ಜೇಕಬ್ ಬೆಥೆಲ್ ಕೈಬಿಟ್ಟ RCB ನಿರ್ಧಾರಕ್ಕೆ ಇರ್ಫಾನ್ ಪಠಾಣ್ ಅಚ್ಚರಿ; ಹರಾಜಿಗೆ ನೀಡಿದ್ರು ಮಹತ್ವದ ಸಲಹೆ

IPL 2027 RCB: ಐಪಿಎಲ್‌ 2027 ಮಿನಿ ಹರಾಜಿಗೆ ಇನ್ನೂ ಕೆಲವೇ ದಿನಗಳು ಬಾಕಿಯಿವೆ. ಇದಕ್ಕೂ ಮುನ್ನ ಸ್ಟಾರ್ ಯುವ ಆಟಗಾರ ಜೇಕಬ್‌ ಬೆಥೆಲ್‌ ಅವರನ್ನು ಕೈಬಿಟ್ಟ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿ ನಿರ್ಧಾರದ ಕುರಿತು ಇರ್ಫಾನ್ ಪಠಾಣ್ ಅಚ್ಚರಿ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಇನ್ನೂ ಹಲವು ಮಹತ್ವದ ಸಲಹೆಗಳನ್ನು ನೀಡಿದ್ದಾರೆ.

ಸತತ ಎರಡು ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿ ಇದೀಗ ಹ್ಯಾಟ್ರಿಕ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು, ಮುಂಬರುವ 2027ರ ಐಪಿಎಲ್ ಮಿನಿ ಹರಾಜಿಗೂ ಮುನ್ನ ತನ್ನ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದೆ. ಆದರೆ ಇಂಗ್ಲೆಂಡ್‌ನ ಯುವ ಸ್ಫೋಟಕ ಬ್ಯಾಟರ್ ಜೇಕಬ್ ಬೆಥೆಲ್ ಅವರನ್ನು ತಂಡದಿಂದ ಬಿಡುಗಡೆ ಮಾಡಿರುವ ಆರ್‌ಸಿಬಿ ನಿರ್ಧಾರಕ್ಕೆ ಭಾರತದ ಮಾಜಿ ಕ್ರಿಕೆಟರ್ ಇರ್ಫಾನ್ ಪಠಾಣ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

IPL 2027 Irfan Pathan Questions RCB Decision to Release Jacob Bethell Highlights Hazlewood Backup

ಬೆಥೆಲ್ ಓರ್ವ ಅಪರೂಪದ ಪ್ರತಿಭೆ: ಇರ್ಫಾನ್ ಪಠಾಣ್

ಜಿಯೋಸ್ಟಾರ್‌ನ ಐಪಿಎಲ್ 2027 ರಿಟೆನ್ಷನ್ಸ್ ಕಾರ್ಯಕ್ರಮದಲ್ಲಿ ಆರ್‌ಸಿಬಿ ತಂಡದ ಬದಲಾವಣೆಗಳ ಬಗ್ಗೆ ಮಾತನಾಡಿದ ಇರ್ಫಾನ್ ಪಠಾಣ್ ಅವರು, 'ನಿಜ ಹೇಳಬೇಕೆಂದರೆ, ಜೇಕಬ್ ಬೆಥೆಲ್ ಅವರನ್ನು ಬಿಡುಗಡೆ ಮಾಡಿದ್ದನ್ನು ಹೊರತುಪಡಿಸಿ ಆರ್‌ಸಿಬಿಯ ಬೇರೆ ಯಾವುದೇ ನಿರ್ಧಾರ ನನಗೆ ಅಚ್ಚರಿ ತಂದಿಲ್ಲ. ಒಂದು ವೇಳೆ ಆರಂಭಿಕ ಆಟಗಾರ ಫಿಲ್ ಸಾಲ್ಟ್ ವಿಫಲರಾದರೆ, ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯವಿರುವ ಅಪರೂಪದ ಪ್ರತಿಭೆ ಬೆಥೆಲ್ ಅತ್ಯುತ್ತಮ ಬದಲಿ ಆಯ್ಕೆಯಾಗುತ್ತಿದ್ದರು. ಅವರು ಅಷ್ಟೊಂದು ದುಬಾರಿ ಆಟಗಾರನೂ ಆಗಿರಲಿಲ್ಲ, ಹೀಗಾಗಿ ಅವರನ್ನು ಉಳಿಸಿಕೊಳ್ಳಬೇಕಿತ್ತು,' ಎಂದು ಹೇಳಿದ್ದಾರೆ.

ಮತ್ತೊಂದೆಡೆ ಅನುಭವಿ ಸ್ಪಿನ್ನರ್ ಸ್ವಪ್ನಿಲ್ ಸಿಂಗ್, ಮಂಗೇಶ್ ಯಾದವ್ ಮತ್ತು ರಿಚರ್ಡ್ ಗ್ಲೀಸನ್ ಅವರನ್ನು ಕೈಬಿಟ್ಟ ನಿರ್ಧಾರವನ್ನು ಇರ್ಫಾನ್ ಪಠಾಣ್ ಅವರು ಸಮರ್ಥಿಸಿಕೊಂಡಿದ್ದಾರೆ. ಕೃನಾಲ್ ಪಾಂಡ್ಯ ಅವರಿಗೆ ಬ್ಯಾಕಪ್ ಆಗಿ ಯುವ ಎಡಗೈ ಸ್ಪಿನ್ನರ್ ವಿಕಿ ಓಸ್ತ್ವಾಲ್ ಅವರನ್ನು ಇಳಿಸಲು ಫ್ರಾಂಚೈಸಿ ಮುಂದಾಗಿರುವುದು ಉತ್ತಮ ನಡೆ ಎಂದು ಅವರು ಶ್ಲಾಘಿಸಿದ್ದಾರೆ.

ಹೇಜಲ್‌ವುಡ್‌ಗೆ ಸೂಕ್ತ ಬ್ಯಾಕಪ್ ಹುಡುಕುವುದೇ ಮೊದಲ ಆದ್ಯತೆ

ಬೆಥೆಲ್ ಬಿಡುಗಡೆಯ ಹೊರತಾಗಿಯೂ ಆರ್‌ಸಿಬಿ ತಂಡ ಅತ್ಯಂತ ಬಲಿಷ್ಠ ಮತ್ತು ಸಮತೋಲಿತವಾಗಿದೆ ಎಂದು ಪಠಾಣ್ ಹೇಳಿದ್ದಾರೆ. 'ಹರಾಜಿನಲ್ಲಿ ಬೆಂಗಳೂರು ಬಳಿ ಸೀಮಿತ ಮೊತ್ತ ಇರುವುದರಿಂದ, ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಅವರಿಗೆ ಸಮರ್ಥ ಬದಲಿ ಆಟಗಾರನನ್ನು ಖರೀದಿಸುವುದೇ ತಂಡದ ಮೊದಲ ಆದ್ಯತೆಯಾಗಬೇಕು. ಹೊಸ ಚೆಂಡು ಮತ್ತು ಹಳೆಯ ಚೆಂಡಿನಲ್ಲಿ ಒತ್ತಡವನ್ನು ನಿಭಾಯಿಸಿ ಬೌಲಿಂಗ್ ಮಾಡಬಲ್ಲ ವೇಗಿಯನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಅತ್ಯಗತ್ಯ. ಉಳಿದಂತೆ ತಂಡ ಅತ್ಯುತ್ತಮವಾಗಿದೆ' ಎಂದು ಪಠಾಣ್ ಸಲಹೆ ನೀಡಿದ್ದಾರೆ.

ಐಪಿಎಲ್ 2027ರಿಂದ ಹೊರಗುಳಿದ ಜೇಕಬ್ ಬೆಥೆಲ್

ಇದೇ ವೇಳೆ ಬಲ ಮಂಡಿಯ ಗಾಯದ ಸಮಸ್ಯೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿರುವ ಕಾರಣ ತಾವು 2027ರ ಐಪಿಎಲ್ ಆವೃತ್ತಿಯಿಂದ ಹೊರಗುಳಿಯುತ್ತಿರುವುದಾಗಿ ಜೇಕಬ್ ಬೆಥೆಲ್ ಇನ್‌ಸ್ಟಾಗ್ರಾಮ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಕಳೆದ ಎರಡು ವರ್ಷಗಳ ಕಾಲ ಆರ್‌ಸಿಬಿ ತಂಡದ ಭಾಗವಾಗಿ ಎರಡು ಪ್ರಶಸ್ತಿ ವಿಜೇತ ಅಭಿಯಾನಗಳಲ್ಲಿ ಪಾಲ್ಗೊಂಡಿದ್ದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

'ಎರಡು ಅದ್ಭುತ ಆವೃತ್ತಿಗಳಲ್ಲಿ ಅವಕಾಶ ನೀಡಿದ್ದಕ್ಕಾಗಿ ಆರ್‌ಸಿಬಿಗೆ ಧನ್ಯವಾದಗಳು. ನನ್ನ ಮೊದಲ ಐಪಿಎಲ್ ಅನುಭವಕ್ಕೆ ಇದಕ್ಕಿಂತ ಉತ್ತಮ ಫ್ರಾಂಚೈಸಿ ಸಿಗಲು ಸಾಧ್ಯವಿರಲಿಲ್ಲ. ದಿಗ್ಗಜ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದು ಮತ್ತು ಎರಡು ಬಾರಿ ಟ್ರೋಫಿ ಗೆದ್ದ ತಂಡದ ಭಾಗವಾಗಿದ್ದು ನನ್ನ ಅದೃಷ್ಟ. ದುರದೃಷ್ಟವಶಾತ್ ಮಂಡಿ ನೋವಿನ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲು ನಾನು ಈ ಬಾರಿ ಐಪಿಎಲ್ ಆಡುತ್ತಿಲ್ಲ. ಶೀಘ್ರದಲ್ಲೇ ಮತ್ತೆ ಆರ್‌ಸಿಬಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವ ಭರವಸೆಯಿದೆ,' ಎಂದು ಬೆಥೆಲ್ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಇರ್ಫಾನ್ ಪಠಾಣ್ ನೀಡಿರುವ ಸಲಹೆಗಳು ಇದೀಗ ಸಖತ್ ಸದ್ದು ಮಾಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+