Bengaluru Silk Board: ನಗರದ ಸಿಲ್ಕ್‌ಬೋರ್ಡ್ ಜಂಕ್ಷನ್‌ನ ಚಿತ್ರಣವೇ ಬದಲು, ಜಿಬಿಎ ಹೇಳಿದ್ದೇನು?
ಬೆಂಗಳೂರು: ಬೆಂಗಳೂರಿನ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಹಲವು ತಿಂಗಳುಗಳಿಂದ ಎದುರಾಗಿದ್ದ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಬದಲಾದ ಚಿತ್ರಣ ಇದೀಗ ಬದಲಾಗಿದ್ದು, ಸ್ವಚ್ಛತೆ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಬೆಂಗಳೂರಿನ ಅತ್ಯಂತ ಪ್ರಮುಖ ಸಂಚಾರ ತಾಣಗಳಲ್ಲೊಂದಾದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ (Central Silk Board Junction) ವ್ಯಾಪ್ತಿಯಲ್ಲಿ ಸಚಿವರಾದ ಕೃಷ್ಣಬೈರೇಗೌಡ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ನಂತರ ಬೆಂಗಳೂರು ದಕ್ಷಿಣ ಆಯುಕ್ತರಾದ ಕೆ.ಎನ್. ರಮೇಶ್ ಅವರ ಶ್ರಮದ ಫಲವಾಗಿ ಇದೀಗ ಆ ಪ್ರದೇಶದ ಒಟ್ಟಾರೆ ರೂಪವೇ ಬದಲಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಿಂದಿನ ಕಸದ ರಾಶಿ, ಕೆಸರು, ಕೊಳಚೆ ಮತ್ತು ಹದಗೆಟ್ಟ ರಸ್ತೆಗಳ ಜಾಗದಲ್ಲಿ ಈಗ ಸುಂದರವಾದ ಫ್ಲೈಓವರ್ ಕಂಬಗಳು, ಸುವ್ಯವಸ್ಥಿತ ರಸ್ತೆಗಳು ಮತ್ತು ಸ್ವಚ್ಛ ಪರಿಸರ ಮೂಡಿದ್ದು ವಾಹನ ಸವಾರರು ಹಾಗೂ ಸಾರ್ವಜನಿಕರು ನೆಮ್ಮದಿಯ ನಿಟ್ಚುಸಿರು ಬಿಡುವಂತಾಗಿದೆ. ಅಲ್ಲದೆ ಈ ಪ್ರದೇಶದಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಏನೆಲ್ಲ ಬದಲಾವಣೆ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ಪ್ರಮುಖ ಬದಲಾವಣೆಗಳು ಮತ್ತು ಕಾಮಗಾರಿಗಳ ವಿವರ
ಸೌಂದರ್ಯೀಕರಣ ಮತ್ತು ನೆಲಹಾಸು (Aesthetics & Paving), ಫ್ಲೈಓವರ್‌ನ ಕಂಬಗಳು ಮತ್ತು ಬೀಮ್‌ಗಳಿಗೆ ಆಕರ್ಷಕ ನೇರಳೆ ಹಾಗೂ ಕಲಾತ್ಮಕ ವಿನ್ಯಾಸದ ಬಣ್ಣ ಬಳಿಯಲಾಗಿದ್ದು, ನೆಲಕ್ಕೆ ಟೈಲ್ಸ್/ಪೇವಿಂಗ್ ಮತ್ತು ಹಳದಿ ಬಣ್ಣದ ಕರ್ಬ್‌ಗಳನ್ನು ಅಳವಡಿಸಲಾಗಿದೆ.
ಪಾದಚಾರಿ ಮಾರ್ಗಗಳು (Footpaths) ಮತ್ತು ಕಂಬಗಳ ಸುತ್ತಲಿನ ಪ್ರದೇಶವನ್ನು ವ್ಯವಸ್ಥಿತವಾಗಿ ಪೇವಿಂಗ್ ಮಾಡಲಾಗಿದೆ., ರಸ್ತೆ ಮತ್ತು ಡಾಂಬರೀಕರಣ (Asphalting). ಅಕ್ಟೋಬರ್ 30ರಂದು ನೀರು ನಿಂತು, ಗುಂಡಿ ಬಿದ್ದು ಹದಗೆಟ್ಟಿದ್ದ ಜಂಕ್ಷನ್ ಮತ್ತು ರಸ್ತೆ ಭಾಗಗಳಲ್ಲಿ ಹೊಸದಾಗಿ ಡಾಂಬರೀಕರಣ (Asphalting) ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ.
ಮಳೆ ನೀರು ಚರಂಡಿ ಮತ್ತು ತ್ಯಾಜ್ಯ ತೆರವು (SWD & Waste Clearance), * ಮಳೆ ನೀರು ಚರಂಡಿಗಳಲ್ಲಿ (SWD) ತುಂಬಿದ್ದ ಹೂಳನ್ನು ತೆಗೆದು (Desilted) ಸ್ಲ್ಯಾಬ್‌ಗಳಿಂದ ಮುಚ್ಚಲಾಗಿದೆ ಹಾಗೂ ಕೊಳವೆಗಳು ಮತ್ತು ಅವಶೇಷಗಳನ್ನು ತೆರವುಗೊಳಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂದುವರಿದು ಹಿಂದೆ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಸಂಪೂರ್ಣವಾಗಿ ತೆರವುಗೊಳಿಸಿ, ನೆಲದ ಮೇಲ್ಮೈಯನ್ನು ಸ್ವಚ್ಛಗೊಳಿಸಿ ಮರುಪಡೆಯಲಾಗಿದೆ. ಹಿಂದಿನ ಕಸ, ಕೆಸರು ಮತ್ತು ಅವ್ಯವಸ್ಥೆ ಮಾಯವಾಗಿ ಈಗ ಸಿಲ್ಕ್ ಬೋರ್ಡ್ ಜಂಕ್ಷನ್ ಸ್ವಚ್ಛವಾಗಿ, ಸುಂದರವಾಗಿ ಕಾಣುತ್ತಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉತ್ತರ ನಗರ ಪಾಲಿಕೆ: ಫೋನ್-ಇನ್ ಕಾರ್ಯಕ್ರಮ
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರ ಅಹವಾಲುಗಳನ್ನು ನೇರವಾಗಿ ಆಲಿಸುವ ಉದ್ದೇಶದಿಂದ ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಪ್ರತೀ ಶುಕ್ರವಾರ ಸಾರ್ವಜನಿಕರೊಂದಿಗೆ ಫೋನ್-ಇನ್ ಕಾರ್ಯಕ್ರಮ ಆರಂಭಿಸಿದ್ದು, ಈ ವಾರದ ಫೋನ್-ಇನ್ ಕಾರ್ಯಕ್ರಮವು 2026 ರ ನವೆಂಬರ್ 27 ರಂದು (ಶುಕ್ರವಾರ) ಬೆಳಿಗ್ಗೆ 7.00ರಿಂದ 9.00 ಗಂಟೆಯವರೆಗೆ ನಡೆಯಲಿದೆ.
ಈ ಅವಧಿಯಲ್ಲಿ ನಾಗರಿಕರು ರಸ್ತೆ ಗುಂಡಿಗಳು ಹಾಗೂ ದುರಸ್ತಿ ಕಾರ್ಯಗಳು, ಬೀದಿ ದೀಪಗಳ ನಿರ್ವಹಣೆ, ಮನೆಮನೆ ಕಸ ಸಂಗ್ರಹಣೆ ಮತ್ತು ವಿಲೇವಾರಿ, ಅಪಾಯಕಾರಿಯಾದ ಮರಗಳು/ಕೊಂಬೆಗಳ ತೆರವು, ಸೊಳ್ಳೆ ನಿಯಂತ್ರಣ ಕ್ರಮಗಳು, ಬೀದಿ ನಾಯಿಗಳ ನಿಯಂತ್ರಣ, ಉದ್ಯಾನವನಗಳ ಅಭಿವೃದ್ಧಿ ಹಾಗೂ ಸಂರಕ್ಷಣೆ, ಅನಧಿಕೃತ ಬ್ಯಾನರ್ ಮತ್ತು ಪೋಸ್ಟರ್ ಗಳ ತೆರವು, ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ನಿವಾರಣೆ, ಇ-ಖಾತಾ ಸಂಬಂಧಿತ ಸಮಸ್ಯೆಗಳು ಸೇರಿದಂತೆ ವಿವಿಧ ನಾಗರಿಕ ಸಮಸ್ಯೆಗಳ ಕುರಿತು ಆಯುಕ್ತರೊಂದಿಗೆ ನೇರವಾಗಿ ಮಾತನಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.




Click it and Unblock the Notifications
