Gold: ನಿರೀಕ್ಷೆಯೇ ಮಾಡಷ್ಟು ಪಾತಳಕ್ಕೆ ಕುಸಿದ ಚಿನ್ನದ ಬೆಲೆ; ಬೆಳ್ಳಿ ಎಷ್ಟಾಗಿದೆ ?, ಬಂಗಾರ ಖರೀದಿಗೆ ಇದು ಒಳ್ಳೆಯ ಸಮಯವೇ ?

ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಇಳಿಕೆಯಾಗಿದೆ. ಯಾರೂ ಸಹ ನಿರೀಕ್ಷೆ ಮಾಡದಷ್ಟು ದೊಡ್ಡ ಮಟ್ಟದ ಚಿನ್ನದ ಬೆಲೆಯು ಕುಸಿತವಾಗಿದೆ. ಹೆಚ್ಚು ಕಡಿಮೆ ಕಳೆದ 15 ದಿನಗಳಲ್ಲಿ ಚಿನ್ನದ ಬೆಲೆಯು ನಿರಂತರವಾಗಿ ಇಳಿಕೆಯಾಗಿದೆ. ನವೆಂಬರ್ 21ರಂದು ಸಹ ಚಿನ್ನ ಮತ್ತು ಬೆಳ್ಳಿ ಬೆಲೆಯು ಭರ್ಜರಿ ಇಳಿಕೆ ಆಗಿದೆ. ಚಿನ್ನದ ಬೆಲೆಯು ನಿರಂತವಾಗಿ ಇಳಿಕೆಯಾಗುತ್ತಿದ್ದರೂ, ಚಿನ್ನ ಖರೀದಿ ಮಾಡುವುದಕ್ಕೆ ಜನ ಹಿಂದೂ ಮುಂದೆ ನೋಡುತ್ತಿದ್ದಾರೆ.

ಈಗ ಚಿನ್ನದ ಬೆಲೆ ಇನ್ನಷ್ಟು ಇಳಿಕೆಯಾಗಲಿದೆಯೇ ಎಂದು ಕಾದು ನೋಡುವ ತಂತ್ರವನ್ನು ಅನುಸರಿಸಲು ಮುಂದಾಗಿದ್ದಾರೆ. ಹಾಗಾದರೆ ಇಂದಿನ ಚಿನ್ನ ಮತ್ತು ಬೆಳ್ಳಿಯೆ ಬೆಲೆ ಎಷ್ಟಾಗಿದೆ, ಈ ಸಮಯದಲ್ಲಿ ಬಂಗಾರ ಖರೀದಿ ಮಾಡುವುದು ಉತ್ತಮ ನಿರ್ಧಾರವೇ ಎನ್ನುವ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನೋಡೋಣ.

November 21 Gold Rate Gold Prices Fall Sharply Check Silver Rates and Best Time to Buy Gold

ಚಿನ್ನದ ಬೆಲೆಯು ನಿರಂತರವಾಗಿ ಇಳಿಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಬಂಗಾರದ ಬೆಲೆ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆಯೂ ಇದೆ. ಚಿನ್ನದ ಬೆಲೆ ನಿರಂತರವಾಗಿ ಇಳಿಕೆಯಾಗುತ್ತಿದ್ದರೂ, ಬಂಗಾರ ಖರೀದಿದಾರರು ಕಾದು ನೋಡುವ ತಂತ್ರವನ್ನ ಅನುಸರಿಸುತ್ತಿದ್ದಾರೆ. ಇನ್ನೂ ಕೆಲವರು ಈಗಲೇ ಬಂಗಾರ ಖರೀದಿ ಮಾಡುವುದು ಉತ್ತಮ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.

Gold: ಚಿನ್ನದ ಬೆಲೆ ಭರ್ಜರಿ ಇಳಿಕೆ ನಡುವೆ ಭಾರತದ ಬಂಗಾರ ಪ್ರಿಯರಿಗೆ ಶಾಕ್; ಚೀನಾದ ಖತರ್ನಾಕ್ ಸ್ಕ್ಯಾಮ್ ?
Gold: ಚಿನ್ನದ ಬೆಲೆ ಭರ್ಜರಿ ಇಳಿಕೆ ನಡುವೆ ಭಾರತದ ಬಂಗಾರ ಪ್ರಿಯರಿಗೆ ಶಾಕ್; ಚೀನಾದ ಖತರ್ನಾಕ್ ಸ್ಕ್ಯಾಮ್ ?

18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 9,381 ರೂಪಾಯಿ ಹಾಗೂ ಹತ್ತು ಗ್ರಾಂ ಚಿನ್ನದ ಬೆಲೆಯು 93,810 ರೂಪಾಯಿ ಆಗಿದೆ. ನವೆಂಬರ್‌ 20ರ ಶುಕ್ರವಾರಕ್ಕೆ ಹೋಲಿಕೆ ಮಾಡಿದರೆ, 18 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯ ಮೇಲೆ 37 ರೂಪಾಯಿ ಹಾಗೂ ಹತ್ತು ಗ್ರಾಂನ ಮೇಲೆ 370 ರೂಪಾಯಿ ಕಡಿಮೆಯಾಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 11,465 ರೂಪಾಯಿ ಹಾಗೂ ಹತ್ತು ಗ್ರಾಂ ಚಿನ್ನದ ಬೆಲೆಯು 1,14,650 ರೂಪಾಯಿ ಆಗಿದೆ. ಶುಕ್ರವಾರಕ್ಕೆ ಹೋಲಿಕೆ ಮಾಡಿದರೆ, ಒಂದು ಗ್ರಾಂ ಚಿನ್ನದ ಬೆಲೆಯ ಮೇಲೆ 45 ರೂಪಾಯಿ ಹಾಗೂ ಹತ್ತು ಗ್ರಾಂನ ಮೇಲೆ 450 ರೂಪಾಯಿ ಭರ್ಜರಿ ಇಳಿಕೆಯಾಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ: 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 12,508 ರೂಪಾಯಿ ಆಗಿದೆ. ಹತ್ತು ಗ್ರಾಂ ಚಿನ್ನದ ಬೆಲೆಯು 1,25,080 ರೂ. ಆಗಿದೆ. 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ಶುಕ್ರವಾರಕ್ಕೆ ಹೋಲಿಕೆ ಮಾಡಿದರೆ ಒಂದು ಗ್ರಾಂನ ಮೇಲೆ 49 ರೂಪಾಯಿ ಹಾಗೂ ಹತ್ತು ಗ್ರಾಂನ ಬೆಲೆಯು 490 ರೂಪಾಯಿ ಕಡಿಮೆಯಾಗಿದೆ.

ಮದುವೆ ಬೇಡವೆಂದ ಯುವಕ, ಯುವತಿ; ಇಬ್ಬರೂ ಕೊಟ್ಟ ಕಾರಣ ಕೇಳಿ ನೆಟ್ಟಿಗರು ಶಾಕ್! ಸೋಷಿಯಲ್ ಮೀಡಿಯಾದಲ್ಲಿ ಕ್ಲಾಸ್!
ಮದುವೆ ಬೇಡವೆಂದ ಯುವಕ, ಯುವತಿ; ಇಬ್ಬರೂ ಕೊಟ್ಟ ಕಾರಣ ಕೇಳಿ ನೆಟ್ಟಿಗರು ಶಾಕ್! ಸೋಷಿಯಲ್ ಮೀಡಿಯಾದಲ್ಲಿ ಕ್ಲಾಸ್!

ಬಂಗಾರ ಖರೀದಿ ಮಾಡುವುದಕ್ಕೆ ಇದು ಒಳ್ಳೆಯ ಸಮಯವೇ ?

ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದರೂ ಸಹ ಚಿನ್ನವನ್ನು ಈಗ ಖರೀದಿ ಮಾಡಬೇಕೇ ಅಥವಾ ಬೇಡವೇ ಎನ್ನುವ ಗೊಂದಲವು ಹಲವರಲ್ಲಿ ಇದೆ. ದೀರ್ಘಾವಧಿಯ ಹೂಡಿಕೆ ಅಥವಾ ಆಭರಣ ಖರೀದಿಗೆ ಈಗಿನ ಸಮಯವು ಉತ್ತಮ ಅವಕಾಶವಾಗಿದೆ, ಆದರೆ ಅಲ್ಪಾವಧಿಯಲ್ಲಿ ಬೆಲೆ ಇನ್ನಷ್ಟು ಇಳಿಯುವ ಸಾಧ್ಯತೆಯೂ ಇದೆ.

ಜನವರಿ 2026ರ ಗರಿಷ್ಠ ಮಟ್ಟಕ್ಕೆ (ಸುಮಾರು ₹1.76 - ₹1.80 ಲಕ್ಷ/10 ಗ್ರಾಂ) ಹೋಲಿಸಿದರೆ, ಚಿನ್ನದ ಬೆಲೆಯು ಸುಮಾರು 22% ರಿಂದ 32% ರಷ್ಟು ಕುಸಿತ ಕಂಡಿದೆ. ಹೀಗಾಗಿ, ಒಂದೇ ಬಾರಿಗೆ ದೊಡ್ಡ ಮಟ್ಟದ ಚಿನ್ನ ಖರೀದಿ ಮಾಡದೆ ಇರುವುದೇ ಉತ್ತಮ.

November 21 Gold Rate: ಚಿನ್ನದ ಬೆಲೆ ಇಳಿಕೆಗೆ ಕಾರಣವೇನು ?

ಇನ್ನು ಚಿನ್ನದ ಬೆಲೆಯು ನಿರಂತರವಾಗಿ ಇಳಿಕೆಯಾಗುವುದಕ್ಕೆ ಹಲವು ಕಾರಣಗಳಿವೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಏರಿಕೆಯ ನಿರೀಕ್ಷೆ, ಬಲಿಷ್ಠವಾಗುತ್ತಿರುವ ಅಮೆರಿಕನ್ ಡಾಲರ್ ಮತ್ತು ಹೂಡಿಕೆದಾರರ ಮಾರಾಟದ ಒತ್ತಡದಿಂದಾಗಿ ಬೆಲೆ ಇಳಿಕೆ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+