Bengaluru Video Viral: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ಅನಾಹುತ: ಶಾಲಾ ಮಿನಿಬಸ್‌ಗೆ ಟ್ಯಾಂಕರ್ ಡಿಕ್ಕಿ, ನೆಟ್ಟಿಗರು ಕಿಡಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಕ್ಕಳು ತುಂಬಿದ್ದ ಶಾಲಾ ಮಿನಿ ಬಸ್‌ಗೆ ನೀರಿನ ಟ್ಯಾಂಕರ್ ಲಾರಿಯು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್ ತಿರುಗಿ ನಿಂತಿದೆ. ಇದು ವಾರದ ಹಿಂದೆ ಕಾಡಗೋಡಿಯಲ್ಲಿ ನಡೆದಿದ್ದು, ಹಿಂಬದಿ ಬಂದ ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಘಟನೆಯ ದೃಶ್ಯಾವಳಿಗಳು ಸೆರೆಯಾಗಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಸ್ತೆ ಮಧ್ಯೆ ಒಂದು ಪಥದಿಂದ ವಿರುದ್ಧ ದಿಕ್ಕಿನ ಪಥಕ್ಕೆ ಬದಲಾವಣೆ ಮಾಡುವಾಗ ಶಾಲಾ ಬಸ್ಅನ್ನು ಚಾಲಕ ತಿರುಗಿಸಿದ್ದಾನೆ. ರಸ್ತೆ ಒಂದು ಲೈನ್‌ನಿಂದ ಇನ್ನೊಂದು ಲೈನ್‌ಗೆ ಬರುತ್ತಿದ್ದಂತೆ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ನೀರಿನ ಟ್ಯಾಂಕರ್ ಲಾರಿಯು ನಿಲ್ಲಿಸಲು ಸಾಧ್ಯವಾಗದೇ ಜೋರಾಗಿ ಡಿಕ್ಕಿ ಹೊಡೆದಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.

Water Tanker Hits School Mini Bus in Kadugodi Bengaluru Dashcam Video Goes Viral No Injuries

ಬೆಂಗಳೂರು ವೈಟ್‌ಫೀಲ್ಡ್‌ನ ಕಾಡುಗೋಡಿ ಮುಖ್ಯರಸ್ತೆಯಲ್ಲಿ ನವೆಂಬರ್ 18ರಂದು ಬೆಳಗ್ಗೆ 8:58 ರ ಸುಮಾರಿಗೆ ಬೆಳಗಿನ ಜನನಿಬಿಡ ಸಂದರ್ಭದಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಡ್ಯಾಶ್ ಕ್ಯಾಮ್ ವಿಡಿಯೋವನ್ನು ಎಕ್ಸ್‌ನಲ್ಲಿ ಅಭಿಷೇಕ್ ಜಲನ್ ಎಂಬುವವರು ಹಂಚಿಕೊಂಡಿದ್ದಾರೆ.

Viral: ಕಳೆದುಹೋಗಿದ್ದ ಲಕ್ಷಾಂತರ ರೂ. ಹಣ ಮರಳಿ ಸಿಕ್ಕ ಖುಷಿ: ಭಾರತೀಯ ರೈಲ್ವೆ ಸಿಬ್ಬಂದಿ ಕಾರ್ಯ ಕೊಂಡಾಡಿದ ವಿದೇಶಿ ಪ್ರವಾಸಿ
Viral: ಕಳೆದುಹೋಗಿದ್ದ ಲಕ್ಷಾಂತರ ರೂ. ಹಣ ಮರಳಿ ಸಿಕ್ಕ ಖುಷಿ: ಭಾರತೀಯ ರೈಲ್ವೆ ಸಿಬ್ಬಂದಿ ಕಾರ್ಯ ಕೊಂಡಾಡಿದ ವಿದೇಶಿ ಪ್ರವಾಸಿ

ಪಾದಾಚಾರಿಗಳು, ಮಕ್ಕಳು ಅದೃಷ್ಟವಶಾತ್ ಪಾರು!

ನವೆಂಬರ್ 18 ರಂದು ಬೆಳಗ್ಗೆ ನೀರು ತುಂಬಿದ ಟ್ಯಾಂಕರ್ ರಸ್ತೆಯಲ್ಲಿ ಸಂಚರಿಸುತ್ತಿತ್ತು. ಈ ವೇಳೆ ಆ ಬದಿಯ ರಸ್ತೆಯಿಂದ ಈ ಬದಿಗೆ ಬರಲು ರಸ್ತೆ ಮಧ್ಯ ಮಿನಿ ಬಸ್ ತಿರುವು ಪಡೆಯುತ್ತಿದ್ದಂತೆ ಶಾಲಾ ಬಸ್ ಎಡಭಾಗಕ್ಕೆ ಟ್ಯಾಂಕರ್ ಲಾರಿ ಡಿಕ್ಕಿ ಹೊಡೆಯಿತು.

ನೀರು ತುಂಬಿದ್ದರಿಂದ ನೀರಿನ ಟ್ಯಾಂಕರ್ ಅನ್ನು ತ್ವರಿತವಾಗಿ ನಿಲ್ಲಿಸಲು ಸಾಧ್ಯವಾಗದ ಕಾರಣ ಶಾಲಾ ಮಿನಿಬಸ್‌ಗೆ ಡಿಕ್ಕಿಯಾಗಿದೆ. ಬಸ್ ರಸ್ತೆ ಬದಿಗೆ ನೂಕಿಕೊಂಡು ಮುಂದೆ ಹೋಗಿ ಲಾರಿ ನಿಂತಿತು. ರಸ್ತೆ ಪಕ್ಕದಲ್ಲಿ ಇಬ್ಬರು ಪಾದಾಚಾರಿಗಳು ನಡೆಯುತ್ತಿದ್ದರು. ಅವರಿಗಾಗಲೇ, ಬಸ್‌ನಲ್ಲಿದ್ದ ಶಾಲಾ ಮಕ್ಕಳಿಗಾಗಲಿ ಅದೃಷ್ಟವಶಾತ್ ಯಾವುದೇ ತೊಂದರೆ ಆಗಿಲ್ಲ. ಜೀವನ, ಹಾನಿ, ಗಾಯವಾದ ಘಟನೆಗಳು ಸಂಭವಿಸಿಲ್ಲ.

ಭಾರೀ ವಾಹನ ಸವಾರರಿಗೆ ಬುದ್ಧಿ ಹೇಳಿದ ಸಾರ್ವಜನಿಕರು

ನೋಡ ನೋಡುತ್ತಿದ್ದಂತೆ ರಸ್ತೆ ಮಧ್ಯೆ ಎರಡು ವಾಹನಗಳು ಡಿಕ್ಕಿಯಾಗಿ ನಿಂತವು. ನೀರು ತುಂಬಿದ ಟ್ಯಾಂಕರ್‌ ಲಾರಿಗಳು ಇತರ ವಾಹನಳಂತೆ ಅಲ್ಲ. ವಾಹನ ನಿಲ್ಲಿಸಲು ಪ್ರಯತ್ನಿಸಿದರೂ ಒಳಗಿರುವ ನೀರು ಕುಲುಕುವುದರಿಂದ ಬೇಗ ಲಾರಿ ನಿಲ್ಲುವುದಿಲ್ಲ. ಬ್ರೇಕ್ ಹಾಕಿದರೂ ನಿಲ್ಲಲು ಕೊಂಚ ದೂರದ ಸ್ಥಳ ಬೇಕಾಗುತ್ತದೆ.

Video: ನಾಗರಹೊಳೆಯಲ್ಲಿ ಕಾಡಾನೆ ಮೇಲೆ ಕಲ್ಲು ತೂರಾಟ: ಬೈಕ್ ಸವಾರರ ಬಂಧನಕ್ಕೆ ರಾಮಲಿಂಗಾರೆಡ್ಡಿ ಖಡಕ್ ಸೂಚನೆ
Video: ನಾಗರಹೊಳೆಯಲ್ಲಿ ಕಾಡಾನೆ ಮೇಲೆ ಕಲ್ಲು ತೂರಾಟ: ಬೈಕ್ ಸವಾರರ ಬಂಧನಕ್ಕೆ ರಾಮಲಿಂಗಾರೆಡ್ಡಿ ಖಡಕ್ ಸೂಚನೆ

ಇನ್ನೂ ಹಿಂದೂ ಮುಂದು ನೋಡದೇ ರಸ್ತೆ ಪಥ ಬದಲಾಯಿಸಲು ಶಾಲಾ ವಾಹನ ತಿರುಗಿಸಿದ ಚಾಲಕನಿಗೂ ನೆಟ್ಟಿಗರು ಬುದ್ಧಿ ಹೇಳಿದ್ದಾರೆ. ರಸ್ತೆ ಮಧ್ಯದಲ್ಲಿ ಭಾರೀ ವಾನಗಳು ನಿಧಾನವಾಗಿ ಸಂಚರಿಸಬೇಕು. ತಿರುವು ಇದ್ದಲ್ಲಿ ಸ್ಪಷ್ಟ ಅಂತರ ಕಾಯ್ದುಕೊಳ್ಳಬೇಕು. ಶಾಲಾ ಸಮಯವಾಗಿದೆ ಎಂದು ಕಾಳಜಿ ಇಲ್ಲದೇ ವಾಹನ ಚಲಾಯಿಸಬಾರದು ಎಂದು ವಿಡಿಯೋಗೆ ಸಾರ್ವಜನಿಕರು ಬುದ್ಧಿ ಹೇಳಿದ್ದಾರೆ. ಸಂಭವಿಸಬಹದಾದ ದೊಡ್ಡ ಅವಘಡ ಕೂದಲೆಳೆಯಲ್ಲಿ ತಪ್ಪಿದಂತಾಗಿದೆ ಅಂತಲೂ ಕೆಲವರು ತಿಳಿಸಿದ್ದಾರೆ.

ಬಸ್‌ ಚಾಲಕನ ಮೇಲೂ ಆಕ್ರೋಶ

ಒಂದು 'ಕ್ರೆಟಾ' ಕಾರು ಕೂಡ ನೀರಿನ ಟ್ಯಾಂಕರ್ ಮತ್ತು ಡಿಸಿ ಕಾರು ಹೋಗುವವರೆಗೆ ಕಾಯುತ್ತಿತ್ತು, ಆದರೆ ಈ ಶಾಲಾ ಬಸ್ ಚಾಲಕನಿಗೆ ಕಿಂಚಿತ್ತೂ ತಾಳ್ಮೆ ಇರಲಿಲ್ಲ ಅನ್ನಿಸುತ್ತದೆ. ಇವನಿಗೆ ಕನಿಷ್ಠ ಒಂದು ವರ್ಷದ ಮಟ್ಟಿಗೆ ವಾಹನ ಚಲಾಯಿಸದಂತೆ ನಿಷೇಧ ಹೇರಬೇಕು ಎಂದು ಕೆಲವರು ಹೇಳಿದ್ದಾರೆ. ಮತ್ತೊಬ್ಬರು ಈ ತಾಳ್ಮೆ ತೋರಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಅದೃಷ್ಟಕ್ಕೆ ಇಷ್ಟಕ್ಕೆ ಎಲ್ಲ ಮುಗಿದಿದೆ. ಇಲ್ಲವಾದರೆ ದೊಡ್ಡ ಅಪಾಯ ಎದುರಾಗುವುದಿತ್ತು' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+