Bengaluru Power Cut: ನಗರದ ಹಲವು ಬಡಾವಣೆಗಳಲ್ಲಿ ನವೆಂಬರ್ 26ಕ್ಕೆ ಬೆಳಗ್ಗೆಯಿಂದಲೇ ವಿದ್ಯುತ್ ಕಡಿತ, ಎಲ್ಲೆಲ್ಲಿ?

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದೆರಡು ದಿನಗಳಿಂದ ನಿರಂತರವಾಗಿ ಅಲ್ಲಲ್ಲಿ ವಿದ್ಯುತ್ ವ್ಯತ್ಯಯವಾಗುತ್ತಿದೆ. ನವೆಂಬರ್ 26ರಂದು ಗುರುವಾರ ಸಹ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಬೆಳ್ಗೆಯಿಂದ ಸಂಜೆವರೆಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ನೀಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಯಾವೆಲ್ಲ ಬಡಾವಣೆಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬ ಮಾಹಿತಿ, ಸಮಯ ಇಲ್ಲಿದೆ

ನಗರದ ದಟ್ಟಣೆಯ ಪ್ರದೇಶದಲ್ಲೇ ದೀರ್ಘಾವಧಿ ಸಮಯದವರೆಗೆ ವಿದ್ಯುತ್ ಕಡಿತವಾಗಲಿದೆ. ನಾಳೆ ಗುರುವಾರ (ನ.26) ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ, ಅಂದರೆ ಒಟ್ಟು ಏಳು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯವಾಗಲಿದೆ. ಪಶ್ಚಿಮ ಮತ್ತು ವಾಯುವ್ಯ ಬೆಂಗಳೂರಿನ ರಾಜಾಜಿನಗರ, ಬಿನ್ನಿಪೇಟೆ ಮತ್ತು ಮಾಗಡಿ ಮುಖ್ಯ ರಸ್ತೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಬಂಧ ಕೆಲಸಗಳಿದ್ದರೆ ಬೇಗನ ಮುಗಿಸಿಕೊಳ್ಳುವುದು ಒಳಿತು. ಈ ದಿಢೀರ್ ಅಡಚರಣೆಗೆ ಸಹಕರಿಸುವಂತೆ ಬೆಸ್ಕಾಂ ಅಧಿಕಾರಿಗಳು ಕೋರಿದ್ದಾರೆ.

Bengaluru Power Cut BESCOM Power Outage on November 26 Thursday Check Affected Areas Details is here

ಬೆಂಗಳೂರು ವಿದ್ಯುತ್ ಕಡಿತ ಪ್ರದೇಶಗಳು

* ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಸಂಜೀವಪ್ಪ ಕಾಲೋನಿ, ನೇತಾಜಿನಗರ, ಲೊಟ್ಟೆಗೊಲ್ಲಹಳ್ಳಿ, ಮುನಿಹನುಮಯ್ಯ ಕಾಲೋನಿ, ಆರ್.ಕೆ. ಗಾರ್ಡನ್, ಮತ್ತೀಕೆರೆ, ಜೆ.ಪಿ. ಪಾರ್ಕ್, ಬಿಕೆ. ನಗರ, ಪಂಪಾ ನಗರ, ಎಚ್‌ಎಂಟಿ (HMT) ಲೇಔಟ್, ಎಲ್‌ಐಸಿ ಕಾಲೋನಿ, ಎಸ್‌ಬಿಎಂ ಬಡಾವಣೆ, ಬೃಂದಾವನ ನಗರ ಮತ್ತು ಎಚ್‌ಎಂಟಿ ಮುಖ್ಯ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ.

Bengaluru Metro New Record: ಅಕ್ಟೋಬರ್‌ನಲ್ಲಿ ಒಂದೇ ದಿನ 11.91 ಲಕ್ಷ ಮಂದಿ ಪ್ರಯಾಣ, 306.90 ಲಕ್ಷ ಒಟ್ಟು ಓಡಾಟ! ವರದಿ
Bengaluru Metro New Record: ಅಕ್ಟೋಬರ್‌ನಲ್ಲಿ ಒಂದೇ ದಿನ 11.91 ಲಕ್ಷ ಮಂದಿ ಪ್ರಯಾಣ, 306.90 ಲಕ್ಷ ಒಟ್ಟು ಓಡಾಟ! ವರದಿ

ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ ವ್ಯತ್ಯಯ

* ಈ ಪ್ರದೇಶಗಳಲ್ಲಿ ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಬಳ್ಳಾರಿ ಮುಖ್ಯ ರಸ್ತೆ, ತಲಕಾವೇರಿ ಬಡಾವಣೆಯ ಕೆಲವು ಭಾಗಗಳು, ಡಿಫೆನ್ಸ್ ಬಡಾವಣೆ, ಸಂಪಿಗೆಹಳ್ಳಿ, ಅಮೃತಹಳ್ಳಿ, ಬಿಜಿಎಸ್ ಬಡಾವಣೆ, ಬ್ಯಾಟರಾಯನಪುರ, ಜಕ್ಕೂರು ಬಡಾವಣೆ, ಜಿಕೆವಿಕೆ, ಕೋಗಿಲು ಬಡಾವಣೆ ವಿಧಾನಸೌಧ ಬಡಾವಣೆ, ಸಾಯಿಬಾಬಾ ಲೇಔಟ್, ಟೆಲಿಕಾಂ ಬಡಾವಣೆ, ಸೂರ್ಯೋದಯ ಲೇಔಟ್ ಹಾಗೂ ಸುತ್ತಲಿನ ಪ್ರದೇಶಗಳು ವಿದ್ಯುತ್ ಕೊರತೆ ಎದುರಿಸಲಿವೆ.

ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ

* ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಮೋದಿ ಆಸ್ಪತ್ರೆ ರಸ್ತೆ, ಮಂಜುನಾಥ ನಗರ, ಶಿವನಗರ, ರಾಜಾಜಿನಗರ, ಗುಬ್ಬಣ್ಣ ಕೈಗಾರಿಕಾ ಪ್ರದೇಶ, ಅಗ್ರಹಾರ ದಾಸರಹಳ್ಳಿ, ವೆಸ್ಟ್ ಆಫ್ ಕಾರ್ಡ್ ರಸ್ತೆ (1 ರಿಂದ 5ನೇ ಕ್ರಾಸ್), ಕೆಎಚ್‌ಬಿ ಕಾಲೋನಿ 2ನೇ ಹಂತ, ದೇವಯ್ಯ ಉದ್ಯಾನ, ಸುಬ್ರಮಣ್ಯ ನಗರ, ರಾಜಕುಮಾರ್ ರಸ್ತೆ, ದಯಾನಂದ ನಗರ, ಮಾರುತಿ ಎಕ್ಸ್‌ಟೆನ್ಶನ್, ನಾಗಪ್ಪ ಬ್ಲಾಕ್, ಪ್ರಕಾಶ್ ನಗರ, ಗಾಯತ್ರಿ ನಗರ, ಬ್ರಿಗೇಡ್ ಗೇಟ್‌ವೇ ಅಪಾರ್ಟ್‌ಮೆಂಟ್ಸ್, ಪ್ಯಾಲೇಸ್ ಗುಟ್ಟಹಳ್ಳಿ, ಮುನೇಶ್ವರ ಬ್ಲಾಕ್, ಇಸ್ಕಾನ್ ದೇವಾಲಯ, ಮಾಗಡಿ ಮುಖ್ಯ ರಸ್ತೆ.

Bengaluru Video Viral: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ಅನಾಹುತ: ಶಾಲಾ ಮಿನಿಬಸ್‌ಗೆ ಟ್ಯಾಂಕರ್ ಡಿಕ್ಕಿ, ನೆಟ್ಟಿಗರು ಕಿಡಿ
Bengaluru Video Viral: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ಅನಾಹುತ: ಶಾಲಾ ಮಿನಿಬಸ್‌ಗೆ ಟ್ಯಾಂಕರ್ ಡಿಕ್ಕಿ, ನೆಟ್ಟಿಗರು ಕಿಡಿ

ಬಿನ್ನಿಪೇಟೆ, ಪ್ಯಾಲೇಡಿಯಂ ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್, ಹಂಪಿ ನಗರ, ಜಗಜೀವನ ರಾಮ್ ನಗರ, ಹೊಸಹಳ್ಳಿ ಮತ್ತು ಗೋಪಾಲಪುರ ವ್ಯಾಪ್ತಿಯಲ್ಲಿ ಹಲವು ಗಂಟೆಗಳ ಕಾಲ ವಿದ್ಯುತ್ ಪೂರೈಕೆಯು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆಗೆ 1912ಗೆ ಸಂಪರ್ಕಿಸಬಹುದು. ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಪ್ರಕಟಣೆ ಕೋರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+