Special Trains: ಡಿಸೆಂಬರ್ ನಲ್ಲಿ ಬೆಂಗಳೂರಿನಿಂದ ಈ ಎರಡು ಮಾರ್ಗಗಳಲ್ಲಿ ವಿಶೇಷ ರೈಲುಗಳ ಕಾರ್ಯಾಚರಣೆ, ವೇಳಾಪಟ್ಟಿ

ಬೆಂಗಳೂರು: ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ನಿವಾರಣೆಗೆ ಹಾಗೂ ಪ್ರಯಾಣಿಕರ ಸಂಚಾರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ಡಿಸೆಂಬರ್ 2026ರಲ್ಲಿ 'ಸುಬೇದಾರ್‌ಗಂಜ್ - ಎಸ್‌ಎಂವಿಟಿ ಬೆಂಗಳೂರು - ಸುಬೇದಾರ್‌ಗಂಜ್, ವಿಶೇಷ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳು ಮತ್ತು ಪ್ರಯಾಗ್‌ರಾಜ್ - ಎಸ್‌ಎಂವಿಟಿ ಬೆಂಗಳೂರು - ಪ್ರಯಾಗ್‌ರಾಜ್ ವಿಶೇಷ ರೈಲುಗಳ ಕಾರ್ಯಾಚರಣೆ ನಡೆಸಲಿದೆ. ಈ ಸಂಬಂಧ ವೇಳಾಪಟ್ಟಿ, ನಿಲುಗಡೆ ನಿಲ್ದಾಣಗಳ ವಿವರ ಇಲ್ಲಿದೆ.

ಸುಬೇದಾರ್‌ಗಂಜ್ - ಎಸ್‌ಎಂವಿಟಿ ಬೆಂಗಳೂರು - ಸುಬೇದಾರ್‌ಗಂಜ್ ನಡುವೆ 03 ಟ್ರಿಪ್‌ಗಳ ವಿಶೇಷ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳ ಸೇವೆಪ್ರಯಾಣಿಕರಿಗೆ ಲಭ್ಯವಾಗಲಿದೆ. ಸುಬೇದಾರ್‌ಗಂಜ್-ಎಸ್‌ಎಂವಿಟಿ ಬೆಂಗಳೂರು ರೈಲು (04171) ಡಿಸೆಂಬರ್ 11, 18 ಮತ್ತು 25 (ಶುಕ್ರವಾರ) ರಂದು ರಾತ್ರಿ 21:20 ಗಂಟೆಗೆ ಸುಬೇದಾರ್‌ಗಂಜ್ ಹೊರಟು, ಭಾನುವಾರ 21:00 ಗಂಟೆಗೆ ಬೆಂಗಳೂರು ತಲುಪಲಿದೆ.

Special Weekly Trains

ಮರಳಿ ಎಸ್‌ಎಂವಿಟಿ ಬೆಂಗಳೂರು-ಸುಬೇದಾರ್‌ಗಂಜ್ ಎಕ್ಸ್‌ಪ್ರೆಸ್ ರೈಲು (04172) ಡಿಸೆಂಬರ್ 14, 21, ಮತ್ತು 28 (ಸೋಮವಾರ) ರಂದು ಬೆಂಗಳೂರಿನಿಂದ 07:00 ಗಂಟೆಗೆ ಹೊರಟು ಬುಧವಾರ 04:30 ಗಂಟೆಗೆ ಸುಬೇದಾರ್‌ಗಂಜ್ ನಿಲ್ದಾಣ ತಲುಪಲಿದೆ ಎಂದು ತಿಳಿಸಿದರು.

SWR: ಮುಂಬೈ-ಹುಬ್ಬಳ್ಳಿ, ಮೈಸೂರಿಗೆ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳ ಕಾರ್ಯಚರಣೆ, ವೇಳಾಪಟ್ಟಿ ಇಲ್ಲಿದೆ
SWR: ಮುಂಬೈ-ಹುಬ್ಬಳ್ಳಿ, ಮೈಸೂರಿಗೆ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳ ಕಾರ್ಯಚರಣೆ, ವೇಳಾಪಟ್ಟಿ ಇಲ್ಲಿದೆ

ರೈಲು ರೂಟ್, ಎಲ್ಲೆಲ್ಲಿ ನಿಲುಗಡೆ?

20 ಬೋಗಿಗಳ ರೈಲುಗಳು ಎರಡು ದಿಕ್ಕಿನಲ್ಲಿ ಶಂಕರಗಢ, ದಭೌರಾ, ಮಾಣಿಕ್‌ಪುರ, ಸತ್ನಾ, ಕಟ್ನಿ, ಜಬಲ್ಪುರ, ಇಟಾರ್ಸಿ ಜಂಕ್ಷನ್, ನಾಗಪುರ, ಬಲ್ಲಾರ್ಷಾ, ಸಿರ್ಪುರ ಕಾಗಜ್‌ನಗರ, ಬೆಲ್ಲಂಪಲ್ಲಿ, ಮಂಚಿರಿಯಲ್, ಕಾಜಿಪೇಟ್ ಜಂಕ್ಷನ್, ಸಿಕಂದರಾಬಾದ್ ಜಂಕ್ಷನ್, ಲಿಂಗಂಪಲ್ಲಿ, ವಿಕರಾಬಾದ್ ಜಂಕ್ಷನ್, ತಾಂಡೂರ್, ಯಾದಗಿರಿ, ಕೃಷ್ಣ, ರಾಯಚೂರು, ಗುಂತಕಲ್ ಜಂಕ್ಷನ್, ಅನಂತಪುರ, ಧರ್ಮಾವರಂ ಜಂಕ್ಷನ್, ಹಿಂದೂಪುರ ಮತ್ತು ಯಲಹಂಕ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ.

ಪ್ರಯಾಗ್‌ರಾಜ್ - ಎಸ್‌ಎಂವಿಟಿ ಬೆಂಗಳೂರು - ಪ್ರಯಾಗ್‌ರಾಜ್ ರೈಲು

ನೈಋತ್ಯ ರೈಲ್ವೆಯು ಪ್ರಯಾಗ್‌ರಾಜ್ - ಎಸ್‌ಎಂವಿಟಿ ಬೆಂಗಳೂರು - ಪ್ರಯಾಗ್‌ರಾಜ್ ನಡುವೆ 02 ಟ್ರಿಪ್‌ಗಳ ವಿಶೇಷ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ ಮಾಡಲಿದೆ. ಪ್ರಯಾಗ್‌ರಾಜ್-ಎಸ್‌ಎಂವಿಟಿ ಬೆಂಗಳೂರು ರೈಲು (04151) ಡಿಸೆಂಬರ್ 16 ಮತ್ತು 23 (ಬುಧವಾರ) ರಂದು 18:00 ಗಂಟೆಗೆ ಪ್ರಯಾಗ್‌ರಾಜ್ ನಿಂದ ಹೊರಟು ಶುಕ್ರವಾರ 21:00 ಗಂಟೆಗೆ ತಲುಪಲಿದೆ.

ಎಸ್‌ಎಂವಿಟಿ ಬೆಂಗಳೂರು-ಪ್ರಯಾಗ್‌ರಾಜ್ ರೈಲು (04152) ಡಿಸೆಂಬರ್ 19 ಮತ್ತು 26 (ಶನಿವಾರ) ರಂದು 07:00 ಗಂಟೆಗೆ ಬೆಂಗಳೂರಿನಿಂದ ಹೊರಟು ಸೋಮವಾರ 06:30 ಗಂಟೆಗೆ ಪ್ರಯಾಗ್ ರಾಜ್ ತಲುಪಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

SWR: ಯಶವಂತಪುರ-ಹಾಸನ ಇಂಟರ್‌ಸಿಟಿ, ಬಳ್ಳಾರಿ-ದಾವಣಗೆರೆ ಡೆಮು ಸೇರಿ ಹಲವು ರೈಲುಗಳು ಭಾಗಶಃ ರದ್ದು, ಇಲ್ಲಿದೆ ಪಟ್ಟಿ
SWR: ಯಶವಂತಪುರ-ಹಾಸನ ಇಂಟರ್‌ಸಿಟಿ, ಬಳ್ಳಾರಿ-ದಾವಣಗೆರೆ ಡೆಮು ಸೇರಿ ಹಲವು ರೈಲುಗಳು ಭಾಗಶಃ ರದ್ದು, ಇಲ್ಲಿದೆ ಪಟ್ಟಿ

ಸಂಚಾರ ಮಾರ್ಗ, ನಿಲುಗಡೆ ನಿಲ್ದಾಣ

24 ಬೋಗಿಗಳ ಈ ರೈಲುಗಳು ಎರಡು ಕಡೆ ಸಂಚಾರ ವೇಳೆ ಶಂಕರಗಢ, ದಭೌರಾ, ಮಾಣಿಕ್‌ಪುರ, ಚಿತ್ರಕೂಟ ಧಾಮ, ಬಂಡಾ, ಮಹೋಬಾ, ರಾಜ್‌ನಗರ, ದರಿಯಾಗಂಜ್, ಮಹಾರಾಜ ಛತ್ರಸಾಲ್ ಸ್ಟೇಷನ್ ಛತ್ತರ್‌ಪುರ, ಟೀಕಮಗಢ, ಲಲಿತಪುರ, ಬೀನಾ, ರಾಣಿ ಕಮಲಾಪತಿ, ಇಟಾರ್ಸಿ ಜಂಕ್ಷನ್, ನಾಗ್ಪುರ, ಬಲ್ಲಾರ್ಷಾ, ಸಿರ್ಪುರ ಕಾಗಜ್‌ನಗರ, ಬೆಲ್ಲಂಪಲ್ಲಿ, ಮಂಚಿರಿಯಲ್, ಕಾಜಿಪೇಟ್ ಜಂಕ್ಷನ್, ಸಿಕಂದರಾಬಾದ್ ಜಂಕ್ಷನ್, ಲಿಂಗಂಪಲ್ಲಿ, ವಿಕರಾಬಾದ್ ಜಂಕ್ಷನ್, ತಾಂಡೂರ್, ಯಾದಗಿರಿ, ಕೃಷ್ಣ, ರಾಯಚೂರು, ಗುಂತಕಲ್ ಜಂಕ್ಷನ್, ಅನಂತಪುರ, ಧರ್ಮಾವರಂ ಜಂಕ್ಷನ್, ಹಿಂದೂಪುರ ಮತ್ತು ಯಲಹಂಕ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ.

ಇನ್ನೂ ಪ್ರಯಾಣಿಕರು ರೈಲಿನ ಸಮಯ, ಹೆಚ್ಚುವರಿ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ www.enquiry.indianrail.gov.in, ಐಆರ್ ಸಿಟಿಸಿ ಆಪ್ ಅಥವಾ ಸಹಾಯವಾಣಿ 139 ಗೆ ಕರೆ ಮಾಡುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+