ರೈತರಿಗೆ ಗುಡ್‌ನ್ಯೂಸ್; ಬೆಳೆಹಾನಿ ಪರಿಹಾರದ ಎರಡನೇ ಕಂತಿನ ₹2,500 ಬಿಡುಗಡೆಗೆ ಸರ್ಕಾರದ ಆದೇಶ

ಬೆಂಗಳೂರು: 2026ರ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ರೈತರಿಗೆ ಕರ್ನಾಟಕ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಿದೆ. ಈಗಾಗಲೇ ಮೊದಲ ಕಂತಿನಲ್ಲಿ ₹2,500 ಪರಿಹಾರ ನೀಡಿರುವ ಸರ್ಕಾರ, ಇದೀಗ ಎರಡನೇ ಕಂತಿನ ₹2,500 ಬಿಡುಗಡೆ ಮಾಡಲು ಅಧಿಕೃತ ಆದೇಶ ಹೊರಡಿಸಿದೆ. ಇದರೊಂದಿಗೆ ಅರ್ಹ ರೈತರಿಗೆ ಕನಿಷ್ಠ ₹5,000 ಬೆಳೆಹಾನಿ ಪರಿಹಾರ ದೊರೆಯಲಿದೆ. ನವೆಂಬರ್ 23, 2026ರಂದು ಈ ಕುರಿತು ಸರ್ಕಾರ ಆದೇಶ ಹೊರಡಿಸಿದ್ದು, ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (DBT) ಮೂಲಕ ಹಣ ಜಮೆ ಮಾಡಲು ಸೂಚಿಸಲಾಗಿದೆ.

57.93 ಲಕ್ಷ ಹೆಕ್ಟೇರ್ ಬೆಳೆ ಹಾನಿ; 226 ತಾಲ್ಲೂಕುಗಳು ಬರಪೀಡಿತ

2026ರ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಮುಂಗಾರು ಅವಧಿಯಲ್ಲಿ ರಾಜ್ಯದಲ್ಲಿ ಶೇ.35ರಷ್ಟು ಮಳೆ ಕೊರತೆ ಉಂಟಾಗಿದೆ. ಪರಿಣಾಮ ರಾಜ್ಯದ ಒಟ್ಟು 240 ತಾಲ್ಲೂಕುಗಳ ಪೈಕಿ 226 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇವುಗಳಲ್ಲಿ 186 ತಾಲ್ಲೂಕುಗಳು ತೀವ್ರ ಬರ ಹಾಗೂ 40 ತಾಲ್ಲೂಕುಗಳು ಸಾಧಾರಣ ಬರ ಪರಿಸ್ಥಿತಿಯನ್ನು ಎದುರಿಸಿವೆ.

Karnataka Government Crop Loss Compensation Conditions Farmers Must Meet to Receive 2nd Instalment of 2 500

ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಗಳ ಜಂಟಿ ಸಮೀಕ್ಷೆಯ ಪ್ರಕಾರ, ರಾಜ್ಯದಲ್ಲಿ ಶೇ.33ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಒಟ್ಟು 57.93 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. ಇದರಲ್ಲಿ 53.92 ಲಕ್ಷ ಹೆಕ್ಟೇರ್ ಕೃಷಿ ಬೆಳೆಗಳು ಹಾಗೂ 4.01 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಸೇರಿವೆ. ಬೆಳೆ ಹಾನಿಗೊಳಗಾದ ಪ್ರದೇಶಗಳಲ್ಲಿ 44.69 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಬೆಳೆಗಳು, 11.83 ಲಕ್ಷ ಹೆಕ್ಟೇರ್ ನೀರಾವರಿ ಬೆಳೆಗಳು ಹಾಗೂ 1.41 ಲಕ್ಷ ಹೆಕ್ಟೇರ್ ಬಹುವಾರ್ಷಿಕ ಬೆಳೆಗಳಿವೆ. ಈ ನಷ್ಟಕ್ಕೆ ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ (NDRF) ಅಡಿಯಲ್ಲಿ ₹22,400.58 ಕೋಟಿ ನೆರವು ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ.

ಕೇಂದ್ರದ ಅನುದಾನ ಬರುವ ಮುನ್ನವೇ ರಾಜ್ಯದಿಂದ ಪರಿಹಾರ

ಕೇಂದ್ರ ಸರ್ಕಾರದಿಂದ NDRF ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ಹೆಚ್ಚುವರಿ ಪರಿಹಾರದ ಹೊಣೆ ಹೊತ್ತಿದೆ. ನವೆಂಬರ್ 5ರಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಘೋಷಿಸಿದಂತೆ, ಬೆಳೆ ವರ್ಗವನ್ನು ಪರಿಗಣಿಸದೆ ಪ್ರತಿ ಅರ್ಹ ರೈತರಿಗೆ ಕನಿಷ್ಠ ₹5,000 ಪರಿಹಾರ ನೀಡಲು ನಿರ್ಧರಿಸಲಾಗಿದೆ.

ಇನ್ಮುಂದೆ ದೂರುಗಳ ಪರಿಹಾರ ಸಕಾಲ ವ್ಯಾಪ್ತಿಯಲ್ಲಿ; ಸೇವೆ ವಿಳಂಬ ಮಾಡಿದ ಅಧಿಕಾರಿಗಳಿಗೆ ₹1,500 ದಂಡ!
ಇನ್ಮುಂದೆ ದೂರುಗಳ ಪರಿಹಾರ ಸಕಾಲ ವ್ಯಾಪ್ತಿಯಲ್ಲಿ; ಸೇವೆ ವಿಳಂಬ ಮಾಡಿದ ಅಧಿಕಾರಿಗಳಿಗೆ ₹1,500 ದಂಡ!

ಈಗಾಗಲೇ ಮೊದಲ ಕಂತಿನಲ್ಲಿ ₹2,500 ಪಾವತಿಸಲಾಗಿದ್ದು, ಇದೀಗ ಬಾಕಿ ಇರುವ ಎರಡನೇ ಕಂತಿನ ₹2,500 ಬಿಡುಗಡೆಗೆ ಅನುಮೋದನೆ ನೀಡಲಾಗಿದೆ. 2026-27ನೇ ಸಾಲಿನ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿ (SDRF) ಅಡಿಯಲ್ಲಿ ಈ ಹಣವನ್ನು ಭರಿಸಲು ಸರ್ಕಾರ ಮಂಜೂರಾತಿ ನೀಡಿದೆ.

ಯಾವ ಬೆಳೆಗಳಿಗೆ ಎಷ್ಟು ಪರಿಹಾರ ಸಿಗಲಿದೆ?

ಕೇಂದ್ರ ಗೃಹ ಸಚಿವಾಲಯದ ಪರಿಷ್ಕೃತ ಮಾರ್ಗಸೂಚಿಯ ಪ್ರಕಾರ, ಗರಿಷ್ಠ ಎರಡು ಹೆಕ್ಟೇರ್ ಜಮೀನಿಗೆ ಮಾತ್ರ ಬೆಳೆಹಾನಿ ಪರಿಹಾರ ನೀಡಲಾಗುತ್ತದೆ. ಬೆಳೆಗಳ ವರ್ಗಕ್ಕೆ ಅನುಗುಣವಾಗಿ ಪರಿಹಾರದ ದರವನ್ನು ನಿಗದಿಪಡಿಸಲಾಗಿದೆ.

- ಮಳೆಯಾಶ್ರಿತ ಬೆಳೆ: ಪ್ರತಿ ಹೆಕ್ಟೇರ್‌ಗೆ ₹11,000, ಗರಿಷ್ಠ ₹22,000.
- ನೀರಾವರಿ ಬೆಳೆ: ಪ್ರತಿ ಹೆಕ್ಟೇರ್‌ಗೆ ₹22,000, ಗರಿಷ್ಠ ₹44,000.
- ಬಹುವಾರ್ಷಿಕ ಬೆಳೆ: ಪ್ರತಿ ಹೆಕ್ಟೇರ್‌ಗೆ ₹30,000, ಗರಿಷ್ಠ ₹60,000.

ಆದರೆ ಈ ಪರಿಹಾರ ಪಡೆಯಲು ಬೆಳೆ ಹಾನಿ ಶೇ.33ಕ್ಕಿಂತ ಹೆಚ್ಚಿರಬೇಕು. ಅಲ್ಲದೆ, ಸಮೀಕ್ಷೆಯಲ್ಲಿ ದಾಖಲಾಗಿರುವ ಅರ್ಹ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ಹಣ ಪಾವತಿಸಲಾಗುತ್ತದೆ.

ರೈತರಿಗೆ ಗುಡ್‌ನ್ಯೂಸ್‌; ಡಿಸೆಂಬರ್ 1ರೊಳಗೆ ಖಾತೆಗೆ ₹5,000 ಬರ ಪರಿಹಾರ ಜಮೆ!
ರೈತರಿಗೆ ಗುಡ್‌ನ್ಯೂಸ್‌; ಡಿಸೆಂಬರ್ 1ರೊಳಗೆ ಖಾತೆಗೆ ₹5,000 ಬರ ಪರಿಹಾರ ಜಮೆ!

ರೈತರು ಅರ್ಜಿ ಸಲ್ಲಿಸಬೇಕೇ?

ಬೆಳೆಹಾನಿ ಪರಿಹಾರ ಪಡೆಯಲು ರೈತರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. FRUITS ತಂತ್ರಾಂಶದಲ್ಲಿ ನೋಂದಣಿಯಾಗಿ ಫಾರ್ಮರ್ ಐಡಿ ಹೊಂದಿರುವ ಹಾಗೂ 2026ರ ಮುಂಗಾರು ಬೆಳೆ ಸಮೀಕ್ಷೆಯಲ್ಲಿ ಹೆಸರು ಮತ್ತು ಜಮೀನಿನ ವಿವರ ದಾಖಲಾಗಿರುವ ಅರ್ಹ ರೈತರಿಗೆ ಪರಿಹಾರ ಪಾವತಿಸಲಾಗುತ್ತದೆ. ರೈತರ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತದೆ. ಹೀಗಾಗಿ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರುವುದು ಕಡ್ಡಾಯವಾಗಿದೆ.

ಪರಿಹಾರ ವಿತರಣೆಯಲ್ಲಿ ಸಣ್ಣ ರೈತರಿಗೆ ಮೊದಲ ಆದ್ಯತೆ

ಸರ್ಕಾರದ ಮಾರ್ಗಸೂಚಿಯಂತೆ ತಾಲ್ಲೂಕುವಾರು ಕಡಿಮೆ ಜಮೀನು ಹೊಂದಿರುವ ರೈತರಿಂದ ಪರಿಹಾರ ವಿತರಣೆ ಆರಂಭವಾಗಲಿದೆ. ನಂತರ ಹೆಚ್ಚಿನ ಜಮೀನು ಹೊಂದಿರುವ ರೈತರಿಗೆ ಹಣ ಪಾವತಿಸಲಾಗುತ್ತದೆ. ಪರಿಹಾರ ವಿತರಣೆಯಲ್ಲಿ ಮೊದಲು ಮಳೆಯಾಶ್ರಿತ ಬೆಳೆಗಾರರಿಗೆ, ನಂತರ ನೀರಾವರಿ ಬೆಳೆಗಾರರಿಗೆ ಹಾಗೂ ಕೊನೆಯಲ್ಲಿ ಬಹುವಾರ್ಷಿಕ ಬೆಳೆ ಬೆಳೆದ ರೈತರಿಗೆ ಹಣ ಬಿಡುಗಡೆ ಮಾಡಲಾಗುತ್ತದೆ.

ಈ ರೈತರಿಗೆ ಬೆಳೆಹಾನಿ ಪರಿಹಾರ ಸಿಗುವುದಿಲ್ಲ

ಸರ್ಕಾರದ ನಿಯಮಗಳ ಪ್ರಕಾರ, ಕೆಲವು ವಿಧದ ಜಮೀನುಗಳಿಗೆ ಪರಿಹಾರ ನೀಡುವುದಿಲ್ಲ. ಅವುಗಳೆಂದರೆ:

- ನೀರಾವರಿ ಯೋಜನೆಗಳಿಗಾಗಿ ಭೂಸ್ವಾಧೀನವಾಗಿರುವ ಜಮೀನುಗಳು.
- ಕೃಷಿಯೇತರ ಉದ್ದೇಶಕ್ಕೆ (NA) ಭೂಪರಿವರ್ತನೆಯಾದ ಜಮೀನುಗಳು.
- ಸರ್ಕಾರಿ ಜಮೀನುಗಳು.
- ಬೆಳೆಹಾನಿ ಸಮೀಕ್ಷೆಯಲ್ಲಿ ದಾಖಲಾಗದ ಜಮೀನುಗಳು.

ರೈತರು ಈ ಷರತ್ತುಗಳನ್ನು ತಿಳಿದುಕೊಳ್ಳಿ

ಬೆಳೆಹಾನಿ ಪರಿಹಾರ ವಿತರಣೆಗೆ ರಾಜ್ಯ ಸರ್ಕಾರ ಕೆಲವು ಪ್ರಮುಖ ನಿಯಮಗಳನ್ನು ವಿಧಿಸಿದೆ. ಅದರಂತೆ ಕಡಿಮೆ ಜಮೀನು ಹೊಂದಿರುವ ಸಣ್ಣ ರೈತರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಮೊದಲು ಮಳೆಯಾಶ್ರಿತ ಬೆಳೆ ಬೆಳೆದ ರೈತರಿಗೆ, ನಂತರ ನೀರಾವರಿ ಬೆಳೆಗಾರರಿಗೆ ಹಾಗೂ ಕೊನೆಯದಾಗಿ ಬಹುವಾರ್ಷಿಕ ಬೆಳೆಗಳನ್ನು ಬೆಳೆದ ರೈತರಿಗೆ ಪರಿಹಾರ ಹಣ ಬಿಡುಗಡೆ ಮಾಡಲಾಗುತ್ತದೆ.

ಪರಿಹಾರ ಪಡೆಯುವ ರೈತರ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಕಡ್ಡಾಯವಾಗಿ ಜೋಡಣೆಯಾಗಿರಬೇಕು. ಅಲ್ಲದೆ, ಆಯಾ ತಾಲ್ಲೂಕಿನಲ್ಲಿ ನಡೆದ ಬೆಳೆಹಾನಿ ಸಮೀಕ್ಷೆಯಲ್ಲಿ ಜಮೀನು ಮತ್ತು ಬೆಳೆ ವಿವರಗಳು ದಾಖಲಾಗಿರುವ ರೈತರಿಗೆ ಮಾತ್ರ ಪರಿಹಾರ ನೀಡಲಾಗುತ್ತದೆ.

ನೀರಾವರಿ ಯೋಜನೆಗಳಿಗಾಗಿ ಭೂಸ್ವಾಧೀನವಾಗಿರುವ ಜಮೀನುಗಳಿಗೆ ಹಾಗೂ ಕೃಷಿಯೇತರ ಉದ್ದೇಶಕ್ಕಾಗಿ (NA) ಭೂಪರಿವರ್ತನೆಗೊಂಡಿರುವ ಜಮೀನುಗಳಿಗೆ ಯಾವುದೇ ಪರಿಹಾರ ನೀಡುವುದಿಲ್ಲ.

ಜಂಟಿ ಖಾತೆಯಲ್ಲಿ ಜಮೀನು ಹೊಂದಿರುವ ರೈತರಿಗೆ ಅವರ ಹೆಸರಿನಲ್ಲಿ ನೋಂದಣಿಯಾಗಿರುವ ಜಮೀನಿನ ವಿಸ್ತೀರ್ಣದ ಆಧಾರದ ಮೇಲೆ ಪರಿಹಾರ ಲೆಕ್ಕ ಹಾಕಲಾಗುತ್ತದೆ. ಒಂದೇ ಹಿಸ್ಸೆ ಜಮೀನಿಗೆ ಹಲವು ಮಾಲೀಕರಿದ್ದರೆ, ಆ ಜಮೀನಿನ ಒಂದು ಬೆಳೆಗೆ ಮಾತ್ರ ಪರಿಹಾರ ದೊರೆಯಲಿದೆ.

ಇನ್ನು ಒಂದೇ ಜಮೀನಿನಲ್ಲಿ ಒಂದಕ್ಕಿಂತ ಹೆಚ್ಚು ಬೆಳೆಗಳನ್ನು ಬೆಳೆದಿದ್ದರೆ, ಯಾವ ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆಯೋ ಅದನ್ನು ಆಧರಿಸಿ ಪರಿಹಾರ ನಿಗದಿಪಡಿಸಲಾಗುತ್ತದೆ. ಒಬ್ಬ ರೈತ ಎರಡು ಅಥವಾ ಮೂರು ತಾಲ್ಲೂಕುಗಳಲ್ಲಿ ಜಮೀನು ಹೊಂದಿದ್ದರೂ ಎಲ್ಲ ಜಮೀನುಗಳನ್ನು ಒಟ್ಟುಗೂಡಿಸಿ ಗರಿಷ್ಠ ಎರಡು ಹೆಕ್ಟೇರ್ ವಿಸ್ತೀರ್ಣಕ್ಕೆ ಮಾತ್ರ ಬೆಳೆಹಾನಿ ಪರಿಹಾರ ನೀಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+