White-Topping Projects: "ವೈಟ್ ಟಾಪಿಂಗ್ ವೆಚ್ಚ ಮೂರು ಪಟ್ಟು ಹೆಚ್ಚು!, ಕಮಿಷನ್ ಲೂಟಿಗೆ ಸಖತ್ ಸ್ಕೆಚ್ಚು!'

ವೈಟ್ ಟಾಪಿಂಗ್ ವೆಚ್ಚ ಮೂರು ಪಟ್ಟು ಹೆಚ್ಚು!, ಕಮಿಷನ್ ಲೂಟಿಗೆ ಸಖತ್ ಸ್ಕೆಚ್ಚು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಕ್ರೋಶ ಹೊರ ಹಾಕಿದ್ದಾರೆ. ಮಾರ್ಚ್ ತಿಂಗಳ ಬಜೆಟ್‌ನಲ್ಲಿ ಕಿ.ಮೀ.ಗೆ ಸರಾಸರಿ ₹6.66 ಕೋಟಿ ವೆಚ್ಚದಲ್ಲಿ ವೈಟ್ ಟಾಪಿಂಗ್ ಮಾಡುತ್ತೇವೆ ಎಂದು ಬೊಗಳೆ ಬಿಟ್ಟಿದ್ದ ಈ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಈಗ 130.85 ಕಿ.ಮೀ. ರಸ್ತೆಗೆ ₹2,321.17 ಕೋಟಿ - ಅಂದರೆ ಕಿ.ಮೀ.ಗೆ ಸರಾಸರಿ ಬರೋಬ್ಬರಿ ₹17.74 ಕೋಟಿ ಖರ್ಚು ಮಾಡಲು ಸಚಿವ ಸಂಪುಟದಲ್ಲಿ ಸಮ್ಮತಿ ನೀಡಿರುವುದು ಹಗಲು ದರೋಡೆಯಲ್ಲದೆ ಮತ್ತೇನು ಎಂದು ಪ್ರಶ್ನೆ ಮಾಡಿದ್ದಾರೆ.

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಕಮಿಷನ್ ಹಾಗೂ ಲೂಟಿಯ ಹುನ್ನಾರಕ್ಕಾಗಿಯೇ ವೆಚ್ಚವನ್ನು ಮೂರು ಪಟ್ಟು ಹಿಗ್ಗಿಸಿದ್ದಾರೆ. ಕೇವಲ 88 ರಸ್ತೆಗಳ 130.85 ಕಿ.ಮೀ.ಗೆ ₹2,321 ಕೋಟಿ ಸುರಿಯುತ್ತಿರುವುದನ್ನು ನೋಡಿದರೆ, ರಸ್ತೆಗಳ ಗುಣಮಟ್ಟಕ್ಕಿಂತ 'ಕಾಂಟ್ರ್ಯಾಕ್ಟರ್‌ಗಳ ಜೇಬು' ತುಂಬಿಸುವುದೇ ಈ ಸರ್ಕಾರದ ಮುಖ್ಯ ಉದ್ದೇಶ ಎಂಬುದು ಸ್ಪಷ್ಟವಾಗಿದೆ.

White-Topping Projects Cost Three Times More Allegations of a Commission Scam Surface

ಒಂದೆಡೆ ಬಡವರ, ಮಹಿಳೆಯರ, ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳಿಗೆ "ಆರ್ಥಿಕವಾಗಿ ಶಕ್ತವಾಗಿಲ್ಲ" ಎಂದು ಸಬೂಬು ಹೇಳುವ ಈ ದಿವಾಳಿ ಸರ್ಕಾರಕ್ಕೆ, ಬೆಂಗಳೂರಿನ ರಸ್ತೆಗಳ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಲೂಟಿಗಾಗಿ ಸ್ಕೆಚ್ಚು ಹಾಕಲು ಮಾತ್ರ ಹಣದ ಕೊರತೆಯಿಲ್ಲ!

ಬೆಂಗಳೂರಿನ ಜನರ ಶ್ರಮದ ತೆರಿಗೆ ಹಣವನ್ನು ಲೂಟಿ ಮಾಡುತ್ತಿರುವ ಡಿ.ಕೆ. ಶಿವಕುಮಾರ್ ಮತ್ತು ಕೃಷ್ಣ ಬೈರೇಗೌಡ ಅವರ ಈ ಭ್ರಷ್ಟ ನೀತಿಗೆ ಬೆಂಗಳೂರಿನ ಜನತೆ ತಕ್ಕ ಪಾಠ ಕಲಿಸುವ ದಿನ ದೂರವಿಲ್ಲ. ಈ ದುಬಾರಿ, ಶಂಕಾಸ್ಪದ ಯೋಜನೆಯನ್ನು ತಕ್ಷಣವೇ ಮರುಪರಿಶೀಲಿಸಿ, ಪಾರದರ್ಶಕತೆ ತರಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಗ್ರಹಿಸಿದ್ದಾರೆ.

ಆಶಾ ಕಾರ್ಯಕರ್ತೆಯರಿಗೆ ಸಿಗದ ಪರಿಹಾರ

ಆಶಾ ಕಾರ್ಯಕರ್ತೆಯರು ಕೇಳುತ್ತಿರುವುದು 'ಕಂಠಿಹಾರ' ಅಲ್ಲ ಸ್ವಾಮಿ, ಅವರು ಮಾಡುತ್ತಿರುವ ಕಷ್ಟದ ಕೆಲಸಕ್ಕೆ ತಕ್ಕ ಕೂಲಿ. ಚಳಿ, ಮಳೆ, ಗಾಳಿಯನ್ನೂ ಲೆಕ್ಕಿಸದೆ ತಮ್ಮ ಕಂದಮ್ಮಗಳೊಂದಿಗೆ 8ನೇ ದಿನವೂ ಅಹೋರಾತ್ರಿ ಧರಣಿ ಮುಂದುವರಿಸಿರುವ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಈ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯ ಅತ್ಯಂತ ಖಂಡನೀಯ ಎಂದು ವಿರೋಧ ಪಕ್ಷದ ನಾಯಕ. ಆರ್ ಅಶೋಕ್ ಅವರು ಹೇಳಿದ್ದಾರೆ.

ಕಾರ್ತಿಕ ದೀಪಂ: ತಮಿಳುನಾಡು ಸರ್ಕಾರದ ವಿರುದ್ಧ ತೇಜಸ್ವಿ ಸೂರ್ಯ ಗರಂ; ಸುಪ್ರೀಂ ಆದೇಶ ಪಾಲನೆ ಟಿವಿಕೆ - ವಿಜಯ್‌ಗೆ 3 ಪ್ರಶ್ನೆ
ಕಾರ್ತಿಕ ದೀಪಂ: ತಮಿಳುನಾಡು ಸರ್ಕಾರದ ವಿರುದ್ಧ ತೇಜಸ್ವಿ ಸೂರ್ಯ ಗರಂ; ಸುಪ್ರೀಂ ಆದೇಶ ಪಾಲನೆ ಟಿವಿಕೆ - ವಿಜಯ್‌ಗೆ 3 ಪ್ರಶ್ನೆ

"ಆಶಾ ಕಾರ್ಯಕರ್ತೆಯರು ಕೇಳಿದಾಗಲೆಲ್ಲಾ ಕಂಠಿಹಾರ ಕೊಡಲು ಆಗಲ್ಲ, ಯಾವ ಸರ್ಕಾರವೂ ಆರ್ಥಿಕವಾಗಿ ಅಷ್ಟು ಶಕ್ತವಾಗಿಲ್ಲ" ಎಂದು ಸಬೂಬು ಹೇಳುತ್ತಿರುವ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರ ಮಾತುಗಳು ಹಗಲಿರುಳು ಜನರ ಆರೋಗ್ಯಕ್ಕಾಗಿ ದುಡಿಯುವ ಮಹಿಳೆಯರ ಶ್ರಮಕ್ಕೆ ಮಾಡಿದ ಘೋರ ಅವಮಾನ. ಮಳೆಯಲ್ಲಿ ನೆನೆದು, ಅನಾರೋಗ್ಯದಿಂದ ಬಳಲುತ್ತಿರುವ ಮಹಿಳೆಯರು ಹಾಗೂ ಪುಟ್ಟ ಮಕ್ಕಳ ಕಣ್ಣೀರಿಗೂ ಬೆಲೆ ಕೊಡದೆ, ವಿದೇಶದಿಂದ ವಿಡಿಯೋ ಕಾಲ್ ಮೂಲಕ 'ಮನವೊಲಿಕೆ' ನಾಟಕ ಆಡುತ್ತಿರುವ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನಡೆ ಹಾಸ್ಯಾಸ್ಪದ ಮತ್ತು ಬೇಜವಾಬ್ದಾರಿತನದ ಪರಮಾವಧಿ.

ಮನೆಯಲ್ಲಿದ್ದು, ಶಾಲೆಯಲ್ಲಿ ಇರಬೇಕಾದ ಹಸುಗೂಸುಗಳು ಸ್ವಾತಂತ್ರ್ಯ ಉದ್ಯಾನದಲ್ಲಿ ಚಳಿ-ಮಳೆಗೆ ನಡುಗುತ್ತಿದ್ದರೂ, ಸಮಸ್ಯೆ ಬಗೆಹರಿಸುವ ಬದಲು ಅಧಿವೇಶನದ ಬಳಿಕ ನೋಡೋಣ ಎಂಬ ಉಡಾಫೆ ಉತ್ತರ ನೀಡುತ್ತಿರುವುದು ನಾಚಿಕೆಗೇಡು. ಮುಖ್ಯಮಂತಿಗಳೇ, ಆಶಾ ಕಾರ್ಯಕರ್ತೆಯರು ಭಿಕ್ಷೆ ಬೇಡುತ್ತಿಲ್ಲ, ತಮ್ಮ ಹಕ್ಕಿನ ಗೌರವಧನಕ್ಕಾಗಿ ಹೋರಾಡುತ್ತಿದ್ದಾರೆ. ಸಚಿವ ನರೇಂದ್ರಸ್ವಾಮಿ ಅವರು ತಕ್ಷಣವೇ ತಮ್ಮ ಅಸಂಬದ್ಧ ಹೇಳಿಕೆಯನ್ನು ಹಿಂಪಡೆದು ಆಶಾ ಕಾರ್ಯಕರ್ತೆಯರ ಕ್ಷಮೆಯಾಚಿಸಬೇಕು.

ದೆಹಲಿ ಗ್ಯಾಸ್‌ಚೇಂಬರ್; ಆಹಾ.... ಬೆಂಗಳೂರಲ್ಲಿ ಗಾಳಿ ಎಷ್ಟು ಚೆಂದ ಎಂದ ನಾರ್ಥಿ, ಕನ್ನಡಿಗರು ಏನಂದ್ರು ?
ದೆಹಲಿ ಗ್ಯಾಸ್‌ಚೇಂಬರ್; ಆಹಾ.... ಬೆಂಗಳೂರಲ್ಲಿ ಗಾಳಿ ಎಷ್ಟು ಚೆಂದ ಎಂದ ನಾರ್ಥಿ, ಕನ್ನಡಿಗರು ಏನಂದ್ರು ?

ನ್ಯಾಯಕ್ಕಾಗಿ ಬೀದಿಗಿಳಿದಿರುವ ಆಶಾ ಕಾರ್ಯಕರ್ತೆಯರ ತಾಳ್ಮೆಯನ್ನು ಸರ್ಕಾರ ಪರೀಕ್ಷಿಸುವುದನ್ನು ನಿಲ್ಲಿಸಿ, ತಕ್ಷಣವೇ ಮಧ್ಯಪ್ರವೇಶಿಸಿ, ಅವರ ಬೇಡಿಕೆಗಳನ್ನು ಈಡೇರಿಸಿ ಈ ಅಮಾನವೀಯ ಧರಣಿಯನ್ನು ಅಂತ್ಯಗೊಳಿಸಬೇಕು. ಹೋರಾಟ ನಿಲ್ಲಿಸುವುದಿಲ್ಲ ಎಂದು ನಿಲುವು ತಾಳಿರುವ ಆಶಾ ಕಾರ್ಯಕರ್ತೆಯರ ನ್ಯಾಯಯುತ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+