗಳಿಗೆ ಇರುವಂತೆ ಪ್ರತ್ಯೇಕ ನಿಯಮಗಳನ್ನ ಜಾರಿಗೊಳಿಸಲು ಸಾರಿಗೆ ಇಲಾಖೆ ಸಿದ್ಧತೆ ನಡೆಸಿದೆ. ಪ್ರಸ್ತಾವಿತ ಪ್ರಮುಖ ನಿಯಮಗಳು ಹೀಗಿವೆ:

* ಹಳದಿ ಬೋರ್ಡ್ ಕಡ್ಡಾಯ: ಬಿಳಿ ಬೋರ್ಡ್ ಬೈಕ್‌ಗಳಿಗೆ ಅವಕಾಶವಿರುವುದಿಲ್ಲ. ವಾಣಿಜ್ಯ ಬಳಕೆಗಾಗಿ ಸಾರಿಗೆ ಇಲಾಖೆಯಲ್ಲಿ ಅಧಿಕೃತವಾಗಿ ನೋಂದಣಿ ಮಾಡಿಸಿ ಹಳದಿ ಬೋರ್ಡ್ ಕಡ್ಡಾಯವಾಗಿ ಅಳವಡಿಸಬೇಕು.

* ಜಿಪಿಎಸ್ ಮತ್ತು ಸುರಕ್ಷತಾ ವ್ಯವಸ್ಥೆ: ಪ್ರಯಾಣಿಕರ, ವಿಶೇಷವಾಗಿ ಮಹಿಳೆಯರ ಸುರಕ್ಷತೆಗಾಗಿ ರಾಜ್ಯಾದ್ಯಂತ ಎಲ್ಲಾ ಬೈಕ್ ಟ್ಯಾಕ್ಸಿಗಳಲ್ಲಿ ಜಿಪಿಎಸ್ ಅಳವಡಿಕೆ ಕಡ್ಡಾಯವಾಗಲಿದೆ.

* ಸಂಪೂರ್ಣ ದಾಖಲೆ ಸಲ್ಲಿಕೆ: ವಾಹನದ ಮಾಲೀಕರು ಹಾಗೂ ಸವಾರರ ಸಂಪೂರ್ಣ ವಿವರ, ಆರ್‌ಸಿ ಕಾರ್ಡ್ (RC), ಎಫ್‌ಸಿ (FC), ಚಾಲನಾ ಪರವಾನಗಿ (DL) ಮತ್ತು ಪ್ರಯಾಣಿಕರ ವಿಮೆ ದಾಖಲೆಗಳನ್ನ ಕಡ್ಡಾಯವಾಗಿ ಸಲ್ಲಿಸಬೇಕು.

* ದರ ನಿಗದಿ: ಬೈಕ್ ಟ್ಯಾಕ್ಸಿಗಳ ಪ್ರಯಾಣ ದರವನ್ನ ಸಾರಿಗೆ ಇಲಾಖೆಯೇ ಅಧಿಕೃತವಾಗಿ ನಿಗದಿಪಡಿಸಲಿದೆ.

ನಿಮ್ಮ ಬಳಿ ಕಾರು, ಬೈಕ್ ಇದ್ಯಾ? ಡಿ. 15ರಿಂದ ಹೊಸ ಮೋಟಾರು ವಿಮೆ ನಿಯಮ ಜಾರಿ, ಇಲ್ಲಿದೆ ನೀವು ತಿಳಿಯಲೇಬೇಕಾದ ಮಾಹಿತಿ
ನಿಮ್ಮ ಬಳಿ ಕಾರು, ಬೈಕ್ ಇದ್ಯಾ? ಡಿ. 15ರಿಂದ ಹೊಸ ಮೋಟಾರು ವಿಮೆ ನಿಯಮ ಜಾರಿ, ಇಲ್ಲಿದೆ ನೀವು ತಿಳಿಯಲೇಬೇಕಾದ ಮಾಹಿತಿ

ಸಾರಿಗೆ ಸಚಿವ ಬೈರತಿ ಸುರೇಶ್ ಪ್ರತಿಕ್ರಿಯೆ ಏನು?

ಈ ಕುರಿತು ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ಬೈರತಿ ಸುರೇಶ್, "ಸುಪ್ರೀಂ ಕೋರ್ಟ್ ಆದೇಶವನ್ನಾ ಪಾಲಿಸುವುದು ನಮ್ಮ ಕರ್ತವ್ಯ. ಈ ಸಂಬಂಧ ಅಡ್ವೊಕೇಟ್ ಜನರಲ್ ಅವರೊಂದಿಗೆ ಚರ್ಚಿಸಿ, ಬೈಕ್ ಟ್ಯಾಕ್ಸಿಗಳಿಗೆ ಸೂಕ್ತ ನಿಯಮಾವಳಿ ರೂಪಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಪ್ರಯಾಣಿಕರ, ಅದರಲ್ಲೂ ಪ್ರಮುಖವಾಗಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ನಮ್ಮ ಮೊದಲ ಆದ್ಯತೆ" ಎಂದು ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+