ಪಶ್ಚಿಮ ಬಂಗಾಳದ ಬೆನ್ನಲ್ಲೇ ಬೆಂಗಳೂರಿನಲ್ಲೂ 24/7 ಹೋಟೆಲ್ ಕಾರ್ಯಚರಣೆಗೆ ಡಿಮ್ಯಾಂಡ್; ಡಿಕೆಶಿಗೆ ಹೋಟೆಲ್ ಸಂಘದ ಪತ್ರ!

ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮಕ್ಕೆ ಸಂಬಂಧಿಸಿದಂತೆ ಬೆಂಗಳೂರು ಹೋಟೆಲ್‌ಗಳ ಸಂಘದಿಂದ ವಿಶೇಷ ಮನವಿ ಮಾಡಲಾಗಿದೆ. ಪಶ್ವಿಮ ಬಂಗಾಳದಲ್ಲಿ ಹೋಟೆಲ್‌/ ರೆಸ್ಟೋರೆಂಟ್‌ಗಳನ್ನು 24 ಗಂಟೆ ತೆಗೆಯುವ ಪ್ರಸ್ತಾಪ ಬಂದ ಬೆನ್ನಲ್ಲೇ ಮತ್ತೊಮ್ಮೆ ಮನವಿ ಸಲ್ಲಿಸಲಾಗಿದೆ.

ಹೊಟೇಲ್ ಉದ್ಯಮಕ್ಕೆ 24/7 ತೆರೆದಿಡಲು ಅವಕಾಶ ನೀಡಬೇಕು ಎಂದು ಬೆಂಗಳೂರು ಹೋಟೆಲ್‌ಗಳ ಸಂಘದಿಂದ ಮನವಿ ಮಾಡಲಾಗಿದೆ. ನಮ್ಮ ಕರ್ನಾಟಕದ ಮುಖ್ಯಮಂತ್ರಿ ಆಗಿರುವ ಡಿ.ಕೆ ಶಿವಕುಮಾರ್ ಅವರೇ ತಮಗೆ ಹೃತ್ಪೂರ್ವಕ ಅಭಿನಂದನೆಗಳು. ಹೊಟೇಲು ಉದ್ಯಮಕ್ಕೆ 24/7 ಕಾರ್ಯನಿರ್ವಹಣೆಗೆ ಅವಕಾಶ ನೀಡುವ ಕುರಿತು ಈಗಾಗಲೇ ಹಲವು ಬಾರಿ ಮನವಿಗಳನ್ನು ಸಲ್ಲಿಸಿದ್ದೇವೆ. ರಾಜ್ಯ ಸರ್ಕಾರದಿಂದ 24/7 ಕಾರ್ಯಾಚರಣೆಗೆ ಆದೇಶ ಹೊರಡಿಸಲ್ಪಟ್ಟಿದ್ದರೂ, ಸ್ಥಳೀಯ ಪೊಲೀಸ್ ಇಲಾಖೆಯಿಂದ ಅನುಮತಿ ಲಭಿಸುತ್ತಿಲ್ಲ.

After West Bengal Bengaluru Hotels Demand 24 7 Operations Association Writes to DK Shivakumar

ಹೊಟೇಲು ಉದ್ಯಮವು ಒಂದು ಪ್ರಮುಖ ಸೇವಾ ಕ್ಷೇತ್ರವಾಗಿದ್ದು, ರೈತರು ಉತ್ಪಾದಿಸುವ ಹಣ್ಣು, ತರಕಾರಿ, ಹಾಲು ಇತ್ಯಾದಿ ಕೃಷಿ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುವ ಮೂಲಕ ಅವರಿಗೆ ಪ್ರೋತ್ಸಾಹ ನೀಡುತ್ತಿದೆ. ಇದಲ್ಲದೆ, ಈ ಕ್ಷೇತ್ರವು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಜನಸಾಮಾನ್ಯರಿಗೆ ಉಚಿತ ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯಗಳನ್ನು ಒದಗಿಸುತ್ತಿದೆ.

24/7 ತೆರೆದಿಡುವುದರಿಂದ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಹಾಗೂ ಪ್ರಯಾಣಿಕರಿಗೆ ಬಹಳಷ್ಟು ಅನುಕೂಲವಾಗಲಿದೆ. ಆದ್ದರಿಂದ ತಾವು ದಯವಿಟ್ಟು ನಮ್ಮ ಮನವಿಯನ್ನು ಪರಿಗಣಿಸಿ ನಮ್ಮ ಉದ್ಯಮಕ್ಕೆ 24/7 ತೆರೆದಿಡಲು ಅವಕಾಶ ಕಲ್ಪಿಸಬೇಕಾಗಿ ವಿನಂತಿಸುತ್ತೇವೆ ಎಂದು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಬೆಂಗಳೂರು ಹೋಟೆಲುಗಳ ಸಂಘದಿಂದ ಪತ್ರ ಬರೆಯಲಾಗಿದೆ.

ದೆಹಲಿ ಗ್ಯಾಸ್‌ಚೇಂಬರ್; ಆಹಾ.... ಬೆಂಗಳೂರಲ್ಲಿ ಗಾಳಿ ಎಷ್ಟು ಚೆಂದ ಎಂದ ನಾರ್ಥಿ, ಕನ್ನಡಿಗರು ಏನಂದ್ರು ?
ದೆಹಲಿ ಗ್ಯಾಸ್‌ಚೇಂಬರ್; ಆಹಾ.... ಬೆಂಗಳೂರಲ್ಲಿ ಗಾಳಿ ಎಷ್ಟು ಚೆಂದ ಎಂದ ನಾರ್ಥಿ, ಕನ್ನಡಿಗರು ಏನಂದ್ರು ?

ಮೂರು ವರ್ಷಗಳಿಂದ ಮನವಿ

ಇನ್ನು ಬೆಂಗಳೂರಿನಲ್ಲಿ ಹೊಟೇಲ್ ಉದ್ಯಮವನ್ನು 24/7 ತೆರೆದಿಡಲು ಅವಕಾಶ ನೀಡಬೇಕು ಎಂದು ಬೆಂಗಳೂರು ಹೋಟೆಲ್‌ಗಳ ಸಂಘದಿಂದ ಕಳೆದ ಮೂರು ವರ್ಷಗಳಿಂದ ಮನವಿ ಮಾಡಲಾಗಿದೆ. ಬೆಂಗಳೂರು ಜನದಟ್ಟಣೆಯ ಪ್ರದೇಶವಾಗಿದೆ. ಅಲ್ಲದೆ ಜನನಿಬಿಡ ಪ್ರದೇಶ ಆಗಿರುವುದರಿಂದ ದಿನದ 24 ಗಂಟೆಯೂ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿತ್ತು. ಸರ್ಕಾರವು ಬೆಂಗಳೂರು ಹೋಟೆಲ್‌ಗಳ ಸಂಘದ ಮನವಿಗೆ ಸ್ಪಂದಿಸಿದೆಯಾದರೂ ಸಹ ಆಯಾ ನಗರದ ಪೊಲೀಸರಿಂದ ಅನುಮತಿ ಸಿಗುತ್ತಿಲ್ಲ ಎಂದು ಹೇಳಲಾಗಿದೆ.

Gold: ಚಿನ್ನದ ಬೆಲೆ ಇಳಿಕೆಗೆ ಮೋದಿ ಮನವಿಯೇ ಕಾರಣವೇ? ಬಂಗಾರ ಬೆಲೆ ಕುಸಿತದ ಹಿಂದಿನ ಅಸಲಿ ಕಾರಣಗಳೇನು?
Gold: ಚಿನ್ನದ ಬೆಲೆ ಇಳಿಕೆಗೆ ಮೋದಿ ಮನವಿಯೇ ಕಾರಣವೇ? ಬಂಗಾರ ಬೆಲೆ ಕುಸಿತದ ಹಿಂದಿನ ಅಸಲಿ ಕಾರಣಗಳೇನು?

ಪಶ್ಚಿಮ ಬಂಗಾಳದಲ್ಲಿ 24×7 ಹೋಟೆಲ್ ಮತ್ತು ವಾಣಿಜ್ಯ ವ್ಯಾಪಾರಕ್ಕೆ ಅವಕಾಶ

ಪಶ್ಚಿಮ ಬಂಗಾಳದಲ್ಲಿ 24×7 ಹೋಟೆಲ್ ಮತ್ತು ವಾಣಿಜ್ಯ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ 24×7 ಹೋಟೆಲ್ ಮತ್ತು ವಾಣಿಜ್ಯ ಸಂಸ್ಥೆಗಳ ಕಾರ್ಯಾಚರಣೆಗೆ ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಸರ್ಕಾರ ಅನುಮತಿ ನೀಡಿದ್ದು, ಇದರ ಜೊತೆಗೆ ಪ್ರವಾಸೋದ್ಯಮ ಮತ್ತು ಹೋಟೆಲ್ ಉದ್ಯಮದಲ್ಲಿ ₹12,500 ಕೋಟಿಗೂ ಅಧಿಕ ಬಂಡವಾಳ ಹೂಡಿಕೆಗೆ ಬೃಹತ್ ಅವಕಾಶಗಳು ತೆರೆದುಕೊಂಡಿವೆ.

West Bengal Name Change: ಪಶ್ಚಿಮ ಬಂಗಾಳದ ಹೆಸರು ಬದಲಾವಣೆ; ಮಮತಾ ಬ್ಯಾನರ್ಜಿಗೆ ತೀವ್ರ ಮುಖಭಂಗ!, ಹೊಸ ಹೆಸರೇನು ?
West Bengal Name Change: ಪಶ್ಚಿಮ ಬಂಗಾಳದ ಹೆಸರು ಬದಲಾವಣೆ; ಮಮತಾ ಬ್ಯಾನರ್ಜಿಗೆ ತೀವ್ರ ಮುಖಭಂಗ!, ಹೊಸ ಹೆಸರೇನು ?

ದಿನದ 24 ಗಂಟೆ ತೆರೆಯಲು ಅನುಮತಿ. ಪಶ್ಚಿಮ ಬಂಗಾಳ ಸರ್ಕಾರವು ಅರ್ಹ ಅಂಗಡಿಗಳು, ಹೋಟೆಲ್‌ಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ವಾರದ 7 ದಿನವೂ 24 ಗಂಟೆಗಳ ಕಾಲ (24×7) ಕಾರ್ಯನಿರ್ವಹಿಸಲು ಅವಕಾಶ ನೀಡಿದೆ. ಇದರಿಂದ ರಾತ್ರಿ ಪಾಳಿಯ ವ್ಯಾಪಾರ ಮತ್ತು ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಲಾಗಿದೆ. ಪಶ್ಚಿಮ ಬಂಗಾಳದಲ್ಲಿ 24×7 ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಕಾರ್ಯನಿರ್ವಹಿಸುವುದಕ್ಕೆ ಅವಕಾಶ ಕಲ್ಪಿಸಿರುವ ಬೆನ್ನಲ್ಲೇ ಬೆಂಗಳೂರು - ಕರ್ನಾಟಕದಲ್ಲೂ ಈ ಮಾದರಿ ಅವಕಾಶ ನೀಡಬೇಕು ಎನ್ನುವ ಬೇಡಿಕೆ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+