Gold: ಚಿನ್ನದ ಬೆಲೆ ಪಾತಾಳಕ್ಕೆ; ಈಗ ಬಂಗಾರ ಖರೀದಿ ಮಾಡಬಹುದಾ ? ಈ 5 ಅಂಶಗಳು ನೆನಪಿರಲಿ!

ಚಿನ್ನದ ಬೆಲೆಯು ನಿರಂತರವಾಗಿ ಇಳಿಕೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಚಿನ್ನದ ಬೆಲೆ ಹೆಚ್ಚಾಗಿದ್ದ ಸಂದರ್ಭದಲ್ಲಿ ಚಿನ್ನ ಖರೀದಿ ಮಾಡಬೇಡಿ ಎಂದು ಹೇಳಿದ್ದರು. ಆಗ ಲಕ್ಷಾಂತರ ಜನ ಚಿನ್ನ ಖರೀದಿ ಮಾಡದೆ ಇರುವುದರಿಂದಲೇ ಇದೀಗ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ ಎಂದೂ ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಅಭಿಪ್ರಾಯಪಟ್ಟಿದ್ದರು. ನಾನು ಹೇಳಿದ ಸಂದರ್ಭದಲ್ಲಿ ಚಿನ್ನವನ್ನು ಖರೀದಿ ಮಾಡದೆ ಇರುವ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದರು.

ಚಿನ್ನದ ಬೆಲೆಯು ನಿರಂತರವಾಗಿ ಕುಸಿಯುತ್ತಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಕುಸಿಯಲಿದೆಯೇ ಅಥವಾ ಹೆಚ್ಚಾಗಲಿದೆಯೇ ಎನ್ನುವ ಚರ್ಚೆ ಜೋರಾಗಿದೆ. ಇನ್ನು ಚಿನ್ನದ ಬೆಲೆಯು ಈ ವರ್ಷದ ಪ್ರಾರಂಭದಲ್ಲಿ ಬರೋಬ್ಬರಿ 1.80 ಲಕ್ಷ ರೂ. ತಲುಪಿತ್ತು. ಇದೀಗ ನವೆಂಬರ್ 23ರ ಸೋಮವಾರ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 1,25,070 ರೂ., 22 ಕ್ಯಾರೆಟ್ ಚಿನ್ನದ ಬೆಲೆಯು 10 ಗ್ರಾಂಗೆ 1,14,640 ರೂಪಾಯಿ ಆಗಿದೆ. ಚಿನ್ನದ ಬೆಲೆಯು ಇನ್ನಷ್ಟು ಇಳಿಕೆ ಆಗುವ ಸಾಧ್ಯತೆ ಇದೆ. ಹಲವರಲ್ಲಿ ಈಗ ಚಿನ್ನ ಖರೀದಿ ಮಾಡಬೇಕೇ, ಬೇಡವೇ ಎನ್ನುವ ಗೊಂದಲಗಳು ಸಹ ಇವೆ. ಇದಕ್ಕೆ ಉತ್ತರ ಇಲ್ಲಿದೆ.

Gold Prices Plunge Right Time to Buy 5 Key Things Every Buyer Must Know Today Rate

ಕಳೆದ ಮೂರರಿಂದ ಐದು ವರ್ಷಗಳ ಅವಧಿಯಲ್ಲಿ ಚಿನ್ನದ ಬೆಲೆಯು ವಿಪರೀತವಾಗಿ ಹೆಚ್ಚಳವಾಗಿದೆ. ಇದೀಗ 2026 ನವೆಂಬರ್ ತಿಂಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಇಳಿಕೆ ಕಂಡಿದ್ದು, ದೀರ್ಘಕಾಲೀನ ಹೂಡಿಕೆದಾರರಿಗೆ ಹಂತಹಂತವಾಗಿ ಖರೀದಿಸಲು ಇದು ಉತ್ತಮ ಸಮಯವಾಗಿದೆ. ಆದರೆ, ನೀವು ಈಗ ಚಿನ್ನ ಖರೀದಿ ಮಾಡುವುದಕ್ಕಿಂತಲೂ ಮುಂಚೆ ಈ ಐದು ಮುಖ್ಯ ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳುವುದು ಮುಖ್ಯವಾಗಿದೆ.

Gold Prices: ಒಮ್ಮೆಲೇ ಚಿನ್ನ ಖರೀದಿ ಮಾಡಬೇಡಿ

ಚಿನ್ನದ ಬೆಲೆಯು ಇಳಿಕೆಯಾಗುತ್ತಿದೆ ನಿಜ. ಆದರೆ, ಚಿನ್ನದ ಬೆಲೆ ಕಡಿಮೆ ಆಗಿದೆ ಎಂದು ಒಮ್ಮೆಲೇ ಯಥೇಚ್ಚವಾಗಿ ಚಿನ್ನ ಖರೀದಿ ಮಾಡಬೇಡಿ. ಇದರಿಂದ ಮುಂದಿನ ದಿನಗಳಲ್ಲಿ ಅಲ್ಪ ಪ್ರಮಾಣದ ಚಿನ್ನದ ಬೆಲೆ ಇಳಿಕೆಯಾದರೂ ನಿಮಗೆ ನಷ್ಟವಾಗಲಿದೆ. ಈ ಸಮಯದಲ್ಲಿ ನೀವು ದೀರ್ಘಕಾಲಿಕ ಹೂಡಿಕೆ ಮಾಡುವುದು ಉತ್ತಮ. ಅಂದರೆ ಮುಂದಿನ 3ರಿಂದ 5 ವರ್ಷಗಳ ಅವಧಿಯನ್ನು ಗುರಿಯಾಗಿಸಿಕೊಂಡು ಹೂಡಿಕೆ ಮಾಡಿದರೆ, ಇದು ಖರೀದಿಗೆ ಉತ್ತಮ ಸಮಯವಾಗಿರಲಿದೆ. ದೀರ್ಘಕಾಲದ ಹೂಡಿಕೆಯಿಂದ ಉತ್ತಮ ಲಾಭ ನಿಮ್ಮದಾಗಲಿದೆ. ಮುಖ್ಯವಾಗಿ ಒಂದೇ ಬಾರಿ ಹೆಚ್ಚು ಖರೀದಿ ಮಾಡಬೇಡಿ.

ಯಾವುದರಲ್ಲಿ ಚಿನ್ನ ಹೂಡಿಕೆ ಮಾಡುತ್ತಿದ್ದೀರಿ ಎನ್ನುವುದರಲ್ಲಿ ಎಚ್ಚರಿಕೆ ಇರಲಿ

ಸಾಮಾನ್ಯವಾಗಿ ಆಭರಣಗಳ ಹೂಡಿಕೆ ಮಾಡಿದರೆ ಮೇಕಿಂಗ್‌ ಚಾರ್ಜ್ ಸೇರಿದಂತೆ ಜಿಎಸ್‌ಟಿ ಶುಲ್ಕವಿರುತ್ತದೆ. ಚಿನ್ನದ ಕಾಯಿನ್, ಬಾಂಡ್‌ಗಳ ಮೇಲೆ ಹೂಡಿಕೆ ಮಾಡುವುದು ಉತ್ತಮ. ಅಲ್ಲದೆ, Gold ETF ಅಥವಾ ಮ್ಯೂಚುವಲ್ ಫಂಡ್‌ಗಳ ಮೂಲಕ ಹೂಡಿಕೆ ಮಾಡುವುದು ಉತ್ತಮ. ನಿಮಗೆ ದೀರ್ಘಕಾಲಿಕ ಹೂಡಿಕೆ ಮಾಡುವುದಿದ್ದರೆ, ವಿವಿಧ ಆಭರಣ ಮಳಿಗೆಗಳು ನೀಡುವ ಸ್ಕೀಂಗಳನ್ನು ಸಹ ಪರಿಶೀಲನೆ ಮಾಡಬಹುದಾಗಿದೆ.

ಶುಭ ಸಮಾರಂಭಗಳಿಗೆ ಖರೀದಿ ಮಾಡುವುದು ಉತ್ತಮ

ಇನ್ನು ಮದುವೆ ಸೇರಿದಂತೆ ಶುಭ ಸಮಾರಂಭಗಳಿಗೆ ಚಿನ್ನಾಭರಣವನ್ನು ಖರೀದಿ ಮಾಡುವುದಕ್ಕೆ ಇದು ಉತ್ತಮ ಸಮಯವಾಗಿದೆ. ಮದುವೆ ಅಥವಾ ಶುಭಕಾರ್ಯಕ್ಕೆ ಖರೀದಿಸಲು ಬೆಸ್ಟ್‌. ಗರಿಷ್ಠ ಮಟ್ಟದಿಂದ ಬೆಲೆ ಸಾಕಷ್ಟು ಕಡಿಮೆ ಆಗಿರುವುದರಿಂದ ಈಗ ಖರೀದಿಸುವುದು ಲಾಭದಾಯಕ. ಆಭರಣ ಖರೀದಿಸುವಾಗ ಮೇಕಿಂಗ್ ಚಾರ್ಜಸ್ (Making Charges) ಮತ್ತು 3% GST ಹೆಚ್ಚುವರಿ ಆಗಿರುತ್ತದೆ. ಉಳಿದಂತೆ ಈಗ ಶುಭ ಹಾಗೂ ಅತ್ಯಾವಶ್ಯಕವಾದ ತಾಳಿ ಸರ, ಉಂಗುರ ಸೇರಿದಂತೆ ಮದುವೆ ಶುಭಸಮಾರಂಭಗಳಿಗೆ ಬಂಗಾರ ಖರೀದಿ ಮಾಡುವುದಕ್ಕೆ ಸೂಕ್ತ ಸಮಯವಾಗಿದೆ.

Gold: ಚಿನ್ನದ ಬೆಲೆ ಭರ್ಜರಿ ಇಳಿಕೆ ನಡುವೆ ಭಾರತದ ಬಂಗಾರ ಪ್ರಿಯರಿಗೆ ಶಾಕ್; ಚೀನಾದ ಖತರ್ನಾಕ್ ಸ್ಕ್ಯಾಮ್ ?
Gold: ಚಿನ್ನದ ಬೆಲೆ ಭರ್ಜರಿ ಇಳಿಕೆ ನಡುವೆ ಭಾರತದ ಬಂಗಾರ ಪ್ರಿಯರಿಗೆ ಶಾಕ್; ಚೀನಾದ ಖತರ್ನಾಕ್ ಸ್ಕ್ಯಾಮ್ ?

ಚಿನ್ನ ಖರೀದಿ ಮಾಡುವಾಗ ಇರಲಿ ಎಚ್ಚರ

ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದರೂ, ನಕಲಿ ಚಿನ್ನ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಚಿನ್ನಾಭರಣಗಳಲ್ಲಿ ರೀನಿಯಮ್ ಪುಡಿಯನ್ನು ಅದರ ತೂಕವನ್ನು ಹೆಚ್ಚಿಸಲು ಚಿನ್ನದೊಂದಿಗೆ ಬೆರೆಸಲಾಗಿದೆ ಎನ್ನುವ ವಿಚಾರವು ಈಚೆಗೆ ಬೆಳಕಿಗೆ ಬಂದಿದೆ. ಆದರೆ ಇದರ ಪರಿಣಾಮವಾಗಿ ಆಭರಣಗಳು ಹಲವಾರು ಶುದ್ಧತೆ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಿವೆ. ಹೀಗಾಗಿ, ಚಿನ್ನವನ್ನು ಮಾನ್ಯತೆ ಪಡೆದ ಕಂಪನಿಗಳಿಂದಲೇ ಖರೀದಿ ಮಾಡಿ.

Gold: ನಿರೀಕ್ಷೆಯೇ ಮಾಡಷ್ಟು ಪಾತಳಕ್ಕೆ ಕುಸಿದ ಚಿನ್ನದ ಬೆಲೆ; ಬೆಳ್ಳಿ ಎಷ್ಟಾಗಿದೆ ?, ಬಂಗಾರ ಖರೀದಿಗೆ ಇದು ಒಳ್ಳೆಯ ಸಮಯವೇ ?
Gold: ನಿರೀಕ್ಷೆಯೇ ಮಾಡಷ್ಟು ಪಾತಳಕ್ಕೆ ಕುಸಿದ ಚಿನ್ನದ ಬೆಲೆ; ಬೆಳ್ಳಿ ಎಷ್ಟಾಗಿದೆ ?, ಬಂಗಾರ ಖರೀದಿಗೆ ಇದು ಒಳ್ಳೆಯ ಸಮಯವೇ ?

Gold Prices: ಅಲ್ಪಾವಧಿ ಲಾಭದ ಉದ್ದೇಶವಿದ್ದರೆ ಕಾಯುವುದು ಉತ್ತಮ

ಅಲ್ಪಾವಧಿ ಲಾಭದ ಉದ್ದೇಶವಿದ್ದರೆ ಬಂಗಾರ ಖರೀದಿ ಮಾಡಲು ಇಚ್ಛಿಸುವವರ ಇನ್ನಷ್ಟು ಸಮಯ ಕಾದು ನೋಡುವುದು ಉತ್ತಮ. ಚಿನ್ನವನ್ನು ಈಗ ಖರೀದಿ ಮಾಡಿ ಕೆಲವೇ ದಿನಗಳಲ್ಲಿ ಲಾಭ ಗಳಿಸಬೇಕು ಎನ್ನುವ ಉದ್ದೇಶವಿದ್ದರೆ ಸ್ವಲ್ಪ ಸಮಯ ಕಾದು ನೋಡುವುದು ಉತ್ತಮ ಆಯ್ಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+