NWKRTC: ಕನ್ನಡದ ತೇರಾಗಿ ಬದಲಾದ ಸಾರಿಗೆ ಬಸ್ಸುಗಳು; ಹುಬ್ಬಳ್ಳಿಯಲ್ಲಿ ಚಾಲಕರ ವಿಶಿಷ್ಟ ಕನ್ನಡ ಸೇವೆ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ ಇಂದು ಭಾನುವಾರ ವಿಶೇಷ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಕ್ರೀಡಾಕೂಟದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಶಂಸನ ಪತ್ರ ನೀಡಲಾಯಿತು. ರಾಜ್ಯೋತ್ಸವ ಪ್ರಯುಕ್ತ ಎಲ್ಲ ಬಸ್‌ಗಳು ಕನ್ನಡ ಸಂಸ್ಕೃತಿ ಸಾರುವ ತೇರುಗಳಾಗಿ ಬದಲಾಗಿದ್ದವು.

ವಿಭಾಗೀಯ ಕಚೇರಿಯಲ್ಲಿ ಹಾಗೂ ಗ್ರಾಮಾಂತರ-1ನೇ ಘಟಕದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಕನ್ನಡ ಸಂಸ್ಕೃತಿ ಬಿಂಬಿಸುವ ಸಾರಿಗೆ ಬಸ್ಸುಗಳಲ್ಲಿ ಪ್ರತಿಷ್ಠಾಪಿಸಿದ ಭುವನೇಶ್ವರಿ ಭಾವಚಿತ್ರಗಳಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ, ಪೂಜೆ, ಪುಷ್ಪ ನಮನ ಸಲ್ಲಿಸಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

Karnataka Rajyotsava 2026

ಏಳು ದಶಕ ಪೂರ್ಣ

ಕನ್ನಡವೆಂದರೆ ಕೇವಲ ಒಂದು ಭಾಷೆಯಲ್ಲ, ಅದೊಂದು ಭಾವನೆ, ಸಂಸ್ಕೃತಿ, ಇತಿಹಾಸ ಹಾಗೂ ಸ್ವಾಭಿಮಾನದ ಸಂಕೇತ. ಇಂದಿಗೆ ಕರ್ನಾಟಕ ಏಕೀಕರಣವಾಗಿ ಇಂದಿಗೆ 70 ವರ್ಷಗಳು ಪೂರ್ಣಗೊಳ್ಳುತ್ತವೆ. ಕನ್ನಡಿಗರ ಬಹುದಿನಗಳ ಕನಸು ನನಸಾದ ಏಕೀಕರಣದ ಹಿಂದೆ ಅನೇಕ ಮಹನೀಯರ ಹೋರಾಟ, ತ್ಯಾಗ, ಪರಿಶ್ರಮ ನಿತ್ಯ ಸ್ಮರಣೀಯವಾಗಿದೆ ಎಂದು ರಾಮನಗೌಡರ ಹೇಳಿದರು.

ಅಂದು ಅವರು ಕಂಡ ಕನಸು ಕೇವಲ ಭೌಗೋಳಿಕವಾಗಿ ಕನ್ನಡಿಗರು ಒಂದಾಗಬೇಕೆಂಬುದಾಗಿರಲಿಲ್ಲ. ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಮತ್ತು ಸ್ವಾಭಿಮಾನದಿಂದ ಸಮೃದ್ಧವಾದ ನಾಡು ನಿರ್ಮಾಣ ಆಗಬೇಕೆಂಬುದಾಗಿತ್ತು. ಇಂದು ನಾವು ಕನ್ನಡ ರಾಜ್ಯೋತ್ಸವ ದಿನದಂದು ನಮ್ಮ‌ ಮನೆಗಳ ಮೇಲೆ ಕನ್ನಡ ಧ್ವಜ ಹಾರಿಸುತ್ತೇವೆ, ವಾಹನಗಳಿಗೆ ಕನ್ನಡ ಬಾವುಟ ಕಟ್ಟಿ, ಸಿಹಿ ಹಂಚಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತೇವೆ. ಆದರೆ ಇದು ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಪ್ರತಿದಿನ ಕನ್ನಡವನ್ನು ಬಳಸುವ,ಉಳಿಸುವ, ಬೆಳೆಸುವ ಸಂಕಲ್ಪವಾಗಬೇಕು.

ಇತರ ಭಾಷೆ ಕಲಿಯೋಣ, ಕನ್ನಡ ಮರೆಯದಿರೋಣ

ಇಂಗ್ಲಿಷ್, ಹಿಂದಿ ಸೇರಿದಂತೆ ಜಗತ್ತಿನ ಯಾವುದೇ ಭಾಷೆಯನ್ನು ಕಲಿಯೋಣ. ಆದರೆ ಬೇರೆ ಭಾಷೆಗಳನ್ನು ಕಲಿಯುವ ಭರದಲ್ಲಿ ಮಾತೃಭಾಷೆಯನ್ನು ಮರೆಯಬಾರದು. ಏಕೆಂದರೆ ಮಾತೃಭಾಷೆಯನ್ನು ಉಳಿಸಿಕೊಳ್ಳುವುದು ನಮ್ಮ ಅಸ್ತಿತ್ವವನ್ನು ಉಳಿಸುತ್ತದೆ.

ಸಾರಿಗೆ ಸಿಬ್ಬಂದಿಗಳು ಪ್ರತಿದಿನ ಸಾವಿರಾರು ಜನರ ಸಂಪರ್ಕದಲ್ಲಿರುತ್ತಾರೆ. ಪ್ರಯಾಣಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಿಸುವುದರ ಜೊತೆಗೆ ಕನ್ನಡದ ಕಂಪನ್ನು ಹರಡುವ ಮೂಲಕ ಎಲ್ಲರನ್ನೂ ಪ್ರೀತಿ, ವಿಶ್ವಾಸ ಮತ್ತು ಸುರಕ್ಷತೆಯಿಂದ ಬೆಸೆಯುವುದಾಗಿದೆ.

ನಮ್ಮ ಮಕ್ಕಳಿಗೆ ಕನ್ನಡದ ಕವಿಗಳ ಸಾಧನೆ, ಕನ್ನಡದ ಇತಿಹಾಸವನ್ನು ತಿಳಿಸೋಣ. ಕನ್ನಡ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸೋಣ. ನಮ್ಮ ಮನೆ, ಮನಗಳಲ್ಲಿ ಕನ್ನಡದ ಸೊಗಡನ್ನು ಜೀವಂತವಾಗಿಡೋಣ. ಎಲ್ಲಾ ವ್ಯವಹಾರಗಳಲ್ಲಿ ಕನ್ನಡ ಬಳಸುವ, ಬೆಳೆಸುವ ಜೊತೆಗೆ ಅನ್ಯ ಭಾಷಿಕರಿಗೆ ಕನ್ನಡ ಕಲಿಸಲು ಹಾಗೂ ಅವರು ಕನ್ನಡ ಬಳಸಲು ಪ್ರೇರೇಪಿಸುವ ಸಂಕಲ್ಪ ಮಾಡೋಣ ಎಂದು ಹೇಳಿದರು.

ಕನ್ನಡದ ತೇರಾಗಿ ಬದಲಾದ ಸಾರಿಗೆ ಬಸ್ಸುಗಳು

ಎರಡು ಸಾರಿಗೆ ಬಸ್ ಗಳನ್ನು ಸಂಪೂರ್ಣ ಕನ್ನಡಮಯವಾಗಿ ಅಲಂಕರಿಸಲಾಗಿದೆ. ಮುಂದುಗಡೆ, ಚಾಮುಂಡೇಶ್ವರಿ ಭಾವ ಚಿತ್ರ, ಹೊರಭಾಗದಲ್ಲಿ ಹಾಗೂ ಒಳಭಾಗದಲ್ಲಿ ಕಾಲಘಟ್ಟದಲ್ಲಿ ಪರಿಚಯಿಸಲಾದ ವಿವಿಧ ಮಾದರಿಯ ಬಸ್ಸುಗಳು, ಕನ್ನಡ ನಾಡಿನ ಇತಿಹಾಸ, ವಿವಿಧ ಸ್ಥಳಗಳು,ಕನ್ನಡ ಸಾಹಿತಿಗಳ ಕೊಡುಗೆಗಳು, ಸಾಹಿತ್ಯ, ಸಂಸ್ಕೃತಿ,ಮತ್ತು ಸಾರಿಗೆ ಸಂಸ್ಥೆಯ ಕುರಿತು ಮಾಹಿತಿ ಪ್ರಸ್ತುತಪಡಿಸಲಾಗಿದೆ.

ತಮ್ಮ ಸ್ವಂತ ಹಣ ಕರ್ಚು ಮಾಡಿ ಬಸ್ಸುಗಳನ್ನು ಕನ್ನಡ ರಥವಾಗಿ ಪರಿವರ್ತಿಸಿದ್ದಾರೆ. ಅದಕ್ಕಾಗಿ 40 ಸಾವಿರ ಖರ್ಚು ಮಾಡಿದ ಚಾಲಕ ನಾಗರಾಜ ಭೂಮಣ್ಣವರ ಹಾಗೂ ರೂ. 30 ಸಾವಿರ ಖರ್ಚು ಮಾಡಿದ ಚಾಲಕ ಕಂ ನಿರ್ವಾಹಕರಾದ ಕಲ್ಮೇಶ ಸುಳ್ಳದ ಮತ್ತು ಸಹಕಾರ ನೀಡಿದ ನಿರ್ವಾಹಕ ಶಿವಾನಂದ ಬೆಳವಣಕಿ ಯವರ ವಿಶಿಷ್ಠ ಕನ್ನಡ ಸೇವೆ ಅಭಿನಂದನೀಯ ಹಾಗೂ ಇತರರಿಗೆ ಪ್ರೇರಣೆಯಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಶ್ಲಾಘಿಸಿದ್ದಾರೆ.

ಇದೇ ವೇಳೆ 2026 ನೇ ಸಾಲಿನ ಕ್ರೀಡಾಕೂಟದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಶಂಸನ ಪತ್ರ ಹಾಗೂ ಗೌರವಿಸಲಾಯಿತು. ಅಧಿಕಾರಿಗಳಾದ ವೈ. ಎಂ. ಶಿವರಡ್ಡಿ, ನಾಗಮಣಿ ಭೋವಿ, ಗುರುಪ್ರಸಾದ ಹೋಗಾಡಿ, ನಜೀರ ಅಹ್ಮದ ದರವೇಶ, ಗಂಗಾಧರ ಗೌಡರ, ಘಟಕ ವ್ಯವಸ್ಥಾಪಕರಾದ ಎಲ್.ಎಚ್.ರಾಠೋಡ, ಕನ್ನಡ ಕ್ರಿಯಾ ಸಮಿತಿ ವಾ.ಕ.ರ.ಸಾ.ಸಂಸ್ಥೆ ವಲಯ ಅಧ್ಯಕ್ಷ ಗಂಗಾಧರ ಕಮಲದಿನ್ನಿ, ಹುಬ್ಬಳ್ಳಿ ವಿಭಾಗದ ಅಧ್ಯಕ್ಷ ರಾಜು ಉಪಾಧ್ಯಾಯ, ಮೇಲ್ವಿಚಾರಕರು, ಚಾಲಕರು, ನಿರ್ವಾಹಕರು, ತಾಂತ್ರಿಕ, ಆಡಳಿತ ಸಿಬ್ಬಂದಿಗಳು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+