ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಕಾಂಗ್ರೆಸ್ ಶಾಸಕ ಬೆಂಬಲ; ಕನಿಷ್ಠ ವೇತನಕ್ಕೆ ಆಗ್ರಹ, ಸಿಎಂಗೆ ಪತ್ರ!

ಆಶಾ ಕಾರ್ಯಕರ್ತೆಯರ ಪ್ರತಿಭಟನೆಯು ಇದೀಗ 9ನೇ ದಿನಕ್ಕೆ ಕಾಲಿರಿಸಿದೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಆಶಾ ಕಾರ್ಯಕರ್ತೆಯರಿಗೆ ಬೆಂಬಲ ಸೂಚಿಸಲಾಗಿದೆ. ಇದೀಗ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಡಾ. ಎಚ್‌.ಸಿ ಮಹದೇವಪ್ಪ ಅವರು ಸಹ ಬೆಂಬಲ ಸೂಚಿಸಿರುವುದು ಅಚ್ಚರಿ ಮೂಡಿಸಿದೆ.

ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಡಾ.ಎಚ್.ಸಿ ಮಹದೇವಪ್ಪ ಅವರು, ಸರ್ಕಾರದ ಆಡಳಿತದ ಕೊಂಡಿಯಾಗಿ ಕಾರ್ಯ ನಿರ್ವಹಿಸುವ ಆಶಾ ಕಾರ್ಯಕರ್ತೆಯರ ಹೋರಾಟವು 9 ನೇ ದಿನಕ್ಕೆ ಕಾಲಿಟ್ಟಿದ್ದು ಇದು ಅತ್ಯಂತ ಬೇಸರದ ವಿಷಯವಾಗಿದೆ. ಕರೋನಾ ಸಂದರ್ಭದಿಂದ ಹಿಡಿದು ಇಲ್ಲಿಯವರೆಗೆ ಸರ್ಕಾರದ ಹಲವು ಯೋಜನೆ ಮತ್ತು ಯೋಚನೆಯ ಸಂದರ್ಭದಲ್ಲಿ ಸರ್ಕಾರದ ಆಡಳಿತ ಯಂತ್ರವು ಸುಗಮವಾಗಿ ನಡೆಯಲು ಆಶಾ ಕಾರ್ಯಕರ್ತೆಯರು ಸಹಾಯ ಮಾಡಿದ್ದಾರೆ.

ASHA Workers Protest Congress MLA H C Mahadevappa Backs Demand for Minimum Wages

ಇಂತಹ ಸಂದರ್ಭದಲ್ಲಿ ಅವರ ನ್ಯಾಯಯುತವಾದ ಬೇಡಿಕೆಯನ್ನು ಈಡೇರಿಸುವುದು ಯಾವುದೇ ಸರ್ಕಾರದ ಜವಾಬ್ದಾರಿ ಆಗಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರ್ಕಾರದ ನ್ಯೂಕ್ಲಿಯಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಆಶಾ ಕಾರ್ಯಕರ್ತರಿಗೆ ಕನಿಷ್ಠ ವೇತನ ಕಾಯ್ದೆಯ ಅಡಿಯಲ್ಲಿ ಸೂಕ್ತವಾಗಿ ಅನ್ವಯವಾಗುವ ರೀತಿಯಲ್ಲಿ ಅನುದಾನದ ಪಾಲನ್ನು ನೀಡುವ ಮೂಲಕ ಅವರ ಘನತೆಯ ಬದುಕಿಗೆ ನೆರವಾಗಬೇಕೆಂದು ಈ ಮೂಲಕ ವಿನಂತಿಸುತ್ತೇನೆ.

ಬೆಂಗಳೂರು ಜಾತ್ರೆ 2026ಕ್ಕೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಭರ್ಜರಿ ಸಿದ್ಧತೆ
ಬೆಂಗಳೂರು ಜಾತ್ರೆ 2026ಕ್ಕೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಭರ್ಜರಿ ಸಿದ್ಧತೆ

ಈಗಾಗಲೇ ಹಿಂದಿನ ಕಾಂಗ್ರೆಸ್ ಪಕ್ಷದ ಅಧಿಕಾರದ ಸಂದರ್ಭದಲ್ಲಿ ಕೇವಲ 2 ರಿಂದ 3 ಸಾವಿರ ರೂಪಾಯಿ ಇದ್ದ ಪೌರ ಕಾರ್ಮಿಕರ ವೇತನವನ್ನು ಸುಮಾರು 16 ರಿಂದ 17 ಸಾವಿರ ರೂಪಾಯಿಗೆ ಹೆಚ್ಚಿಸಿ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಹಿನ್ನಲೆಯಲ್ಲಿ ಕನಿಷ್ಠ ವೇತನ ಕಾಯ್ದೆಯಡಿ ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಘನತೆ ವೇತನ ನಿಗದಿ ಪಡಿಸುವುದು ನಿಜಕ್ಕೂ ಉಪಯುಕ್ತವಾದ ಕೆಲಸವಾಗಿದೆ.

ಬೆಂಗಳೂರು ನಗರದ ರಸ್ತೆ ಕಾಮಗಾರಿಗಳಿಗೆ ಹೊಸ ಡೆಡ್‌ಲೈನ್: ಸಿಲಿಕಾನ್ ಸಿಟಿ ಜನರಿಗೆ ಕೃಷ್ಣಬೈರೇಗೌಡ ಗುಡ್‌ನ್ಯೂಸ್!
ಬೆಂಗಳೂರು ನಗರದ ರಸ್ತೆ ಕಾಮಗಾರಿಗಳಿಗೆ ಹೊಸ ಡೆಡ್‌ಲೈನ್: ಸಿಲಿಕಾನ್ ಸಿಟಿ ಜನರಿಗೆ ಕೃಷ್ಣಬೈರೇಗೌಡ ಗುಡ್‌ನ್ಯೂಸ್!

ಇದಕ್ಕೆ ಸಂಬಂಧಿಸಿದಂತೆ ನಾನೂ ಸಹ ಸರ್ಕಾರಕ್ಕೆ ಪತ್ರ ಬರೆಯಲಿದ್ದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಜೊತೆಗೂ ವೈಯಕ್ತಿಕವಾಗಿ ಮಾತನಾಡಲಿದ್ದೇನೆ. ಆಶಾ ಕಾರ್ಯಕರ್ತೆಯರಿಗೆ ಒಳಿತಾಗಲಿ, ಅವರ ಬದುಕಿನ ಘನತೆ ಹೆಚ್ಚಲಿ ಎಂದೂ ಡಾ.ಎಚ್.ಸಿ ಮಹದೇವಪ್ಪ ಅವರು ಹೇಳಿದ್ದಾರೆ.

ಜೆಡಿಎಸ್ ಪಕ್ಷದಿಂದಲೂ ಆಕ್ರೋಶ

ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಜೆಡಿಎಸ್‌, "ತಾನು ಕಳ್ಳ ಪರರ ನಂಬ"ಎಂಬಂತಿದೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವರಸೆ! ಸಚಿವ ಪಿ. ಎಂ. ನರೇಂದ್ರಸ್ವಾಮಿ ಅವರೇ, ಹಕ್ಕಿನ ಗೌರವಧನ ಕೇಳಿದ ಆಶಾ ಕಾರ್ಯಕರ್ತೆಯರಿಗೆ 'ಕಂಠಿಹಾರ ಕೊಡಕ್ಕಾಗಲ್ಲ' ಎಂದು ದರ್ಪದ ಮಾತುಗಳನ್ನಾಡಿದ್ದೀರಲ್ಲ... ನಿಜ ಬಿಡಿ, ರಾಜ್ಯದ ಖಜಾನೆಯಲ್ಲಿದ್ದ ಎಲ್ಲಾ 'ಕಂಠಿಹಾರ'ಗಳನ್ನೂ ಡಿ.ಕೆ ಶಿವಕುಮಾರ್ ಮತ್ತು ಮಂತ್ರಿಗಳು ಕೊಳ್ಳೆ ಹೊಡೆದು ಕೊರಳಿಗೆ ಹಾಕಿಕೊಂಡು ಮೆರೆಯುತ್ತಿದ್ದಾರೆ.

ಆಶಾ ತಾಯಂದಿರನ್ನು ಹೀಗಳೆಯುವ ಮುನ್ನ ರಾಜ್ಯದ ಜನರ ಈ ಪ್ರಶ್ನೆಗಳಿಗೆ ಮೊದಲು ಉತ್ತರ ಕೊಡಿ:

🔹 ದಲಿತರ SCSP-TSP ಹಣವನ್ನು ದುರ್ಬಳಕೆ ಮಾಡಿ 'ಕಂಠಿಹಾರ' ಮಾಡಿಕೊಂಡವರು ಯಾರು?

🔹 KPSC ಭ್ರಷ್ಟಾಚಾರದಲ್ಲಿ ಯುವಕರ ಭವಿಷ್ಯ ಮಾರಿ 'ಕಂಠಿಹಾರ' ಪಡೆದವರು ಯಾರು?

🔹 ಪ್ರತಿ ಟೆಂಡರ್‌ನಲ್ಲೂ 60% ಕಮಿಷನ್ ವಸೂಲಿ ಮಾಡಿ, ಕಮಿಷನ್ ಇಲ್ಲದೆ ಫೈಲ್ ಅಲ್ಲಾಡಿಸದೆ 'ಕಂಠಿಹಾರ' ಧರಿಸಿದವರು ಯಾರು?

🔹 ನೈಸ್ (NICE) ಭೂಮಿ ಡೀಲ್‌ನಲ್ಲಿ 'ಕಂಠಿಹಾರ' ಗಿಟ್ಟಿಸಿಕೊಂಡವರು ಯಾರು ಯಾರು ?

🔹 ಗೃಹಲಕ್ಷ್ಮಿ 2 ಕಂತಿನ ಹಣ ನುಂಗಿಹಾಕಿ ಕಂಠಿಹಾರ' ಧರಿಸಿದವರು ಯಾರು ?

🔹 ಮುಡಾದಲ್ಲಿ ಸಾವಿರಾರು ಸೈಟುಗಳನ್ನು ಅಕ್ರಮವಾಗಿ ನುಂಗಿ 'ಕಂಠಿಹಾರ' ಹಾಕಿಕೊಂಡವರು ಯಾರು?

🔹 ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಣ ಕರಗಿಸಿ 'ಕಂಠಿಹಾರ' ಮಾಡಿಕೊಂಡವರು ಯಾರು?

ಕಾಂಗ್ರೆಸ್‌ ಸರ್ಕಾರ ಒಂದೆಡೆ ಗ್ಯಾರಂಟಿ ಆಸೆ ತೋರಿಸಿ, ಬೆಲೆ ಏರಿಕೆಯ ಬರೆ ಎಳೆದು ಜನರ ಜೇಬಿಗೆ ಕತ್ತರಿ ಹಾಕಿ ನೆಮ್ಮದಿ ಹಾಳುಮಾಡಿದ್ದೀರಿ. ಇನ್ನೊಂದೆಡೆ ಬಿಸಿಲು-ಮಳೆಯೆನ್ನದೆ ದುಡಿಯುವ ಶ್ರಮಿಕ ಮಹಿಳೆಯರಿಗೆ ಗೌರವಧನ ಕೊಡದೆ ಅವಮಾನಿಸುತ್ತಿರುವುದು ದರ್ಪದ ಪರಮಾವಧಿ. ನಿಮ್ಮ ಸಾಲು ಸಾಲು ಭ್ರಷ್ಟಾಚಾರದ ಕಂಠಿಹಾರಗಳನ್ನು ಕಳಚಿ, ಮೊದಲು ಆಶಾ ತಾಯಂದಿರ ಬೆವರಿನ ಹಕ್ಕಿನ ಹಣ ಕೊಡಿ ಎಂದು ಜೆಡಿಎಸ್ ಪಕ್ಷವು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+