KSRTC: ಶಬರಿಮಲೆ ಮಾಲಾಧಾರಿಗಳಿಗೆ ಗುಡ್‌ನ್ಯೂಸ್, ನ.28ರಿಂದ ಬೆಂಗಳೂರಿನಿಂದ 'ಐರಾವತ ವೋಲ್ವೋ' ಬಸ್, ವೇಳಾಪಟ್ಟಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ( KSRTC) ಕರ್ನಾಟಕ ಪ್ರಮುಖ ಎರಡು ನಗರಗಳಿಂದ ನಿಲಕ್ಕಲ್ (ಪಂಬಾ-ಶಬರಿಮಲೆ) ಮಾರ್ಗದಲ್ಲಿ 'ಐರಾವತ ವೋಲ್ವೋ' (Airavat Volvo) ಸೇವೆ ಕಾರ್ಯಾಚರಣೆ ಆರಂಭಿಸಲಿದೆ. ಈ ಸೇವೆಯು ನವೆಂಬರ್ 28ರಿಂದ ಶಬರಿಮಲೆ ಮಾಲಾಧಾರಿಗಳಿಗೆ ಲಭ್ಯವಾಗಲಿದೆ. ಈ ಬಸ್ ಮಾರ್ಗ, ಟಿಕೆಟ್ ದರ, ವೇಳಾಪಟ್ಟಿ ಇಲ್ಲಿದೆ.
ಸಾರ್ವಜನಿಕರು ಮತ್ತು ಅಯ್ಯಪ್ಪ ಭಕ್ತರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಮೈಸೂರು ಮಾರ್ಗವಾಗಿ ಬೆಂಗಳೂರು-ನಿಲಕ್ಕಲ್ (ಪಂಬಾ-ಶಬರಿಮಲೆ) ಮಾರ್ಗದಲ್ಲಿ 'ಐರಾವತ ವೋಲ್ವೋ' ಬಸ್ ಓಡಿಸುವುದಾಗಿ ಸಾರಿಗೆ ಸಂಸ್ಥೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಲ್ಲಿಂದ ಎಲ್ಲಿಗೆ ಬಸ್ ಸಂಚಾರ, ಮಾರ್ಗ
ಈ ಬಸ್ ಸೇವೆಯು ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಹೊರಟು, ಮೈಸೂರು, ಕೋಝಿಕ್ಕೋಡ್, ತ್ರಿಶೂರ್, ಕೊಟ್ಟಾಯಂ ಮತ್ತು ಎರುಮೇಲಿ ಮಾರ್ಗವಾಗಿ ನಿಲಕ್ಕಲ್ (ಪಂಬಾ-ಶಬರಿಮಲೆ) ತಲುಪಲಿದೆ.
ಬಸ್ ವೇಳಾಪಟ್ಟಿ, ಸಮಯ
* ಬೆಂಗಳೂರು ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 13:50ಕ್ಕೆ ಹೊರಡಲಿದೆ.
* ಮೈಸೂರು ನಿಲ್ದಾಣದಿಂದ ಸಂಜೆ 5:35 ಗಂಟೆಗೆ ತೆರಳುತ್ತದೆ.
ಮರಳಿ ಬರುವ ಬಸ್ ಸಮಯ
* ನಿಲಕ್ಕಲ್ (ಪಂಬಾ-ಶಬರಿಮಲೆ) ನಿಲ್ದಾಣದಿಂದ ಸಂಜೆ 06 ಗಂಟೆಗೆ ಹೊರಡಲಿದೆ.
ಟಿಕೆಟ್ ದರ
* ಬೆಂಗಳೂರು (ಶಾಂತಿನಗರ ಬಸ್ ನಿಲ್ದಾಣ)- ನಿಲಕ್ಕಲ್ (ಪಂಬಾ-ಶಬರಿಮಲೆ) ಟಿಕೆಟ್ ದರ ತಲಾ 1980 ರೂಪಾಯಿ
* ಮೈಸೂರು-ನಿಲಕ್ಕಲ್ ಟಿಕೆಟ್ ದರ ಒಬ್ಬರಿಗೆ ತಲಾ 1880 ರೂಪಾಯಿ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಟಿಕೆಟ್ ರಹಿತ 4,701 ಕೇಸ್ ಪತ್ತೆ: KSRTC
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ವತಿಯಿಂದ ನಡೆಸಿದ ಬಸ್ ತಪಾಸಣಾ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ 5,737 ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ. ಇದು ಒಂದೇ ತಿಂಗಳಲ್ಲಿ ಕಂಡು ಬಂದ ಪ್ರಕರಣಗಳಾಗಿವೆ.
2026ರ ಅಕ್ಟೋಬರ್ ತಿಂಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ತಪಾಸಣಾ ಕಾರ್ಯ ನಡೆಸಿತು. ಈ ವೇಳೆ ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ ಒಟ್ಟು 46,742 ವಾಹನಗಳನ್ನು ತಪಾಸಣೆ ನಡೆಸಲಾಯಿತು. 4,701 ಪ್ರಕರಣಗಳು ಪತ್ತೆಯಾದವು. ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ 5,737 ಪ್ರಯಾಣಿಕರಿಂದ ಒಟ್ಟು ₹9,75,911 ದಂಡವನ್ನು ವಸೂಲಿ ಮಾಡಲಾಗಿದೆ.
ಮಾತ್ರವಲ್ಲದೇ ತಪಾಸಣಾ ಅಧಿಕಾರಿಗಳು ₹1,44,921 ಮೊತ್ತದ ಆದಾಯ ಸೋರಿಕೆಯನ್ನು (Revenue leakage) ಪತ್ತೆ ಹಚ್ಚಲಾಗಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಇಲಾಖಾ ಶಿಸ್ತು ಕ್ರಮವನ್ನು ಕೈಗೊಳ್ಳಲಾಗಿದೆ. ಬಸ್‌ನಲ್ಲಿ ಪ್ರಯಾಣಿಸುವ ಸಾರ್ವಜನಿಕರು ಪ್ರಯಾಣಿಸುವಾಗ ತಪ್ಪದೆ ಮಾನ್ಯವಾದ ಟಿಕೆಟ್ ಅಥವಾ ಪಾಸ್ ಪಡೆದುಕೊಂಡೇ ಸಂಚರಿಸುವಂತೆ ವಿನಂತಿಸಿಕೊಂಡಿದೆ.




Click it and Unblock the Notifications
