WhatsApp ಬಳಕೆದಾರರಿಗೆ ಭರ್ಜರಿ ಸಿಹಿಸುದ್ದಿ: 'ಶೆಡ್ಯೂಲ್ ಮೆಸೇಜ್' ಫೀಚರ್ ಬಿಡುಗಡೆ, ಬಳಸುವುದು ಹೇಗೆ?

WhatsApp: ಜಗತ್ತಿನ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್, ತನ್ನ ಬಳಕೆದಾರರಿಗೆ ಅತ್ಯಂತ ಉಪಯುಕ್ತವಾದ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ. ಬಹುದಿನಗಳಿಂದ ನಿರೀಕ್ಷಿಸಲಾಗುತ್ತಿದ್ದ 'ಶೆಡ್ಯೂಲ್ ಮೆಸೇಜ್' ಫೀಚರ್ ಅನ್ನು ಈಗ ಅಧಿಕೃತವಾಗಿ ಬಿಡುಗಡೆಗೊಳಿಸಿದ್ದು, ಬಳಕೆದಾರರು ತಮಗೆ ಬೇಕಾದ ಸಂದೇಶಗಳನ್ನು ಮೊದಲೇ ಸಿದ್ಧಪಡಿಸಿ ನಿಗದಿತ ಸಮಯಕ್ಕೆ ತಲುಪುವಂತೆ ಸೆಟ್‌ ಮಾಡಬಹುದಾಗಿದೆ.

ಜಗತ್ತಿನ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ತನ್ನ ಬಳಕೆದಾರರು ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ 'ಶೆಡ್ಯೂಲ್ ಮೆಸೇಜ್' ವೈಶಿಷ್ಟ್ಯವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇನ್ಮುಂದೆ ಬಳಕೆದಾರರು ತಮಗೆ ಬೇಕಾದ ಸಂದೇಶಗಳನ್ನು ಮೊದಲೇ ಟೈಪ್ ಮಾಡಿಟ್ಟು, ನಿರ್ದಿಷ್ಟ ದಿನಾಂಕ ಮತ್ತು ಸಮಯಕ್ಕೆ ಸರಿಯಾಗಿ ತಲುಪುವಂತೆ ಸೆಟ್ ಮಾಡಬಹುದಾಗಿದೆ.

WhatsApp Introduces Scheduled Messages Feature How to Schedule Texts Photos Videos Know details

ಮೆಟಾ ಒಡೆತನದ ವಾಟ್ಸಾಪ್ ಸಂಸ್ಥೆಯು 'ನಮ್ಮ ಬಳಕೆದಾರರು ಅತಿ ಹೆಚ್ಚು ಬೇಡಿಕೆಯಿಟ್ಟಿದ್ದ ವೈಶಿಷ್ಟ್ಯಗಳಲ್ಲಿ ಒಂದನ್ನು ಈಗ ಪರಿಚಯಿಸುತ್ತಿದ್ದೇವೆ,' ಎಂದು ತಿಳಿಸಿದೆ. ಈ ಹೊಸ ಫೀಚರ್ ಮೂಲಕ ಕನಿಷ್ಠ 10 ನಿಮಿಷಗಳಿಂದ ಹಿಡಿದು ಗರಿಷ್ಠ 14 ದಿನಗಳವರೆಗೆ ಮುಂಚಿತವಾಗಿ ಸಂದೇಶಗಳನ್ನು ಶೆಡ್ಯೂಲ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹುಟ್ಟುಹಬ್ಬದ ಶುಭಾಶಯ ಕೋರಲು, ಪ್ರಮುಖ ಮೀಟಿಂಗ್ ಅಥವಾ ಅಪಾಯಿಂಟ್‌ಮೆಂಟ್ ನೆನಪಿಸಲು ಹಾಗೂ ಕಚೇರಿ ಕೆಲಸದ ಸಂದೇಶಗಳನ್ನು ಸರಿಯಾದ ಸಮಯಕ್ಕೆ ಕಳುಹಿಸಲು ಇದು ಅತ್ಯಂತ ಉಪಯುಕ್ತವಾಗಿದೆ.

ಫೋಟೋ, ವಿಡಿಯೋಗಳ ಶೆಡ್ಯೂಲ್‌ಗೆ ಅವಕಾಶ

ಈ ವೈಶಿಷ್ಟ್ಯವು ವೈಯಕ್ತಿಕ ಚಾಟ್‌ಗಳು ಹಾಗೂ ಗ್ರೂಪ್ ಚಾಟ್‌ಗಳೆರಡರಲ್ಲೂ ಕಾರ್ಯನಿರ್ವಹಿಸುತ್ತದೆ. ಕೇವಲ ಟೆಕ್ಸ್ಟ್ ಸಂದೇಶಗಳು ಮಾತ್ರವಲ್ಲದೆ, ಫೋಟೋ ಮತ್ತು ವಿಡಿಯೋಗಳನ್ನು ಸಹ ಮುಂಚಿತವಾಗಿ ನಿಗದಿಪಡಿಸಿದ ಸಮಯಕ್ಕೆ ಕಳುಹಿಸಬಹುದು. ಮುಂಬರುವ ವಾರಗಳಲ್ಲಿ ಜಾಗತಿಕವಾಗಿ ಎಲ್ಲಾ ಬಳಕೆದಾರರಿಗೆ ಈ ಅಪ್‌ಡೇಟ್ ಲಭ್ಯವಾಗಲಿದೆ. ಸದ್ಯಕ್ಕೆ 'ವಾಟ್ಸಾಪ್ ಚಾನೆಲ್‌ಗಳಿಗೆ' ಈ ಸೌಲಭ್ಯ ಲಭ್ಯವಿಲ್ಲದಿದ್ದರೂ, ಮುಂದಿನ ಅಪ್‌ಡೇಟ್‌ಗಳಲ್ಲಿ ಅದನ್ನೂ ಸೇರಿಸುವ ಸಾಧ್ಯತೆಯಿದೆ.

ಪ್ರತಿಸ್ಪರ್ಧಿ ಆ್ಯಪ್‌ಗಳಾದ ಟೆಲಿಗ್ರಾಮ್ ಮತ್ತು ಸಿಗ್ನಲ್‌ನಲ್ಲಿ ಈ ಸೌಲಭ್ಯ ಮೊದಲಿನಿಂದಲೂ ಇತ್ತು. ವಾಟ್ಸಾಪ್‌ನ ನೂತನ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿರುವ ಕುನಾಲ್ ಶಾ ಅವರು, ಬಳಕೆದಾರರ ಅನುಭವವನ್ನು ಸರಳಗೊಳಿಸುವ ಮತ್ತು ಹೆಚ್ಚಿನ ಉಪಯುಕ್ತ ಫೀಚರ್‌ಗಳನ್ನು ತರುವ ಭರವಸೆ ನೀಡಿದ ಬೆನ್ನಲ್ಲೇ ಈ ಮಹತ್ವದ ಅಪ್‌ಡೇಟ್ ಹೊರಬಂದಿದೆ.

ವಾಟ್ಸಾಪ್‌ನಲ್ಲಿ ಮೆಸೇಜ್ ಶೆಡ್ಯೂಲ್ ಮಾಡುವುದು ಹೇಗೆ?

* ಈ ವೈಶಿಷ್ಟ್ಯವನ್ನು ಬಳಸುವ ಮೊದಲು ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆ್ಯಪ್ ಸ್ಟೋರ್‌ನಿಂದ ನಿಮ್ಮ ವಾಟ್ಸಾಪ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಿಕೊಳ್ಳಿ.

* ವಾಟ್ಸಾಪ್ ತೆರೆದು, ನೀವು ಯಾರಿಗೆ ಸಂದೇಶ ಕಳುಹಿಸಲು ಬಯಸುತ್ತೀರೋ ಅವರ ವೈಯಕ್ತಿಕ ಚಾಟ್ ಅಥವಾ ಗ್ರೂಪ್ ತೆರೆಯಿರಿ.

* ನೀವು ಕಳುಹಿಸಬೇಕಾದ ಟೆಕ್ಸ್ಟ್ ಮೆಸೇಜ್ ಟೈಪ್ ಮಾಡಿ (ಅಥವಾ ಫೋಟೋ/ವಿಡಿಯೋ ಆಯ್ಕೆ ಮಾಡಿ).

* ಸಾಮಾನ್ಯವಾಗಿ ಮೆಸೇಜ್ ಕಳುಹಿಸಲು ಒತ್ತುವ 'ಸೆಂಡ್' (Send) ಬಟನ್ ಅನ್ನು ಒಂದೆರಡು ಸೆಕೆಂಡುಗಳ ಕಾಲ ಒತ್ತಿ ಹಿಡಿಯಿರಿ.

* ಆಗ ಪರದೆಯ ಮೇಲೆ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡುವ ಆಯ್ಕೆ ಕಾಣಿಸುತ್ತದೆ. ನಿಮಗೆ ಬೇಕಾದ ದಿನಾಂಕ ಹಾಗೂ ಸಮಯವನ್ನು ನಿಗದಿಪಡಿಸಿ.

* ಕೊನೆಯದಾಗಿ ನಿಮ್ಮ ಆಯ್ಕೆಯನ್ನು ದೃಢೀಕರಿಸಿ.

ಪ್ರಮುಖ ವಿಶೇಷತೆಗಳು

* ಫೋನ್ ಆಫ್ ಆಗಿದ್ದರೂ ಮೆಸೇಜ್ ಹೋಗುತ್ತದೆ: ಒಮ್ಮೆ ನೀವು ಮೆಸೇಜ್ ಶೆಡ್ಯೂಲ್ ಮಾಡಿದ ನಂತರ, ನಿಗದಿತ ಸಮಯಕ್ಕೆ ನಿಮ್ಮ ಫೋನ್ ಸ್ವಿಚ್ ಆಫ್ ಆಗಿದ್ದರೂ ಅಥವಾ ಬ್ಯಾಟರಿ ಖಾಲಿಯಾಗಿದ್ದರೂ ಸಹ ಸಂದೇಶವು ಸರಿಯಾದ ಸಮಯಕ್ಕೆ ಸ್ವೀಕರಿಸುವವರಿಗೆ ತಲುಪುತ್ತದೆ.

* ಸಂಪೂರ್ಣ ಸುರಕ್ಷಿತ: ಶೆಡ್ಯೂಲ್ ಮಾಡಿದ ಸಂದೇಶಗಳಿಗೂ ವಾಟ್ಸಾಪ್‌ನ 'ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್' ಭದ್ರತೆ ಇರಲಿದ್ದು, ಕಳುಹಿಸುವವರು ಮತ್ತು ಸ್ವೀಕರಿಸುವವರನ್ನು ಹೊರತುಪಡಿಸಿ ವಾಟ್ಸಾಪ್ ಸಂಸ್ಥೆಗೂ ಸಹ ಆ ಸಂದೇಶವನ್ನು ಓದಲು ಸಾಧ್ಯವಿಲ್ಲ.

* ಎಡಿಟ್ ಮತ್ತು ಡಿಲೀಟ್ ಆಯ್ಕೆ: ನೀವು ಶೆಡ್ಯೂಲ್ ಮಾಡಿದ ಎಲ್ಲಾ ಸಂದೇಶಗಳನ್ನು ಒಂದೇ ಕಡೆ ವೀಕ್ಷಿಸಬಹುದು ಹಾಗೂ ಅವು ತಲುಪುವ ಮುನ್ನವೇ ಬೇಕಿದ್ದರೆ ಡಿಲಿಟ್ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+