Gold Price Today: ಒಂದೇ ದಿನದಲ್ಲಿ ಭಾರೀ ಕುಸಿತ ಕಂಡ ಚಿನ್ನದ ದರ, ಬೆಳ್ಳಿ ಬೆಲೆಯೂ ಇಳಿಕೆ!
ಭಾರತೀಯರಿಗೆ ಚಿನ್ನ ಮತ್ತು ಬೆಳ್ಳಿ ಎಂದರೆ ಕೇವಲ ಆಭರಣಗಳಲ್ಲ, ಅವು ನಮ್ಮ ಸಂಪ್ರದಾಯ, ಕಷ್ಟಕಾಲಕ್ಕೆ ಆಗುವ ನಂಬಿಕಸ್ತ ಹೂಡಿಕೆ. ಸದ್ಯ ಮದುವೆ ಸೀಸನ್ ಜೋರಾಗಿರುವುದರಿಂದ ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಮಾರುಕಟ್ಟೆಯಲ್ಲಿ ಬಂಗಾರದ ದರ ಇಳಿಕೆಯಾಗಿದೆಯೇ ಎಂದು ನೋಡುವ ಕುತೂಹಲ ಗ್ರಾಹಕರಲ್ಲಿ ಇದ್ದೇ ಇರುತ್ತದೆ.
ಕಳೆದ ಎರಡು ದಿನಗಳಿಂದ ಸತತವಾಗಿ ಏರಿಕೆ ಕಂಡು ಆಭರಣ ಪ್ರಿಯರಿಗೆ ಆತಂಕ ಮೂಡಿಸಿದ್ದ ಹಳದಿ ಲೋಹ, ಇಂದು ದಿಢೀರ್ ಕುಸಿತ ಕಾಣುವ ಮೂಲಕ ದೊಡ್ಡ ನೆಮ್ಮದಿ ನೀಡಿದೆ. ಹಾಗಾದರೆ, ಇಂದು ಅಂದರೆ ನವೆಂಬರ್ 25, 2026ರಂದು ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂಬುದನ್ನಾ ನೋಡೋಣ ಬನ್ನಿ.

ಬೆಂಗಳೂರಿನಲ್ಲಿ ಎಷ್ಟಿದೆ ಇಂದು ಚಿನ್ನ, ಬೆಳ್ಳಿ ಬೆಲೆ?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆಯನ್ನ ನೋಡುವುದಾದ್ರೆ, ಇಂದು 22 ಕ್ಯಾರಟ್ ಆಭರಣ ಚಿನ್ನದ ದರ ಪ್ರತಿ 1 ಗ್ರಾಂಗೆ 11,420 ರೂಪಾಯಿಗಳಿಗೆ ಇಳಿಕೆಯಾಗಿದೆ ಅಂದರೆ 10 ಗ್ರಾಂಗೆ 1,14,200 ರೂಪಾಯಿ ಆಗಿದೆ. ಇನ್ನು 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ 1 ಗ್ರಾಂಗೆ 12,458 ರೂಪಾಯಿಗಳಾಗಿದ್ದು, 10 ಗ್ರಾಂಗೆ 1,24,580 ರೂಪಾಯಿ ನಿಗದಿಯಾಗಿದೆ. ಹಾಗೆಯೇ 18 ಕ್ಯಾರಟ್ ಚಿನ್ನದ ದರ 1 ಗ್ರಾಂಗೆ 9,344 ರೂಪಾಯಿ ಇದೆ.
ಇನ್ನು ಬೆಳ್ಳಿಯ ವಿಚಾರಕ್ಕೆ ಬಂದರೆ, ಇಂದು ಚಿಲ್ಲರೆ ಮಾರುಕಟ್ಟೆಯಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ 174.90 ರೂಪಾಯಿಗಳಾಗಿದ್ದು, 1 ಕೆಜಿ ಬೆಳ್ಳಿಗೆ 1,74,900 ರೂಪಾಯಿ ದರವಿದೆ.
ನಿನ್ನೆಯ ಬೆಲೆಯೊಂದಿಗೆ ಹೋಲಿಕೆ
ನಿನ್ನೆಯ (ನವೆಂಬರ್ 24) ದರಕ್ಕೆ ಹೋಲಿಕೆ ಮಾಡಿ ನೋಡಿದರೆ, ಇಂದು ಚಿನ್ನ ಖರೀದಿಸುವವರಿಗೆ ಬಂಪರ್ ಉಳಿತಾಯವಾಗಿದೆ ಎನ್ನಬಹುದು. ನಿನ್ನೆ ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ 1 ಗ್ರಾಂಗೆ 11,715 ರೂಪಾಯಿಗಳಷ್ಟಿತ್ತು. ಆದರೆ ಇಂದು ಒಂದೇ ದಿನದಲ್ಲಿ ಪ್ರತಿ ಗ್ರಾಂಗೆ ಬರೋಬ್ಬರಿ 295 ರೂಪಾಯಿಗಳಷ್ಟು ಕುಸಿತ ಕಂಡು 11,420 ರೂಪಾಯಿಗೆ ತಲುಪಿದೆ. ಅಂದರೆ 10 ಗ್ರಾಂಗೆ 2,950 ರೂಪಾಯಿ ಇಳಿಕೆಯಾಗಿದೆ. ಅದೇ ರೀತಿ ನಿನ್ನೆ 12,780 ರೂಪಾಯಿಗಳಷ್ಟಿದ್ದ 1 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ, ಇಂದು 322 ರೂಪಾಯಿಗಳಷ್ಟು ಕಡಿಮೆಯಾಗಿ 12,458 ರೂಪಾಯಿಗೆ ಇಳಿದಿದೆ . 10 ಗ್ರಾಂಗೆ 3,220 ರೂಪಾಯಿ ಇಳಿಕೆಯಾಗಿದೆ.
ಇನ್ನೂ ಈ ಬೆಳ್ಳಿಯ ಬೆಲೆಯಲ್ಲೂ ಅಲ್ಪ ಇಳಿಕೆಯಾಗಿದ್ದು, ನಿನ್ನೆ ಪ್ರತಿ ಕೆಜಿಗೆ 1,75,000 ರೂಪಾಯಿಗಳಷ್ಟಿದ್ದ ಚಿಲ್ಲರೆ ಬೆಳ್ಳಿ ದರ ಇಂದು 100 ರೂಪಾಯಿಗಳಷ್ಟು ಕಡಿಮೆಯಾಗಿ 1,74,900 ರೂಪಾಯಿಗೆ ತಲುಪಿದೆ.
ನಗರವಾರು 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ಪಟ್ಟಿ
ದೇಶದ ವಿವಿಧ ನಗರಗಳಲ್ಲಿ ಇಂದಿನ 22 ಕ್ಯಾರಟ್‌ನ 1 ಗ್ರಾಂ ನೈಜ ಚಿನ್ನದ ಬೆಲೆಗಳ ಪಟ್ಟಿ ಈ ಕೆಳಗಿನಂತಿದೆ:
ಬೆಂಗಳೂರು - 11,420 ರೂಪಾಯಿ
ದೆಹಲಿ - 11,435 ರೂಪಾಯಿ
ಚೆನ್ನೈ - 11,420 ರೂಪಾಯಿ
ಮುಂಬೈ - 11,420 ರೂಪಾಯಿ
ಹೈದರಾಬಾದ್ - 11,420 ರೂಪಾಯಿ
ಅಹಮದಾಬಾದ್ - 11,425 ರೂಪಾಯಿ
ಪುಣೆ - 11,420 ರೂಪಾಯಿ
ಕೋಲ್ಕತ್ತಾ - 11,420 ರೂಪಾಯಿ
ಗಮನಿಸಿ: ಮೇಲೆ ನೀಡಲಾದ ಚಿನ್ನ ಮತ್ತು ಬೆಳ್ಳಿಯ ದರಗಳು ಮಾರುಕಟ್ಟೆ ಮೂಲ ದರಗಳಾಗಿವೆ. ಇವುಗಳಲ್ಲಿ ಜಿಎಸ್‌ಟಿ ಮತ್ತು ಇತರೆ ತೆರಿಗೆಗಳು ಸೇರಿಲ್ಲ. ನೀವು ಚಿನ್ನ ಅಥವಾ ಬೆಳ್ಳಿಯನ್ನ ಖರೀದಿಸುವಾಗ ಈ ಬೆಲೆಯ ಜೊತೆಗೆ ಶೇಕಡಾ 3ರಷ್ಟು ಜಿಎಸ್‌ಟಿ ಹಾಗೂ ತಯಾರಿಕಾ ವೆಚ್ಚ ಸೇರ್ಪಡೆಯಾಗುತ್ತದೆ.




Click it and Unblock the Notifications
