ಡಾ.ರಾಜ್‌ಕುಮಾರ್, ಶಂಕರ್‌ನಾಗ್, ದರ್ಶನ್ ಮೂಲ ಕನ್ನಡಿಗರಲ್ಲ! ಸೋಷಿಯಲ್ ಮೀಡಿಯಾ ಪೋಸ್ಟ್‌ಗೆ ಕನ್ನಡಿಗರು ಕೆಂಡ

ಕನ್ನಡಿಗರ ಕಣ್ಮಣಿ, ಕನ್ನಡ ಕಂಠೀರವ ಎಂದೇ ಖ್ಯಾತಿ ಗಳಿಸಿರುವ ಡಾ.ರಾಜ್‌ಕುಮಾರ್ ಅವರು ನಮ್ಮವರು ಅಂತ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ವ್ಯಕ್ತಿಯೊಬ್ಬ ಮಾಡಿರುವ ಪೋಸ್ಟ್‌ ವೈರಲ್ ಆಗಿದೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಡಾ.ರಾಜ್‌ಕುಮಾರ್ ಕನ್ನಡನಾಡಿನ ಆಸ್ತಿ, ಅಭಿಮಾನಿಗಳು ಅಣ್ಣಾವ್ರು - ರಾಜಣ್ಣ ಎಂದು ತಮ್ಮ ಮನೆಯ ಹಿರಿಯ ಅಣ್ಣ ಎನ್ನುವಂತೆಯೇ ಇಂದಿಗೂ ಗೌರವಿಸುತ್ತಿದ್ದಾರೆ.

ಡಾ. ರಾಜ್‌ಕುಮಾರ್ ನಮ್ಮವರು, ಅವರು ಜನಿಸಿದ್ದು ತಮಿಳುನಾಡಿನಲ್ಲಿ, ಮುತ್ತು ಎನ್ನುವುದು ತಮಿಳಿನಲ್ಲಿ ಸಾಮಾನ್ಯವಾಗಿ ಕರೆಯುವ ಹೆಸರು ಅಂತಲೂ ಹೇಳಿದ್ದಾನೆ. ಇದಕ್ಕೆ ಕನ್ನಡಿಗರು ತಿರುಗೇಟು ನೀಡುವುದರೊಂದಿಗೆ ಸಣ್ಣದಾಗಿ ನಕ್ಕಿದ್ದಾರೆ. ತಮಿಳುನಾಡಿನಲ್ಲಿ ತಲೈವಾ ಎನ್ನುತ್ತಿರುವ ರಜನೀಕಾಂತ್ ನಮ್ಮವರು, ಜಯಲಲಿತಾ ನಮ್ಮವರು ಅಂತಲೂ ಹೇಳಿದ್ದಾರೆ.

Dr Rajkumar Shankar Nag Darshan Not Native Kannadigas Social Media Post Sparks Outrage Among Kannadigas

ಡಾ.ರಾಜ್‌ಕುಮಾರ್ ಅವರು ಕನ್ನಡಿಗರ ಅಸ್ಮಿತೆ. ಕನ್ನಡ ನಾಡು, ನುಡಿ ಹಾಗೂ ಜಲಕ್ಕಾಗಿ ಅವರ ಹೋರಾಟಗಳು ಅಜರಾಮರ. ಕರ್ನಾಟಕದಲ್ಲಿ ಭಾಷಾ ಚಳವಳಿ, ಭಾಷಾ ನೀತಿಯ ಗೊಂದಲ ಏರ್ಪಟ್ಟಾಗ ಗೋಕಾಕ್ ಚಳವಳಿಯನ್ನು ನಡೆಸಿ ಕನ್ನಡ ಉಳಿವಿಗೆ ಶ್ರಮಿಸಿದವರು. ರಾಜ್‌ಕುಮಾರ್ ಅವರನ್ನ ಕನ್ನಡಿಗರು, ನಟಸಾರ್ವಭೌಮ, ವರನಟ , ಗಾನಗಂಧರ್ವ, ರಸಿಕರ ರಾಜ, ಬಂಗಾರದ ಮನುಷ್ಯ ಹಾಗೂ ಕನ್ನಡ ಕಂಠೀರವ ಅಂತ ಹಲವು ಬಿರುದುಗಳಿಂದ ಕರೆಯುತ್ತಾರೆ. ಕನ್ನಡ ನಾಡು ಇಷ್ಟೊಂದು ಪ್ರೀತಿಯಿಂದ ಸ್ಮರಿಸುವ ರಾಜ್‌ಕುಮಾರ್‌ ಅವರನ್ನ ತಮಿಳಿಗನೊಬ್ಬ ರಾಜ್‌ಕುಮಾರ್ ನಮ್ಮವರು ಅಂತ ಹೇಳಿರುವುದು ಸಹಜವಾಗಿಯೇ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ವ್ಯಕ್ತಿ ಮಾಡಿದ ಟ್ವೀಟ್‌ನಲ್ಲಿ ಏನಿದೆ ?

ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ತಮಿಳಿಗ Walter White (@KarnatakaB3i) ಎನ್ನುವ ಖಾತೆಯಿಂದ ಮಾಡಲಾಗಿರುವ ಟ್ವೀಟ್‌ನಲ್ಲಿ, ಕನ್ನಡ ಚಿತ್ರರಂಗದ ಈ ಮೂವರು ಪ್ರಮುಖ ಸೂಪರ್‌ಸ್ಟಾರ್‌ಗಳು ಹುಟ್ಟಿನಿಂದ ಅಪ್ಪಟ ಕನ್ನಡಿಗರಲ್ಲ. ನಟರಾದ ಡಾ. ರಾಜ್‌ಕುಮಾರ್, ದರ್ಶನ್ ಹಾಗೂ ಶಂಕರ್ ನಾಗ್ ಕನ್ನಡಿಗರಲ್ಲ ಅಂತ ಹೇಳಲಾಗಿದೆ.

ಡಾ. ರಾಜ್‌ಕುಮಾರ್ - ತಮಿಳು ಈಡಿಗ ಸಮುದಾಯ

ದರ್ಶನ್ - ತೆಲುಗು ನಾಯ್ಡು ಸಮುದಾಯ

ಶಂಕರ್ ನಾಗ್ - ಕೊಂಕಣಿ ಸಮುದಾಯದವರು ಆದರೆ ಇಂದು ಬೆಂಗಳೂರಿನ ಪ್ರತಿಯೊಂದು ಬೀದಿಯಲ್ಲೂ, ಆಟೋ ಮತ್ತು ಟ್ಯಾಕ್ಸಿಗಳಲ್ಲೂ ಇವರ ಫೋಟೋಗಳನ್ನು ಕಾಣಬಹುದು ಎಂದು ಪೋಸ್ಟ್‌ ಮಾಡಲಾಗಿದೆ.

Gold: ಚಿನ್ನದ ಬೆಲೆ ಪಾತಾಳಕ್ಕೆ; ಈಗ ಬಂಗಾರ ಖರೀದಿ ಮಾಡಬಹುದಾ ? ಈ 5 ಅಂಶಗಳು ನೆನಪಿರಲಿ!
Gold: ಚಿನ್ನದ ಬೆಲೆ ಪಾತಾಳಕ್ಕೆ; ಈಗ ಬಂಗಾರ ಖರೀದಿ ಮಾಡಬಹುದಾ ? ಈ 5 ಅಂಶಗಳು ನೆನಪಿರಲಿ!

ಕನ್ನಡಿಗರು ಕೊಟ್ಟ ತಿರುಗೇಟು ಏನು ?

ಇನ್ನು ಕನ್ನಡದ ಪ್ರಮುಖ ನಟರಾದ ಡಾ. ರಾಜ್‌ಕುಮಾರ್, ದರ್ಶನ್ ಹಾಗೂ ಶಂಕರ್ ನಾಗ್ ಅವರು ಅಪ್ಪಟ ಕನ್ನಡಿಗರಲ್ಲ ಅಥವಾ ಮೂಲ ಕನ್ನಡಿಗರಲ್ಲ ಎನ್ನುವ ಸೋಷಿಯಲ್ ಮೀಡಿಯಾ ಪೋಸ್ಟ್‌ಗೆ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ.

ಡಾ. ರಾಜ್‌ಕುಮಾರ್ ಅವರು ತಮಿಳು ಈಡಿಗ ಸಮುದಾಯದವರು ಎಂದು ನಿಮಗೆ ಹೇಳಿದವರು ಯಾರು, ಹಳೆಯ ಮೈಸೂರು ಸಂಸ್ಥಾನದ ಗಡಿಗಳ ಬಗ್ಗೆ ನಿಮಗೆ ತಿಳಿದಿಲ್ಲವೇ? ಅವರು ಹುಟ್ಟಿದ ಊರು ಅಂದು ಮೈಸೂರು ಸಂಸ್ಥಾನದ ಭಾಗವಾಗಿತ್ತು. ರಾಜ್ಯಗಳ ಪುನರ್‌ವಿಂಗಡಣೆಯ ನಂತರ ಆ ಪ್ರದೇಶ ತಮಿಳುನಾಡಿಗೆ ಸೇರಿತು. ಕೊಳ್ಳೇಗಾಲ, ಈಗಿನ ಊಟಿ ಹಾಗೂ ಕೊಯಮತ್ತೂರು ಜಿಲ್ಲೆಯ ಕೆಲವು ಭಾಗಗಳೂ ಈ ಗಡಿ ಬದಲಾವಣೆಗೆ ಒಳಪಟ್ಟವು. ಅವರ ಬಾಲ್ಯವೂ ಚಾಮರಾಜನಗರದ ಭಾಗವಾಗಿತ್ತು ಎಂದು ಕನ್ನಡಿಗರು ತಿರುಗೇಟು ಕೊಟ್ಟಿದ್ದಾರೆ.

ಅದೇ ರೀತಿ ನೀವು ಏನು ಬೇಕಾದರೂ ಹೇಳಬಹುದು.. ರಾಜ್‌ಕುಮಾರ್ ತಮಿಳುನಾಡಿಗೆ ಸೇರಿದ ಪ್ರದೇಶದಲ್ಲಿ ಜನಿಸಿದರು. ಅಂದರೆ ಅವರು ತಮಿಳು ಎಂದು ಅರ್ಥವಲ್ಲ. ಪುಟ್ಟಣ್ಣ ಅವರ ಮಾತೃಭಾಷೆ ತೆಲುಗು ಆಗಿದ್ದರೂ ಅವರು ತಮ್ಮನ್ನು ತಾವು ಕನ್ನಡಿಗರೆಂದು ಗುರುತಿಸಿಕೊಂಡರು. ಕೆಎನ್‌ನಲ್ಲಿರುವ ಕೊಂಕಣಿಗರು ನಾವು ಕನ್ನಡಿಗರಲ್ಲ ಎಂದು ಎಂದಿಗೂ ಹೇಳುವುದಿಲ್ಲ. ಆದ್ದರಿಂದ ಇತರ ಹೆಸರುಗಳನ್ನು ಹುಡುಕಿ ಎಂದು ಕನ್ನಡಿಗರು ತಿರುಗೇಟು ಕೊಟ್ಟಿದ್ದಾರೆ.

ತಮಿಳುನಾಡಿನ ಬಗ್ಗೆ ದೊಡ್ಡ ಪಟ್ಟಿಯನ್ನೇ ಕೊಟ್ಟ ಕನ್ನಡಿಗರು!

ಇನ್ನು ತಮಿಳುನಾಡಿನಲ್ಲಿರುವ ಪ್ರಭಾವ ವ್ಯಕ್ತಿಗಳು ಯಾವ ಯಾವ ಭಾಷೆ ಹಾಗೂ ರಾಜ್ಯದವರು ಎನ್ನುವುದಕ್ಕೆ ಕನ್ನಡಿಗರು ದೊಡ್ಡದೊಂದು ಪಟ್ಟಿಯನ್ನೇ ಕೊಟ್ಟಿದ್ದಾರೆ.

ಚಿನ್ನದ ಬೆಲೆ ಇಳಿಕೆ ಬೆನ್ನಲ್ಲೇ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಚಿನ್ನದ ವ್ಯಾಪಾರಿಗಳು; ಕಾರಣವೇನು, ಪತ್ರದಲ್ಲಿ ಏನಿದೆ ?
ಚಿನ್ನದ ಬೆಲೆ ಇಳಿಕೆ ಬೆನ್ನಲ್ಲೇ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಚಿನ್ನದ ವ್ಯಾಪಾರಿಗಳು; ಕಾರಣವೇನು, ಪತ್ರದಲ್ಲಿ ಏನಿದೆ ?
ವ್ಯಕ್ತಿ ಭಾಷೆ
ಎಂಜಿಆರ್ ಮಲಯಾಳಿ
ಕರುಣಾನಿಧಿ ತೆಲುಗು
ಜಯಲಲಿತಾ ಕನ್ನಡ
ಅರ್ಜುನ್ ಸರ್ಜಾ ಕನ್ನಡ
ಪ್ರಭುದೇವ ಕನ್ನಡ
ಅಥರ್ವ ಕನ್ನಡ
ಪೆರಿಯಾರ್ ಕನ್ನಡ
ಸರೋಜಾದೇವಿ ಕನ್ನಡ
ಅಜಿತ್ ಸಿಂಧಿ
ಜಯಂ ರವಿ ತೆಲುಗು
ವಿಕ್ರಮ್ ಮಲಯಾಳಂ
ರಜನಿಕಾಂತ್ ಕನ್ನಡ
ವಿಜಯ್ ಸೇತುಪತಿ ತೆಲುಗು
ವಿಶಾಲ್ ತೆಲುಗು
ಜೀವ ಮಾರ್ವಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+