ದೆಹಲಿ ಗ್ಯಾಸ್‌ಚೇಂಬರ್; ಆಹಾ.... ಬೆಂಗಳೂರಲ್ಲಿ ಗಾಳಿ ಎಷ್ಟು ಚೆಂದ ಎಂದ ನಾರ್ಥಿ, ಕನ್ನಡಿಗರು ಏನಂದ್ರು ?

ಬೆಂಗಳೂರು ನಗರಕ್ಕೆ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದ ಈಗಾಗಲೇ ಸಾಕಷ್ಟು ಜನ ವಲಸಿಗರು ಬಂದಿದ್ದಾರೆ. ಇದೀಗ ಇನ್ನಷ್ಟು ವಲಸಿಗರ ಸಮಸ್ಯೆ ಎದುರಾಗುತ್ತಿದೆ ಎನ್ನುವ ಆತಂಕ ಶುರುವಾಗಿದ್ದು, ಕನ್ನಡಿಗರು ಆಕ್ಷೇಪ ವ್ಯಕ್ತಪಡಿಸುವುದಕ್ಕೆ ಪ್ರಾರಂಭಿಸಿದ್ದಾರೆ. ಇದೀಗ ನಾರ್ಥಿಯೊಬ್ಬರು ದೆಹಲಿ - ಎನ್‌ಸಿಆರ್‌ ಭಾಗದಲ್ಲಿ ವಿಪರೀತವಾದ ವಾಯುಮಾಲಿನ್ಯವಿದೆ. ಹೀಗಾಗಿ, ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದೇನೆ. ಇಲ್ಲಿ ಅಕ್ಷರಶಃ ಶುದ್ಧ ಗಾಳಿ ಇದೆ ಅಂತ ಹೇಳಿರುವುದು ಟ್ರೆಂಡ್ ಆಗಿದ್ದು, ಚರ್ಚೆಗೆ ಕಾರಣವಾಗಿದೆ.

ರಿಯಲ್ ಎಸ್ಟೇಟ್ ಉದ್ಯಮಿ Gaurav Gupta (@GauravGupta_RE) ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಟ್ವೀಟ್ ಭಾರೀ ಚರ್ಚೆಗೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಲಾಗಿರುವ ಈ ಟ್ವೀಟ್ ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಳ ಹಾಗೂ ಬೆಂಗಳೂರಿಗೆ ಬರುವ ವಲಸಿಗರ ಪ್ರಮಾಣ ಹೆಚ್ಚಳವಾಗುತ್ತಿರುವ ಬಗ್ಗೆ ಮತ್ತೊಮ್ಮೆ ಚರ್ಚೆಯನ್ನುಟ್ಟು ಹಾಕಿದೆ.

Delhi Gas Chamber vs Bengaluru Fresh Air North Indian s Praise Sparks Reactions from Kannadigas

ಉದ್ಯಮಿ ಗೌರವ್ ಗುಪ್ತಾ ಸೋಷಿಯಲ್ ಮೀಡಿಯಾದಲ್ಲಿ ಮಾಡಿದ ಟ್ವೀಟ್ ಏನು?

ದೆಹಲಿ - ಎನ್‌ಸಿಆರ್‌ನಿಂದ ಬೆಂಗಳೂರಿಗೆ ಬಂದಿದ್ದೇನೆ. ಬೆಂಗಳೂರು ಅಕ್ಷರಶಃ ಶುದ್ಧ ಗಾಳಿ ಹಾಗೂ ತಾಜಾವಾತಾವರಣವನ್ನು ಹೊಂದಿದೆ. ನಾನು ಇದನ್ನು ಟೈಪ್ ಮಾಡುವಾಗ ಮಳೆ ಬರುತ್ತಿದೆ. ನಗರವು ತುಂಬಾ ಶಾಂತ ವಾತಾವರಣವನ್ನು ಹೊಂದಿದೆ, ಜನರು ಅತ್ಯಂತ ವೃತ್ತಿಪರರು ಮತ್ತು ಸೂಕ್ಷ್ಮರು. ನಗರವು ಅಬ್ಬರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.

ಟ್ರಾಫಿಕ್ ಬಗ್ಗೆ ಇನ್ನೂ ದೂರು ನೀಡುವ ಜನರನ್ನು ಹುಡುಕಿ ಆದರೆ ನನ್ನ ಕೊನೆಯ ಭೇಟಿಗಿಂತ ಇದು ಗಮನಾರ್ಹವಾಗಿ ಉತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ. ಮೆಟ್ರೋಗಳು, ರಸ್ತೆಗಳು, ಜಿಸಿಸಿಗಳು, ಟೆಕ್ ಪಾರ್ಕ್‌ಗಳು, ಎತ್ತರದ ಕಟ್ಟಡಗಳು ಎಲ್ಲವೂ ಹುಚ್ಚು ವೇಗದಲ್ಲಿ ವಿಸ್ತರಿಸುತ್ತಿವೆ. ಬೆಂಗಳೂರಿನ ಮುಂದಿನ ದಶಕವು ಇನ್ನಷ್ಟು ಕಾಡುಮಯವಾಗಿರಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಪೋಸ್ಟ್‌ ಮಾಡಿದ್ದಾರೆ. ಈ ಟ್ವೀಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Gold: ಚಿನ್ನದ ಬೆಲೆ ಇಳಿಕೆಗೆ ಮೋದಿ ಮನವಿಯೇ ಕಾರಣವೇ? ಬಂಗಾರ ಬೆಲೆ ಕುಸಿತದ ಹಿಂದಿನ ಅಸಲಿ ಕಾರಣಗಳೇನು?
Gold: ಚಿನ್ನದ ಬೆಲೆ ಇಳಿಕೆಗೆ ಮೋದಿ ಮನವಿಯೇ ಕಾರಣವೇ? ಬಂಗಾರ ಬೆಲೆ ಕುಸಿತದ ಹಿಂದಿನ ಅಸಲಿ ಕಾರಣಗಳೇನು?

ಬೆಂಗಳೂರಿನಲ್ಲಿ ಶುದ್ಧ ಗಾಳಿ; ನೆಟ್ಟಿಗರು ಹೇಳಿದ್ದೇನು ?

ರಸ್ತೆಗಳು ಹದಗೆಟ್ಟು ಹಾಳಾಗಿವೆ. ಗೇಟೆಡ್ ಸಮುದಾಯಗಳೂ (ವಸತಿ ಸಮುಚ್ಚಯಗಳು) ಗುರುಗ್ರಾಮ್‌ನಲ್ಲಿರುವಷ್ಟು ಐಷಾರಾಮಿ ಸೌಲಭ್ಯಗಳನ್ನು ಹೊಂದಿಲ್ಲ. ಬೆಂಗಳೂರಿನಲ್ಲಿ ಸ್ವಚ್ಛತೆಯೂ ತುಂಬಾ ಕಳಪೆಯಾಗಿದೆ ಎಂದು ಕೆಲವರು ಹೇಳಿದ್ದಾರೆ. ಶ್ರೀಶಾ ಓಂಕಾರ ಎನ್ನುವವರು, ಬೆಂಗಳೂರು ತುಂಬಿದೆ. ಉತ್ತರದಿಂದ ವಲಸೆ ಬಂದವರೇ ಸಾಕಷ್ಟಿದ್ದಾರೆ ಎಂದಿದ್ದಾರೆ. ಬೆಂಗಳೂರು ಈಗಾಗಲೇ ತುಂಬಿದೆ ಎಂದು ಹಲವು ನೆಟ್ಟಿಗರು ಈ ವೈರಲ್ ಪೋಸ್ಟ್‌ಗೆ ರಿಯಾಕ್ಟ್‌ ಮಾಡಿದ್ದಾರೆ.

ಇಂದಿರಾನಗರ 100 ಅಡಿ ರಸ್ತೆಯ ಸುತ್ತಮುತ್ತ ಇರುವುದಕ್ಕೆ ಉತ್ತಮ ಸ್ಥಳ, ಅದ್ಭುತ ಕೆಫೆಗಳು ಮತ್ತು ವಾತಾವರಣವಿದೆ, ರಾತ್ರಿಯಲ್ಲಿ ಅಡ್ಡಾಡಬಹುದು, ನಾವು ಅಲ್ಲಿ ಅತ್ಯುತ್ತಮ ಸಮಯವನ್ನು ಕಳೆದಿದ್ದೆವು ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ನೀವು ಯಾವುದಾದರೂ ನಗರಕ್ಕೆ ಸಾಂದರ್ಭಿಕವಾಗಿ ಭೇಟಿ ನೀಡಿದಾಗ ಅದು ಚೆನ್ನಾಗಿರುತ್ತದೆ.

ಮುಂಬೈ ಬಗ್ಗೆ ನನಗೆ ಅನಿಸಿದಂತೆಯೇ, ಆದರೆ ನಾನು ಮುಂಬೈಗೆ ಸ್ಥಳಾಂತರಗೊಂಡು ಪ್ರತಿ ತಿಂಗಳು ಬೆಂಗಳೂರಿಗೆ ಭೇಟಿ ನೀಡಿದಾಗ ಎನ್‌ಸಿಆರ್‌ನ ಪ್ರಭಾವ ಮತ್ತು ಬಲವನ್ನು ನಾನು ತಿಳಿದುಕೊಂಡೆ, ಈ ನಗರಗಳಲ್ಲಿ ವಾಸಿಸುವುದು ಎಷ್ಟು ಕಷ್ಟ, ಅದೃಷ್ಟವಶಾತ್ ನಾನು 1 ವರ್ಷದ ನಂತರ ನೋಯ್ಡಾಗೆ ಹಿಂತಿರುಗುತ್ತಿದ್ದೇನೆ ಎಂದು ನೆಟ್ಟಿಗರೊಬ್ಬರು ರಿಯಾಕ್ಟ್‌ ಮಾಡಿದ್ದಾರೆ.

ಬೆಂಗಳೂರು ಜಾತ್ರೆ 2026ಕ್ಕೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಭರ್ಜರಿ ಸಿದ್ಧತೆ
ಬೆಂಗಳೂರು ಜಾತ್ರೆ 2026ಕ್ಕೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಭರ್ಜರಿ ಸಿದ್ಧತೆ

ಸಂದೀಪ್ ಜೆ ಎನ್ನುವರು ನೀವು ಇಲ್ಲಿಗೆ ಬಂದು ಈ ಸ್ಥಳವನ್ನು ದೆಹಲಿ 2.0 ಮಾಡಿ, ನಿಮ್ಮ ಸ್ಥಳದಲ್ಲಿ ಇರಿ ಮತ್ತು ನಮಗೆ ಉಸಿರಾಡಲು ಬಿಡಿ ಎಂದೂ ಕೆಲವು ಕನ್ನಡಿಗರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+