Gold Rate Today: ಆಭರಣ ಪ್ರಿಯರಿಗೆ ಮತ್ತೆ ಶಾಕ್! ದಿಢೀರ್ ಏರಿಕೆ ಕಂಡ ಚಿನ್ನದ ದರ, ಬೆಳ್ಳಿ ಸ್ವಲ್ಪ ಅಗ್ಗ

ವಾರದ ಮೊದಲ ದಿನವಾದ ಸೋಮವಾರದ ಮುಂಜಾನೆ ಎಲ್ಲರಲ್ಲೂ ಒಂದು ರೀತಿಯ ಹೊಸ ಉತ್ಸಾಹ ಇರುತ್ತದೆ. ಅದರಲ್ಲೂ ಮದುವೆ ಹಾಗೂ ಶುಭ ಸಮಾರಂಭಗಳ ಸೀಸನ್ ಇರುವುದರಿಂದ, ಚಿನ್ನಾಭರಣ ಖರೀದಿಸುವ ಯೋಚನೆಯಲ್ಲಿರುವವರಿಗೆ ಬೆಳಿಗ್ಗೆ ಎದ್ದ ತಕ್ಷಣ ಮಾರುಕಟ್ಟೆಯ ಬಂಗಾರದ ದರ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ.

ಕಳೆದ ವಾರವಿಡೀ ಸತತ ಕುಸಿತ ಕಂಡು ಆಭರಣ ಪ್ರಿಯರ ಮುಖದಲ್ಲಿ ಮಂದಹಾಸ ಮೂಡಿಸಿದ್ದ ಹಳದಿ ಲೋಹ, ಇಂದು ವಾರದ ಆರಂಭದಲ್ಲೇ ದಿಢೀರ್ ಏರಿಕೆ ಕಂಡಿದೆ. ಹಾಗಾದರೆ, ಇಂದು ಅಂದರೆ ನವೆಂಬರ್ 23, 2026ರಂದು ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ? ಪ್ರಮುಖ ನಗರಗಳ ಬೆಲೆ ಪಟ್ಟಿ ಏನು ಹೇಳುತ್ತದೆ ಎಂಬುದರ ಮಾಹಿತಿ ಇಲ್ಲಿದೆ. ನೋಡೋಣ ಬನ್ನಿ,

Gold and Silver Price Today in India 23 November 2026 MCX Rates in Bengaluru and Top Indian Cities

ಇಂದಿನ ಮಾರುಕಟ್ಟೆ ದರ: ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆಯನ್ನ ನೋಡುವುದಾದ್ರೆ, ಇಂದು 22 ಕ್ಯಾರಟ್ ಆಭರಣ ಚಿನ್ನದ ದರ ಪ್ರತಿ 1 ಗ್ರಾಂಗೆ 11,600 ರೂಪಾಯಿಗಳಿಗೆ ತಲುಪಿದೆ . ಅಂದರೆ 10 ಗ್ರಾಂಗೆ 1,16,000 ರೂಪಾಯಿಯಾಗಿದೆ. ಇನ್ನು 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ 1 ಗ್ರಾಂಗೆ 12,656 ರೂಪಾಯಿಗಳಾಗಿದ್ದು, 10 ಗ್ರಾಂಗೆ 1,26,560 ರೂಪಾಯಿ ನಿಗದಿಯಾಗಿದೆ. ಹಾಗೆಯೇ 18 ಕ್ಯಾರಟ್ ಚಿನ್ನದ ದರ 1 ಗ್ರಾಂಗೆ 9,491 ರೂಪಾಯಿ ಇದೆ.

ಮತ್ತೊಂದೆಡೆ, ಚಿಲ್ಲರೆ ಮಾರುಕಟ್ಟೆಯಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ 174.90 ರೂಪಾಯಿಗಳಾಗಿದ್ದು, 1 ಕೆಜಿ ಬೆಳ್ಳಿಗೆ 1,74,900 ರೂಪಾಯಿ ದರವಿದೆ. ಎಂಸಿಎಕ್ಸ್ ವಹಿವಾಟಿನಲ್ಲೂ ಇಂದು ಬೆಳಿಗ್ಗೆ ಚಿನ್ನ ಶೇ. 2ಕ್ಕೂ ಹೆಚ್ಚು ಏರಿಕೆ ಕಂಡು ಪ್ರತಿ 10 ಗ್ರಾಂಗೆ 1,24,614 ರೂಪಾಯಿಗಳ ಆಸುಪಾಸಿನಲ್ಲಿ ವಹಿವಾಟು ನಡೆಸಿದ್ದು, ಬೆಳ್ಳಿ ಫ್ಯೂಚರ್ಸ್ ದರ ಪ್ರತಿ ಕೆಜಿಗೆ 1,50,917 ರೂಪಾಯಿಗಳಿಗೆ ಜಿಗಿದಿದೆ.

ನಿನ್ನೆಯ ಚಿನ್ನ ಮತ್ತು ಬೆಳ್ಳಿ ಬೆಲೆಯೊಂದಿಗೆ ಹೋಲಿಕೆ

ನಿನ್ನೆಯ (ನವೆಂಬರ್ 22) ದರಕ್ಕೆ ಹೋಲಿಕೆ ಮಾಡಿ ನೋಡುವುದಾದ್ರೆ, ಇಂದು ಚಿನ್ನ ಖರೀದಿಸುವವರಿಗೆ ತುಸು ಹೊರೆಯಾಗಿದೆ ಎನ್ನಬಹುದು. ನಿನ್ನೆ ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ 1 ಗ್ರಾಂಗೆ 11,465 ರೂಪಾಯಿಗಳಷ್ಟಿತ್ತು. ಆದರೆ ಇಂದು ಒಂದೇ ದಿನದಲ್ಲಿ ಪ್ರತಿ ಗ್ರಾಂಗೆ 135 ರೂಪಾಯಿಗಳಷ್ಟು ಏರಿಕೆಯಾಗಿ 11,600 ರೂಪಾಯಿಗೆ ತಲುಪಿದೆ ಅಂದರೆ 10 ಗ್ರಾಂಗೆ 1,350 ರೂಪಾಯಿ ಹೆಚ್ಚಳ ಆಗದೆ. ಅದೇ ರೀತಿ ನಿನ್ನೆ 12,508 ರೂಪಾಯಿಗಳಷ್ಟಿದ್ದ 1 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ, ಇಂದು 148 ರೂಪಾಯಿಗಳಷ್ಟು ಹೆಚ್ಚಳವಾಗಿ 12,656 ರೂಪಾಯಿಗೆ ಮುಟ್ಟಿದೆ . 10 ಗ್ರಾಂಗೆ 1,480 ರೂಪಾಯಿ ಏರಿಕೆಯಾಗಿದೆ.

Gold: ಚಿನ್ನದ ಬೆಲೆ ಪಾತಾಳಕ್ಕೆ; ಈಗ ಬಂಗಾರ ಖರೀದಿ ಮಾಡಬಹುದಾ ? ಈ 5 ಅಂಶಗಳು ನೆನಪಿರಲಿ!
Gold: ಚಿನ್ನದ ಬೆಲೆ ಪಾತಾಳಕ್ಕೆ; ಈಗ ಬಂಗಾರ ಖರೀದಿ ಮಾಡಬಹುದಾ ? ಈ 5 ಅಂಶಗಳು ನೆನಪಿರಲಿ!

ಆದರೆ ಬೆಳ್ಳಿಯ ವಿಚಾರದಲ್ಲಿ ಗ್ರಾಹಕರಿಗೆ ಸಣ್ಣ ಸಮಾಧಾನವಿದ್ದು, ನಿನ್ನೆ ಪ್ರತಿ ಕೆಜಿಗೆ 1,75,000 ರೂಪಾಯಿಗಳಷ್ಟಿದ್ದ ಬೆಳ್ಳಿ ಬೆಲೆ ಇಂದು 100 ರೂಪಾಯಿಗಳಷ್ಟು ಇಳಿಕೆ ಕಂಡು 1,74,900 ರೂಪಾಯಿಗೆ ತಲುಪಿದೆ.

ನಗರವಾರು 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ಪಟ್ಟಿ

ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಇಂದಿನ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಗಳ ಪಟ್ಟಿ ಈ ಕೆಳಗಿನಂತಿದೆ:

* ಬೆಂಗಳೂರು - 11,600 ರೂಪಾಯಿ

* ದೆಹಲಿ - 11,615 ರೂಪಾಯಿ

* ಚೆನ್ನೈ - 11,600 ರೂಪಾಯಿ

* ಮುಂಬೈ - 11,600 ರೂಪಾಯಿ

* ಹೈದರಾಬಾದ್ - 11,600 ರೂಪಾಯಿ

* ಅಹಮದಾಬಾದ್ - 11,605 ರೂಪಾಯಿ

* ಪುಣೆ - 11,600 ರೂಪಾಯಿ

* ಕೋಲ್ಕತ್ತಾ - 11,600 ರೂಪಾಯಿ

ಚಿನ್ನದ ಬೆಲೆ ಇಳಿಕೆ ಬೆನ್ನಲ್ಲೇ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಚಿನ್ನದ ವ್ಯಾಪಾರಿಗಳು; ಕಾರಣವೇನು, ಪತ್ರದಲ್ಲಿ ಏನಿದೆ ?
ಚಿನ್ನದ ಬೆಲೆ ಇಳಿಕೆ ಬೆನ್ನಲ್ಲೇ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಚಿನ್ನದ ವ್ಯಾಪಾರಿಗಳು; ಕಾರಣವೇನು, ಪತ್ರದಲ್ಲಿ ಏನಿದೆ ?

ಒಟ್ಟಿನಲ್ಲಿ, ಕಳೆದ ವಾರದ ಭಾರೀ ಕುಸಿತದ ನಂತರ ನವೆಂಬರ್ 23, 2026 ರ ಸೋಮವಾರದಂದು ಚಿನ್ನದ ಮಾರುಕಟ್ಟೆ ಮತ್ತೆ ಚೇತರಿಕೆ ಕಂಡಿದೆ. ಜಾಗತಿಕ ಆರ್ಥಿಕ ಬೆಳವಣಿಗೆಗಳು ಮತ್ತು ಎಂಸಿಎಕ್ಸ್ (MCX) ಮಾರುಕಟ್ಟೆಯ ಜಿಗಿತದ ಪ್ರಭಾವದಿಂದಾಗಿ ಇಂದು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ 135 ರೂಪಾಯಿ ಹಾಗೂ 24 ಕ್ಯಾರಟ್ ಚಿನ್ನ 148 ರೂಪಾಯಿಗಳಷ್ಟು ದುಬಾರಿಯಾಗಿದೆ.

ಗಮನಿಸಿ: ಮೇಲೆ ನೀಡಲಾದ ಚಿನ್ನ ಮತ್ತು ಬೆಳ್ಳಿಯ ದರಗಳು ಮಾರುಕಟ್ಟೆಯ ಮೂಲ ದರಗಳಾಗಿದ್ದು, ಇವುಗಳಲ್ಲಿ ಜಿಎಸ್‌ಟಿ (GST) ಮತ್ತು ಇತರೆ ಶುಲ್ಕಗಳು ಸೇರಿರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+